" ಭೂಲೋಕಕ್ಕೆ ಇಳಿದು ಬಂದಿತ್ತು ಸ್ವರ್ಗ "

 

2003 ಡಿಸೆಂಬರ್‌ನಲ್ಲಿ ನನ್ನ ಧ್ಯಾನ ಜೀವನ ಪ್ರಾರಂಭವಾಯಿತು. ಧ್ಯಾನಮಹಾಚಕ್ರದಲ್ಲಿ ನನಗೆ ಆದ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಆಭಾರಿಯಾಗಿದ್ದೇನೆ. ಒಂದು ದಿನ ಬೆಳಿಗ್ಗೆ ಸಾಮೂಹಿಕ ಧ್ಯಾನದ ನಂತರ ಪತ್ರೀಜಿರವರು 10 ನಿಮಿಷಗಳು ಧ್ಯಾನಕ್ಕೆ ಕೂರಿಸಿದರು. ಆಗ ಬೆಂಗಳೂರಿನಲ್ಲಿರುವ ಮೈತ್ರೇಯ ಬುದ್ಧಾ ಪಿರಮಿಡ್ ಕಾಣಿಸಿತು, ಅದರೊಳಗಿನಿಂದ ಹೆಚ್ಚು ಹೆಚ್ಚು ಪಿರಮಿಡ್‌ಗಳು ಹೊರಕ್ಕೆ ಬರುತ್ತಿದ್ದವು. ಒಂದು ಪುಸ್ತಕದಿಂದ ಕಾಗದಗಳನ್ನು ಹೊರಕ್ಕೆ ತೆಗೆದ ಹಾಗೆ ಮೈತ್ರೇಯ ಬುದ್ಧಾ ಪಿರಮಿಡ್‌ನಿಂದ ಇನ್ನಷ್ಟು ಪಿರಮಿಡ್‌ಗಳು ಹೊರಕ್ಕೆ ಬರುತ್ತಿದ್ದವು. ಅಂದರೆ, ಇನ್ನು ಮುಂಬರುವ ಕಾಲದಲ್ಲಿ ಎಲ್ಲಾ ಪ್ರದೇಶಗಳಲ್ಲೂ ಸಹ ಮೆಗಾ ಪಿರಮಿಡ್‌ಗಳು, ಚಿಕ್ಕ ಪಿರಮಿಡ್‌ಗಳು ಮತ್ತು ಮನೆಯ ಮೇಲೆ ಪಿರಮಿಡ್‌ಗಳು ಬರುತ್ತವೆ ಎಂದು ಸಂದೇಶ ದೊರೆಯಿತು.

 

ಈಗ ನಮ್ಮ ಗ್ರಹದ ಹೆಸರು ‘ಭೂಮಿ’ ‘Earth’ ಎಂದು. ಆದರೆ, 2016ರ ನಂತರ ಈ ಗ್ರಹದ ಹೆಸರು ‘ಪಿರಮಿಡ್ ಭೂಮಿ’ ‘Pyramid Earth’ ಎಂದು ಬದಲಾಗುತ್ತದೆ ಎಂದು ತಿಳಿಯಿತು. ನಂತರ ಬೇರೆ ಗ್ರಹಗಳಲ್ಲಿ ಸ್ಪೇಸ್‌ಶಿಪ್‌ಗಳು ಇದ್ದ ಹಾಗೆ ನಮ್ಮ ಭೂಗ್ರಹದಲ್ಲೂ ಸಹ ಸ್ಪೇಸ್‌ಶಿಪ್‌ಗಳು ನಿಮಾರ್ಣವಾಗುತ್ತವೆ. ಅದು ಪಿರಮಿಡ್ ಆಕಾರದಲ್ಲಿ ಇರುತ್ತವೆ. ಈ ಪಿರಮಿಡ್ ಸ್ಪೇಸ್‌ಶಿಪ್‌ಗಳಿಗೆ ಇಂಧನದ ಅಗತ್ಯ ಇರುವುದಿಲ್ಲ. ವಿಶ್ವದಲ್ಲಿರುವ ವಿಶ್ವಶಕ್ತಿಯನ್ನು ಸ್ವೀಕರಿಸಿ ಅದನ್ನು ಇಂಧನವನ್ನಾಗಿ ಬದಲಾಯಿಸಿಕೊಳ್ಳುತ್ತದೆ ಎಂದು ತಿಳಿಯಿತು.

 

25ರಂದು ಬೆಳಗಿನ ಜಾವ 5ರಿಂದ 7ವರೆಗೆ ಸಾಮೂಹಿಕ ಧ್ಯಾನದ ಸಮಯದಲ್ಲಿ ಜೀಸಸ್ ಕ್ರೈಸ್ಟ್ ಕಾಣಿಸಿದರು. ಅವರು ಅಲ್ಲಿರುವ ಪ್ರತಿಯೊಬ್ಬರಿಗೂ ಉನ್ನತ ತರಂಗಗಳ ಶಕ್ತಿಯನ್ನು ತುಂಬಿಸುತ್ತಿದ್ದರು. ಆದರೆ, ಕೆಲವರು ಆ ಉನ್ನತ ಶಕ್ತಿತರಂಗಗಳನ್ನು ತಡೆಯಲಾಗದೆ ಆಕ್ಷಣವೇ ಸಿಡಿದು ಹೋಗುತ್ತಿದ್ದರು. ಯಾರ‍್ಯಾರು ಸತ್ಯವನ್ನು ಬೋಧಿಸುತ್ತಾ ಪಾಲಿಸುತ್ತಿರುವರೊ ಅವರು ಮಾತ್ರ ಆ ಶಕ್ತಿಯನ್ನು ಸ್ವೀಕರಿಸಿ ಆನಂದಿಸುತ್ತಿದ್ದರು. 

 

ದಿವ್ಯಶ್ರೀ
ಬೆಂಗಳೂರು
ಫೋನ್  : +91 9141729977

Go to top