ಎನ್‌ಲೈಟೆನ್ಡ್ ಮಾಸ್ಟರ್ ಅಂದರೆ ಯಾರು ?

 

 

ದಿವ್ಯಜ್ಞಾನ ಪ್ರಕಾಶವನ್ನು ಕುರಿತು, ಆತ್ಮತತ್ವವನ್ನು ಕುರಿತು ಸರಿಯಾಗಿ ಅರಿತುಕೊಂಡು ದಿನನಿತ್ಯದ ಜೀವನದಲ್ಲಿ ಆಚರಣೆಯಲ್ಲಿ ಇಡುವವನೇ ... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸಮಾಜದಿಂದ ಹರಡಿದ ಮಾನವ ಜೀವನದಲ್ಲಿ ’ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು’ ಎಂಬ ಅರಿವು ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಮೂರ್ಖ ಸಂಪ್ರದಾಯಗಳನ್ನು, ಕುರುಡು ನಂಬಿಕೆಗಳನ್ನು ತನ್ನ ಜೀವನದಿಂದ ಬೇರು ಸಹಿತ ಕಿತ್ತು ಹಾಕುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸರಿಯಾದ ಸುಶಾಸ್ತ್ರೀಯವಾದ ಮನೋಭಾವಗಳನ್ನು ಅಭ್ಯಸಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಎಲ್ಲಾವೇಳೆಗಳಲ್ಲೂ ತಕ್ಷಣ ಕರ್ತವ್ಯದಲ್ಲಿ ತನ್ನ ಬುದ್ಧಿಯನ್ನು, ಶಕ್ತಿಯನ್ನು ವಿನಿಯೋಗಿಸಿಕೊಳ್ಳುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

’ ಎಲ್ಲಾ ವಿಧವಾದ ಜ್ಞಾನಗಳಿಗೆ ಮೂಲ ಧ್ಯಾನ ’ ಎಂದು ತಿಳಿದುಕೊಂಡಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸಂಸಾರವೇ ನಿರ್ವಾಣ ಎಂದು ಗ್ರಹಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸಮಯವನ್ನು ಒಂದು ಕ್ಷಣ ಕೂಡಾ ವ್ಯರ್ಥ ಮಾಡದೇ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸೃಷ್ಟಿಯಲ್ಲಿರುವ ಕಾರ್ಯಕಾರಣ ಸಂಬಂಧವನ್ನು ಕುರಿತು ಸರಿಯಾಗಿ ತಿಳಿದುಕೊಂಡು ಯಾವುದಕ್ಕೂ ಆಶ್ಚರ್ಯಪಡದೆ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಯಾವ ವಿಷಯ ಕುರಿತಾದರೂ ಸರಿಯೇ ಆತುರಪಟ್ಟು ಬೇಗ ನಿರ್ಣಯ ತೆಗೆದುಕೊಳ್ಳದಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸದಾ ಸೃಜನಾತ್ಮಕ ಕಾರ್ಯ ಕಲಾಪಗಳಲ್ಲಿ ಮಗ್ನವಾಗಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಪ್ರತಿ ಕ್ಷಣವೂ ಶ್ರಮಿಸುತ್ತಾ ಎಲ್ಲಾ ಬಗೆಯ ಕಲೆಗಳಲ್ಲಿ ಪ್ರಾವೀಣ್ಯತೆಗೆ ಪ್ರಯತ್ನಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ವಿಶಾಲವಾದ ಮನೋಭಾವಗಳಿದ್ದು ಪರಿಣಿತಿ ಹೊಂದಿರುವ ಸಭ್ಯ ಸಮಾಜದ ವ್ಯಕ್ತಿಯೇ! ಸಭ್ಯ ಸಮಾಜದ ಸಕಲ ಸುಗುಣಗಳನ್ನು, ಸರಿಯಾದ ರೀತಿಗಳನ್ನು ವಿವರವಾಗಿ ತಿಳಿದುಕೊಂಡಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

’ ನನಗೇ ಎಲ್ಲಾ ತಿಳಿದಿದೆ ’ ಎಂದು ಅಂದುಕೊಳ್ಳದೇ ’ ನನಗೂ ಸ್ವಲ್ಪ ತಿಳಿದಿದೆ ’ ಎಂದು ಅರಿವಿನಿಂದ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ತಿಳಿದುಕೊಳ್ಳಲು ’ ಎಲ್ಲೆ ’ ಎಂಬುವುದು ಎಂದಿಗೂ ಇಲ್ಲ ಎಂದು ತಿಳಿದುಕೊಂಡಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಯಾವ ಆಧ್ಯಾತ್ಮಿಕ ವಿಷಯವನ್ನಾದರೂ ಸಕಾರಣವಾಗಿಯೂ, ಸಂದರ್ಭಾನುಸಾರವಾಗಿಯೂ ಮಾತನಾಡಬಲ್ಲವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಇದ್ದದ್ದು ಇದ್ದಹಾಗೆ - ಇಲ್ಲದ್ದು ಇಲ್ಲದಹಾಗೆ ಮಾತನಾಡುತ್ತಾ ಜೀವನದಲ್ಲಿ ಯಾವುದಕ್ಕೂ ದುಃಖಿಸದೆ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಆಧ್ಯಾತ್ಮಿಕ ಕೆಲಸಗಳಲ್ಲಿ ಏಕಾಗ್ರತೆ, ದೀಕ್ಷೆ, ಛಲ ಎಂಬುವುದು ಸಹಜ ಸ್ವಭಾವವಾಗಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ನೂತನ, ನಿಸ್ಸಂಕೋಚ, ನಿರ್ಭಯ, ನಿತ್ಯಾನಂದಮಯವಾದ ಆತ್ಮದ ಜೀವನ ಶೈಲಿಯನ್ನು ಅಭ್ಯಸಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

’ಈ ಸೃಷ್ಟಿ ಎಲ್ಲಾ ನಾನೇ’ - ’ನಾನೇ ಈ ಸೃಷ್ಟಿ ಎಲ್ಲಾ’ ಎಂಬುವ ಅರಿವಿನಿಂದ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ತನ್ನ ಹತ್ತಿರ ಯಾವುದಿದ್ದರೆ ಅದು ಎಲ್ಲರಿಗೂ ಹಂಚುತ್ತಾ ತನಗಿಂತಾ ಕಡಿಮೆ ಸ್ಥಿತಿಯಲ್ಲಿ ಇರುವವರಿಗೆ ಸದಾ ಸಹಾಯ ಹಸ್ತ ನೀಡುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಮಾಡಿದ ತಪ್ಪುಗಳಿಂದ ಪಾಠಗಳನ್ನು ಕಲಿತುಕೊಂಡು ಆ ಯಾ ತಪ್ಪುಗಳು ಪುನಃ ಪುನಃ ಮಾಡದೇ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಒಳ್ಳೆಯ ಮಾನಸಿಕ ಮೌನ ಸ್ಥಿತಿಯಲ್ಲಿ ನಿರ್ವಿರಾಮವಾಗಿರುತ್ತಾ ’ನನ್ನ ವಾಸ್ತವಕ್ಕೆ ನಾನೇ ಸೃಷ್ಟಿಕರ್ತ’ ಎಂಬುವ ಅರಿವಿನಿಂದ ಪ್ರತಿಕ್ಷಣ ಜೀವಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

*     *     *

 

ಪ್ರಪಂಚದಲ್ಲಿ ತಿರುಗುತ್ತಿದ್ದರೂ ಪ್ರಪಂಚಕ್ಕೆ ಅಂಟಿಕೊಳ್ಳದೆ, ಎಂತಹ ಪರಿಸ್ಥಿತಿಗಳಲ್ಲಾದರೂ ಭಯಾಂದೊಳನೆಗೆ ಸ್ವಲ್ಪವೂ ಸ್ಪಂದಿಸದೇ ಇರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಆಗಿಹೋಗಿರುವುದರಲ್ಲಿ ಗಂಟುಹಾಕಿಕೊಳ್ಳದೆ ಸದಾ ವರ್ತಮಾನದಲ್ಲಿ ಆನಂದವಾಗಿ ಜೀವಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಸಹಜವಾದ ಭಾವೋದ್ರೇಕಗಳನ್ನು ಎಷ್ಟು ಮಾತ್ರವೂ ಅಣಗಿಸದೆ ಪ್ರತಿಯೊಂದನ್ನು ತಿಳಿದುಕೊಳ್ಳಬೇಕೆಂಬ ತಪನೆಯನ್ನು ಹೊಂದಿರುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

’ ಕಲಿಯಬೇಕಾದ್ದು ಕಡಲಿನಷ್ಟು, ಕಲಿತಿರುವುದು ರವೆಯಷ್ಟು ’ ಎನ್ನುವ ಅವಗಾಹನೆಯಲ್ಲಿ ಸದಾ ಜೀವಿಸುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ’ ಸವಾಲ್ ’ ಆಗಿ ಗ್ರಹಿಸುವ ಧೀಶಕ್ತಿವುಳ್ಳವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

*     *     *

 

ಎನ್‌ಲೈಟೆನ್‌ಮೆಂಟ್‌ನ ವಿವಿಧ ರೀತಿಗಳನ್ನು ಆಗಿಂದಾಗ್ಗೆ ತಿಳಿದುಕೊಳ್ಳುತ್ತಾ ಅವುಗಳನ್ನು ಆದಷ್ಟೂ ಆಚರಣೆಯಲ್ಲಿ ಇಡುವವನೇ .... ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್.

 

Go to top