" ನನ್ನ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು "

 

 

ನನ್ನ ಹೆಸರು ದಿವ್ಯ. ನನ್ನ ಗುರಿಯನ್ನು ಸಂಪೂರ್ಣಗೊಳಿಸಿಕೊಳ್ಳಲು ನಾನು ಉತ್ತಮ ವಾತಾವರಣವನ್ನು (ಅಪ್ಪ, ಅಮ್ಮ, ಅಕ್ಕ, ಸ್ನೇಹಿತರು..) ಆಯ್ಕೆಮಾಡಿಕೊಂಡು ಭೂಮಿಗೆ ಬಂದಿದ್ದೇನೆಂದು ಬಹಳ ಸಂತೋಷವಾಗಿದೆ. ನಮ್ಮ ಕುಟುಂಬದ ಸಂಖ್ಯೆ ಹೆಚ್ಚಿದರೂ ಸಹ, ಯಾವ ಕೊರೆತೆಯೂ ಇಲ್ಲದಂತೆ ಬೆಳೆದ್ದಿದೇನೆ. ಆದರೂ ಚಿಕ್ಕಂದಿನಿಂದಲೂ ಏನೋ ಹುಡುಕಾಟ, ಇಲ್ಲಿರುವ ಎಲ್ಲಾ ಪದ್ಧತಿಗಳು ಸರಿ, ಆದರೆ ಏಕೆ, ಹೇಗೆ ಎಂಬ ಸತ್ಯ ಯಾರಿಗೂ ತಿಳಿಯದು, ತಿಳಿಸುವವರಿಲ್ಲ, ಎಂದು ಮನಸ್ಸಿನಲ್ಲೇ ಆ ತಳಮಳ ಉಳಿದಿತ್ತು. ಅನೇಕಾನೇಕ ದಾರಿಗಳಲ್ಲಿ ಹುಡುಕಾಡಿದೆ. ಪ್ರಯತ್ನವೆಲ್ಲಾ ವ್ಯರ್ಥವೇ.. ಅಕ್ಕಂದಿರಿಗೆ ಮದುವೆಯಾಗಿತು. ನಾನು ಒಬ್ಬಂಟಿ ಎಂಬ ಭಾವನೆ ಕಾಡಿತು. ಆಗ ವರದಂತೆ ಧ್ಯಾನದ ಪರಿಚಯವಾಯಿತು. ಮನಸ್ಸಿನಲ್ಲಿರುವ ಕೊಳೆ ಶುದ್ಧವಾಯಿತು. ಅದನ್ನು ತುಂಬಿಸಲು ಒಬ್ಬ ಆದರ್ಶ ವ್ಯಕ್ತಿಯಾಗಿ ಕಾತುರದಿಂದ ಕಾದೆನು. ಇಂತಹ ಸಮಯದಲ್ಲಿ, ಒಮ್ಮೆ ನಾನು ಪತ್ರೀಜಿಯವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಅವರನ್ನು ನೋಡಿದಾಗ, ಗೌರವದ ಭಾವನೆ ಉಂಟಾಗಿ ನಂತರ ಅವರು ಪಡುತ್ತಿರುವ ಶ್ರಮ, ಜೀವಿಸುವ ಶೈಲಿ, ಬೋಧನೆಗಳನ್ನು ಕಂಡು, "ಆಹಾ! ಇಂತಹ ಪರ್ಫೆಕ್ಟ್ ಗುರುವಿಗಾಗಿ ನನ್ನ ಹುಡುಕಾಟ ಈಗ ಕೊನೆಗೊಂಡಿತು" ಎಂದು ಮನಸ್ಸಿನಲ್ಲಿ ಸಂತೋಷ ಉಕ್ಕಿ ಬಂದು.

 

ಅವಶ್ಯವಿಲ್ಲದ್ದುದ್ದೆಲ್ಲಾ ಒಮ್ಮೆಗೆ ಭಸ್ಮವಾಗಿ, ನನ್ನ ಆಧ್ಯಾತ್ಮಿಕ ಏಳಿಗೆಗೆ ದಾರಿ ಆಯಿತು. ಇಂತಹ ಮಾಸ್ಟರ್‌ನೊಡನೆ ಸಾಗುವ ಜೀವನ ತುಂಬಾ ಸುಂದರ ಹಾಗು ಎಷ್ಟೋ ಜನ್ಮಗಳ ಪುಣ್ಯ. ಏಕೆಂದರೆ, ಸಾರ್ ಇಲ್ಲಿಯ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕೆಂಬುವುದು ಪ್ರತ್ಯಕ್ಷವಾಗಿ ತೋರಿಸುತ್ತಿದ್ದಾರೆ. ಕ್ರಮೇಣವಾಗಿ ನನ್ನ ಮಾತುಗಳಲ್ಲಿ, ನಡವಳಿಕೆಗಳಲ್ಲಿ, ಆಲೋಚನೆಯ ದೃಷ್ಟಿಕೋನ ಬದಲಾದವು. ಪ್ರತಿನಿತ್ಯ ಕಲಿಯುವುದು, ಹೇಳಿಕೊಡುವುದು.. ಉತ್ತಮ ಮಾರ್ಪಾಡು ನನ್ನ ಜೀವನ.

 

ಸಾರ್ ಜೊತೆಗೆ ಪ್ರಯಾಣ ತುಂಬಾ ಲವಲವಿಕೆಯೂ ಇರುತ್ತದೆ. ಎಷ್ಟೋ ಜ್ಞಾನವೂ ತುಂಬಿಸಿಕೊಳ್ಳಬಹುದು. ಈಜಿಪ್ಟ್ ಪ್ರಯಾಣವು ಅಂತಹದೇ.. ಮೂರು ವರ್ಷಗಳಿಂದ ಗೀಜಾ ಪಿರಮಿಡ್ ನೋಡಬೇಕೆಂಬ ಆಸೆ. ಒಬ್ಬ ಆಧ್ಯಾತ್ಮಿಕ ಸಾಧಕನಿಗೆ ಗೀಜಾ ಪಿರಮಿಡ್‌ಗೆ ಪ್ರಯಾಣ ಅತ್ಯಾವಶ್ಯ ಎಂದು ಸಾರ್ ಹೇಳಿದಾಗ, ಮುಂದಿನ ಸಲ ನಾನು ಖಂಡಿತ ಹೋಗಬೇಕೆಂದು ದೃಢವಾಗಿ ನಿಶ್ಚಯಿಸಿದೆ.

 

ಸಾರ್‌ನೊಡನೆ ಇದ್ದಾಗ ಸಂಗ್ರಹಿಸಿದ ಕೆಲವು ಅಂಶಗಳು :

 

1) ಪಿರಮಿಡ್ ಮೆಸೇಜ್ : ನಾವು ನಮ್ಮೊಡನೆ ಇದ್ದಾಗ, ಧ್ಯಾನಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು. ಸಮಾಜದಲ್ಲಿದ್ದಾಗ ಪುಣ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು.

 

2) ಒಬ್ಬ ಶಿಷ್ಯನು, ಬುದ್ಧನನ್ನು ಕೇಳಿದ : "ಗುರುಗಳೇ, ಈ ಸೃಷ್ಟಿಯು ಏತಕ್ಕಾಗಿ?" ಬುದ್ಧನು ಮೌನವಾಗಿಯೇ ಇರುತ್ತಾನೆ.

 

ಅನೇಕ ಬಾರಿ ಕೇಳಿದಾಗ, ಮೌನವೇ ಸಾಗಿತು. ಆದರೆ, ಒಂದು ದಿನ ಬುದ್ಧನು ಮೌನಕ್ಕೆ ಕಾರಣ ಹೀಗೆ ವಿವರಿಸುತ್ತಾನೆ :

ನಾಲ್ಕು ತರಹದ ಪ್ರಶ್ನೆಗಳುಂಟು :

 

*   ಮೊದಲನೆಯ ಗುಂಪಿನ ಪ್ರಶ್ನೆಗಳಿಗೆ ‘ಹೌದು’ ಅಥವಾ ‘ಇಲ್ಲ’ ಎಂಬ ಉತ್ತರವಿರುತ್ತದೆ.
*   ಎರಡನೆಯ ಗುಂಪಿನ ಪ್ರಶ್ನೆಗಳಿಗೆ ಸ್ವಲ್ಪ ಸಮಯ ಯೋಚಿಸಿದನಂತರ ಉತ್ತರಿಸಬಹುದು.
*   ಮೂರನೆಯ ಗುಂಪಿನ ಪ್ರಶ್ನೆಗಳಿಗೆ, ಮರುಪ್ರಶ್ನೆಯೇ ಉತ್ತರವಾಗುತ್ತದೆ (counter questions).
*  ನಾಲ್ಕನೆ ಗುಂಪಿನ ಪ್ರಶ್ನೆಗಳಿಗೆ ಉತ್ತರ ಹೇಳಿದರೂ ಆ ಸಮಯದಲ್ಲಿ ಅರ್ಥವಾಗದು. ಅಂದರೆ, ಮೊದಲನೆ ತರಗತಿಯವನಿಗೆ ಹತ್ತನೆ ತರಗತಿಯ ಉತ್ತರಗಳನ್ನು ಹೇಳಿದರೆ, ಅವನಿಗೆ ಹೇಗೆ ಅರ್ಥವಾಗುವುದಿಲ್ಲ. ಹಾಗೆಯೇ, ನಿನ್ನ ಪ್ರಶ್ನೆಯೂ ಸಹ, ಆದುದರಿಂದ, ನಾನು ಮೌನವಹಿಸಿದೆ ಎಂದನು ಬುದ್ಧ.

 

3) ಸಾರ್, ಧ್ಯಾನವನ್ನು ಮಾಡುವ ಮುನ್ನ, ಸತ್ಯದ ಹುಡುಕಾಟದಲ್ಲಿ ಮಾಡಿದ ಪ್ರಯತ್ನಗಳನ್ನು ವಿವರಿಸುತ್ತಾ ಹೇಳಿದರು :

ನಾಲ್ಕು ಬಗೆಯ ಜನರಿರುತ್ತಾರೆ.
*    ಮೊದಲನೆಯ ಗುಂಪಿನವರು : ನನಗೆ ಇದು ಬೇಕು ಎನ್ನುತ್ತಾರೆ.
*    ಎರಡನೆಯ ಗುಂಪಿನವರು : ನನಗೆ ಇದು ಬೇಡ ಎನ್ನುತ್ತಾರೆ.
*    ಮೂರನೆಯ ಗುಂಪಿನವರು : ಬೇಕು/ ಬೇಡ ಏನು ತಿಳಿಯದು.
*    ನಾಲ್ಕನೆ ಗುಂಪಿನವರು : ನನಗೆ ಇದು ಬೇಕೆನ್ನುತ್ತಾರೆ. ಆದರೆ, ಆ ಬೇಕು ಎಂಬುವುದು ಏನು ತಿಳಿಯದು.

 

4) ಮುಖದಲ್ಲಿ ಎರಡು ಕಣ್ಣುಗಳು, ಎರಡು ಕಿವಿಗಳು, ಒಂದು ಬಾಯಿ, ಮಧ್ಯೆದಲ್ಲಿ ಮೂಗು. ಅಂದರೆ, ಹೆಚ್ಚು ನೋಡು, ಹೆಚ್ಚು ಕೇಳು. ಆದರೆ, ಕಡಿಮೆ ಮಾತನಾಡು ಎಂದರ್ಥ. ಕಣ್ಣು, ಬಾಯಿಗಳನ್ನು ಮುಚ್ಚಬಹುದು. ಆದರೆ, ಕಿವಿ ಯಾವಾಗಲೂ ತೆರೆದೇ ಇರುತ್ತದೆ. ಅಂದರೆ, ಹೆಚ್ಚು ಕೇಳಿಸಿಕೊ.. ಅವಶ್ಯವಾದದ್ದನ್ನು ಮಾತ್ರ ಮಾಡು. ಮೂಗು ಮಧ್ಯೆದಲ್ಲಿ ಇದೆ. ಅದೇ ‘ಹೆಡ್ ಕ್ವಾಟ್ರಸ್’. ಮೂಗು ಅಂದರೆ, ಧ್ಯಾನದ ಸಂಕೇತ. ಮೂಗು ಮುಖದ ಅಂದವನ್ನು ವಿವರಿಸಿದರೆ, ಧ್ಯಾನ ಜೀವನದ ರೀತಿಯನ್ನು ವಿವರಿಸುತ್ತದೆ (Life Pattern) ಎಂದು ಮುಖದ ಅಂಗಗಳ ಪ್ರಾಮುಖ್ಯತೆ ತಿಳಿಸಿದರು.

 

5) ಪ್ರಶ್ನೆ : ಜ್ಞಾನೋದಯವಾದರೂ, ಜೀವನದ ರೀತಿಯಲ್ಲಿ ಬದಲಾವಣೆ ಇರದಂತವರ ಪರಿಸ್ಥಿತಿ ಏನು?
ಪತ್ರಿಸಾರ್ ಉತ್ತರ : ಜ್ಞಾನೋದಯ ಹೊಂದಿರುವವರು, ಅನೇಕಾನೇಕ ರುಚಿಗಳಲ್ಲಿ, ಆಕಾರಗಳಲ್ಲಿ ಇರುತ್ತಾರೆ. ಉದಾಹರಣೆಗೆ ಪುರಾಣದಲ್ಲಿ ನಾವು ಕೇಳಿದ್ದೇವೆ ಋಷಿಗಳು ಜ್ಞಾನಿಗಳಾದ್ದರೂ, ಕೋಪವು ಅಧಿಕವಾಗಿರುತ್ತದೆ. ಹೀಗೆ ಅವರವರ ಗುಣ ಅವರವರದು.

 

6) ಆತ್ಮದ ಗಣವೇ, ಅದನ್ನು ಎಂದಿಗೂ ತೃಪ್ತಿಗೊಳಿಸಲಾಗುವುದಿಲ್ಲ. ಇದನ್ನು ಅರಿತವನೇ ತೃಪ್ತನಾಗುತ್ತಾನೆ.

ನನ್ನ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಸಾರ್ ಪ್ರತಿಯೊಂದು ವಾಕ್ಯಕ್ಕೂ ಗಾಢವಾದ ಅರ್ಥವಿರುತ್ತದೆ.

ನಮಗೆಲ್ಲಾ ಇಂತಹ ಸುಂದರ ಜೀವನವನ್ನು ತೋರಿಸಿದ ಪತ್ರೀಜಿಯವರಿಗೆ ನನ್ನ ವಂದನೆಗಳು.

 

 

ದಿವ್ಯ ಮಾಕಂ
ಬೆಂಗಳೂರು

ಫೋನ್  : +91 90089 20066

Go to top