" ಕುಳಿತ ಕಡೆಯೆ ನನ್ನ ಗುರುಗಳಾದ ಪತ್ರೀಜಿಯವರ ದರ್ಶನ ದೊರೆಯಿತು "

 

 

ನನ್ನ ಹೆಸರು ಗಾಯತ್ರಿ. ನಾನು ಹನ್ನೆರಡು ವರ್ಷಗಳಿಂದ ಧ್ಯಾನವನ್ನು ಮಾಡುತ್ತಿದ್ದೇನೆ. ನನಗೆ ಶಿರಡಿಸಾಯಿಬಾಬಾ ಎಂದರೆ ತುಂಬಾ ಇಷ್ಟ ಮತ್ತು ಪ್ರತಿದಿನ ಬಾಬಾ ಮಂದಿರದಲ್ಲೇ ಇರುತ್ತಿದೆ. ಭಜನೆಗಳನ್ನು ಮಾಡುತ್ತಿದ್ದೆ. ಎಲ್ಲಾದರೂ ಸಹ ಭಜನೆಗಳಿಗೆ ಹೋಗುತ್ತಿದೆ ಹಾಗೂ ಸಾಯಿ ಸಚ್ಚರಿತೆಯನ್ನು ಪ್ರತಿದಿನ ಓದುತ್ತಿದ್ದೆ. ಆರತಿ, ಪೂಜೆ, ಭಜನೆ, ಸೇವೆಗಳನ್ನು ಮಾಡುತ್ತಿದೆ. ಧ್ಯಾನವನ್ನು ಪೂರ್ತಿಯಾಗಿ ಅಳವಡಿಸಿಕೊಂಡಿರಲಿಲ್ಲ. ಆದರೂ ಎಲ್ಲೊ ಒಂದು ಕಡೆ ನೋವು, ಅಸಮಾಧಾನ, ದುಃಖ, ನೆಮ್ಮದಿಯಾಗಿರುವುದು ಸಾಧ್ಯವಾಗಲಿಲ್ಲ. ಪದ್ಮ ಮೇಡಮ್ ಧ್ಯಾನದ ತರಗತಿಯನ್ನು ನಡೆಸುತ್ತಿದ್ದರು ಆಗ ಧ್ಯಾನದ ತರಗತಿಗಳಿಗೆ ಹೋಗುತ್ತಿದ್ದೆ. ಆ ಧ್ಯಾನದಿಂದ ಮಾನಸಿಕ ಶಾಂತಿ ದೊರೆಯಲು ಪ್ರಾರಂಭವಾಯಿತು. ಆಗ ನಾನು ಧ್ಯಾನವನ್ನು ಹೆಚ್ಚಿಸಿಕೊಂಡು, ಧ್ಯಾನ ಸಾಧನೆ ಸಮಯವನ್ನು ಹೆಚ್ಚು ಮಾಡಿಕೊಂಡೆ. ಪುಸ್ತಕಗಳನ್ನು ಓದುವುದು ಅಭ್ಯಾಸವಾಯಿತು. ಸೀನಿಯರ್ ಮಾಸ್ಟರ್ ಬಂದಾಗ ತಪ್ಪದೆ ಅವರ ಕ್ಲಾಸುಗಳಿಗೆ ಹೋಗುತ್ತಿದ್ದೆ. ಮೊದಲು ನನಗೆ ತುಂಬಾ ಪುಸ್ತಕ ಓದಿದರೆ ತುಂಬಾ ತಲೆನೋವು ಬರುತ್ತಿತ್ತು. ನನಗೆ ಸ್ವಲ್ಪ ಕಣ್ಣಿನ ತೊಂದರೆ ಸಹ ಇದೆ. ಧ್ಯಾನಕ್ಕೆ ಬಂದ ಮೇಲೆ ಎಷ್ಟು ಓದಿದರೂ ಸಹ ತಲೆನೋವು ಬರುವುದಿಲ್ಲ. ಈಗ ಕಣ್ಣಿನ ತೊಂದರೆ ತುಂಬಾ ಸುಧಾರಿಸಿದೆ.

 

ನನ್ನಲ್ಲಿನ ಬದಲಾವಣೆಯನ್ನು ಗಮನಿಸುತ್ತಾ ಬಂದಾಗ ನನ್ನಲ್ಲಿನ ಕೋಪ ಕಡಿಮೆಯಾಗಿದೆ. ಎಲ್ಲರನ್ನು ಪ್ರೀತಿಸುವ ಗುಣ ಸಹನೆ ಎಲ್ಲರನ್ನು ವಿನಯದಿಂದ ಮಾತನಾಡಿಸುತ್ತೇನೆ. ನನಗೆ ಧೈರ್ಯ ಬಂದಿದೆ. ಎಲ್ಲವನ್ನು ನಿಬಾಯಿಸಬಲ್ಲೆ ಎನ್ನುವ ನಂಬಿಕೆ ನನ್ನಲ್ಲಿದೆ. ಎಲ್ಲರ ಜೊತೆ ಸಮಾಧಾನವಾಗಿ ಮಾತನಾಡುವ ಗುಣ ಈ ಧ್ಯಾನದಿಂದ ಬಂದಿದೆ. ನನ್ನನ್ನು ಯಾರಾದರೂ ಕರೆದರೆ ನನಗೆ ಅವರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ, ಇಲ್ಲ ಎಂದು ಹೇಳುವುದಿಲ್ಲ. ಈ ಧ್ಯಾನದಿಂದ ಸಹಾಯ ಮಾಡುವ ಗುಣ ಇನ್ನೂ ನನ್ನಲ್ಲಿ ಜಾಸ್ತಿಯಾಗಿದೆ. ಮತ್ತು ನನ್ನ ಆಲೋಚನೆಗಳಲ್ಲಿ ಬದಲಾವಣೆ ಬಂದಿದೆ. ಯಾವುದು ಸರಿ, ಯಾವುದು ಸತ್ಯ ಎನ್ನುವುದನ್ನು ತಿಳಿದು ಸರಿಯಾದ ಆಲೋಚಯನ್ನು ಮಾಡುತ್ತೇನೆ. ಯಾರು ಏನಾದರೂ ನನ್ನ ಬಗ್ಗೆ ಹೇಳಿದರೂ ಅದನ್ನು ಸ್ವೀಕರಿಸುವ ಗುಣ ಬಂದಿದೆ. ಕಷ್ಟ ಬರಲಿ ದುಃಖ ಬರಲಿ ಎಲ್ಲ ಸಮಾಧಾನದಿಂದ ಸ್ವೀಕರಿಸುತ್ತೇನೆ. ಪತ್ರೀಜಿಯವರು ಹೇಳುವ ಪ್ರತಿಯೊಂದು ಸಂದೇಶವನ್ನು ದಿನನಿತ್ಯ ಜೀವನದಲ್ಲಿ ಆಚರಿಸುತ್ತೇನೆ ಮತ್ತು ಅಳವಡಿಸಿಕೊಂಡಿದ್ದೇನೆ.  ನಮ್ಮ ವಾಸ್ತವಕ್ಕೆ ನಾವೇ ಕಾರಣ ಏನೇ ತೊಂದರೆಯಾದರೂ ನಾವೇ ಕಾರಣ ಎಂದು ತಿಳಿದುಕೊಂಡು, ಏನೇಬರಲಿ ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನನಗೆ ಧೈರ್ಯ ಕಡಿಮೆ. ಈಗ ಧ್ಯಾನಕ್ಕೆ ಬಂದ ಮೇಲೆ ಆತ್ಮಸ್ಥೈರ್ಯ ಜಾಸ್ತಿ ಇದೆ. ಸೇವೆ ಮಾಡುವುದು ಸಹಾಯ ಮಾಡುವುದು ಎಂದರೆ ಮೊದಲಿನಿಂದಲೂ ತುಂಬಾ ಇಷ್ಟ. ಈಗ ಅದು ಇನ್ನೂ ಇಷ್ಟಪಟ್ಟು ತುಂಬಾ ಸಂತೋಷದಿಂದ ಮಾಡುತ್ತೇನೆ.

 

ನನ್ನ ಅನುಭವ ಎಂದರೆ ನಮ್ಮ ಯಜಮಾನರಿಗೆ ಹೃದಯದ ಆಪರೇಷನ್ ಆಯಿತು. ಆಗ ನನ್ನಲ್ಲಿ ದುಃಖ ನೋವು ನನ್ನಲ್ಲಿ ಇತ್ತು. ಯಾರ ಹತ್ತಿರವೂ ಹೇಳಿಕೊಳ್ಳಲಾಗದ ಸಂಕಟವನ್ನು ಅನುಭವಿಸುತ್ತಿದೆ. ಆಗ ಒಂದು ದಿನ ಬಾಬಾ ಮಂದಿರಲ್ಲಿ ಕಣ್ಣೀರು ಸುರಿಸುತ್ತಾ ಬಾಬಾನ ಮುಂದೆ ಕುಳಿತಿದ್ದೆ. ಆಗ ಬಾಬಾ ಇರುವ ಸ್ಥಳದಲ್ಲಿ ನನ್ನ ಗುರು ಪತ್ರೀಜಿ ಕುಳಿತಿದ್ದಾರೆ. ಕಣ್ಣು ಮುಚ್ಚಿದರೂ ಪತ್ರೀಜಿ ಕಾಣುತ್ತಿದ್ದಾರೆ. ಕಣ್ಣನ್ನು ತೆರೆದು ನೋಡಿದರೂ ಸಹ ಪತ್ರೀಜಿಯೇ ಕಾಣುತ್ತಿದ್ದಾರೆ. ನನಗೆ ಎಲ್ಲಿಲ್ಲದ ಆನಂದ ಸಂತೋಷ. ಹೇಳುವುದಕ್ಕೆ ಸಾಧ್ಯವಿಲ್ಲ. ಆಗ ಬೆಂಗಳೂರಿನಲ್ಲಿ ಧ್ಯಾನಯಜ್ಞ ನಡೆಯುತ್ತಿತ್ತು ನನಗೆ ನನ್ನ ಗುರುವನ್ನು ನೋಡಲಾಗಲಿಲ್ಲ ಆದ್ದರಿಂದ ನಾನು ಕುಳಿತ ಕಡೆಯೆ ನನಗೆ ನನ್ನ ಗುರುಗಳಾದ ಪತ್ರೀಜಿಯವರ ದರ್ಶನ ದೊರೆಯಿತು.

 

ಈಗ ನನ್ನ ಮನೆಯಲ್ಲಿ ಧ್ಯಾನದ ತರಗತಿಗಳನ್ನು ನಡೆಸುತ್ತಿದ್ದೇವೆ. ಮನೆಗೆ ಯಾರೇ ಬರಲಿ ಅವರಿಗೆ ಧ್ಯಾನವನ್ನು ಹೇಳಿಕೊಡುತ್ತೇನೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನವನ್ನು ಹೇಳುತ್ತೇನೆ. ಇದೆಲ್ಲಾ ನನಗೆ ಬಂದ ಭಾಗ್ಯ ಎಂದು ಭಾವಿಸುತ್ತೇನೆ. ಇದಕ್ಕಿಂತ ಬೇರೆ ಭಾಗ್ಯ ಇಲ್ಲ. ಈ ಧ್ಯಾನದಿಂದ ಎಲ್ಲವನ್ನು ಪಡೆದಿದ್ದೇನೆ. ನಮಗೆ ತಿಳಿದ ಜ್ಞಾನ ಧ್ಯಾನ ಹೇಳಿಕೊಡುವುದರಿಂದ ಸಿಗುವ ಆನಂದ ಯಾವುದರಲ್ಲೂ ಸಿಗುವುದಿಲ್ಲ ಮತ್ತು ಯಾವ ಕೆಲಸವನ್ನಾಗಲಿ ಮಾಡಬಲ್ಲೆ ಎನ್ನುವ ನಂಬಿಕೆ ಹಾಗೂ ಎಲ್ಲಾ ಶಕ್ತಿ ನನ್ನಲ್ಲೇ ಇದೆ, ನಾನು ಮಾಡುತ್ತೇನೆ ಎನ್ನುವ ನಂಬಿಕೆ ನನ್ನಲ್ಲಿದೆ. ಪುಟ್ಟಮಕ್ಕಳಿಗೆ ಧ್ಯಾನ ಹೇಳಿಕೊಂಡುವಾಗ ಸಿಗುವ ಆನಂದ ಅಷ್ಟಿಷ್ಟಲ್ಲ ತುಂಬಾ ತುಂಬಾ ಆನಂದ. ಧ್ಯಾನ ಪ್ರಚಾರ ಮಾಡುತ್ತಿದ್ದೇನೆ. ನನ್ನ ಈ ಬದಲಾವಣೆಗೆ ಹಾಗೂ ಬೆಳವಣಿಗೆಗೆ ಆನಾಪಾನಸತಿ ಧ್ಯಾನವೇ ಮುಖ್ಯ ಕಾರಣವಾಗಿದೆ. ನನ್ನ ಗುರುಗಳಾದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನನ್ನ ಅನಂತಾನಂತ ವಂದನೆಗಳು. ಅವರು ಸದಾ ನನ್ನ ಜೊತೆಯಲ್ಲೇ ಇದ್ದು ನನ್ನನ್ನು ಮುನ್ನಡೆಸುತ್ತಿದ್ದಾರೆ.

 

 

C. ಗಾಯಿತ್ರಿ
ಚಿಂತಾಮಣಿ
ಫೋನ್  : +91 9902593019

Go to top