" ಪತ್ರೀಜಿ ಮತ್ತು ದಿ ಗ್ರೇಟ್ ಗೀಜಾ ಪಿರಮಿಡ್ "

 

 

ನಾನು ಆಧ್ಯಾತ್ಮಿಕ ಮಾರ್ಗವನ್ನು ಕೈಗೊಂಡಾಗಿನಿಂದಲೂ, ‘ದಿ ಗ್ರೇಟ್ ಗೀಜಾ ಪಿರಮಿಡ್’ನ್ನು ಪ್ರವೇಶಿಸಬೇಕೆಂಬ ಕನಸು ಇತ್ತು. ಅದರ ದರ್ಶನಗಿಂತ ಹೆಚ್ಚಾಗಿ, ಅದರ ಸೃಷ್ಟಿಕರ್ತರು ಪಟ್ಟ ಶ್ರಮವು ನನ್ನನ್ನು ಆಕರ್ಷಿಸಿತ್ತು.

 

1998 ರಂದು, ಮೈಸೂರಿನಲ್ಲಿ ಬ್ರಹ್ಮರ್ಷಿ ಪತ್ರೀಜಿ ಅವರೊಂದಿಗೆ ನನ್ನ ಪರಿಚಯವಾದ ನಂತರ, ಈ ಪಿರಮಿಡ್ ಶಕ್ತಿ ಉತ್ಪತ್ತಿಯ ಬಗ್ಗೆ ಹಾಗು ‘ಧ್ಯಾನ ಮತ್ತು ಪಿರಮಿಡ್’ ಜೊತೆ ಜೊತೆ ಸಾಗುತ್ತದೆ ಎಂದು ತಿಳಿದುಕೊಂಡೆನು.

 

ನನಗೆ ಪತ್ರೀಜಿ ಅವರ ವಾಕ್ಯ ನೆನಪಿದೆ "ಒಬ್ಬ ಆಧ್ಯಾತ್ಮಿಕ ಸಾಧಕನಿಗೆ, ಜೀವನದಲ್ಲಿ ಒಮ್ಮೆಯಾದರು ’ದಿ ಗ್ರೇಟ್ ಗೀಜಾ ಪಿರಮಿಡ್’ ಪ್ರಯಾಣವು ಕಂಡಿತ ಅವಶ್ಯ.

 

ನನ್ನ ಪತಿ ಶ್ರೀರಾಜನ್, ಈ ವರ್ಷ (2012) ರಂದು ‘ಪಿರಮಿಡ್ ಭೂಮಿ’ಗೆ ಹೋಗೋಣ ಎಂದು ಹೇಳಿದಾಗ, ನನಗೆ ಹೇಳಲಾಗದಷ್ಟು ಸಂತೋಷವಾಯಿತು. ನಮ್ಮ ಶ್ರಮವನ್ನು ಕಡಿಮೆಗೊಂಡಿಸಿದ ಸಂಯೋಜಕರಾದ ‘ಸಾಯಿಕುಮಾರ್’ ಮತ್ತು ‘ವೇಣು’ ರವರಿಗೆ ನನ್ನ ಧನ್ಯವಾದಗಳು.

 

17 ಅಕ್ಟೋಬರ್, ಕೈರೋ ಸಿಟಿಯನ್ನು ಸೇರಿದೆವು. 18 ರಂದು ಮುಂಜಾನೆ 5 ಗಂಟೆಗೆ ‘ಗೀಜಾ ಪಿರಮಿಡ್’ ದರ್ಶಿಸಲು ತಯಾರಾದೆವು. ಅದರ ದಟ್ಟವಾದ ಆಕಾರ ಹಾಗು ಅಂದವನ್ನು ನೋಡಿ ಬೆರಗಾದೆನು. ಖಂಡಿತ ಇದು ಏಳನೆ ಅದ್ಭುತಗಳಲ್ಲಿ ಪ್ರಥಮವಾದದ್ದು.

 

ನನಗೆ ತಿಳಿಯದ ಒಂದು ಸೆಳೆತ ನನ್ನನ್ನು ಪಿರಮಿಡ್ ಒಂದು ಪುಟ್ಟ ಮಾರ್ಗಕ್ಕೆ ಕರೆದುಕೊಂಡೋಯ್ದಿತ್ತು. ಅರ್ಥ ಶರೀರವನ್ನು ಬಗ್ಗಿಸಿಕೊಂಡು ಹತ್ತಿದ್ದೆವು. ತಲೆಗೆ ಕೊಂಚ ತಾಗಿದಾಗ, ನನ್ನ ಶರೀರ ತೂಗಾಡಿತು. ಅದು ಒಳ್ಳೆಯ ಅನುಭವವನ್ನು ನೀಡಿತು.

 

‘ಕಿಂಗ್ಸ್ ಛೇಂಬರ್’ನಲ್ಲಿ ಸೇರಿದೆವು. ಪತ್ರೀಜಿ ಎಲ್ಲರನ್ನು ಧ್ಯಾನದಲ್ಲಿ ಕೂಡಿಸಿದರು. ನನ್ನನ್ನು ‘ಸಾರ್ಕೊಪೇಗಸ್’ ಎಂಬ ಒಂದು ಕಲ್ಲಿನ ಟಬ್‌ನಲ್ಲಿ ಕೂರುವಂತೆ ಆದೇಶಿಸಿದರು. ಕಣ್ಣುಗಳನ್ನು ಮುಚ್ಚಿದ ಕ್ಷಣ, ಬೆಚ್ಚನೆಯ ಶಕ್ತಿಯು ನನ್ನನ್ನು ಆವರಿಸಿದಂತಾಯಿತು. ನನ್ನ ಹತೋಟಿಯನ್ನು ಮೀರಿದಷ್ಟು ತೂಗಾಟ.. ಅಂದು ಶುರುವಾಯಿತು ನನ್ನ ಧ್ಯಾನದ ಅನುಭವಗಳು..

 

ಸುರುಳಿಯ ಆಕಾರದ ಒಂದು ಪುಸ್ತಕ ನನ್ನ ಮುಂದೆ ತೆರೆದುಕೊಂಡಿತು. ಕೊನೆಯ ಪುಟದಲ್ಲಿ ನಿಂತಿತ್ತು. ಕೆಲವು ಅಕ್ಷರಗಳು ಕಲ್ಲಿನಿಂದ ಹಾರಿ, ಹೂವಿನಂತೆ ಆ ಪುಸ್ತಕದಮೇಲೆ ಸೇರಿದವು. ಅದನ್ನು ಗಮನಿಸಿದಾಗ ಒಂದೊಂದು ಅಕ್ಷರವು ಒಂದು ದೃಶ್ಯದಂತೆ ಕಾಣಿಸಿತ್ತು. ಒಂದು ಪುಟವು ವರ್ತಮಾನದ ಪರಿಸ್ಥಿತಿಯನ್ನು ತೋರಿಸಿತ್ತು. ಏನೆಂದರೆ, ಪ್ರಾಣಿಹಿಂಸೆಯಿಂದ ದುಷ್ಟ ಶಕ್ತಿಯು (negative), ಪಿರಮಿಡ್ ನಾಲ್ಕು ದಿಕ್ಕಿನಿಂದ ಹಾಗು ಮೇಲಿನಿಂದ ಸಂಗ್ರಹಿಸಿಕೊಂಡು, ಪಾಜಿಟಿವ್ ಶಕ್ತಿಯು ಪ್ರವಾಹವನ್ನು ಕಡೆಗಟ್ಟುತ್ತಿತ್ತು. ಪತ್ರೀಜಿ, ಪಿರಮಿಡ್ ಮಾಸ್ಟರ‍್ಸ್‌ದೊಂದಿಗೆ ಅದನ್ನು ಶುದ್ಧೀಕರಿಸಿದರು. [ಈಗಾಗಲೇ ಪತ್ರೀಜಿ ನಾಲ್ಕು ಬದಿಗಳನ್ನು ಶುದ್ಧೀಕರಿಸಿದ್ದಾರೆ, ಒಂದೊಂದು ಪ್ರಯಾಣದಲ್ಲಿ ಒಂದು ಬದಿ.

 

ಈಗ ಎರಡು ಪಿರಮಿಡ್‌ಗಳಲ್ಲಿ ‘ಗೆಲಾಕ್‌ಟಿಕ್ ಸೆಂಟರ್’ ಇಂದ ಶಕ್ತಿ ಸ್ಥಾಪನೆಯಾಗಿದೆ. ಹೊಸ ಶಕ್ತಿಯ ಸಂಪರ್ಕವು ಗೀಜಾ ಪಿರಮಿಡ್‌ಗಳಿಂದ, ಹೈದರಾಬಾದ್, ಕಡ್ತಾಲ್‌ನಲ್ಲಿರುವ ಮಹೇಶ್ವರ ಪಿರಮಿಡ್‌ಗೂ ಸ್ಥಾಪನೆಗೊಂಡಿದೆ. ಈಗ ಮಹೇಶ್ವರ ಪಿರಮಿಡ್ ಗೀಜಾ ಪಿರಮಿಡ್ ಅಂತಹ ಶಕ್ತಿಯುತವಾದುದು.

 

ಪುಟಗಳು ಹಿಂದಿನಿಂದ ನಡೆದ ಘಟನೆಗಳನ್ನು ತೋರಿಸಿತ್ತು. ನಮ್ಮ ಪತ್ರೀಜಿಯವರ ಜೀವನ ಚರಿತ್ರೆಯಂತಿತ್ತು. ಬುದ್ಧನು, ಕ್ರೈಸ್ತನು, ಮಹಾವತಾರ್ ಬಾಬಾಜೀ, ಸಪ್ತ ಋಷಿಗಳು ಹಾಗು ಆಸ್ಟ್ರಲ್ ಮಾಸ್ಟರ‍್ಸ್ ಪಿರಮಿಡ್‌ನ್ನು ದರ್ಶಿಸಿದ್ದಾರೆ.

 

ಈ ಭೂಮಂಡಲಕ್ಕೆ, ಗೀಜಾ ಪಿರಮಿಡ್ ಒಂದು ಸಹಸ್ರಾರ.. ಕಮಲದ ಕಿರೀಟದಂತೆ ಹಾಗು ಹಿಮಾಲಯವು ಅದರ ‘ದಿವ್ಯಚಕ್ಷು’ ಪ್ರದೇಶ.

 

[ದಿವ್ಯ ದೃಷ್ಟಿಯಿದ್ದ ಕೆಲವು ಭಾರತೀಯ ಋಷಿಗಳು, ಹಿಮಾಲಯವೇ ಆಧ್ಯಾತ್ಮಿಕ ಜೀವನಕ್ಕೆ ಕೊನೆಯ ಹಂತವೆಂದು ತಿಳಿದಿದ್ದಾರೆ. ಆದರೇ ಆಧ್ಯಾತ್ಮಿಕ ಪ್ರಯಾಣವು, ಗೀಜಾ ಪಿರಮಿಡ್‌ನಲ್ಲಿ ಧ್ಯಾನಮಾಡಿದಾಗಲೇ ಪರಿಪೂರ್ಣವಾಗುತ್ತದೆ.]

 

ಬೇರೆಯ ಪುಟಗಳಲ್ಲಿ ಪತ್ರೀಜಿಯವರ ಹಿಂದಿನ ಜನ್ಮಗಳನ್ನು ತೋರಿಸಿತ್ತು. ಹಿಂದೆ ನಡೆದಿದ ಯುದ್ಧಗಳು ಹಾಗು ದುಷ್ಟ ಆಚರಣೆಗಳು ಕಾಣಿಸಿದ್ದವು. ಕೊನೆಗೆ, ಮೊದಲಿನ ಪುಟ ಕಾಣಿಸಿಕೊಂಡು, ಅದರಲ್ಲಿನ ಮೊದಲನೆಯ ಅಕ್ಷರವು ಒಂದು ಸಂಭಾವನೆಯಂತೆ ಕಾಣಿಸಿತು. ಗೆಲಾಕ್‌ಟಿಕ್ ಸೆಂಟರ್‌ಯಿಂದ ನೋಡಿದಾಗ, ಭೂಮಿಯ ಮೇಲೆ ಯಾವ ಪರಿಹಾರವು ಕಾಣದೆ ನರಳುತ್ತಾ ಪೀಡಿತಗೊಂಡ ಆತ್ಮಗಳು ಕಾಣಿಸಿದ್ದವು. ಅವರಿಗೆ ಅದರಿಂದ ಬಿಡುಗಡೆ(ಮುಕ್ತಿ) ಬೇಕು. ಆದರೆ ದಾರಿ ತಿಳಿಯದು. ಆಗ ಭೂಮಿಯು ಮುಕ್ಕಾಲು ಭಾಗವು ವನಗಳಿಂದ ಹಾಗು ನೀರಿನಿಂದ ತುಂಬಿದೆ.

 

ಅಂದು ಆಸ್ಟ್ರಲ್ ಮಾಸ್ಟರ್‌ಗಳು ಮಾನವ ಕುಲಕ್ಕೆ ಸಹಾಯಮಾಡಲು, ತಕ್ಷಣವೇ ಪಿರಮಿಡ್‌ಗಳನ್ನು ಸ್ಥಾಪಿಸಲು ಆರಂಭಿಸಿದ್ದರು [10,000 ವರ್ಷಹಿಂದೆ] ಅದೇ ಗೀಜಾ ಪಿರಮಿಡ್, ಈಜಿಪ್ಟ್‌ನಲ್ಲಿ. ಭೂಮಿಯ ಉಭಯತ್ವದಿಂದ (duality) ಎರಡು ಪಿರಮಿಡ್‌ಗಳನ್ನು ಯೋಜಿಸಿದರು. ಒಂದು ಸ್ತ್ರೀ ಶಕ್ತಿ ಸಂಕೇತ-ಗುಣ ಪಡಿಸುವ ಶಕ್ತಿ, ಮತ್ತೊಂದು ಪುರುಷ ಶಕ್ತಿ ಸಂಕೇತ-ಅರಿವನ್ನು ಅಭಿವೃದ್ಧಿ ಗೊಳಿಸಿಕೊಳ್ಳುವ ಶಕ್ತಿ.

 

ಪಿರಮಿಡ್‌ನ್ನು ನಿರ್ಮಿಸಲು, ಮೊದಲನೆಯ ಕಲ್ಲನ್ನು, ಪತ್ರೀಜಿಯವರು ತಮ್ಮ ಬಲಗೈನ ಕಿರುಬೆರಳಿನಿಂದ ಸಾಗಿಸಿದರು. ಬೇರೆಯ ಪಿರಮಿಡ್ಸ್‌ಗಾಗಿ ಮೊದಲನೆಯ ಕಲ್ಲನ್ನು ತಮ್ಮ ಎಡಗೈಯಿನ ಕಿರುಬೆರಳಿನಿಂದ ಸಾಗಿಸಿದರು. ನಂತರ ಅವರು ಪ್ರತಿ ಕಲ್ಲಿನ ಮೇಲೆ ದೃಶ್ಯದ ರೀತಿಯಲ್ಲಿ ಒಂದು ಅಕ್ಷರ ಬರೆದರು. [ಶ್ರೀ ಕೃಷ್ಣನು, ಗೋವರ್ಧನ ಗಿರಿಯನ್ನು ಸಾಗಿಸಿದಂತೆ ಹೋಲಿಸಬಹುದು]

 

ಕೆಲವು ಕಾಲದ ನಂತರ, ಅವು ಸುಂದರವಾದ ಬಣ್ಣಗಳು ಪಡೆದುಕೊಂಡವು. ಹೀಗೆ ನೂರು ಸಾವಿರಗಿಂತ ಹೆಚ್ಚಿನ ‘ಸ್ಪಿರಿಚ್ಯುಯಲ್ ಮಾಸ್ಟರ‍್ಸ್’ ಕಲ್ಲುಗಳನ್ನು ಕಿರುಬೆರಳಿನಲ್ಲಿ ತಂದು ಪಿರಮಿಡ್ಡನ್ನು ನಿರ್ಮಿಸಿದರು. ಕಲ್ಲಿನ ಮೇಲೆ ಪತ್ರೀಜಿಯವರ ಸ್ಪರ್ಷದಿಂದ ಜೀವ ಬಂದು ತಕ್ಷಣವೇ ಅಕ್ಷರಗಳು ಸುಂದರ ಬಣ್ಣಗಳನ್ನು ಹೊಂದಿದವು. ಎರಡು ಪಿರಮಿಡ್‌ಗಳನ್ನು ಕಟ್ಟಲು 11 ವರ್ಷ ತೆಗೆದುಕೊಂಡಿದ್ದರು. ನಂತರ ಮುಂದಿನ ಅಧಿಕಾರಿಗಳು ಆ ಪಿರಮಿಡ್‌ನ ತದ್ರೂಪಿಸಿ ಎಷ್ಟೋ ಪಿರಮಿಡ್‌ಗಳನ್ನು ಕಟ್ಟಿದ್ದರು. ಯುದ್ಧದಿಂದ ಹಾಗು ವಾತಾವರಣದ ತೀವ್ರತೆಗಳಿಂದ, ಅವು ನಾಶವಾದವು. ನೈಲ್ ನದಿಯು ಸಹ ಆಸ್ಟ್ರಲ್ ಮಾಸ್ಟರ‍್ಸ್‌ಗಳ ಅನುಗ್ರಹವೇ..

 

[ಮೊದಲನೆಯ ಪಿರಮಿಡ್‌ನಲ್ಲಿ, ನಾನು ಕೂಡ ಧ್ಯಾನಿಯಾಗಿ ಭಾಗವಹಿಸಿದ್ದೇನೆ]

 

ಇಂತಹ ಅದ್ಭುತವಾದ ಅನುಭವದಿಂದ, ನನಗೆ ತುಂಬಾ ಆನಂದವಾಗಿದೆ. ಮಾನುಕುಲಕ್ಕೆ, ಗೀಜಾ ಪಿರಮಿಡ್ ಬಗ್ಗೆ ಬುದ್ಧಿ, ಜ್ಞಾನವನ್ನು ನೀಡಿದ ನಮ್ಮ ಪ್ರೀತಿಯ ಪತ್ರೀಜಿಯವರಿಗೆ ನನ್ನ ಹೃದಯ ಪೂರ್ವಕವಾದ ವಂದನೆಗಳು.

 

 

ಗಿರಿಜಾ ರಾಜನ್
ಬೆಂಗಳೂರು

ಫೋನ್  : 080 2257 3801

Go to top