" ಧ್ಯಾನದಿಂದ ರೋಗಿಗಳ ತಪಾಸಣೆಗೆ ಸಾಕಷ್ಟು ತಾಳ್ಮೆ ಬಂದಿದೆ "

 

 

ಆಗಸ್ಟ್ 2001ರಲ್ಲಿ ಕುವೆಂಪು ರಂಗಮಂದಿರದಲ್ಲಿ ‘ಧ್ಯಾನ ಮಹಾಯಜ್ಞ’ ಹೆಸರಿನ ಧ್ಯಾನ ಸಮ್ಮೇಳನ ನಡೆಯುತ್ತಿದೆಯೆಂದು ಇದ್ದಕ್ಕಿದ್ದ ಹಾಗೆ, ತಿಳಿದು, ಆ ದಿನ ಬೆಳಿಗ್ಗೆ 7 ಗಂಟೆಗೆ ಈ ಸಮ್ಮೇಳನ ವೀಕ್ಷಿಸಲು ಕುತೂಹೂಲಕ್ಕಾಗಿ ಹೋದೆ. ಅಂದು ಸಾಯಂಕಾಲ 7 ಗಂಟೆಗೆ ಕಾರ್ಯಕ್ರಮ ಮುಗಿಯುವವರೆಗೂ ಅಲ್ಲಿ ಭಾಗವಹಿಸಿದ್ದ ಸುಮಾರು 900 ಜನರೆಲ್ಲರೂ ಸಹ ಕಾರ್ಯಕ್ರಮದ ಪೂರ್ಣಲಾಭ ಪಡೆದರು. ಅದರಲ್ಲಿ ನಾನೂ ಒಬ್ಬ. ಗುರುಗಳಾದಂತಹ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರ ಧ್ಯಾನ ಉಪನ್ಯಾಸಗಳ ಮತ್ತು ಧ್ಯಾನ ಪ್ರಾತ್ಯಕ್ಷಿತೆಗಳ ಮೂಲಕ ಕಲಿಸಿಕೊಟ್ಟ ಆನಪಾನಸತಿ ಧ್ಯಾನ ವಿಧಾನವನ್ನು ದಿನನಿತ್ಯ ಎರಡೂ ಹೊತ್ತು ಮಾಡುತ್ತಾ ಬಂದೆ. ಅಂದರೆ, ಸುಮಾರು ಎರಡೂವರೆ ವರ್ಷಗಳಿಂದ ನನ್ನಲ್ಲಿ ಅಂದರೆ, ಶಾರೀರಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ಒಳ್ಳೆಯ ಅನುಭವಗಳು ಅದರ ಲಾಭಗಳು ಆಗಿವೆ, ಆಗುತ್ತಾ ಇವೆ.

 

1. ಶಾರೀರಿಕವಾಗಿ ಆರೋಗ್ಯದ ದೃಷ್ಟಿಯಿಂದಾದ ಅನುಭವಗಳು :

 

a)ಸುಮಾರು 2 ವರ್ಷಗಳಿಂದ ನನ್ನನ್ನು ಬಾಧಿಸುತ್ತಿದ್ದ Respiratory Allergy ಧ್ಯಾನದಿಂದ 15 ದಿನಗಳಲ್ಲೇ ವಾಸಿಯಾಗಿದೆ. ಈಗ ಯಾವುದೇ Anti Allergy Medicines ತೆಗೆದುಕೊಳ್ಳುತ್ತಿಲ್ಲ.
b) ಆಗಾಗ ಕಾಡುತ್ತಿದ್ದ Throat Infection & Chronic tonsilitis ಈಗ ಇಲ್ಲ.

 

2. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅನುಭವಗಳು :

 

a) ಕೋಪ, ತಾಪಗಳು ಕಡಿಮೆಯಾಗಿವೆ, ಶಾಂತಿ-ಸಮಾಧಾನ ಜಾಸ್ತಿ ಆಗ್ತಾ ಇದೆ. ಅಂದರೆ, ಚಂಚಲಚಿತ್ತ ಮತ್ತು ಮೂಢಚಿತ್ತದ ಆವೃತ್ತಿಗಳು ಕಡಿಮೆಯಾಗಿವೆ. ಹಾಗೆಯೇ, ಶಾಂತಚಿತ್ತ, ಏಕಾಗ್ರಚಿತ್ತ ಮತ್ತು ಆನಂದ ಚಿತ್ತವೃತ್ತಿಗಳು ಜಾಸ್ತಿ ಆಗ್ತಾ ಇವೆ.
b) ಇವತ್ತಿನ ಆಧುನಿಕ ಜೀವನದ ಅಂಶಗಳಾದ ಒತ್ತಡ ಮತ್ತು ವ್ಯಾಕುಲತೆಗಳು ಕಡಿಮೆಯಾಗಿವೆ. ರೋಗಿಗಳನ್ನು ತಪಾಸಣೆ ಮಾಡುವಲ್ಲಿ ಸಾಕಷ್ಟು ತಾಳ್ಮೆ ಬಂದಿದೆ.
c) ಮನೋಶಕ್ತಿ ವೃದ್ಧಿಸಿದೆ.
ಕೆಲಸದ ಒತ್ತಡಗಳಿಂದ ದಿನ ನಿತ್ಯದ ನಿದ್ರೆ ಕಡಿಮೆ ಆದಾಗ, ಅದನ್ನು ಕಡಿಮೆ ಅವಧಿಯಲ್ಲಿ ಧ್ಯಾನದಿಂದ ಸರಿದೂಗಿಸಬಹುದು. ವೈಜ್ಞಾನಿಕವಾಗಿ ಹೇಳುವುದಾದರೆ ಈಗ ಸಾಮಾನ್ಯರಿಗೆ REM (Rapid Eye Movement) Stage ನಿದ್ರೆಯಿಂದ ಸಿಗಬಹುದಾದಂತಹ ವಿಶ್ರಾಂತಿಯನ್ನು ಎಚ್ಚರಾವಸ್ಥೆಯಲ್ಲಿಯೇ ಧ್ಯಾನದಿಂದ ಪಡೆಯಬಹುದು.

 

3. ಅತೀಂದ್ರಿಯ ಅನುಭವಗಳು :

 

ಸುಪ್ತಮನಸ್ಸಿನ ಸಹಾಯದಿಂದ ಮನೋಶಕ್ತಿ ಮತ್ತು ಟೆಲಿಪತಿ ಬಳಸಿ ಹಲವಾರು ಅಸಾಧ್ಯವೆನಿಸಿದ ಘಟನೆಗಳು ಸಾಧ್ಯವಾಗಿವೆ.
a) ಈ ಹಿಂದೆ, ನಾನು ವಿದೇಶದಿಂದ ವಾಪಾಸ್ ಬಂದನಂತರ, ನನ್ನ two wheeler
ವಾಪಾಸ್ ಹಿಂತಿರುಗಿಸಿದ್ದರೇ ಹೊರತು ಆರ್.ಸಿ. ಬುಕ್‌ನ್ನು 1 ವರ್ಷ ಆದರೂ ವಾಪಸ್ಸು ಕೊಡಲೇ ಇಲ್ಲ. ಟೆಲಿಪತಿ ಮೂಲಕ Thought ಕಳುಹಿಸಿದಾಗ, ಯಾವ ವ್ಯಕ್ತಿಯ ಮೂಲಕ ಅದು ಕಳೆದಿತ್ತೋ ಅದೇ ವ್ಯಕ್ತಿ RC bookನ್ನು ತಂದುಕೊಟ್ಟರು.
b) ನನ್ನ LIC Bond, LIC Agent ಮೂಲಕ ಕಳೆದು ಹೋಗಿದ್ದು Duplicate Bond ಅರ್ಜಿಹಾಕಲು ತೀರ್ಮಾನ ಮಾಡಿದ್ದೆವು. ಬದಲಾಗಿ ಟೆಲಿಪತಿ ಮೂಲಕ thought ಕಳುಹಿಸಿದಾಗ, Original Bondನ್ನು LIC Office ನವರೇ ಖುದ್ದಾಗಿ ಹಿಂತಿರುಗಿಸುವಂತೆ ವ್ಯವಸ್ಥೆ ಅಯಿತು. ಅದೇ Original LIC Bond ನನ್ನ ಕೈ ಸೇರಿತು.

 

4. ಆಧ್ಯಾತ್ಮಿಕ ಅನುಭವಗಳು :

 

a) ಪಿರಮಿಡ್ ಟೂರ್‌ಗೆ ಹೋದಾಗ ಬಳ್ಳಾರಿ ಪಿರಮಿಡ್‌ನಲ್ಲಿ ಧ್ಯಾನದಿಂದ ಶಕ್ತಿತರಂಗಗಳ ಅನುಭವವಾಗಿ ಸಂಪೂರ್ಣ ಆಲೋಚನಾರಹಿತ ಸ್ಥಿತಿಯಲ್ಲಿ ತುಂಬಾ ಸಮಯ ಇರಲು ಸಾಧ್ಯವಾಯಿತು.
b) ಉರವಕೊಂಡ ಪಿರಮಿಡ್ ಕಿಂಗ್ಸ್ ಛೇಂಬರ್‌ನಲ್ಲಿ ಧ್ಯಾನ ಮಾಡಿದಾಗ ದೇಹದ ಇರುವಿಕೆ ಗೊತ್ತಾಗಲೇ ಇಲ್ಲ. ಗಂಟೆ ಸುದೀರ್ಘ ಧ್ಯಾನ ಮಾಡಿದರೂ ಸಮಯದ ಅರಿವಾಗಲೀ, ದೇಹದ ನೋವಾಗಲೀ, ಮನಸ್ಸಿನ ತಳಮಳ, ಚಿಂತೆ, ಯಾವುದೂ ಇರಲಿಲ್ಲ. ಧ್ಯಾನದ ನಂತರ ಆಲೋಚನಾ ರಹಿತಸ್ಥಿತಿ (ಯೋಗಃ ಚಿತ್ತವೃತ್ತಿ ನಿರೋಧಃ) ಎಂದು ತಿಳಿಯಿತು. ದೇಹ ಮನಸ್ಸಿನಲ್ಲಿ ಹೊಸ ಹುರುಪು, ಚೈತನ್ಯ ಮೂಡಿತ್ತು.

 

ಇಂತಹ ಒಳ್ಳೆಯ ಮತ್ತು ನಮ್ಮ ಪ್ರಾಪಂಚಿಕ ಜೀವನ ಶೈಲಿಯನ್ನು ಮೀರಿದಂತಹ ಅನುಭವಗಳು, ನಮ್ಮ ಶಿವಮೊಗ್ಗದ ಸಾಕಷ್ಟು ಜನರಿಗೆ ಆಗಿವೆ. ಇದರ ಸದುಪಯೋಗ ಇನ್ನೂ ಸಾವಿರಾರು ಜನರಿಗೆ ಆಗಲೆಂದು ಆಶಿಸುತ್ತಾ, ಎಲ್ಲರೂ ಧ್ಯಾನಿಗಳಾಗಲಿ, ಈ ಸುಲಭ ಧ್ಯಾನ ವಿಧಾನವನ್ನು ಎಲ್ಲರೂ ಕಲಿಯಲೆಂದು ಬಯಸುತ್ತಾ, ಇಂತಹ ’ಆನಾಪಾನಸತಿ’ ಧ್ಯಾನಕ್ರಮವನ್ನು ಸುಲಭವಾಗಿ ಶಿವಮೊಗ್ಗದ ಜನತೆಗೆ ಹೇಳಿಕೊಟ್ಟ ಶಿವಮೊಗ್ಗ ಪಿರಮಿಡ್ ಆಧ್ಯಾತ್ಮಿಕ ಸಂಸ್ಥೆಯ ಸಂಚಾಲಕಿ ಶ್ರೀಮತಿ ಮನೋರಮಾ ಮತ್ತು ಅದರ ರುವಾರಿಯಾದ Dr.C.S .ಕೃಷ್ಣಮೂರ್ತಿಯವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

 

 

Dr. ಗಿರಿಸ್ವಾಮಿ
ಶಿವಮೊಗ್ಗ

Go to top