" ಧ್ಯಾನದ ಜೊತೆಗೆ - ನನ್ನ ಜೀವನದ ಪ್ರಯಾಣ "

 

ನನ್ನ ಹೆಸರು ಹರೀಶ್. ನಾನು ಚಿಕ್ಕಂದಿನಿಂದಲೇ ಆಧ್ಯಾತ್ಮಿಕತೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದೆ. ಐದನೇ ತರಗತಿ ಓದುವಾಗಲೇ ರಾಮಾಯಣ ಮತ್ತು ಭಾಗವತ ಪುಸ್ತಕಗಳನ್ನು ಓದುವುದು, ಪ್ರತಿ ಶನಿವಾರ ವಿಶೇಷವಾಗಿ ಶನಿದೇವರ ಪೂಜೆಯನ್ನು ಮಾಡುತ್ತಿದ್ದೆ. ನಾನು ಡಿಗ್ರಿ ಓದುವಾಗ 2004 ಇಸವಿಯಲ್ಲಿ ನನ್ನ ಮಿತ್ರ ಗೋಪಾಲ್‌ರೆಡ್ಡಿ ಅವರಿಂದ ಹಿಂದೂಪುರದಲ್ಲಿ ಧ್ಯಾನ ಪರಿಚಯವಾಯ್ತು. ಅವತ್ತಿನ ಮೊದಲನೆ ತರಗತಿಯಲ್ಲಿ ಅಲ್ಲಿರುವ ರವಿ ಮಾಸ್ಟರ್ ಅವರಿಂದ ಶಾಕಾಹಾರವೇ ತಿನ್ನಬೇಕೆಂದು ನಿಶ್ಚಯಿಸಿಕೊಂಡಿದ್ದೆ. ಇನ್ನು ಅವತ್ತಿನಿಂದ ನನ್ನ ಜೀವನದಲ್ಲಿ ಪ್ರತಿಯೊಂದೂ ಹೊಸ ಪ್ರಯೋಗವಾಯಿತು. ಯಾವ ರೋಗ ಬಂದರೂ ಧ್ಯಾನದಲ್ಲಿ ನಿವಾರಣೆ ಮಾಡಿಕೊಳ್ಳುತ್ತಿದ್ದೇನೆ. ಒಂದು ಬಾರಿ ಪಿ.ಜಿ. ಪ್ರವೇಶ ಪರೀಕ್ಷೆ ಕೋಚಿಂಗ್‌ಗಾಗಿ ನೆಲ್ಲೂರುಗೆ ಹೋಗಿದ್ದೆ. ಅಲ್ಲಿಗೆ ಹೋಗಿದ್ದ ಅನೇಕ ಮಂದಿ ನನ್ನ ಮಿತ್ರರು ಭೇದಿ ಕಾಯಿಲೆಯಿಂದ ನರಳುತ್ತಿದ್ದರು. ನನಗು ಕೂಡ ಅಲ್ಲಿಗೆ ಹೋದ ವಾರದೊಳಗೆ ಭೇದಿ ಶುರುವಾಯಿತು. ಒಂದು ವಾರದವರೆಗೆ ಕಾದರು ಕಡಿಮೆ ಆಗಲಿಲ್ಲ. ಇನ್ನು ವಿಧಿಯಿಲ್ಲದೆ ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಂಡಿದ್ದೆ. ಮೂರು ದಿನ ಬಳಸಿದೆ. ಆದರೂ ಕಡಿಮೆ ಆಗಲಿಲ್ಲ, ಆ ದಿನವೇ ಒಂದು ಬಲವಾದ ನಿರ್ಣಯವನ್ನು ತೆಗೆದುಕೊಂಡೆ. "ಇನ್ನು ನನ್ನ ಜೀವನದಲ್ಲಿ ಎಷ್ಟೆ ದಿವಸ ಈ ರೋಗವಿದ್ದರೂ, ನಾನು ಔಷಧಿಗಳನ್ನು ಬಳಸುವುದಿಲ್ಲ". ಮೂರು ತಿಂಗಳ ವರೆವಿಗೂ ಆ ರೋಗವನ್ನು ಅನುಭವಿಸಿದ್ದೆ ಇನ್ನು ಆದಿನದಿಂದ ಯಾವ ರೋಗ ಬಂದರೂ ಅನುಭವಿಸಲಿಕ್ಕೆ ಬಹಳ ಇಷ್ಟಪಡುತ್ತೇನೆ. ಏಕೆಂದರೆ, ಅಂತಹ ರೋಗಗಳು ಬಂದಾಗಲೇ ನಮ್ಮ ಶಕ್ತಿ ಎಷ್ಟು ಇದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ನೆಲ್ಲೂರುನಲ್ಲಿ ಇರುವವರೆಗೂ ರಾತ್ರಿ 11 ಗಂಟೆಯಿಂದ ಬೆಳಗ್ಗೆ 4 ಗಂಟೆವರೆಗೆ ಧ್ಯಾನಕ್ಕೆ ಕೂರುತ್ತಿದ್ದೆ.

 

ಅನಂತರ, ಉದ್ಯೋಗ ನಿಮಿತ್ತ 2006ರಲ್ಲಿ ಬೆಂಗಳೂರಿಗೆ ಬಂದೆ. ನಾನು ಒಂದು ಫಾರ್ಮಾಸ್ಯೊಟಿಕಲ್ ಕಂಪೆನಿಯಲ್ಲಿ ರೆಪ್ರಸೆಂಟಿಟೀವ್ ಆಗಿ ಕೆಲಸಕ್ಕೆ ಸೇರಿದೆ. ಅನಂತರ, 2007ರಲ್ಲಿ ಒಂದು ಪಾಂಪ್ಲೆಟ್ ಮೂಲಕ ರಾಜಾಜಿನಗರ ಸೆಂಟರ್ ವಿಳಾಸವನ್ನು ತಿಳಿದುಕೊಂಡೆ. 2008 ರ ಧ್ಯಾನ ಯಜ್ಞದಲ್ಲೂ ಪಾಲ್ಗೊಂಡಿದ್ದೆ. ಆಗಿನಿಂದ ನನ್ನ ಆಧ್ಯಾತ್ಮಿಕ ಅನುಭವಗಳು ಹೆಚ್ಚಾದವು. ಆ ಯಜ್ಞದ ನಂತರ ನನ್ನೊಳಗಿನ ಗುಣಗಳನ್ನು, ಸ್ವಭಾವಗಳನ್ನು ಗಮನಿಸುವುದು ಆರಂಭವಾಯಿತು.

 

2008 ಮಾರ್ಚ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಕಂಪೆನಿಯಿಂದ ಬೇರೊಂದು ಕಂಪೆನಿಗೆ ಬದಲಾಯಿಸಿದೆ. ಈ ಕಂಪೆನಿಯಲ್ಲಿ ನನ್ನ ಮೇನೇಜರ್ ಜೊತೆ ಯಾವಾಗಲೂ ಜಗಳವಾಗುತ್ತಿತ್ತು. ಏಕೋ ಅವರನ್ನ ನೋಡಿದರೆ ಸಾಕು ನನ್ನಲ್ಲಿ ವಿಪರೀತವಾದ ದ್ವೇಷ ಉಕ್ಕುತ್ತಿತ್ತು. ಅನಂತರ, ಕೆಲವು ದಿನಗಳು ಕಳೆದ ಮೇಲೆ ‘ಸುಮಧುರವೀ ಜೀವನ’ ತರಗತಿಗೆ ಹಾಜರಾಗಿದ್ದೆ. ಆ ತರಗತಿಯ ನಂತರ, ನಾನು ಆಚರಣೆಯಲ್ಲಿಟ್ಟಿದ್ದು ಏನೆಂದರೆ, ನನ್ನ ಮೇನೇಜರ್ ನೋಡಿದಾಗಲಿಲ್ಲ, ಮತ್ತೆ ಅವರು ಕರೆ ಮಾಡಿದಾಗ, ‘ನಾನು ಎಲ್ಲರನ್ನು ಪ್ರೀತಿಸುತ್ತೇನೆ’ ಎಂದು ಅಂದುಕೊಳ್ಳುತ್ತಿದ್ದೆ. ಕೆಲವು ತಿಂಗಳ ನಂತರ ನನ್ನ, ಅವರ ನಡುವೆ ನಂಬಲಾರದಷ್ಟು ಪ್ರೀತಿ ಹೆಚ್ಚಾಯಿತು. ಆ ದಿನದಿಂದ ನಾನು ತಿಳಿದು ಕೊಂಡಿದಿದ್ದು ಏನೆಂದರೆ, ಪ್ರತಿ ಸಮಸ್ಯೆ ಯಾವುದೋ ಬಂದು ಪಾಠವನ್ನು ಕಲಿಸಲೆಂದು ಬರುತ್ತದೆ. ಈ ರೀತಿ ನನ್ನ ಜೀವನದಲ್ಲಿ ಬಹಳಷ್ಟು ಪಾಠಗಳನ್ನು ಕಲಿತಿದ್ದೇನೆ. ಅನಂತರ ನನ್ನ ಪ್ರತಿಯೋಂದು ಯೋಚನೆಯನ್ನು ಗಮನಿಸುವುದು ಶುರುವಾಯಿತು. ಅ ರೀತಿಯಾಗಿ ನನ್ನಲ್ಲಿರುವ ಎಲ್ಲಾ ಶತ್ರುತ್ವದ ಗುಣಗಳನ್ನು ಹೋಗಲಾಡಿಸಿಕೊಂಡೆ. ನಂತರ ‘ರಹಸ್ಯ’ ಎಂಬುವ ತೆಲುಗು ಪುಸ್ತಕವನ್ನು ಓದಿದ್ದೆ. ಇದನ್ನು ಓದಿದ ನಂತರ ನಾನೊಂದು ಪ್ರಯೋಗವನ್ನು ಮಾಡಿದೆ. ಅದೇನೆಂದರೆ, ನಾನು ಸಹ ಒಂದು ಪಿರಮಿಡ್ ಕಟ್ಟುತ್ತೇನೆಂದು, ನಮ್ಮೂರಿನಲ್ಲಿಯೇ ಕಟ್ಟುತ್ತೇನೆಂದು ದೃಢಸಂಕಲ್ಪ ಮಾಡಿದೆ. ಪ್ರತಿದಿನ ಕನಿಷ್ಠ ಇಬ್ಬರಿಗೆ ಪಿರಮಿಡ್ ಕಟ್ಟುತ್ತೇನೆಂದು ಹೇಳುವುದು, ಪಿರಮಿಡ್ ನಿರ್ಮಾಣ ಪೂರ್ತಿಯಾಗಿದೆಯೆಂದು, ಪತ್ರೀಜಿಯವರು ಬಂದು ಅದನ್ನು ಉದ್ಘಾಟನೆ ಮಾಡಿದ ಹಾಗೆ, ಅಲ್ಲಿ ಎಲ್ಲರೂ ಕುಳಿತು ಧ್ಯಾನ ಮಾಡುತ್ತಿದ್ದ ಹಾಗೆ ಕಲ್ಪನೆ ಮಾಡಿಕೊಳ್ಳುತ್ತಿದ್ದೆ.

 

ಈ ರೀತಿಯಾಗಿ ಕಲ್ಪನೆ ಮಾಡಿಕೊಳ್ಳುವುದು ಶುರುಮಾಡಿದ ಒಂದು ವರ್ಷದ ನಂತರ, ನನಗೆ ನನ್ನ ಕಂಪೆನಿಯಿಂದ ಇನ್ಸೆಂಟಿವ್ಸ್ ಬಂದಿತು. ಈ ರೀತಿಯಾಗಿ ಒಂದು ಲಕ್ಷಕ್ಕೂ ಮೇಲೆ ಹಣ ಕೂಡಿಟ್ಟಿದ್ದೇನೆ. ನಮ್ಮೂರಿನಲ್ಲಿ ಒಂದು ಮನೆಯನ್ನೂ ಸಹ ಕಟ್ಟಿದ್ದೇನೆ. ಈ ಧ್ಯಾನವು ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಯನ್ನು ತಂದು ಕೊಟ್ಟಿದೆ.

 

ನನ್ನ ಕನಸಿನಿಂದ ಅನೇಕ ಅನುಭವಗಳನ್ನು ಹೊಂದಿದ್ದೇನೆ. ಒಂದು ಬಾರಿ ರಾಜಾಜಿನಗರ ಸೆಂಟರ್‌ನಲ್ಲಿ ಹುಣ್ಣಿಮೆ ಧ್ಯಾನದ ತರಗತಿಗೆ ಹೋಗಿದ್ದೆ. ಅಲ್ಲಿ ತರಗತಿ ಮುಗಿದ ನಂತರ, ಅಲ್ಲಿರುವ ಪಿರಮಿಡ್ ಕೆಳಗೆ ಮಲಗಬೇಕೆನಿಸಿತು. ಮಲಗಿಕೊಂಡ ತಕ್ಷಣವೇ ಆ ಮನೆಯಲ್ಲಿ ರಾಕೆಟ್ ಗಿಂತಲೂ ಹೆಚ್ಚು ವೇಗವಾಗಿ ಸುತ್ತುವುದು ಪ್ರಾರಂಭವಾಯಿತು. ನಂತರ, ನನಗೆ ತಿಳಿಯಿತು, ಅದು ‘ಸೂಕ್ಷ ಶರೀರಯಾನ’ ಎಂದು. ಅನೇಕ ಬಾರಿ ಕನಸಿನಲ್ಲಿ ಎಲ್ಲರೂ ಕೆಳಗಡೆ ನಡೆಯುತ್ತಿರುವಾಗ, ನಾನು ‘ಅಯಮಾತ್ಮ ಬ್ರಹ್ಮ, ಮಮಾತ್ಮ ಸರ್ವಭೂತಾನಂ’ ಎಂದು ಕೊಂಡೆ. ಅಂದುಕೊಂಡ ತಕ್ಷಣವೇ ಅತಿ ವೇಗವಾಗಿ ಗಾಳಿಯಲ್ಲಿ ಜಿಗಿಯುತ್ತಿದ್ದ ಹಾಗೆ ಅನುಭವವಾಯಿತು. ಇದರಿಂದ ಕನಸಿನಲ್ಲೂ ಸಹ ನಮ್ಮ ಜೀವನದಲ್ಲಿ ಎಷ್ಟೋ ಕಲಿತುಕೊಳ್ಳ ಬಹುದೆಂದು ತಿಳಿದುಕೊಂಡೆ.

 

ಇನ್ನೂ ಧ್ಯಾನ ಪ್ರಚಾರದ ವಿಷಯಕ್ಕೆ ಬಂದರೆ ಅನೇಕ ಶಾಲೆಗಳಲ್ಲಿ, ಹಿಂದೂಪುರದಲ್ಲಿ ಧ್ಯಾನದ ತರಗತಿಗಳನ್ನು ತೆಗೆದುಕೊಂಡೆ. ಈ ವರ್ಷ ನಮ್ಮೂರಿನಲ್ಲಿಯೂ ಸಹ ಧ್ಯಾನದ ತರಗತಿಯನ್ನು ತೆಗೆದುಕೊಂಡಿದ್ದೇನೆ, ತೆಗೆದುಕೊಳ್ಳುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೂ ಏನು ಕಲಿತುಕೊಂಡರು ಅದನ್ನು ಕನಿಷ್ಠ ಹತ್ತು ಜನಕ್ಕೆ ಹೇಳುವುದು ನನಗೆ ಅಭ್ಯಾಸವಾಯಿತು. ಅದು ಎಂತಹ ಅನುಭವವಾದರೂ ಸರಿ. ಅದಕ್ಕೆ ಈ ಧ್ಯಾನ ಜ್ಞಾನವನ್ನು ಎಲ್ಲರಿಗೂ ಹಂಚುತ್ತೇನೆ.

 

ನಾನು ಅಂದುಕೊಂಡ ಹಾಗೆ ನಮ್ಮ ತಾಯಿಯು ಶಾಕಾಹಾರಿಯಾಗಿ ಬದಲಾಗುವುದು ಮತ್ತು ಮನೆಯಲ್ಲಿರುವವರೆಲ್ಲರೂ ಶಾಕಾಹಾರಿಯಾದರು. ನನ್ನ ತಾಯಿ ಮತ್ತು ಅಕ್ಕ ಇಬ್ಬರು ಶ್ರೀಶೈಲ ಧ್ಯಾನ ಮಹಾಯಜ್ಞಕ್ಕೆ ಬಂದಿದ್ದರು. ಅಂದಿನಿಂದ ಅವರಿಬ್ಬರೂ ಸಹ ಪ್ರತಿದಿನ ಧ್ಯಾನ ಮಾಡುತ್ತಿದ್ದಾರೆ.ಈ ರೀತಿಯಾಗಿ ನನ್ನ ಜೀವನದಲ್ಲಿ ನನಗೆ ಜ್ಞಾನವನ್ನು ಪ್ರಸಾದಿಸುತ್ತಿರುವ ಪ್ರತಿಯೊಬ್ಬರಿಗೂ, ಪ್ರತಿ ಪ್ರಾಣಿಗೂ, ಪ್ರತಿ ವಸ್ತುವಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ‘ಯಥಾದೃಷ್ಟಿ ತಥಾ ಸೃಷ್ಟಿ’ ಎನ್ನುವ ಹಾಗೆ ನಮ್ಮ ನೋಡುವ ರೀತಿಯನ್ನು ಬದಲಿಸೋಣ. ಪ್ರಪಂಚದಲ್ಲಿ ಇರುವ ಎಲ್ಲರೂ ನಮ್ಮ ಮಿತ್ರರಾಗಿಯೆ ಕಾಣುತ್ತಾರೆ.

 

ಈ ಧ್ಯಾನದ ಅನುಭವವನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿರುವ ಧ್ಯಾನ ಕಸ್ತೂರಿಗೆ ನನ್ನ ಪ್ರತ್ಯೇಕ ವಂದನೆಗಳು.

 

ಹರೀಶ್
ಬೆಂಗಳೂರು

Go to top