" ದಿನನಿತ್ಯ ನಾಲ್ಕು ಗಂಟೆಗಳಕಾಲ ಧ್ಯಾನ ಮಾಡುತ್ತೇನೆ "

 

 

ನನ್ನ ಹೆಸರು I.M.ಕುಮಾರ್. ನಾನು ಪಿರಮಿಡ್ ವ್ಯಾಲಿಯಲ್ಲಿ ಸೆಕ್ಯೂರಿಟಿ ಆಫೀಸರಾಗಿ 2012, ಜೂಲೈ 25 ರಿಂದ ಕೆಲಸ ಮಾಡುತ್ತಿದ್ದೇನೆ ಇದಕ್ಕೂ ಮೊದಲು ನಾನು ಪೂರ್ತಿ ಭಕ್ತಿಮಾರ್ಗದಲ್ಲಿದ್ದು ವ್ರತಗಳು, ಪೂಜೆಗಳು ನಿರಂತರ ಮಾಡುತ್ತಿದ್ದೆ. ಅದಕ್ಕೂ ಮೊದಲು ನನಗೆ ಪತ್ರೀಜಿ ಅವರ ಪರಿಚಯವಿತ್ತು, ಅವರ ಪುಸ್ತಕಗಳನ್ನು ಸಹ ಓದುತ್ತಿದ್ದೆ. ಅವರ ಆಡಿಯೊ, ವೀಡಿಯೊ, ಸಿ.ಡಿ.ಗಳನ್ನು ಸಹ ವೀಕ್ಷಿಸುತ್ತಿದೆ. ಆದರೆ, ಧ್ಯಾನ ಮಾತ್ರ ಮಾಡುತ್ತಿರಲಿಲ್ಲ. ಆದರೆ, ಪಿರಮಿಡ್ ವ್ಯಾಲಿಗೆ ಬಂದನಂತರ ನಾನು ಧ್ಯಾನ ಮಾಡಲು ಇಚ್ಚೆಯಾಗಿ, ಅದು ಸಾಧ್ಯವಾಯಿತು. ಸ್ವಾಧ್ಯಾಯ ಸಹ ಮಾಡುತ್ತಿರುತ್ತೇನೆ. ಇಲ್ಲಿರುವ ಸೀನಿಯರ್ ಮಾಸ್ಟರ್‌ಗಳೊಂದಿಗೆ ಸತ್ಸಂಗ ಸಹ ಮಾಡುತ್ತಿರುತ್ತೇನೆ. ಧ್ಯಾನ ಎನ್ನುವುದು ಜೀವನಕ್ಕೆ ಎಷ್ಟು ಅವಶ್ಯಕ ಎನ್ನುವುದು ಅರಿತಿದ್ದೇನೆ. ದಿನನಿತ್ಯ ನಾಲಕ್ಕು ಗಂಟೆಗಳಕಾಲ ಧ್ಯಾನ ಮಾಡುತ್ತೇನೆ. ಅನೇಕ ಧ್ಯಾನಾನುಭವಗಳು ಉಂಟಾಗಿದೆ. ಮನಶ್ಶಾಂತಿ ಬಂದಿದೆ. ಆನಂದ ಮತ್ತು ಜೀವನದ ಗುರಿ ಏನು ಎಂಬುದು ತಿಳಿದುಬಂದಿದೆ.  ಕೆಲಸ ಕಾರ್ಯಗಳಲ್ಲಿ ಅರಿವು ಉಂಟಾಗಿದೆ.

 

ಮನುಷ್ಯರನ್ನು ಅರ್ಥಮಾಡಿಕೊಳ್ಳುವ ವಿಧಾನ ಅವರ ಜೊತೆ ನಡೆದುಕೊಳ್ಳುವ ರೀತಿ, ಅವರು ನನ್ನ ಜೊತೆ ಇರುವ ವಿಧಾನ ಉತ್ತಮಗೊಂಡಿದೆ. ಧ್ಯಾನದಿಂದ ಮಾನವನಿಗೆ ಎಲ್ಲವೂ ಸಾಧ್ಯವೆ. ಅಸಾಧ್ಯ ಎನ್ನುವುದು ಇಲ್ಲವೇ ಇಲ್ಲ ಎನ್ನುವುದು ನನಗೆ ಚೆನ್ನಾಗಿ ಅರ್ಥವಾಗಿದೆ. ಇಲ್ಲಿಗೆ ಬಂದಾಗಿಂದ ತುಂಬಾ ಹುಮ್ಮಸಿನಿಂದ ಇರುತ್ತಿದ್ದೇನೆ. ಕೆಲವು ಕಾರಣಗಳಿಂದ ನಮ್ಮ ಕುಟುಂಬದಲ್ಲಿ ಒಗ್ಗಟ್ಟು ಇಲ್ಲವಾಗಿ ಸಂಸಾರ ಭಿನ್ನಭಿನ್ನವಾದಾಗ ನನಗೆ ತುಂಬಾ ಬೇಜಾರು ಆಗಿತ್ತು. ಆದರೆ, ಪಿರಮಿಡ್ ವ್ಯಾಲಿಗೆ ಬಂದನಂತರ ನನಗೆ ಚಿಕ್ಕ ಕುಟುಂಬ ಹೋದರು ವಸುಧೈವ ಕುಟುಂಬಕ್ಕೆ ಬಂದ ಭಾವನೆ ಉಂಟಾಗಿದೆ. ಧ್ಯಾನಿಗಳ ಆಪ್ಯಾಯತೆಯಿಂದ ನನಗೆ ತುಂಬಾ ಆನಂದ, ನೆಮ್ಮದಿ ಸಿಕ್ಕಿದೆ. ವೇಗದ ಜಂಜಡದಿಂದ ಮುಕ್ತಗೊಂಡು ಜೀವನದಲ್ಲಿ ಪ್ರಶಾಂತತೆ ಸಿಕ್ಕಿದೆ. ಬೆಂಗಳೂರಿನಲ್ಲಿರುವ ಪಿರಮಿಡ್ ವ್ಯಾಲಿಯಲ್ಲಿ ತುಂಬಾ ಪ್ರಶಾಂತತೆ ಲಭಿಸಿದೆ.

 

I.M.ಕುಮಾರ್
ಪಿರಮಿಡ್ ವ್ಯಾಲಿ
ಬೆಂಗಳೂರು

Go to top