" ಆನಾಪಾನಸತಿ ಧ್ಯಾನದಿಂದ ಎಲ್ಲಾಭಾಗ್ಯವನ್ನು ಪಡೆದುಕೊಂಡಿದ್ದೇನೆ  "

 

 

ನನ್ನ ಹೆಸರು C.ಜಯಮ್ಮ. ನನಗೆ 52 ವರ್ಷ. ನಾನು 2 ವರ್ಷದಿಂದ ಧ್ಯಾನ ಮಾಡುತ್ತಿದ್ದೇನೆ. ನನಗೆ ಕಾಲು ನೋವು, ಡಯಾಬೆಟಿಸ್ ಇತ್ತು. ಈಗ ಕಡಿಮೆಯಾಗಿದೆ. ಧ್ಯಾನ ಮಾಡಲು ಕುಳಿತಾಗ ಏನು ಸಂಕಲ್ಪ ಮಾಡಿಕೊಂಡು ಧ್ಯಾನ ಮಾಡುವೆನೋ ಅದೆಲ್ಲ ನೆರವೇರಿದೆ. ಮೊದಲೆಲ್ಲ ಸಣ್ಣ ಸಣ್ಣ ವಿಷಯಕ್ಕೆ ಒತ್ತಡ ಆಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ. ಧ್ಯಾನದ ಶಕ್ತಿಯಿಂದ, ಧ್ಯಾನದಿಂದ ಜೀವನದಲ್ಲಿ ನೆಮ್ಮದಿ, ಶಾಂತಿ, ಸಂತೋಷ ಪಡೆದಿದ್ದೇನೆ. ಹಂತ ಹಂತವಾಗಿ ಇದರ ಮಹಿಮೆ, ಶಕ್ತಿ ತಿಳಿಯುತ್ತಿದೆ. ನನ್ನ ಯಜಮಾನರಿಗೆ ಶುಗರ್ ಹೆಚ್ಚಾಗಿ ಒಂದು ಕಾಲು ತೆಗೆದರು. ನನ್ನ ತಂದೆ, ತಂಗಿ ಯಜಮಾನರು ತೀರಿಕೊಂಡರೂ ಸಹ ನನಗೆ ಯಾವುದೇ ರೀತಿ ಒತ್ತಡ ಆಗಲಿಲ್ಲ. ಸಹಜವಾಗಿಯೇ ಇದ್ದೆ. ಈ ಶಕ್ತಿ ಧ್ಯಾನ ಮಾಡುವುದರಿಂದ ಪಡೆದುಕೊಂಡಿದ್ದೇನೆ. 

 

ಸುಲಭವಾದ, ಸರಳವಾದ ಧ್ಯಾನವನ್ನು ತಿಳಿಸಿದಂತಹ ಪತ್ರೀಜಿಯವರಿಗೆ, ದಾವಣಗೆರೆ ಧ್ಯಾನ ಪ್ರಚಾರಕ್ಕೆ ಕಾರಣರಾದ ಸೋಮಶೇಖರ್ ಗೌಡರಿಗೆ ಮತ್ತು ನಮ್ಮ ಊರಾದ ಆವರಗೆರೆ ಗ್ರಾಮಕ್ಕೆ ಧ್ಯಾನ ಪರಿಚಯ ಮಾಡಿಸಿದಂತಹ ಪ್ರಕಾಶ್ ಸರ್‌ರವರಿಗೆ  ಧ್ಯಾನ ವಂದನೆ ತಿಳಿಸುತ್ತೇನೆ. ಎಲ್ಲರೂ ಧ್ಯಾನಮಾಡಿರಿ, ಜೀವನ ಮುಕ್ತಿಹೊಂದಿರಿ ಎಂದು ತಿಳಿಸುತ್ತಾ ನನ್ನ ಈ ಧ್ಯಾನದ ಅನುಭವವನ್ನು ನಿಮ್ಮಲ್ಲಿ ಹಂಚಿಕೊಂಡಿದ್ದೇನೆ. ಜೈ ಧ್ಯಾನ ಜಗತ್, ಜೈ ಹಿಂದ್. 

 

C. ಜಯಮ್ಮ
ಆವರಗೆರೆ, ದಾವಣಗೆರೆ

ಕಾತೋರ್ ಪಂಚಾಯ್ತಿ ಮಾಜಿ ಅಧ್ಯಕ್ಷರು
ಫೋನ್  : +91 9980727128

Go to top