" ಧ್ಯಾನದಿಂದ ಒಳ್ಳೆಯ ಅಂಕಗಳು ಸಿಕ್ಕಿವೆ " 

 

 

ನನ್ನ ಹೆಸರು ಜಯೇಶ್ ಸಾಯಿ. ನಾನು ಕಾರ್ಮಲ್ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಅರುಣ ಅಜ್ಜಿ ತಿಮ್ಮರಾಜ್ ತಾತನವರು ಹೇಳಿದಕ್ಕಾಗಿ ನಾನು, ನನ್ನ ಅಮ್ಮ ಹಾಗು ನನ್ನ ಅಕ್ಕ ಮೌನಿಕರವರೆಲ್ಲರು 2 ಆಗಸ್ಟ್  2010 ನಿಂದ ನಾವು ಧ್ಯಾನವನ್ನು ಮಾಡುತ್ತಿದ್ದೇವೆ. ನಾನು ಈ ಧ್ಯಾನವನ್ನು ಮಾಡಿದ್ದರಿಂದ ನನಗೆ ನನ್ನ ಶಾಲೆಯ ಪರೀಕ್ಷೆಯಲ್ಲಿ 90% ದಾಟಿದೆ. ಇದರ ಮುಂಚೆ ನನಗೆ 80% ಮಾತ್ರ ದೊರೆತಿತ್ತು. ನನಗೆ ಈ ವರ್ಷ ಕ್ರೀಡೆಯಲ್ಲಿ ಮೂರು ಚಿನ್ನದ ಪದಕ ಹಾಗೂ ಕರಾಟೆಯಲ್ಲಿ ಒಂದು ಬೆಳ್ಳಿಯ ಪದಕ ದೊರಕಿದೆ. ನೀವು ಹಾಗೂ ನಿಮ್ಮ ತಾಯಿ-ತಂದೆಯವರು ಧ್ಯಾನವನ್ನು ಆರಂಭಿಸಬೇಕು. ಪತ್ರೀಜಿಯವರು ಕೊಳಲನ್ನು ನುಡಿಸುತ್ತಾರೆ. ನಾವು ಅದರ ಧ್ವನಿಯಿಂದ ಸಿ.ಡಿ ಮೂಲಕ ಹಾಗೂ ಧ್ಯಾನದ ಟೋಪಿಯನ್ನು (ಪಿರಮಿಡ್ ಕ್ಯಾಪ್) ಹಾಕಿಕೊಂಡು ನಾವು ಧ್ಯಾನವನ್ನು ಮಾಡುತ್ತೇವೆ. ಹಾಗೆ ನೀವೂ ಅಭ್ಯಾಸ ಮಾಡಿ.

 

ಜಯೇಶ್ ಸಾಯಿ
ಬೆಂಗಳೂರು

Go to top