" ನನಗೆ ಜ್ಞಾನೋದಯವನ್ನು ಉಂಟುಮಾಡಿದ ಮಹಾನುಭಾವ ಪತ್ರೀಜೀ "

 

 

ನನ್ನ ಹೆಸರು ವರಲಕ್ಷಿ . ನಮ್ಮ ಊರು ವಿಜಯವಾಡ. ನಮ್ಮ ಯಜಮಾನರ ಹೆಸರು ಕೋನೇರು ಸುಭಾಷ್ ಚಂದ್ರಬೋಸ್.

 

1998 ಮೇ ತಿಂಗಳು 24ರಂದು ವಿಜಯವಾಡ ಪಿರಮಿಡ್ ಮಾಸ್ಟರ್ ಮುಖರ್ಜಿರವರ ಮೂಲಕ, ಆರೋಗ್ಯಕ್ಕಾಗಿ, ಈ ಧ್ಯಾನದಲ್ಲಿ ಪ್ರವೇಶಿಸಿದ ನನಗೆ ಮೊದಲನೆಯ ದಿನವೇ ಮೂರನೆಯ ಕಣ್ಣು ತೆರೆದುಕೊಂಡಿತ್ತು. 4ನೇ ದಿನ ಧ್ಯಾನದಲ್ಲಿ, ಪತ್ರೀಜಿ, ಕಾಡಲ್ಲಿರುವ ಎಲ್ಲಾ ಪ್ರಾಣಿಗಳನ್ನು ತನ್ನ ಮಡಿಲಲ್ಲಿ ಸೇರಿಸಿಕೊಂಡು ಅವನ್ನು ಪ್ರೀತಿಯಿಂದ ನೇವರಿಸುತ್ತಾ ಕಾಣಿಸಿಕೊಂಡರು. 7 ನೇ ದಿನ ಪತ್ರೀಜಿ ಅವರನ್ನು ಗುಂಟೂರುನಲ್ಲಿ ಭೇಟಿಯಾದೆ. ಧ್ಯಾನದಲ್ಲಿ ನೋಡಿದ ಮಹಾನುಭಾವನು ಕಣ್ಣೆದುರಿಗೆ ಪ್ರತ್ಯಕ್ಷದೈವ ಎಂಬುವ ಹಾಗೆ ದರ್ಶನ ನೀಡುವುದು ನನಗೆ ಒಮ್ಮೆ ಒಂದು ಮರೆಯಲಾರದ ಅನುಭೂತಿ.

 

ದಿನಕ್ಕೆ ಇಪ್ಪತ್ತು ಗಂಟೆಗಳ ಕಾಲ ಧ್ಯಾನ ಮಾಡಿದೆ. ರಾತ್ರಿ ಹಗಲು ಅಪಾರವಾದ ನನ್ನ ಧ್ಯಾನ ಸಾಧನೆಯಿಂದ ಸಂಪೂರ್ಣ ಆರೋಗ್ಯವನ್ನು ಹೊಂದಿದ್ದೇನೆ.

 

"ಗುರುಗಳೆಂದರೇ ಮಾಮೂಲಾಗಿ ನಮ್ಮಂತಹ ಮನುಷ್ಯನೇ" ಎಂಬುವ ಸ್ಥಿತಿಯಲ್ಲಿ ಇದ್ದ ನನ್ನ ಪ್ರಯಾಣ ಸ್ವಲ್ಪ ಸ್ವಲ್ಪವಾಗಿ ಆತ ಯಾರು? ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಹನ್ನೊಂದು ವರ್ಷಗಳಿಂದ ಅನಂತವಾಗಿ ಸಾಗುತ್ತಲೇ ಇದೆ. ಆತನನ್ನು ಅರ್ಥ ಮಾಡು ಕೊಳ್ಳುವುದು ತುಂಬಾ ಕಷ್ಟವೆಂದು ನನಗೆ ಅರ್ಥವಾಗಿದೆ. ಏನಾದರೂ ಸರಿ ಈ ಜನ್ಮದಲ್ಲಿ ಅವರನ್ನು ಬಿಡದೇ... ತ್ರಿಕರಣ ಶುದ್ಧಿಯಿಂದ ಇದ್ದರೇನೇ ನನ್ನದು ಕೊನೆಯ ಜನ್ಮ ಆಗುತ್ತದೆ. ಆದ್ದರಿಂದ, ಅದಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೇನೆ. ಎಷ್ಟು ಕಷ್ಟಗಳಾದರೂ ಸಹಿಸಿಕೊಳ್ಳುತ್ತೇನೆ. ಆ ಸಹನೆಯನ್ನು ಸಹ ಅವರೇ ಹೇಳಿ ಕೊಟ್ಟರು... ದಟೀಜ್ ಪತ್ರೀಜಿ.

 

ಎಷ್ಟೋ ಅನುಭವಗಳು, ಅನೇಕಾನೇಕ ಸಂದೇಶಗಳು ಆಸ್ಟ್ರಲ್ ಮಾಸ್ಟರ‍್ಸ್‌ಗಳಿಂದ ಪಡೆದಿದ್ದೇನೆ. ಆದರೆ, ಪತ್ರೀಜಿ ಕೊಟ್ಟಿರುವ ಸಂದೇಶಗಳು, ಆತ್ಮಜ್ಞಾನ, ಸೂಕ್ಷ ಶರೀರಯಾನದಲ್ಲಿ ಅವರು ಕೊಟ್ಟಿರುವ ಸಂಯಮ ಮಾರ್ಗಗಳ ವಿಶಿಷ್ಟತೆ, ಗೀಜಾ ಪಿರಮಿಡ್ ರಹಸ್ಯಗಳು, ಭೂಮಿಯೊಳಗೆ ಪಾತಾಳ ಲೋಕದವರೆಗೆ ಡೈಮೆನ್ಷನ್ಸ್ ಹೇಗೆ ಬದಲಾಯಿಸಿಕೊಂಡು ಪ್ರಯಾಣ ಮಾಡಬೇಕೊ, ಅರ್ಥ ಆಗದೇ ಇರುವಂತಹ ಪದಾರ್ಥ... ಈ ಪದಾರ್ಥವೇ ಶರೀರ.. ಶರೀರದಿಂದ ಮಾತ್ರವೇ ಸತ್ಯ ಅರ್ಥವಾಗುತ್ತದೆ. ಶರೀರವೇ ಪರಮಧರ್ಮ, ಪರಲೋಕಧರ್ಮವನ್ನು ಕುರಿತು ಇಹಲೋಕ ಆಲೋಚನೆಗಳಿಂದ ಮಾತನಾಡಬಾರದೆಂದು, ಈ ಶರೀರದಿಂದಲೇ ಆತ್ಮಸ್ಥಿತಿಯಲ್ಲಿ ಕೊನೆಯ ಜನ್ಮ ಮಾಡಿಕೊಳ್ಳುವ ವಿಧಾನವನ್ನು ಹುಡುಕಿ ಹುಡುಕಿ ಸಾಕಾಗಿರುವ ನನಗೆ ಆ ಮಹಾಜ್ಞಾನವನ್ನು ಸುಲಭ ರೀತಿಯಲ್ಲಿ ಪಡೆಯುವಹಾಗೆ ಮಾಡಿದ್ದಾರೆ ಪತ್ರೀಜಿ.

 

2000ನೇ ವರ್ಷದಲ್ಲಿ ಮೇ ತಿಂಗಳಲ್ಲಿ ವಿಜಯವಾಡದಲ್ಲಿ ಮೂರು ದಿನಗಳು "ಬುದ್ಧ ಪೂರ್ಣಿಮೆ ಯಜ್ಞ" ಮಾಡಿ ಎಂದು ನಮಗೆ ಸಂದೇಶ ಕೊಟ್ಟರು. ಅದರ ನಿಮಿತ್ತ ನಾವು ಜಗ್ಗಯ್ಯ ಪೇಟೆ ಅಶ್ವಾಪುರದಿಂದ ಭದ್ರಾದ್ರಿವರೆಗೂ ಹೋಗಿ ಧ್ಯಾನವನ್ನು ಕುರಿತು, ಯಜ್ಞವನ್ನು ಕುರಿತು ಹೇಳಿ ತಿರುಗಿ ಮನೆಗೆ ಬಂದ ನನಗೆ ಆ ದಿನ ತುಂಬಾ ಆಯಾಸವಾಗಿತ್ತು. ಬೆಳಿಗ್ಗೆ ಹಾಲು ಹೆಪ್ಪುಹಾಕಿ, ಕೊಟ್ಟಿರುವ ಕೆಲಸಗಳನ್ನು ಹೇಗೆ ಮಾಡಿದ್ದಿರಾ ಎಂದು ಪೈಮಾ ಮಾಸ್ಟರ‍್ಸ್‌ನ್ನು ಕೇಳುತ್ತಾ ಬಿಜಿಯಾಗಿ ಇದ್ದೆ. ಆ ಸಮಯದಲ್ಲಿ ಒಬ್ಬ ಬುಡು ಬುಡುಕೆಯವನು ಭಿಕ್ಷೆಗೆ ಬಂದ. ಬಿಜಿಯಾಗಿ ಇದ್ದ ನಾನು ಗೇಟು ಒಳಗಿನಿಂದ ಅವನಿಗೆ ಐದು ರುಪಾಯಿಗಳು ಕೊಡಲು ಹೋದೆ.

 

ತಕ್ಷಣ ಅವನು "ಆಪತ್ತು ಇದೆ ಎಂದು ತಿಳಿದರೂ ಸೀತೆಯಂತಹ ಸಾಧ್ವೀಮಣಿ ಲಕ್ಷ್ಮಣ ರೇಖೆಯನ್ನು ದಾಟಿ ಭಿಕ್ಷೆ ಹಾಕಿದಳು. ಒಳಗೆ ಇದ್ದು ಹೊರಗೆ ಭಿಕ್ಷೆಹಾಕುವ ಮಹಾತಾಯಿಯನ್ನು ನಿನ್ನನ್ನೇ ನೋಡುತ್ತಿದ್ದೇನೆ" ಎಂದರು.

 

ನಾನು ಸ್ವಲ್ಪ ಆಶ್ಚರ್ಯಹೋದೆ. ತಕ್ಷಣ ಗೇಟ್ ತೆಗೆದು ಒಳಗೆ ಕರೆದೆ. ಬಂದಾಗಿನಿಂದ ಏನೇನೋ ಹೇಳಲು ಪ್ರಾರಂಭಿಸಿ ನನಗೆ, ನನ್ನ ಯಜಮಾನರಿಗೆ ಮಾತ್ರ ತಿಳಿದಿರುವ ಒಂದು ವಿಷಯ ಹೇಳಿದ. ತಕ್ಷಣ ನಾನು ನಿಧಾನವಾಗಿ ಅವನ ಕಡೆ ನೋಡಿದೆ. "ನೀವು ಯಜ್ಞ ಮಾಡುತ್ತಿರುವಿರಿ; ನರನ ದೃಷ್ಟಿ ಬಿದ್ದರೆ ಕಲ್ಲು ಸಹ ಕವಡೆಯಾಗುತ್ತದೆ. ನಿಮಗೆ ಒಂದು ಸ್ಫಟಿಕೆ ಕೊಡುತ್ತೇನೆ; ಮನೆ ಬಾಗಿಲಿಗೆ ಕಟ್ಟಿ" ಎಂದರು.

 

"ಮನೆಯಲ್ಲಿ ಇರುವವರೆಗೂ ಅದು ರಕ್ಷಣೆ ಕೊಡುತ್ತದೆ. ಹೊರಗೆ ಹೋದರೆ ಕತ್ತಲ್ಲಿ ಹಾಕಿಕೊಂಡು ತಿರುಗಬೇಕು. ಆದ್ದರಿಂದ, ನನಗೆ ಬೇಕಾಗಿಲ್ಲ" ಎಂದೆ.

 

"ನೀನು ತುಂಬಾ ಮೊಂಡು ಅಂತ ಗೊತ್ತಿದೆ, ಆದರೆ, ನಿನ್ನ ಹೊಟ್ಟೆಯಲ್ಲಿ ಇಷ್ಟು ಮೊಂಡುತನ ಇದೆ ಎಂದುಕೊಂಡಿರಲಿಲ್ಲ" ಎಂದನು. "ಯಾರೀತ? ನಾನು ಆತನಿಗೆ ತಿಳಿದಿರುವಹಾಗೆ ಮಾತನಾಡುತ್ತಿದ್ದಾನೆ!" ಎಂದು ನನ್ನ ಮೂರನೇ ಕಣ್ಣಿಂದ ನೋಡಲು ಹೋದೆ. ಆದರೆ, ನಮ್ಮಿಬ್ಬರ ನಡುವೆ ಒಂದು ಅಂತರಪಟ್ಟಿ ಅಡ್ಡಿ ಬಂದಿತು.

 

"ಸ್ವಲ್ಪ ಬಾಯಾರಿಕೆ ಆಗ್ತಾ ಇದೆ. ನೀರು ಕೊಡು ತಾಯಿ" ಎಂದನು. "ನನಗೆ ತುಂಬಾ ಸುಸ್ತಾಗಿದೆ ನನಗೆ ತೊಂದರೆ ಕೊಡಬೇಡ" ಎಂದು ಇಪತ್ತು ರೂಪಾಯಿಗಳನ್ನು ಕೊಟ್ಟು "ಹೊರಗೆ ಹೋಗಿ ಊಟ ಮಾಡು" ಎಂದು ಹೇಳಿದೆ. ಪುನಃ ತುಂಬಾ ಕೇಳಿಕೊಂಡ "ಸ್ವಲ್ಪ ಮಜ್ಜಿಗೆ ಆದರೂ ಕೊಡಿ" ಎಂದು. ನನಗೆ ಏನೋ ಒಂದು ತರಹ ಸೋಮಾರಿತನ ಇತ್ತು. ಹಾಲು ಹೆಪ್ಪಾಗಿತ್ತು. ಆದರೆ, ನಾನು ಕೊಡಲಿಲ್ಲ. ಜೋರಾಗಿ ಗದರಿಸಿ ಕಳಿಸಿಬಿಟ್ಟೆ.

 

ಮೂರು ದಿನಗಳ ನಂತರ, ಧ್ಯಾನದಲ್ಲಿ ಬುಡುಬುಡುಕೆಯವನು ಕಾಣಿಸಿಕೊಂಡ. "ಯಾಕೆ ಇವನು ಕಾಣಿಸುತ್ತಿದ್ದಾನೆ?" ಎಂದು ನೋಡುತ್ತಿರುವಷ್ಟರಲ್ಲಿ ಆ ಮುಖ ಪತ್ರೀಜಿ ಅವರ ಮುಖ ಹಾಗೆ ಬದಲಾಯಿಸಿ ಬಿಟ್ಟಿತ್ತು. ಸಡನ್ ಆಗಿ "ಷಾಕ್‌" ಆದ ಹಾಗಾಯಿತು. "ನೀವಾ ಬಂದಿದ್ದು? ಹೀಗೆ ಮಾರು ರೂಪದಲ್ಲಿ ಬಂದರೇ ನಾನು ಹೇಗೆ ಗುರುತಿಸಲಿ? ಬಂದಿದ್ದು ಕಳ್ಳನೋ, ಜ್ಞಾನಿಯೋ ಹೇಗೆ ತಿಳಿಯುತ್ತದೆ?" ಎಂದೆ.

 

"ತ್ರಿಕರಣ ಶುದ್ಧಿಯಿಂದ ನಂಬಿರುವ ಹೊಸಲನ್ನು ಯಾವ ಕಳ್ಳನೂ ಸಹ ತುಳಿಯಲಾರ,ಯಾರು ಹಾಕದಹಾಗೆ, ಸಾವಿರಾರು ಜನಕ್ಕೆ ಊಟ ಹಾಕಿದ್ದೀನಿ ಎಂದು ಹೇಳಿದೆಯಲ್ಲವೆ. ‘ವರಲಕ್ಷಿ ಮನೆಗೆ ಯಾವ ಹೊತ್ತಿನಲ್ಲಿ ಹೋದರೂ ನಾಲಕ್ಕು ಜನಕ್ಕಾದರೂ ಊಟ ಇರುತ್ತದೆ’ ಎಂದು ದೊಡ್ಡದಾಗಿ ಹೇಳಿಕೊಂಡಿರುವೆಯಲ್ಲವೇ?" ಎಂದರು.

 

ನನ್ನ ಮನಸ್ಸು ಕರಗಿ ಕಣ್ಣೀರಾಯಿತು. "ಅಂತಹ ಮಹಾ ಗುರುಗಳನ್ನು ಬಾಯಿಗೆ ಬಂದ ಹಾಗೆ ಮಾತನಾಡಿದೆ" ಎಂದು.

 

ಪತ್ರೀಜಿಯವರಂತಹ ಗುರುಗಳು ಬಂದರೆ ಕಾಫಿ, ಕೂಲ್ ಡ್ರಿಂಕ್ಸ್ ಕೊಡುವುದನ್ನು ಎಲ್ಲರೂ ಮಾಡುತ್ತಾರೆ. ಆದರೆ, ಪ್ರತಿ ಒಬ್ಬರಲ್ಲೂ ಗುರುಗಳನ್ನು ನೋಡಲಾದಾಗಲೇ ಅದು "ಎನ್‌ಲೈಟೆನ್‌ಮೆಂಟ್‌" ಅಂದರೆ. ಇತರರಲ್ಲಿ ಆಗುವ ಹಸಿವೆಯನ್ನು ಗಮನಿಸಿ ಆಹಾರವನ್ನು ನೀಡುವುದೇ ನಿಜವಾದ ಜ್ಞಾನ. ಮನಗೆ ಬಂದವರಿಗೆ ಸುಸ್ತಾಗಿದ್ದರೂ ಸರಿ ದಾಹ ತೀರಿಸಲು ನೀರು, ಕಾಫಿ, ಮಜ್ಜಿಗೆ ಏನಾದರೂ ಸರಿ, ಅದನ್ನು ಕೊಡುವುದೇ "ಅತಿಥಿ ದೇವೋಭವ" ಎಂಬುವ ಪದಕ್ಕೆ ನಿಜವಾದ ಅರ್ಥ. ಹೀಗೆ ಪರೋಕ್ಷವಾಗಿಯು ಮತ್ತು ಪ್ರತ್ಯಕ್ಷ ಅನುಭವದಿಂದ ನನಗೆ ಜ್ಞಾನೋದಯವನ್ನು ಉಂಟುಮಾಡಿದ ಮಹಾನುಭಾವ ಪತ್ರೀಜೀ!

 

1999ನೇ ವರ್ಷದಲ್ಲಿ ವಿಜಯವಾಡ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಪ್ರೆಸಿಡೆಂಟ್ J.ರಾಘವರಾವ್ ಅವರು ನಾಗಲಕ್ಷಿ , ಕೃಷ್ಣರವರ ನೇತೃತ್ವದಲ್ಲಿ ವಿಜಯವಾಡದಿಂದ ಬದರೀನಾಥ್‌ವರೆಗೂ ಧ್ಯಾನಯಾತ್ರೆ ಸಾಗಿತು. ಆ ಯಾತ್ರೆಯಲ್ಲಿ ಹರಿದ್ವಾರದಲ್ಲಿರುವ ಭಾರತ್‌ಭವನ್‌ನಲ್ಲಿ ಯೋಗಿಗಳ ಶಿಲ್ಪಗಳನ್ನು ನೋಡಲು ಹೋದೆವು. ಆ ಸಮಯದಲ್ಲಿ ಕೈಯಲ್ಲಿ ಮ್ಯಾಗಜೈನ್ಸ್ , ಪಾಂಪ್ಲೆಟ್ಸ್ ಇತ್ತು. ಒಬ್ಬರು "ಇದರ ಬೆಲೆ ಎಷ್ಟು?" ಎಂದು ಒಂದು ಮ್ಯಾಗಜೈನ್ ತೆಗೆದುಕೊಂಡು ಇಪ್ಪತ್ತು ರೂಪಾಯಿಗಳನ್ನು ಕೊಟ್ಟರು. ಮೊದಲನೇ ಬಾರಿ ಒಂದು ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ಪುಸ್ತಕವನ್ನು ಹಾಗೆ ತೆಗೆದುಕೊಳ್ಳುವುದು ನೋಡಿ ಕೋಟಾನು ಕೋಟಿ ರೂಪಾಯಿಗಳಷ್ಟು ವ್ಯಾಪಾರ ಮಾಡಿದರೂ ಬರದ ಆನಂದ ನನಗೆ ಆಯಿತು!

 

ಅಷ್ಟರಲ್ಲೇ ಇನ್ನೊಬ್ಬ ಸನ್ಯಾಸಿ ಪಾಂಪ್ಲೆಟ್ ತೆಗೆದುಕೊಂಡು ಮ್ಯಾಗಜೈನ್ 15 ರೂಪಾಯಿಗಳಿಗೆ ಕೊಡಿ ಎಂದು ಕೇಳಿದನು. ನಾನು ಕೊಡಲಿಲ್ಲ. "ಸನ್ಯಾಸಿಗೆ ಮೋಕ್ಷವಿಲ್ಲ ಸಂಸಾರದಲ್ಲೇ ನಿರ್ವಾಣ... ಎಂದು ಬರೆದಿದ್ದಾರೆ?!" ಎಂದು ಕೇಳಿದನು.

 

"ಹೌದು. ಸನ್ಯಾಸಿಗೆ ಸಂಸಾರದಲ್ಲಿರುವ ಕಷ್ಟಗಳು ಹೇಗೆ ಗೊತ್ತಾಗುತ್ತದೆ? ಇವರೆಲ್ಲಾ ವಸತಿ ಕಲ್ಪಿಸಿ ಊಟ ಹಾಕುತ್ತಿದ್ದರೆ, ನಿಮಗೆ ಕಷ್ಟ , ನೋವು ಹೇಗೆ ಗೊತ್ತಾಗುತ್ತದೆ? ಯಾವ ಪರಿಸ್ಥಿತಿಗಳಲ್ಲೂ ನಿಮಗೆ ಮೋಕ್ಷ ಬರುವುದಿಲ್ಲ ಅಂದರೆ ಬರುವುದಿಲ್ಲ" ಎಂದು ಖಚಿತವಾಗಿ ಹೇಳಿ ಮ್ಯಾಗಜೈನ್ ಕೊಡದೇನೇ ಹೊರಟುಹೋದೆ.

 

ಅಲ್ಲಿ ಲಿಫ್ಟ್‌ನಲ್ಲಿ ಮೂರು ಜನ ಎಂದಿನಂತೆ ಮೇಲೆ ಅಂತಸ್ತುಗಳಿಗೆ ಹೋಗಿ ಒಂದೊಂದೇ ಮಹಡಿ ನೋಡುತ್ತಾ ಕೆಳಗೆ ಬರಬೇಕು. ಲಿಫ್ಟಿಂದಲೇ ಹೋಗಬೇಕು, ಬೇರೆ ದಾರಿ ಇಲ್ಲ. ನಾವು ಲೈನ್‌ನಲ್ಲಿ ನಿಂತುಕೊಂಡು ಮೂರು ಜನ ಮೇಲಕ್ಕೆ ಹೋದೆವು. ನಮಗಿಂತಾ ಮುಂಚೆ ಆ ಸನ್ಯಾಸಿ ಅಲ್ಲಿ ಕಾಣಿಸಿದ. "ಹೊರಗೆ ಇರುವ ಇವನು ನಮಗಿಂತಾ ಮುಂಚೆ ಹೇಗೆ ಬಂದ?" ಎಂಬುವ ಆಲೋಚನೆ ಬಂದಿರಲಿಲ್ಲ. ನಾವು ಜಾಸ್ತಿ ಗಮನವೂ ಕೊಡಲಿಲ್ಲ. ನಾವು ಹಾಗೇ ನೋಡುತ್ತಾ ಕೊನೆಯ ಮಹಡಿಗೆ ಬಂದೆವು. ಅಲ್ಲಿ ನನ್ನ ಹತ್ತಿರ ಬಂದ ಸನ್ಯಾಸಿ ಆಕಡೆ ಈಕಡೆ ನೋಡಿ "ಸನ್ಯಾಸಿ ಹತ್ತಿರ ಹಣ ಇರುತ್ತದೆ ಏನು? ಆ ಪುಸ್ತಕ ನನಗೆ ಉಚಿತವಾಗಿ ಕೊಡಿ" ಎಂದ. ಆಗ ನಾನು "ನಾವು ಪುಸ್ತಕ ವ್ಯಾಪಾರಕ್ಕೆ ಬರಲಿಲ್ಲ, ಉಚಿತವಾಗಿ ಹಂಚಲೆಂದಲೇ ತಂದಿದ್ದೇವೆ" ಎನ್ನುತ್ತಾ ಒಂದು ಪುಸ್ತಕ ಕೊಟ್ಟೆ .

 

ಎರಡು ಕೈಗಳಿಂದ ಆ ಪುಸ್ತಕವನ್ನು ಹಿಡಿದುಕೊಂಡು ತಲೆ ಬಗ್ಗಿಸಿ "ಧನ್ಯೋಸ್ಮಿ" ಎಂದು ನಮಸ್ಕಾರ ಮಾಡಿ ಆ ಸನ್ಯಾಸಿ ಹೊರಟುಹೋದ.

 

ಯಾತ್ರೆ ಮುಗಿಸಿ ವಿಜಯವಾಡ ಬಂದ ಒಂದು ತಿಂಗಳ ನಂತರ "ಯಾತ್ರೆಯಲ್ಲಿ ನಿಮ್ಮ ಅನುಭವ ಹೇಳಿ?" ಎಂದು ಸಾರ್ ಕೇಳಿದರು. ಇದೇನಿದು ಎಲ್ಲಾ ಹೇಳಿದ್ದಾಗಿದೆ, ಬರೆದಿದ್ದಾಗಿದೆ ತಿಂಗಳು ಸಹ ಆಗಲಿಲ್ಲ ಪುನಃ ಕೇಳುತ್ತಿದ್ದಾರಲ್ಲಾ ಎಂದು ಮನಸ್ಸಿನಲ್ಲೇ ಅಂದು ಕೊಂಡೆವು. ನನಗೆ ಅರ್ಥವಾಗಲಿಲ್ಲ. "ಹರಿದ್ವಾರದಲ್ಲಿ ಅನುಭವಗಳೇನು?" ಎಂದು ಧ್ಯಾನದಲ್ಲಿ ಬಂದಿರುವ ಅನುಭವಗಳಿಗಾಗಿ ಜ್ಞಾಪಿಸಿಕೊಳ್ಳುತ್ತಿದ್ದೆ. ಆದರೆ, ಜ್ಞಾಪಕಕ್ಕೆ ಬರಲಿಲ್ಲ.

 

ಆಗ ಸಾರ್ "ಕೆಲವರ ತಲೆಯಲ್ಲಿ ಲದ್ದಿ ತುಂಬಿರುತ್ತದೆ. ಏನು ಮಾಡೋದು? ಎಂದು ಹೊರಟುಹೋದರು. ನಾನು ತುಂಬಾ ನೊಂದುಕೊಂಡೆ. "ನನ್ನ ತಲೆಯಲ್ಲಿ ಲದ್ದಿ ತುಂಬಿದೆಯಂತೀರಾ?" ಎಂದು ತುಂಬಾ ಕೋಪದಿಂದ "ಅವರು ಕೇಳಿದ್ದು ಏನು ಎಂದು ಗೊತ್ತಾಗುವವರೆಗೂ ನಾನು ಒಂದು ಹನಿ ನೀರನ್ನು ಸಹ ಕುಡಿಯುವುದಿಲ್ಲ" ಎಂದು ಧ್ಯಾನದಲ್ಲಿ ಕುಳಿತುಕೊಂಡೆ. ಆ ಸನ್ಯಾಸಿ ಕಾಣಿಸಿದ. ಸ್ವಲ್ಪ ಹೊತ್ತಿನ ನಂತರ ನಗುತ್ತಾ ಪರಮಶಿವನು ಪ್ರತ್ಯಕ್ಷವಾದ. ಆಶ್ಚರ್ಯ ಚಕಿತಳಾದೆ.

 

ಪುನಃ ಪರೀಕ್ಷೆಯಾ ನನಗೆ? ಆ ಸನ್ಯಾಸಿಯನ್ನು ಎಷ್ಟು ಮಾತುಗಳಂದೆ. ನನಗೆ ಶಿವನೆಂದರೇ ತುಂಬಾ ಇಷ್ಟ , "ನನಗೆ ಯಾಕೆ ಹೀಗಾಗಿದೆ?" ಆ ದಿನ ರಾತ್ರಿ ತಿರುಪತಿಯಿಂದ ಪತ್ರೀಜೀ ಫೋನ್ ಮಾಡಿ "ನಾನೊಂದು ಕವಿತೆ ಹೇಳುತ್ತೇನೆ, ಕೇಳಿಸಿಕೊ" ಎನ್ನುತ್ತಾ "ತಿಟ್ಟೇ ದೀವೆನಾಯಗಾ, ಅಂದರೆ, ಬಯ್ಗಳೇ ಆಶೀರ್ವಾದವಾಗಿದೆ, ಮಟ್ಟೆ ಮಾಯಮಾಯೆಗಾ, ಅಂದರೆ, ತಲೆಯಲ್ಲಿ ತುಂಬಿದ್ದ ಲದ್ದಿ ಹೊರಟು ಹೋಗಿದೆ (ಮಾಯವಾಗಿದೆ), ಗಟ್ಟೇ ತೆಗಿಪೊಯೆರಾ ಅಂದರೆ, ಗಟ್ಟು ಒಡೆದು ಹೋಗಿದೆ, ಗುಟ್ಟು ರಟ್ಟಾಯೆಗಾ ಅಂದರೆ, ಗುಟ್ಟು ಬಯಲಾಗಿದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

 

ಅಂತಹ ಪರಮಶಿವನು "ಧನ್ಯೋಸ್ಮಿ" ಎಂದು ಮ್ಯಾಗಜೈನ್ ಹಿಂದೆ ಬಿದ್ದು ತೆಗೆದುಕೊಂಡರೇ ಪತ್ರೀಜೀ ತನ್ನ ಸ್ವಹಸ್ತಗಳಿಂದ ತಿದ್ದುಪಡಿ ಮಾಡಿದ "ಧ್ಯಾನಾಂಧ್ರಪ್ರದೇಶ್‌" ಮಾಸ ಪತ್ರಿಕೆಯನ್ನು ನಾವು ಏನು ಕೊಟ್ಟುಕೊಂಡಬಲ್ಲೆವು? ಪತ್ರೀಜಿ ಅವರ ಋಣವನ್ನು ಹೇಗೆ ತೀರಿಸಿಕೊಳ್ಳುವುದು...? ದಟೀಜ್ ಪತ್ರೀಜೀ!

 

ಹೆಜ್ಜೆ ಹೆಜ್ಜೆಗೂ ನನ್ನನ್ನು ಈ ಮಾಯೆಯಿಂದ ಹೊರತರುತ್ತಾ, ಮೋಕ್ಷಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವ ಪತ್ರೀಜಿ ಅವರನ್ನು ಯಾವ ಪರಿಸ್ಥಿತಿಯಲ್ಲೂ ಬಿಡುವುದಿಲ್ಲ. ಒಬ್ಬ ಸೂರ್ಯನನ್ನು ಯಾವ ದೃಷ್ಟಿಯಿಂದ ನೋಡುತ್ತೇವೋ... ಪತ್ರೀಜಿ ಅವರನ್ನು ನೋಡಿದಾಗಲು ಸಹ ನನ್ನದು ಅದೇ ಸ್ಥಿತಿ. ರೂಪರಾಹಿತ್ಯಸ್ಥಿತಿ ...

 

 

ಕೋನೇರು ವರಲಕ್ಷಿ
ವಿಜಯವಾಡ

Go to top