" ಸತ್ಕರ್ಮ "

 

 

ನನ್ನ ಹೆಸರು ಕೆ.ವರಲಕ್ಷಿ . ವಿಜಯವಾಡ ನಮ್ಮ ನಿವಾಸ. ನಮ್ಮ ಕುಟುಂಬವೆಲ್ಲಾ ಧ್ಯಾನ ಕುಟುಂಬವೇ. ಧ್ಯಾನ ಮಾಡುವುದಕ್ಕಿಂತಾ ಮುಂಚೆ ನನ್ನ ಮನಸ್ಸು ದುಃಖದಿಂದ, ಆವೇಶದಿಂದ ತುಂಬಿತ್ತು. ಅಂತಹ ನಾನು ಈ ಧ್ಯಾನದಿಂದ ತುಂಬಾ ಹಾಯಾಗಿ ಸುಖವಾಗಿ ಜೀವಿಸುತ್ತಿದ್ದೇನೆ. ಪ್ರಪಂಚಾದ್ಯಂತ ಇರುವ ರಾಜಕಾರಣೆಗಳು ಸಾಧಿಸಲಾಗದೇ ಇರುವುದು ಒಬ್ಬ ಮಹರ್ಷಿ ಸಾಧಿಸಿದರು. (ಇಂಟರ್ ಗೆಲಾಕ್ಟಿಕ್ ಯಿಂದ) ದಿವ್ಯಲೋಕಗಳಿಂದ ಈ ಸಂದೇಶವನ್ನು ಪಡದಿದ್ದೇನೆ.

 

ನಿಜಕ್ಕೂ ಸತ್ಕರ್ಮ ಎಂದರೇ ಏನು? ಈ ಭೂಮಿಯ ಮೇಲೆ ಮೂರು ಬಗೆಯ ಶಕ್ತಿಗಳಿವೆ. ಅದರ ಹೆಸರೇ ‘ತ್ರಿಶಕ್ತಿಗಳು’ ಈ ಮೂರು ಶಕ್ತಿಗಳು ಐಕ್ಯವಾದರೇನೇ ಬ್ರಹ್ಮಾಂಡ ಇಳಿದುಬರುತ್ತದೆ. ಆ ಶಕ್ತಿಯ ಹೆಸರೇ ‘ತ್ರಿಶಕ್ತಿಪೀಠ’ ಅದರ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

 

ಈ ಭೂಮಿಯನ್ನು ಮೂರು ಪರಿಧಿಗಳ ಭೂಮಿ ಎನ್ನುತ್ತಾರೆ.

 

1. ಸೂರ್ಯನ ಕಾಂತಿ
2. ಶಬ್ದ
3. ಮನಸ್ಸು

 

ಈ ಮೂರು ಭೂಮಿಯಮೇಲಿದೆ. ಸೂರ್ಯಕಾಂತಿ ಕಿರಣಗಳು, ಶಬ್ದ ಎರಡೂ ಸೇರಿದರೇನೆ ಮನಸ್ಸು ಎನ್ನುವುದು ಏರ್ಪಡುತ್ತದೆ.

 

ಈ ಮನಸ್ಸಿಗೆ ಎರಡು ಬಗೆಯ ಶಕ್ತಿಗಳಿವೆ. ಒಂದು ತನ್ನನ್ನು ತಾನು ತಿಳಿದುಕೊಳ್ಳಲು ಉಪಯೋಗವಾಗುತ್ತದೆ. ಹಾಗೆಯೆ ಇತರರನ್ನು ಕುರಿತು ಮಾತನಾಡಲು ಉಪಯೋಗವಾಗುತ್ತದೆ. ಇಂತಹ ಮನಸ್ಸನ್ನು ಹೇಗೆ ಕಂಟ್ರೋಲ್ ಮಾಡಬೇಕು?

 

ಈ ಮನಸ್ಸಿಗೆ ಶಬ್ದ ಗೊತ್ತಿದೆ. ಆದರೇ ‘ನಿಶಬ್ದವನ್ನು’ ಅರ್ಥಮಾಡಿಕೊಳ್ಳುವುದಿಲ್ಲ. ಯಾವ ಎರಡರಿಂದ ಮನಸ್ಸು ರೂಪುಗೊಳ್ಳುತ್ತದೊ ಆ ಎರಡನ್ನೂ ಬೇರ್ಪಡಿಸಬೇಕು. ಆ ಪ್ರಕ್ರಿಯೆಯೇ ಆನಾಪಾನಸತಿ ಧ್ಯಾನ. ಶ್ವಾಸದ ಮೇಲೆ ಧ್ಯಾಸ, ಕಣ್ಣುಗಳನ್ನು ಮುಚ್ಚಿದ ತಕ್ಷಣ ಕಾಂತಿಯ ಒಳಹರಿವು ನಿಂತುಬಿಡುತ್ತದೆ. ಯಾವ ರೂಪವನ್ನೂ ನೆನೆಸಿಕೊಳ್ಳದೇ ಎರಡು ಕಾಲುಗಳನ್ನೂ ಕಟ್ಟಿಹಾಕಿ, ಬೆರಳಲ್ಲಿ ಬೆರಳು ಸೇರಿಸಿ ಕುಳಿತ ತಕ್ಷಣ ಎಲ್ಲಾ ನಿಂತುಬಿಡುತ್ತದೆ.

 

ನಮ್ಮಲ್ಲಿ ಬುದ್ಧಿ ಎನ್ನುವ ಶಕ್ತಿ ತರಂಗ ಒಂದಿದೆ. ಅದಕ್ಕೆ ಮನುಷ್ಯ ಮರಣಿಸುವವರೆಗೂ ಯಾವದೊ ಒಂದು ಕೆಲಸ ಇರಬೇಕು. ಧ್ಯಾನದಲ್ಲಿ ಕುಳಿತ ತಕ್ಷಣ ಬುದ್ಧಿಗೆ ಯಾವ ಕೆಲಸ ಇರದೇ ಶ್ವಾಸವನ್ನು ಹಿಡಿದುಕೊಂಡು ಒಳಮುಖ ಪ್ರಯಾಣಿಸಲು ಪ್ರಾರಂಭಿಸುತ್ತದೆ.

 

ಈಗ ಈ ಬುದ್ಧಿಯ ಹತ್ತಿರ ಬರೋಣ. ಈ ಬುದ್ಧಿ ತನ್ನಗೆ ಇಷ್ಟ ಬಂದ ಹಾಗೆ ಅದು ನಡೆಯುತ್ತದೆ. ಇಲ್ಲೇ ವಿಷಯವೆಲ್ಲಾ ಇರುವುದು. ಬುದ್ಧಿ ಇಲ್ಲದ ಕೆಲಸಗಳು, ಬುದ್ಧಿ ಇರುವ ಕೆಲಸಗಳು ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ, ಬುದ್ಧಿಯನ್ನು ಹೇಗೆ ಉಪಯೋಗಿಸಿಕೊಳ್ಳ ಬೇಕೊ ಯಾರಿಗೂ ಗೊತ್ತಿಲ್ಲ. ಶ್ವಾಸದಿಂದ ಮಾತ್ರ ಬುದ್ಧಿ ಒಳಮುಖ ಪ್ರಯಾಣಮಾಡಿ ಆತ್ಮಜ್ಞಾನದಿಂದ ಅವರವರ ಕರ್ಮಗಳನ್ನು ನಿವಾರಿಸಿಕೊಂಡು ಅನೇಕ ಜನ್ಮಗಳ ಜ್ಞಾನವನ್ನು ಒಂದೇ ಜನ್ಮದಲ್ಲಿ ಪಡೆಯ ಬಹುದೆಂದು ಈ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಅನೇಕ ಜೀವನಗಳು, ಅನೇಕ ಜನ್ಮಗಳು ಅಜ್ಞಾನದಿಂದ ಒದ್ದಾಡುತ್ತಿವೆಯೊ ‘ತಿಳಿದು’ ತುಂಬಾ ಕರುಣೆಯಿಂದ ಪ್ರೀತಿಯಿಂದ ಧರಣಿಗೆ ಇಳಿದು "ಸಂಸಾರದಲ್ಲೇ ನಿರ್ವಾಣವಿದೆ" ಎಂದು ತಿಳಿಸಿಕೊಟ್ಟವರೇ ಬ್ರಹ್ಮರ್ಷಿ ಪತ್ರೀಜಿ.

 

ಧ್ಯಾನದಲ್ಲಿರುವಾಗಲೇ ನಾಡೀ ಮಂಡಲ ಶುದ್ಧಿ, ಮೂರನೆಯ ಕಣ್ಣು ತೆರೆದುಕೊಳ್ಳುವುದು, ಸೂಕ್ಷ್ಮ ಶರೀರಯಾನ ಮುಂತಾದರಿಂದ ನಿನ್ನನ್ನು ನೀನು ತಿಳಿದುಕೊಳ್ಳಲಾಗುತ್ತದೆ. ಮತ್ತು ಕಣ್ಣುಗಳು ತೆರೆದನಂತರ ಬಹಿರ್ಮುಖ ಪ್ರಯಾಣ ಅಂದರೇ ಪುನಃ ನಾವು ಪ್ರಾಪಂಚಿಕವಾದ ಎಲ್ಲಾಕೆಲಸಗಳು ಸಾಧಾರಣವಾಗಿ ಮಾಡಿಕೊಂಡು ಹೋಗಬೇಕು.

 

ಅಂತರ್‌ಮುಖ ಪ್ರಯಾಣ, ಬಹಿರ್‌ಮುಖ ಪ್ರಯಾಣ ಈ ಎರಡೂ ಪೂರ್ವದಿಂದಲೂ ಇದೆ. ತ್ಯಾಗರಾಜರು "ಶಾಂತಿ ಇಲ್ಲದೇ ಸೌಖ್ಯವಿಲ್ಲ" ಎಂದು ಹೇಳಿದ್ದಾರೆ. ಈ ಭೂಮಿಯ ಮೇಲೆ ಮಾನವರಿಗೆ ಅನೇಕ ಸಮಸ್ಯೆಗಳಿವೆ. ಈ ಮನಸ್ಸಿಗೆ ಶಾಂತಿ ಹೇಗೆ ಸಿಗುತ್ತದೆ?

 

ಅಂತರ್‌ಮುಖ ಜ್ಞಾನದಿಂದ ಭೌತಿಕ ಜೀವನ ಜೀವಿಸ ಬೇಕಾದರೇ ಮನಸ್ಸು ಪ್ರಶಾಂತವಾಗಿ ಇಲ್ಲದಿದ್ದರೇ ಹೇಗೆ ಜೀವಿಸುತ್ತೇವೆ? ಈ ಭೂಮಿಯ ಮೇಲೆ ಬಗೆಬಗೆಯ ಗುಣಗಳಿಂದ ಮಾನವರ ನಡುವೆ ಈ ಸಂಘದಲ್ಲಿ, ನಮ್ಮ ಸಂಸಾರಗಳಿಂದ ಇದು ಸಾಧ್ಯವೇನಾ?

 

ಅಂತರ್‌ಮುಖಕ್ಕೂ, ಬಹಿರ್‌ಮುಖಕ್ಕೂ ನಡುವೆ ‘ಮನಸ್ಸೆಂಬುವುದು’ ಒಂದಿದೆ. ಈ ಮನಸ್ಸು ಶಾಂತಿಯಾಗಿ ಇರಬೇಕಾದರೇ ಅಂತರಂಗ ಜ್ಞಾನ 50% ಭೌತಿಕ ಜ್ಞಾನ 50% ಇದ್ದರೇ, ಮನಸ್ಸು ಅದಕ್ಕದೇ ಶಾಂತವಾಗುತ್ತದೆ. ಇದನ್ನೆ ಪತ್ರೀಜಿ ‘ಮಧ್ಯೆಮಾರ್ಗ’ ಎಂದು ಹೇಳಿದ್ದಾರೆ. ಮನಸ್ಸಿಗೆ ಸ್ವಲ್ಪ ನೋವಾದರೂ ಬೇಗ ನೋವಿನಿಂದ ಹೊರಬಂದು ನಮ್ಮ ನಿತ್ಯ ಜೀವನವನ್ನು ಆನಂದವಾಗಿ ಸಾಗಿಸುತ್ತೇವೆ.

 

ಈ ಮನಸ್ಸನ್ನು ಕುರಿತು ಎಲ್ಲೂ ಸರಿಯಾಗಿ ಹೇಳಲಿಲ್ಲ. ಈ ಮನಸ್ಸೆಂಬುವ ಮಧ್ಯ ರಂಗವನ್ನು ಕಂಡುಕೊಂಡಿದ್ದು ನಮ್ಮೆಲ್ಲರ ಮಹಾ ಗುರುವು ‘ಬ್ರಹ್ಮರ್ಷಿ ಪತ್ರೀಜಿ’ ಮಾತ್ರವೇ. ಈ ಸೂತ್ರವನ್ನು ನಮಗೆ ನೀಡಿ, ಕೋಟ್ಯಾಂತರ ಜನಗಳಿಗೆ ಧ್ಯಾನದಿಂದ ಮನಶ್ಶಾಂತಿಯನ್ನು, ಆ ಪ್ರಶಾಂತದೊಳಗಿಂದ ಉದ್ಭವಿಸಿದ ಜ್ಞಾನದಿಂದ ಮುಕ್ತಿ, ಮೋಕ್ಷ ಮಾರ್ಗಕ್ಕೆ ದಾರಿ ತೋರಿಸಿದ್ದಾರೆ. ಆ ಮಹಾನುಭಾವರಿಗೆ ಏನು ಕೊಟ್ಟು ನಾವು ಋಣ ತೀರಿಸಿಕೊಳ್ಳಬಲ್ಲೆವು.

ಬುದ್ಧಾನುಸಾರ ಜನ್ಮ
ಜ್ಞಾನಾನುಸಾರ ಕರ್ಮ
ಕರ್ಮಾನುಸಾರ ಜೀವನ

 

ಈ ಕರ್ಮದಿಂದ ನಮ್ಮನ್ನು ತಪ್ಪಿಸಬೇಕಾದರೆ ಶಾಸ್ತ್ರಪದ್ಧತಿಯಲ್ಲಿ ಪತ್ರೀಜಿ ಬುದ್ಧಿಯ ಮೇಲೆ ಏಟುಕೊಟ್ಟರು. ಬುದ್ಧಿ ಸರಿಯಾಗಿದ್ದರೆ, ನಾವು ಮಾಡುವ ಪ್ರತಿ ಒಂದು ಕೆಲಸ ಸತ್ಕರ್ಮ ಆಗಿ ತೀರುತ್ತದೆ. ಬುದ್ಧಿ ಸರಿಯಾಗಿದ್ದರೆ ವಾಕ್ಕು ಶುದ್ಧಿಯಾಗುತ್ತದೆ. ಇತರರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತೇವೆ. ಜಡ್ಜ್ ಎ ನಾಟ್ ಎಂದು ತಿಳಿದುಕೊಂಡು ಹಾಗೇ ನಡೆದುಕೊಳ್ಳುತ್ತೇವೆ. ಸತ್ಯ ಅಂದರೆ ಏನೋ ಚೆನ್ನಾಗಿ ಅರ್ಥವಾಗುತ್ತದೆ.

 

ಆಗ ಸೂರ್ಯಕಾಂತಿ, ಈ ವಾಕ್ಕು (ಶಬ್ದ) ಸೇರಿ ಒಳ್ಳೆಯ ಮನಸ್ಸು ಏರ್ಪಡುತ್ತದೆ. ಈ ಮೂರರನ್ನೂ (ತ್ರಿಶಕ್ತಿಗಳನ್ನು) ಸೇರಿಸಿಕೊಂಡು ಇಷ್ಟು ಜನ ಪಿರಮಿಡ್ ಮಾಸ್ಟರ್‌ಗಳು ಪತ್ರೀಜಿ ನೇತೃತ್ವದಲ್ಲಿ ಪ್ರಪಂಚದಾದ್ಯಂತ ಧ್ಯಾನ ಪ್ರಚಾರಕ್ಕೆ ಹೊರಟರೇ ಧ್ಯಾನ ಪ್ರಪಂಚವಾಗದೇ ಇರುತ್ತದೆಯೆ. ಬ್ರಹ್ಮಾಂಡದ ವಿಸ್ಫೋಟ ಅಂದರೆ ಇದೇ. ‘ತ್ರಿಶಕ್ತಿಪೀಠ’ ಅಂದರೆ ನಿಜಕ್ಕೂ ಇದೇ ಅರ್ಥ.

 

12 ವರ್ಷಗಳ ಧ್ಯಾನ ಜೀವನದಲ್ಲಿ ಆತ್ಮಯೇ ಸತ್ಯ, ಅವಿನಾಶ ಎಂದು ತಿಳಿದರೂ ಪ್ರಾಪಂಚಿಕವಾಗಿ ಆ ಮನಸ್ಸು ಎನ್ನುವ ಮಾಯೆಗೆ ಒಳಗಾದವರಿಗೆ ನನ್ನ ಈ ಅನುಭವ ಸ್ವಲ್ಪವಾದರೂ ಯೋಚಿಸುವಹಾಗೆ ಮಾಡಿದರೇ ನಾನು ಧನ್ಯಳು.

 

K. ವರಲಕ್ಷಿ
ವಿಜಯವಾಡ

Go to top