" ಧ್ಯಾನವು ಪ್ರತಿಯೊಬ್ಬರಿಗೂ ಅಮೂಲ್ಯವಾದುದು "

 

 

ಬೆಂಗಳೂರಿನ ಬಳಿ ಪಿರಮಿಡ್ ವ್ಯಾಲಿಯು ಇರುವ ಕೆಬ್ಬೆದೊಡ್ಡಿಯೇ ನನ್ನೂರು. ಮೊದಲು ನನಗೆ ಧ್ಯಾನ ಎಂದರೇನು ಎಂದು ತಿಳಿದಿರಲಿಲ್ಲ. ಬಾಲ್ಯದ ದಿನಗಳಲ್ಲಿ ನನಗೆ ಹಗಲಿನಲ್ಲಿಯೂ ಸಹ ಸರ್ಪಗಳು ಕಂಡಂತೆ ಭಾಸವಾಗುತ್ತಿತ್ತು. ದೇವರನ್ನು ಕಾಣಬೇಕೆಂಬ ಹಂಬಲದಿಂದ ಪ್ರಾರ್ಥಿಸುತ್ತಿದ್ದೆ. ಆ ಕೋರಿಕೆಯು ಈಡೇರಿ, ನನ್ನ ಕಣ್ಣುಗಳ ಮುಂದೆ ಹಾವುಗಳ ಚಿತ್ರಗಳು ಮೂಡಿಬರುತ್ತಿತ್ತು. ತರಗತಿಗಳಲ್ಲಿ ಅಂತರ್ಮುಖಿಯಾಗಿ ಇದನ್ನೇ ನೋಡಿಕೊಳ್ಳುತ್ತಾ, ಓರಗೆಯ ಹುಡುಗರು ಮತ್ತು ಉಪಾಧ್ಯಾಯರಿಂದ ಬೈಗಳನ್ನೂ ಸಹ ಪಡೆದಿದ್ದೇನೆ. ದೇವರನ್ನು ಕಾಣಬೇಕೆಂಬ ಹಂಬಲವಿದ್ದುದರಿಂದ, ಪ್ರಾರ್ಥನೆ ಮಾಡಿದಾಗಲೆಲ್ಲಾ ವಿವಿಧ ದೇವರುಗಳು ಬಂದು ನನ್ನನ್ನು ತಮ್ಮೊಡನೆ ಕರೆದೊಯ್ಯುತ್ತಿದ್ದಂತೆ ಭಾಸವಾಗುತ್ತಿತ್ತು. ಹಗಲಿನಲ್ಲಿಯೂ ನಾನು ಆಕಾಶದೆಡೆಗೆ ಕಣ್ಣುಬಿಟ್ಟು ನೋಡಿದರೆ ಬಲ್ಬುಗಳ ರೂಪದಲ್ಲಿ ದೈವಶಕ್ತಿಯು ನನಗೆ ಕಾಣಬರುತ್ತಿತ್ತು. ಇದರಲ್ಲಿ ಏನೋ ಇದೆ ಎಂದು ಅನಿಸುತ್ತಿತ್ತು. ಅದೇನೆಂದು ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ.

 

ಒಮ್ಮೆ ಆಕಸ್ಮಿಕವಾಗಿ ದೊರೆತ ಒಂದು ಧ್ಯಾನಪ್ರಚಾರದ ಕರಪತ್ರದಿಂದ ನಾನು 2009ರ ಮೇ 5ರಂದು ಧ್ಯಾನಮಾರ್ಗಕ್ಕೆ ಬಂದೆ. ಮೊದಲು ಧ್ಯಾನಕ್ಕೆ ಕುಳಿತಾಗ ಕೇವಲ ನಿದ್ದೆ ಮಾಡುತ್ತಿದ್ದೆ. ಪಿರಮಿಡ್‌ನ ಒಳಗೆ ಒಬ್ಬ ಮೇಡಂ ಸರಿಯಾದ ಧ್ಯಾನವನ್ನು ಕಲಿಸಿದರು. ಪುಸ್ತಕಗಳನ್ನು ಓದು ಎಂದ ಅವರ ಮಾತಿನಂತೆ, ‘ನಿನಗೆ ನೀನೇ ಬೆಳಕಾಗು’, ‘ಆಧ್ಯಾತ್ಮಿಕ ಶಾಸ್ತ್ರ, ‘ಆಲೋಚನೆಗಳು’ ಎಂಬ ಮೂರು ಪುಸ್ತಕಗಳನ್ನು ಖರೀದಿಸಿ ಮನೆಯಲ್ಲಿ ಓದಿಕೊಂಡೆನು. ಎಷ್ಟು ಓದಿದರೂ ಅರ್ಥವಾಗಲಿಲ್ಲ. "ಧ್ಯಾನವನ್ನು ಸರಿಯಾಗಿ ಮಾಡು, ಉಸಿರಾಟದ ಮೇಲೆ ಗಮನವಿಡು” ಎಂದು ಹೇಳಿದಂತೆ ಕನಸಿನಲ್ಲಿ ಭಾಸವಾಯಿತು. ಅದರಂತೆ ಧ್ಯಾನ ಮಾಡುವಾಗ, ಆಲೋಚನಾ ರಹಿತ ಸ್ಥಿತಿ ಉಂಟಾಗಿ, ನಿರ್ಮಾಣ ಹಂತದ ಪಿರಮಿಡ್‌ವೊಂದು ಕಾಣಿಸಿತು. ಅದರ ಹೆಸರು ಮಾತ್ರ ತಿಳಿಯಲಿಲ್ಲ. ಧ್ಯಾನವನ್ನು ಮುಂದು ವರೆಸಿದಂತೆಲ್ಲಾ, ನಾನು, ನನ್ನದು ಎಂಬುದು ಯಾವುದೂ ಇಲ್ಲ ಎಂಬುದನ್ನು ತಿಳಿದುಕೊಂಡೆ. ಕನಸಿನಲ್ಲಿ ಆಗುವ ಅನುಭವಗಳೆಲ್ಲಾ ಧ್ಯಾನದಲ್ಲಿಯೇ ಆಗಲಾರಂಭಿಸಿತು. ಅನೇಕ ಅನುಭವಗಳಾದವು. ವ್ಯಾಲಿಯಲ್ಲಿ ಪರಿಚಯಗೊಂಡ ಮೋಹನ್‌ರವರಿಗೆ ಇವೆಲ್ಲವನ್ನೂ ವಿವರಿಸಿದಾಗ, ಇನ್ನೂ ಹೆಚ್ಚು ಹೆಚ್ಚು ಧ್ಯಾನ ಮಾಡುತ್ತಾ ಹೆಚ್ಚು ಮೌನದಲ್ಲಿ ಇರಲು ಹೇಳಿದರು. ಈಗ ನನ್ನ ಜೀವನದಲ್ಲಿ ಧ್ಯಾನವು ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ. ಧ್ಯಾನ ಮಾಡದಿರುವ ದಿನವಿಲ್ಲ. ಧ್ಯಾನಮಾಡಿಯೇ ನಿದ್ದೆ ಮಾಡುವುದು ಅಭ್ಯಾಸವಾಗಿಹೋಗಿದೆ. ಧ್ಯಾನವು ನನ್ನ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಧ್ಯಾನ ಪ್ರತಿಯೊಬ್ಬರಿಗೂ ಅಮೂಲ್ಯವಾದುದು. ಎಲ್ಲರೂ ಸ್ವತಃ ಧ್ಯಾನ ಮಾಡಬೇಕು. ಧ್ಯಾನವನ್ನು ಎಲ್ಲರಿಗೂ ಕಲಿಸಬೇಕು. ಇಂಥ ಸರಳ ಧ್ಯಾನವಿಧಾನವನ್ನು ಜಗತ್ತಿನ ಎಲ್ಲೆಡೆಗೂ ಪ್ರಸಾರ ಮಾಡುತ್ತಿರುವ ನಮ್ಮ ಗುರುಗಳಾದ ಬ್ರಹ್ಮರ್ಷಿ ಪತ್ರೀಜಿಯವರಿಗೆ ಹೃದಯಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ.

 

 

K. A. ವಿಶ್ವನಾಥ್
ಕೆಬ್ಬೆದೊಡ್ಡಿ
ಫೋನ್ : +91 72043 19828

Go to top