" 55 ವರ್ಷದ ನಾನು ಧ್ಯಾನದಿಂದ 20 ವರ್ಷದವನಂತೆ ಕಂಡು ಬರುತ್ತಿದ್ದೇನೆ "

 

  

ನಾನು ವೃತ್ತಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದು, ನನಗೆ ಧ್ಯಾನ ಮಾಡುವುದಕ್ಕೆ ಮುಂಚೆ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಇದ್ದವು. ಉಷ್ಣಾಂಶ, ರಾತ್ರಿ ಮಲಗಿದಾಗ ಎರಡು ಮೂರು ಸಾರಿ ಮೂತ್ರವಿಸರ್ಜನೆಗೆ ಏಳಬೇಕಾದ ಪರಿಸ್ಥಿತಿ ಇತ್ತು. ಗ್ಯಾಸ್ಟಿಕ್ - ಹಸಿವು - ಸಂಕಟ, ಉಸಿರಾಟದ ತೊಂದರೆ, ನಾನಾ ರೀತಿಯ ಚಿಂತೆಗಳು ಜೀವನದಲ್ಲಿ ನಡೆದುಹೋದ ಘಟನೆಗಳು, ಭಯ, ನಿಶ್ಶಕ್ತಿಗಳಿಂದ ಬಳಲುತ್ತಿದ್ದೆ.

 

ಧ್ಯಾನ ಮಾಡುವುದಕ್ಕೆ ಪ್ರಾರಂಭ ಮಾಡಿದ ಎರಡು ತಿಂಗಳಲ್ಲಿ ಮೇಲೆ ಹೇಳಿದ ತೊಂದರೆ ಸಮಸ್ಯೆಗಳು ನಿವಾರಣೆಯಾಗಿ 55 ವರ್ಷದ ನಾನು ಈಗ 20 ವರ್ಷದವನಂತೆ ಶಕ್ತಿಯುತವಾಗಿದ್ದು ಮುಖದಲ್ಲಿ ಕಳೆಬಂದು, ಹೆಂಡತಿ, ಮಕ್ಕಳು, ಸ್ನೇಹಿತರು, ಅಕ್ಕಪಕ್ಕದವರೊಂದಿಗೆ ಬಹಳ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದೇನೆ.

 

ಕಲ್ಲೇಶಪ್ಪ
ದಾವಣಗೆರೆ 

Go to top