" ಧ್ಯಾನದಿಂದ ನನ್ನ ಆರೋಗ್ಯ ಸುಧಾರಿಸಿದೆ "

 

 

ನನ್ನ ಹೆಸರು ಕಮಲಮ್ಮ. ನನ್ನ ವಯಸ್ಸು 62 ವರ್ಷಗಳು. ನಾನು ಸಿದ್ಧಲಿಂಗೇಶ್ವರ ಸಿದ್ಧಗಂಗಾ ಶಾಲೆಯಲ್ಲಿ ಪ್ರಕಾಶ್ ಮಾಸ್ಟರ್‌ರವರಿಂದ ಧ್ಯಾನ ಕಲಿತಿದ್ದೇನೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡುಬಾರಿ ಧ್ಯಾನ ಮಾಡುತ್ತೇನೆ. ಧ್ಯಾನದಲ್ಲಿ ಅನುಭವಗಳಾದವು. ಮನಸ್ಸು ಬಹಳ ಉಲ್ಲಾಸದಿಂದ ಮತ್ತು ಆನಂದದಿಂದ ಇದೆ. ಒಂದು ದಿನ ಧ್ಯಾನಿಗಳೊಡನೆ ಬೆಂಗಳೂರಿನಲ್ಲಿರುವ "ಮೈತ್ರೇಯ ಬುದ್ಧ ಪಿರಮಿಡ್"ಗೆ ಹೋಗಿ ಅಲ್ಲಿ ಸುಭಾಷ್ ಪತ್ರೀಜಿಯವರ ಸಮಕ್ಷಮದಲ್ಲಿ ಧ್ಯಾನ ಮಾಡಿದೆವು. ಬಹಳ ಸಂತೋಷವಾಯಿತು. ಸುಮಾರು 2 ವರ್ಷಗಳಿಂದ ತಪ್ಪದೆ ಧ್ಯಾನ ಮಾಡುತ್ತಿದ್ದೇನೆ. ನನಗೆ ಬಹಳ ಮಂಡಿನೋವು ಇತ್ತು. ಆದರೆ, ಈಗ ನನಗೆ ಯಾವ ನೋವು ಇಲ್ಲದೆ ಲವಲವಿಕೆಯಿಂದ ನಡೆದಾಡುತ್ತಿದ್ದೇನೆ.

 

ಧ್ಯಾನಕ್ಕೆ ಕುಳಿತ ಹತ್ತು ನಿಮಿಷದ ನಂತರ ನಿಧಾನವಾಗಿ ಮೊದಲು ತಲೆ ನಂತರ ಶರೀರ ತಿರುಗಿದಂತೆ ಭಾಸವಾಗುತ್ತದೆ. ಮೈಯಲ್ಲಿ ಬಿಸಿಯ ಅನುಭವವಾಗುತ್ತದೆ. ಮನಸ್ಸು ಉಯ್ಯಾಲೆಯಂತೆ ತೂಗುವಂತೆ ಆಗುತ್ತದೆ. ಧ್ಯಾನದಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತಿದೆ ಮತ್ತು ಮಾನಸಿಕವಾಗಿ ಉಲ್ಲಾಸಭರಿತವಾಗಿರುತ್ತೇನೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸಿದೆ. ಧ್ಯಾನವನ್ನು ನಿರಂತರವಾಗಿ ಮಾಡಿ ಆತ್ಮಜ್ಞಾನವನ್ನು ಪಡೆಯುವ ಹಂಬಲವಿದೆ. ಧ್ಯಾನವನ್ನು ತೋರಿಸಿಕೊಟ್ಟ ಬ್ರಹ್ಮರ್ಷಿ ಪತ್ರೀಜಿಯವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಧ್ಯಾನ ಮಾಡಿ ಎಲ್ಲರೂ ಸುಖವಾಗಿರಿ. ಉತ್ತಮ ಆರೋಗ್ಯವನ್ನು ಪಡೆಯಿರಿ ಎಂದು ಹೇಳುವೆನು.

 

ಕಮಲಮ್ಮ
ದಾವಣಗೆರೆ 

Go to top