" ನಾವು ಲೈಫ್‌ನ್ನು ಎಂಜಾಯ್ ಮಾಡ್ಲಿಕ್ಕೆ ಈ ಭೂಮಿಯ ಮೇಲೆ ಬಂದದ್ದು "

 

 

ನನ್ನ ಹೆಸರು ಕೀರ್ತಿ. ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಅನುಭವ ನಿಮ್ಮ ಬಳಿ ಹಂಚಿಕೊಳ್ಳೋಕೆ ತುಂಬಾ ಖುಷಿ ಯಾಗುತ್ತೆ. ಸುಮ್ನೆ ಹೀಗೆ ಆವತ್ತು ನಾನೂ ಕೂಡಾ ಈಜಿಪ್ಟ್‌ಗೆ ಹೋಗುವ ಅಂತಹೇಳಿ ಪತ್ರೀಜಿಯವರ ಗುಂಪಿನಲ್ಲಿ ಶಾಮೀಲಾದೆ. ಆ ನಿರ್ಧಾರ ತಗೋಂಡಿದ್ದೇ ಒಂದು ಅದ್ಭುತ, ಅದಾದ ಮೇಲೆ ಎಲ್ಲವೂ ಮಧುರ ಕ್ಷಣಗಳೆ. ಗೀಜಾ ಪಿರಮಿಡ್ ಒಳಗೆ ಧ್ಯಾನ ಮಾಡುವಾಗ ನನಗೊಂದು ಸಂದೇಶ ಸಿಕ್ಕಿತು, ಅದೇನಂದ್ರೆ "ನಾವು ಲೈಫ್‌ನ್ನು ಎಂಜಾಯ್ ಮಾಡ್ಲಿಕ್ಕೆ ಈ ಭೂಮಿಯ ಮೇಲೆ ಬಂದದ್ದು" ಎಂದು. ಧ್ಯಾನ ಮಾಡಿ ಒಂದು ದಿನ ಕಳೆದ ನಂತರ ನನ್ನಲ್ಲಿ ಒಂದು ಬಗೆಯ ಏಕತೆಯ ಭಾವನೆ ಮೂಡಿ ಬಂತು. ಧ್ಯಾನದಲ್ಲಿದ್ದಾಗ್ಲೂ ಕೂಡ ಬೇರೆ ಪ್ರಪಂಚಗಳೊಂದಿಗೆ ಕನೆಕ್ಟ್ ಆಗ್ತಿರೋದು ಗೊತ್ತಾಯ್ತು. ಆ ಪ್ರಪಂಚದವರು ಭೂಮಿಯಲ್ಲಿ ಬಳಿಯ ಶಕ್ತಿಯ ಪದರಗಳನ್ನು ತುಂಬಿಸುವಲ್ಲಿ ನಮಗೆ ಸಹಾಯ ಮಾಡ್ತಿದ್ದಾರೆ. ಭೂಮಿಯನ್ನು ಪೂರ್ತಿಯಾಗಿ ಈ ಶಕ್ತಿಯಿಂದ ಹೊದಿಸುತ್ತಿದ್ದಾರೆ. ಪತ್ರೀಜಿಯವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದೀನಿ.

 

ಕೀರ್ತಿ
ಬೆಂಗಳೂರು

Go to top