" ಧ್ಯಾನವೇ ಕಲ್ಪವೃಕ್ಷ, ಕಾಮಧೇನು " 

 

 

ನನ್ನ ಹೆಸರು ಕೆಂಚನಗೌಡ. ನಾನು ದಾವಣಗೆರೆ ಜಿಲ್ಲೆಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕ. ನಾನು ಬೆಳಿಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಮತ್ತು ಸಾಯಂಕಾಲ 6 ರಿಂದ 7 ಗಂಟೆಯವರೆಗೆ ಧ್ಯಾನಕೇಂದ್ರಕ್ಕೆ ತೆರಳಿ ಸಾಮೂಹಿಕ ಧ್ಯಾನದಲ್ಲಿ ತೊಡಗುವುದರಿಂದ ನನಗೆ ಮಾನಸಿಕ, ದೈಹಿಕ ಆರೋಗ್ಯಗಳು ಕೊರತೆಯಾಗಿರುವುದಿಲ್ಲ. ಬುದ್ಧ ಅಂದು ಆರಂಭಿಸಿದ ಈ ಧ್ಯಾನಯೋಗ ನಮ್ಮಂಥಹ ಜನಸಾಮಾನ್ಯರಿಗೆ ಕಲ್ಪವೃಕ್ಷ ಮತ್ತು ಕಾಮಧೇನುವಂತಾಗಿದೆ. ಇದನ್ನೇ ಎಲ್ಲಾ ಜನಸಾಮಾನ್ಯರು ಮುಂದುವರಿಸಿಕೊಂಡು ಹೋದಲ್ಲಿ ನೀವು ಸಹ ನಿಮ್ಮ ಜೀವನದಲ್ಲಿ ಪ್ರಗತಿಯನ್ನು ಕಂಡುಕೊಳ್ಳಬಹುದು. ನಾವೆಲ್ಲಾ 2006 ರಿಂದ ಧ್ಯಾನಯೋಗದಲ್ಲಿ ನಿರತರಾಗಿರುತ್ತೇವೆ. ನಮ್ಮ ತನುಮನಗಳನ್ನು ನಿಯಂತ್ರಿಸುವ ವಿಧಾನವನ್ನು ಕಲಿತುಕೊಂಡಿರುತ್ತೇವೆ. "ಯೋಗಃ ಚಿತ್ತವೃತ್ತಿ ನಿರೋಧಃ" ನಮ್ಮ ಧ್ಯಾನದ ಉದ್ದೇಶವೇ ಮನಸಿನ ಸ್ಥಿರತೆ ಮತ್ತು ವಿಶಾಲ ಭಾವನೆಗಳನ್ನು ಬೆಳಸಿಕೊಳ್ಳುವುದು, ವಿಶ್ವಮೈತ್ರಿ ಬೆಳಸಿಕೊಳ್ಳುವುದು. ಧ್ಯಾನ ಅಭ್ಯಾಸ ಮಾಡಿದರೆ ಏನು ಬರುತ್ತದೆ? ಮುಖ್ಯವಾಗಿ, ಮೂರು ಗುಣಗಳು ಬರುತ್ತವೆ. ಸಕಲ ಜೀವಿಗಳೊಂದಿಗೆ ಸ್ನೇಹ, ಅನುರಾಗ ಆತ್ಮೀಯತೆ, ಏಕತ್ವ ಬರುತ್ತದೆ.

 

 

K. ಕೆಂಚನಗೌಡ
ದಾವಣಗೆರೆ
ಫೋನ್ : 08192-260384

Go to top