" ಜೈ ಧ್ಯಾನ ಮಹಾಚಕ್ರ "

 

 

1999 ನವೆಂಬರ್ ಎರಡನೆ ವಾರದಲ್ಲಿ ಧ್ಯಾನಕ್ಕೆ ನಾನು ಪರಿಚಿತನಾದೆ. 25ನೇ ಡಿಸೆಂಬರ್ ಕ್ರಿಸ್‌ಮಸ್ ಹಬ್ಬದ ದಿನದಿಂದ ಧ್ಯಾನ ಮಹಾಚಕ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡೆನು. ಮಹಾದ್ವಾರವನ್ನು ಪ್ರವೇಶಿಸುವಾಗಲೇ ಅದ್ಭುತ ಕಂಪನಗಳಿಂದ ರೋಮಾಂಚನವಾಯಿತು. ಭೌತಿಕ ಜೀವನದಲ್ಲಿ ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದವರೆಲ್ಲ ಒಂದು ದಿನ ಕಾಣಿಸಿಕೊಂಡರು. ಇವರನ್ನು ಸ್ಪರ್ಶಿಸುವುದೇ ಬೇಡ ಎಂದು ಊರ್ಧ್ವಗಾಮಿಯಾಗಿ ಮೇಲೆ ಬಂದೆ. ನಾನು ಮೇಲೆ ಬರುತ್ತಿದ್ದಂತೆ ಅವರ ಕಣ್ಣು, ಮೂಗುಗಳಿಂದ ಕಪ್ಪು ದ್ರವ ಸೋರಿ ಅವರೆಲ್ಲ ನಾಶಗೊಳ್ಳುತ್ತಿರುವುದು ಕಾಣಿಸಿತು. ಹಾಗೆಯೇ, ಮೇಲೆ ಬಂದಾಗ ಅವರನ್ನು ರಕ್ಷಿಸಲು ಹಲವಾರು ಸೂಕ್ಷ್ಮಜೀವಿಗಳಿಂದ ಕೂಡಿದ ಬೃಹತ್ ಸೂಕ್ಷ್ಮ ಶರೀರವೊಂದು ಬಂತು. ನನ್ನ ಶರೀರ ಬೃಹತ್ ಖಡ್ಗದ ರೂಪ ತಾಳಿ ಅದರ ಆಜ್ಞಾಚಕ್ರದ ಭಾಗದಿಂದ ನೆತ್ತಿಯ ಆಚೆ ಪ್ರವೇಶಿಸಿತು. ಆಗ ಏನು ಮಾಡುವುದೆಂದು ತಿಳಿಯದೆ ಹಾಗೆಯೇ ಇದ್ದೆ. ಅಷ್ಟರಲ್ಲಿ "ಪಾರಾಗಿ ಹೊರಗೆ ಬಾ" ಎಂದು ಪತ್ರೀಜಿಯವರು ಜೋರಾಗಿ ಹಿಂದಿ ಭಾಷೆಯಲ್ಲಿ ಆದೇಶಿಸಿದರು. ಆಗ ಆ ಬೃಹತ್ ಸೂಕ್ಷ್ಮ ಶರೀರವನ್ನು ಸೀಳಿ ಹೊರಬಂದೆ. ತತ್‌ಕ್ಷಣವೇ ವಿಶಾಲವಾದ ಪರಮ ಪ್ರಕಾಶದ ಚಕ್ರಾಕಾರದ ಧ್ಯಾನ ಮಹಾಚಕ್ರದ ನಾಭಿ ಭಾಗದಲ್ಲಿ ನನ್ನ ಆತ್ಮ ಕುಳಿತುಕೊಂಡಿರುವುದು ಕಾಣಿಸಿತು.

 

ಒಂದು ದಿನ ಅಖಂಡ ಧ್ಯಾನ ಜರುಗುವಲ್ಲಿ ಹೋಗಿ ಧ್ಯಾನಕ್ಕೆ ಕುಳಿತಾಗ ಆಳವಾದ ಪ್ರಶಾಂತತೆ ಆವರಿಸಿತು. ಒಂದು ದಿನ ಮಹಾಮಂಟಪದ ಎದುರು ಸೂಕ್ಷ್ಮ ಪಾರದರ್ಶಕ ಪಿರಮಿಡ್‌ನಲ್ಲಿ ಪತ್ರೀಜಿಯವರು, ಅವರೊಳಗೆ ಋಷಿ ರೂಪದ ಇನ್ನೊಬ್ಬ ಪತ್ರೀಜಿಯವರು ಮತ್ತು ಅವರೊಳಗೆ ನಾನು ಹನ್ನೊಂದು ದಿನ ಅಖಂಡ ಧ್ಯಾನದಲ್ಲಿ ಕುಳಿತಿರುವುದು ಕಾಣಿಸಿತು. ಕೊನೆಯ ಕೆಲವು ನಿಮಿಷಗಳ ವೇಣು ಧ್ಯಾನದಲ್ಲಿ ಇಡೀ ಚಕ್ರದ ಊರ್ಧ್ವಪಯಣ. ಕಾರ್ಯಕ್ರಮ ಮುಗಿದ ಮೇಲೆ ಪತ್ರೀಜಿಯವರ ನೇತೃತ್ವದಲ್ಲಿ ನಮ್ಮನ್ನೆಲ್ಲ್ಲ ಮಹಾಚಕ್ರವು ನಮ್ಮ ಲೋಕಕ್ಕೆ ಮರಳಿ ಎತ್ತಿಕೊಂಡು ಹೋಯಿತು. ಅಬ್ಬಾ, ಅಲ್ಲಿ ದೇವತೆಗಳಿಂದ ನಮಗೆಲ್ಲಾ ಅಭಿನಂದನೆಗಳ ಮಹಾಪೂರ. ಧನ್ಯ, ಧನ್ಯ, ಧನ್ಯೋಸ್ಮಿ ಪತ್ರೀಜಿ.

 

ಜೀವಂಧರ ಕೇತಪ್ಪ
ಚಿಕ್ಕೋಡಿ

Go to top