" ಜೀವನವೊಂದು ಲೀಲೆ "

 

 

ನವಂಬರ್ 1999ರಲ್ಲಿ ಡಾ|| ನ್ಯೂಟನ್ ಅವರಿಂದ ಧ್ಯಾನ ಜೀವನಕ್ಕೆ ಪರಿಚಿತನಾದ ನನಗೆ 2001ರ ಶ್ರೀಶೈಲಂ ಟ್ರೆಕ್ಕಿಂಗ್‌ನಿಂದ ವಿಶಿಷ್ಟ ತಿರುವು ದೊರೆಯಿತು. ಅಂದಿನಿಂದ ಆನಾಪಾನಸತಿ ಧ್ಯಾನದ ಅಭ್ಯಾಸ ಮತ್ತು ಪ್ರಚಾರಕ್ಕೆ ಅಂಕಿತನಾದೆ. 1999 ನವೆಂಬರ್‌ನಿಂದ ಇಂದಿನವರೆಗೂ ಯಾವುದೇ ಮಾತ್ರೆ, ಔಷಧಿಯನ್ನು ಸೇವಿಸದೇ ಕೇವಲ ಧ್ಯಾನದಿಂದಲೇ ನನಗೆ ಬಂದ ಯಾವುದೇ ಕಾಯಿಲೆಗಳಿಂದ ಗುಣಮುಖನಾಗುತ್ತ ಬಂದಿದ್ದೇನೆ.

 

ಬ್ರಹ್ಮರ್ಷಿ ಪತ್ರೀಜಿಯವರ ಆದೇಶಾನುಸಾರ ‘ಧ್ಯಾನ ಕರ್ನಾಟಕ’ ಹೊಸ ಯುಗದ ಆಧ್ಯಾತ್ಮಿಕ ಕನ್ನಡ ಮಾಸಿಕ ಪತ್ರಿಕೆಯ ಸಂಪಾದಕನಾಗಿ ಕಾರ್ಯನಿರ್ವಹಿಸಿದೆ. ಪಿರಮಿಡ್ ವ್ಯಾಲಿಯೊಂದಿಗೆ ಆರಂಭದ ದಿನಗಳಿಂದಲೂ ಒಡನಾಟ ಹೊಂದುವ ಸೌಭಾಗ್ಯ ನನಗೆ ದೊರೆತಿದೆ ಎಂದು ಹೇಳಲು ಸಂತೋಷವೆನಿಸುತ್ತದೆ.

 

ಆರಂಭದಲ್ಲಿ ಇಲ್ಲೆಲ್ಲ ಪುಟ್ಟತೋಟಗಳು, ಅದರಲ್ಲೊಂದು ಗುಡಿಸಲಿನ ಪಿರಮಿಡ್, ಪಕ್ಕದಲ್ಲಿಯೇ ಮೆಗಾ ಪಿರಮಿಡ್‌ಗೆ ಕಾರ್ಯ ಆರಂಭ, ಏರಿಳಿತದ ಜಮೀನು, ಸಮತಟ್ಟುಗೊಳಿಸುವ ಸಾಹಸಕಾರ್ಯ, ಅದರೊಂದಿಗೆ ಬೃಹತ್ ಪಿಲ್ಲರ್‌ಗಳನ್ನು ಹಾಕಲು ತೋಡಿದ ತುಂಬ ಆಳವಾದ ಗುಂಡಿಗಳು, ನಿಧಾನವಾಗಿ ಮೇಲೆದ್ದ ಪಿಲ್ಲರ್‌ಗಳು, ಅರ್ಧಭಾಗವನ್ನು ದೊಡ್ಡ ಹಾಲ್ ಮಾಡಿ ಅದರ ಮೇಲೆ ಸಮತಟ್ಟುಗೊಳಿಸಿದ ನಂತರ ತಯಾರಾದ ವಿಶಾಲ ಪಿರಮಿಡ್ ಒಳಪ್ರಾಂಗಣ, ಅದರ ಮೇಲೆ  Head and Body ಯ ಸ್ವಯಂ ಭಾರ ಹೊರುವ ವಿಶಿಷ್ಟ ಆರ್ಕಿಟೆಕ್ಟರ್ ತಂತ್ರಜ್ಞಾನದಿಂದ ನಿರ್ಮಾಣಗೊಂಡ ಪಿರಮಿಡ್ ಅಸ್ಥಿಶರೀರ, ಅದರ ಮೇಲೆ ಒಳಗಡೆ ಉಷ್ಣತೆ ಹರಡದಂತೆ ಥರ್ಮೊಕಾಲ್ ಒಳಗೊಂಡು ವಿಭಿನ್ನ ರೀತಿಯ ಪದರುಗಳು, ಅದರ ಮೇಲೆ ಪ್ರಕೃತಿ ತತ್ವಗಳನ್ನು ಬಿಂಬಿಸುವ ಟೈಲ್ಸ್ ವಿನ್ಯಾಸ, ಒಳಗಡೆಯ ಕಿಂಗ್ಸ್ ಛೇಂಬರ್, ಹವಾ ನಿಯಂತ್ರಣ ಯಂತ್ರಗಳ ಅಳವಡಿಕೆಗಳಿಗೆ ‘ಧ್ಯಾನ ಕರ್ನಾಟಕ’ದೊಂದಿಗೆ ನಾನೂ ಸಾಕ್ಷಿಯಾದ ಅನುಭವ ಯಾತ್ರೆ.

 

ಈಗ ಆಧುನಿಕ ತಂತ್ರಜ್ಞಾನದ ವಿನ್ಯಾಸದಿಂದ ಸಕಲ ರೀತಿಯಿಂದ ಸುಸಜ್ಜಿತಗೊಂಡಿರುವ ಪಿರಮಿಡ್ ವ್ಯಾಲಿಯನ್ನು ನೋಡಿದರೆ ಧನ್ಯತೆಯ ಭಾವ ಆವರಿಸಿಕೊಳ್ಳುತ್ತದೆ.

 

ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ, ಅಧ್ಯಾತ್ಮಿಕ ಅನುಭವಗಳಾದ, ಪೂರ್ವ ಜನ್ಮಗಳ ಸ್ಮರಣೆ, ಪ್ರಸ್ತುತ ಜೀವನದ ಉದ್ದೇಶ ತಿಳಿದುಕೊಂಡದ್ದು, ಮುಂತಾದವುಗಳೆಲ್ಲ ಅರ್ಥವಾಗಿ ಜೀವನವೊಂದು ಲೀಲೆಯಂತೆ ಅನುಭವವಾಗುತ್ತಿರುವುದು ಕೇವಲ... ಕೇವಲ ಆನಾಪಾನಸತಿ ಧ್ಯಾನದ ಅಭ್ಯಾಸದಿಂದ ..

 

ಬ್ರಹ್ಮರ್ಷಿ ಪತ್ರೀಜಿಯವರ ಒಡನಾಟ ಜೀವನದ ಮಹಾಸೌಭಾಗ್ಯ. PSSMನ ಸದಸ್ಯರೊಂದಿಗಿನ ಸ್ನೇಹಲಾಭ ಬೋನಸ್ ಪಾಯಿಂಟ್. ಎಂದೂ ಕಂಡುಕೇಳರಿಯದ ಶ್ರೇಷ್ಠ ಆಧ್ಯಾತ್ಮಿಕ ಪುಸ್ತಕಗಳ ಸ್ವಾಧಾಯ ಹಾಗೂ ಎಲ್ಲೆಡೆ ಪಿರಮಿಡ್ ಶಕ್ತಿಯ ಉಪಲಬ್ಧಿ ಮುಂತಾದವುಗಳೆಲ್ಲ ಎಕ್ಸ್‌ಟ್ರಾ ಸ್ಕೋರ್ .

 

 

ಜೀವಂಧರ ಕೇತಪ್ಪನವರ
ಚಿಕ್ಕೋಡಿ
ಫೋನ್  : +91 9342127540

Go to top