" ಧ್ಯಾನ ಜಗತ್ತ್ ನನ್ನ ಗುರಿ "

 

ನನ್ನ ಹೆಸರು ಕಿರಣ್ ಕುಮಾರ್. ಇಲ್ಲಿಯವರೆಗಿನ ನನ್ನ ಜೀವನ ಪಯಣದಲ್ಲಿನ ನನ್ನ ಅನುಭವಗಳನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ಧ್ಯಾನವೆಂಬ ಸಂಗತಿಗೆ ನನ್ನ ಆತ್ಮೀಯ ಗೆಳೆಯರಾದ ರವಿಕಿರಣ್ ನವತ್‌ರಿಂದ ಪರಿಚಯಿಸಲ್ಪಟ್ಟೆ. ಧ್ಯಾನವೆಂದರೆ ಏನು ಮತ್ತು ಧ್ಯಾನದಿಂದ ಏನನ್ನು ಸಾಧಿಸಬಹುದು ಎಂಬ ವಿಚಾರದ ಬಗ್ಗೆ ವಿಚಾರಿಸುವ ಹಂತದಲ್ಲಿ ಈ ಧ್ಯಾನದ ಅನುಭವಗಳು ಪ್ರಾರಂಭವಾಯಿತು.

 

ಆನಾಪಾನಸತಿ ಧ್ಯಾನದ ಬಗ್ಗೆ ರವಿ ನನಗೆ ವಿವರಿಸಿದರು ಮತ್ತು ಪಿರಮಿಡ್ ಧ್ಯಾನ ಕೇಂದ್ರ, ನವದೆಹಲಿ ಇಲ್ಲಿಗೆ ಪರಿಚಯಿಸಿದರು. ನಮ್ಮ ದಿನನಿತ್ಯದ ಕೆಲಸ ಕಾರ್ಯಕ್ರಮದ ನಡುವೆ ನಮಗೆ ಬಿಡುವು ಸಿಕ್ಕಾಗ, ನಾವು ಈ ಧ್ಯಾನ ಕೇಂದ್ರಕ್ಕೆ, ಪದೇ ಪದೇ ಭೇಟಿ ನೀಡುತ್ತಿದ್ದೆವು. ಸಮಾಜಕ್ಕೊಸ್ಕರ ಅತ್ಯುನ್ನತವಾದ ಕೆಲಸ ಮಾಡುತ್ತಿರುವ ಇಂತಹ ಜನರ ಜೊತೆ ಮಾತನಾಡುವ ಮತ್ತು ಧ್ಯಾನ ಕೇಂದ್ರದಲ್ಲಿರುವ ಪುಸ್ತಕಗಳನ್ನು ಓದುವುದು ಬಂದು ಅತ್ಯುನ್ನತ ಕಲಿಕೆಯಾಗಿದೆ. ಜ್ಞಾನೋದಯವಾದ ಅನುಭವದಿಂದ ಇಡೀ ಪ್ರಪಂಚದ ನಿಯಮಗಳನ್ನು ಅರ್ಥಮಾಡಿಕೊಂಡಾಗ, ವಿಷಯಗಳು ಈ ಪ್ರಪಂಚದಲ್ಲಿ ಹೇಗೆ ಕೈಗೊಡುತ್ತವೆಯೋ ಹಾಗೆ ಪವಿತ್ರ ಪುಸ್ತಕದ ಧ್ವನಿಸುರಳಿ ಕೇಳಿದ ಅನುಭವವಾಯಿತು. ನನ್ನ ಈ ಅನುಭವವನ್ನು ನನ್ನ ಒಬ್ಬ ಒಳ್ಳೆಯ ಸ್ನೇಹಿತನ ಜೊತೆ ಹಂಚಿಕೊಂಡೆ.

 

ನಾನು ಸಂಪೂರ್ಣವಾಗಿ ಸಸ್ಯಾಹಾರಿಯಾಗಿ ಮಾರ್ಪಟ್ಟು, ಇದಕ್ಕೆ ನನ್ನ ಕುಟುಂಬದವರನ್ನು ಪ್ರೋತ್ಸಾಹಿಸಿದ್ದೇನೆ. ಸ್ನೇಹಿತರೇ ಸಸ್ಯಾಹಾರಿಗಳಾಗಿರಿ. ಅದರಿಂದಾಗುವ ಲಾಭಗಳಾದ ಸ್ವಚ್ಛ ಆಲೋಚನೆ, ಒಳ್ಳೆಯ ಸಹಬಾಳ್ವೆಯ ಸಂಬಂಧಗಳು ಮತ್ತು ಜೀವನದ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬಹುದು. ಧ್ಯಾನದ ಬಗ್ಗೆ ಬೇರೆಯವರಿಗೆ ಹೇಳುವುದು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಒಂದು ಅದ್ಭುತವಾದ ಸಂಗತಿಯಲ್ಲದೆ, ನಮ್ಮ ಬೆಳವಣಿಗೆಗೆ ಇದು ಸಹಕಾರಿಯಾಗುತ್ತದೆ.

 

ಧ್ಯಾನದ ಕಲಿಯುವಿಕೆಯನ್ನು ಒಬ್ಬ ಧ್ಯಾನಿಯು ಮಾತ್ರ ವಿವರಿಸಲು ಸಾಧ್ಯ ಮತ್ತು ನಾವು ವಿವರಿಸಿದ ಹತ್ತು ಮಂದಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಇದನ್ನು ಅರ್ಥಮಾಡಿಕೊಂಡು ಧ್ಯಾನವನ್ನು ಮುಂದುವರಿಸಿದರೆ ನಮ್ಮ ಉದ್ದೇಶ ಸಾರ್ಧಕವಾದಂತೆ. ನಾನು ಪುಸ್ತಕಗಳನ್ನು ಓದುವ ಆಸಕ್ತಿ ಉಳ್ಳವನಾಗಿದ್ದು. ಧ್ಯಾನವನ್ನು ಅರ್ಥ ಮಾಡಿಕೊಂಡ ನಂತರ, ಖಿನ್ನತೆಯಿಂದ ಅಥವಾ ವಿರುದ್ಧ ಯೋಚನೆಗಳು ನನ್ನ ಮನಸ್ಸಿಗೆ ಬಂದಾಗ ಜೊನಾಥನ್ ಲಿವಿಂಗ್‌ಸ್ಟನ್ ಸೀಗಲ್, ಲಿಂಡಾಗುಡ್ ಮನ್, ದೀಪಕ್ ಚೋಪ್ರಾ, ಓಷೋ ಇವರ ಪುಸ್ತಕಗಳನ್ನು ಓದಿದ್ದೇನೆ. ವಿರುದ್ಧಾತ್ಮಕ ಯೋಚನೆಗಳಿಂದ ಉಂಟಾಗುವ ಕೋಪ ಮತ್ತು ಕಿರಿಕಿರಿಯನ್ನು ಒಂದು ಕ್ಷಣ ಹಿಡಿತದಲ್ಲಿಟ್ಟು ಇದು ನಿಜವಾಗಿಯೂ ನನಗೆ ಮುಖ್ಯವೆ? ಎಂದು ನಿಮಗೆ ನೀವೇ ಪ್ರಶ್ನಿಸಿಕೊಂಡು, ಯೋಚನೆಯನ್ನು ದೂರಮಾಡುವ ಕಲೆಯು ಪ್ರತಿಯೊಬ್ಬ ಮನುಷ್ಯನಿಗೂ ಉಪಯುಕ್ತವಾದುದಾಗಿದೆ. ಪ್ರತಿನಿತ್ಯ ಈ ಅಭ್ಯಾಸವನ್ನು ಮಾಡಿ ಮತ್ತು ಹೇಗೆ ನಮ್ಮ ಮನಸ್ಸು ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಗಮನಿಸಿ.ನಾವು ಬೇರೆಯವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಮ್ಮ ಸಂಬಂಧಗಳು ಗಟ್ಟಿಯಾಗುವುದರಲ್ಲಿ ನಿರ್ಭಯವಾಗಿ ಮಾತನಾಡುವುದರಲ್ಲಿ ಮತ್ತು ನನ್ನ ಆತ್ಮಸ್ಥೈರ್ಯ ಹೆಚ್ಚಾಗುವುದರಲ್ಲಿ ಧ್ಯಾನವು ಸಹಕಾರಿಯಾಗಿದೆ. ಇವತ್ತಿನವರೆಗೂ ನಾನು ವಿರುದ್ಧಾತ್ಮಕ ಯೋಚನೆಗಳು ಬಂದಾಗ ನನ್ನ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು ನನ್ನ ಜೀವನದಲ್ಲಾದ ಒಳ್ಳೆಯ ಸಂಗತಿಗಳ ಬಗ್ಗೆ ಯೋಚಿಸುತ್ತೇನೆ.ನಾನು ಕಳೆದ ವರ್ಷ ನಾಯುಡುಪೇಟೆಯಲ್ಲಿ ಶ್ರೀ ಪ್ರೇಮನಾಥ್‌ರವರು ಆಯೋಜಿಸಿದ್ದ ಬಾಲಕೃಷ್ಣರವರ ಸೇತ್ ವಿಜ್ಞಾನ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದೆ. ಜೀವನದ ಉದ್ದೇಶಗಳು ಮತ್ತು ಹೇಗೆ ಪ್ರತಿಯೊಬ್ಬರೂ ಗುಣಾತ್ಮಕ ಯೋಚನೆಗಳಿಂದ ಜೀವಿಸಬಹುದಾಗಿದೆ ಎಂಬುದರ ಬಗ್ಗೆ ಅಲ್ಲಿ ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡೆ.

 

ಧ್ಯಾನ ಜಗತ್ತಿನ ಪಯಣದಲ್ಲಿ ನಾನು ಪಾಲ್ಗೊಳ್ಳಲು ಸಹಾಯ ಮಾಡಿದ ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್‌ಗಳಿಗೆ ನಾನು ತುಂಬಾ ಋಣಿಯಾಗಿದ್ದೇನೆ.

 

ಕಿರಣ್ ಅಲಿಸಂ
ಬೆಂಗಳೂರು

Go to top