" ಧ್ಯಾನವೇ ಬಾಳಿನ ಬೆಳಕಾಯ್ತು "

 

ನನ್ನ ಹೆಸರು ಕೋಮಲಮ್ಮ, ವಯಸ್ಸು 65. ತುಂಬಾ ಅನಾರೋಗ್ಯ ಸಂಸಾರದ ಕಷ್ಟ-ಕಾರ್ಪಣ್ಯದಲ್ಲಿ ತೂಳಲಾಡುತ್ತಿರುವ ಸಂದರ್ಭದಲ್ಲಿ ಪಿರಮಿಡ್ ಮಾಸ್ಟರ್ ಲಲಿತಾರವರಿಂದ ಧ್ಯಾನದ ಕುರಿತು ಪರಿಚಯ ಮಾಡಿಕೊಂಡೆ. ಅವರು ನಡೆಸುವ ಪ್ರತಿ ಧ್ಯಾನದ ತರಗತಿಗಳಲ್ಲಿ ಭಾಗವಹಿಸಿದೆ. ನೆಲದ ಮೇಲೆ ಕುಳಿತುಕೊಳ್ಳಲು ನನಗೆ ಸಾಧ್ಯವೇ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಲಲಿತಾ ಮೇಡಂ ಮನೆಯ ಹತ್ತಿರವೇ ನನ್ನ ಮನೆ ಇರುವುದರಿಂದ ಅವರ ಮನೆಯಲ್ಲಿ 2 X 2 ಪಿರಮಿಡ್‌ಗಳನ್ನು ಹಾಕಿದ್ದರು, ನಮ್ಮ ಮನೆಗೆ ಬಂದು ಪಿರಮಿಡ್ ಕೆಳಗೆ ದಿನವೂ ಒಂದುಕುಳಿತು ಧ್ಯಾನ ಮಾಡಿ ಎಂದು ಹೇಳಿದರು. ಅದರಂತೆ ನಾನು ಅವರ ಮನೆಗೆ ಹೋಗಿ ಪಿರಮಿಡ್ ಕೆಳಗೆ ಕುಳಿತು ಧ್ಯಾನ ಪ್ರಾರಂಭಿಸಿದೆ. 2 ತಿಂಗಳಲ್ಲಿ ನನಗೆ ನೆಲದ ಮೇಲೆ ಕುಳಿತುಕೊಳ್ಳಲು ನನ್ನ ಎರಡೂ ಮೊಣಕಾಲುಗಳು ಸಹಾಯ ಮಾಡಿದವು. ಈಗ ನಡೆದುಕೊಂಡು ಹೋಗುವಷ್ಟು ಆರೋಗ್ಯವಾಗಿರುವೆ.

 

ಮೇಡಂ ಸಲಹೆಯಂತೆ ಮನೆಯಲ್ಲಿ 2x2 ಪಿರಮಿಡ್ ಹಾಕಿಕೊಂಡೆ. ಒಂದೇ ತಿಂಗಳಿನಲ್ಲಿ ಬುದ್ಧಿ ಭ್ರಮಣೆ ಹೊಂದಿದ್ದಂಥ ಮಗನಿಗೆ ಅತ್ಯುತ್ತಮ ಫಲಿತಾಂಶ ದೊರೆಯಿತು. ಎರಡನೆಯ ತಿಂಗಳಿಗೆ, 15 ವರ್ಷಗಳಿಂದ ‘ಸತ್ತಿದ್ದೀಯಾ? ಬದುಕಿದ್ದೀಯಾ?’ ಎಂದು ಕೇಳಲಾರದ ಪತಿ ಮನೆಗೆ ಬಂದರು. ನನ್ನ ಕಷ್ಟ ವಿಚಾರಿಸಿದರು. ನೊಂದು-ಬೆಂದು ಬಸವಳಿದಿದ್ದ ನನಗೆ ನನ್ನ ಪತಿಯ ಧೈರ್ಯದ ಮಾತುಗಳಿಂದ ಹೋದ ಜೀವ ಬಂದಂತಾಯ್ತು. ಇದೆಲ್ಲಾ ಸಾಧ್ಯವಾದದ್ದು ಧ್ಯಾನದಿಂದ ಮಾತ್ರ ಎಂದು ಸಾವಿರಾರು ಜನರ ಎದುರು ಧೈರ್ಯವಾಗಿ ಹೇಳುತ್ತೇನೆ. ಅಂಧಕಾರದಲ್ಲಿ ಮುಳುಗಿದ್ದ ನನ್ನ ಬಾಳು ಧ್ಯಾನದಿಂದ ಬೆಳಕು ಕಂಡಿತು. ಕಷ್ಟ-ಅನಾರೋಗ್ಯ, ನೋವು, ಚುಚ್ಚು ಮಾತುಗಳು ತುಂಬಿದ್ದ ಬದುಕೆಂಬ ಮರಳುಗಾಡಿನಲ್ಲಿನ ಧ್ಯಾನ ಎಂಬುದು ಓಯಾಸಿಸ್ ನಂತೆ ದೊರೆಯಿತು.

 

ಅಂದಿನಿಂದ ನಾನು ಎಲ್ಲೇ ಹೋಗಲಿ, ಬಂಧು .. ಬಳಗ, ಸ್ನೇಹಿತರು ಯಾರಿಗೇ ಆಗಲಿ ಧ್ಯಾನದ ಕರಪತ್ರ ಕೊಟ್ಟು ಧ್ಯಾನ ಮಾಡಲು ಹೇಳುತ್ತಿದ್ದೇನೆ.

 

 

ಕೋಮಲಾ ಬಾಯಿ
ಗಂಗಾವತಿ
ಮೊಬೈಲ್ : +91 9916166397

Go to top