" ಪಿರಮಿಡ್ ವ್ಯಾಲಿಯಲ್ಲಿ ಒಂಬತ್ತು ತಿಂಗಳಿಂದ ಮೌನವಾಗಿದ್ದೇನೆ "

 

2007 ರಲ್ಲಿ, ಅಣ್ಣನ ಮೂಲಕ, ಈ ‘ಪಿರಮಿಡ್ ಧ್ಯಾನ’ ಪರಿಚಯಗೊಂಡಿತು. ಅಂದಿನಿಂದ ಪ್ರತಿನಿತ್ಯ ಧ್ಯಾನಾಭ್ಯಾಸ ಸಾಧನೆಯಾಗಿತ್ತು. "ಒಬ್ಬ ಯೋಗಿಯ ಆತ್ಮಕಥೆ" ಪುಸ್ತಕ ಮೂಲಕ ಅನೇಕ ಮಂದಿ ಯೋಗಿಗಳ ಬಗ್ಗೆ ತಿಳಿದು ಆಧ್ಯಾತ್ಮಿಕತೆಯೆಡೆಗೆ ಆಸಕ್ತಿ ಹೆಚ್ಚಿತ್ತು. ಧ್ಯಾನ ಮಾಡಿದಾಗೆಲ್ಲಾ ಪಿರಮಿಡ್ ವ್ಯಾಲಿಗೆ ಹೋಗಬೇಕು ಅನ್ನಿಸುತ್ತಿತ್ತು. 2009ರಲ್ಲಿ ವ್ಯಾಲಿಗೆ ಬಂದ ನಂತರ ಈ ಸ್ಥಳದ ಬಗ್ಗೆ ಹೆಚ್ಚು ಆಸಕ್ತನಾದೆ, ಬಿಟ್ಟುಹೋಗಲು ಇಷ್ಟವಾಗಲಿಲ್ಲ. ಧ್ಯಾನ ಮಾಡುವಾಗಲೆಲ್ಲಾ ಅನೇಕ ಸಂಶಯಗಳು ನನ್ನನ್ನು ಕಾಡುತ್ತಿದ್ದವು. ಹಿರಿಯ ಪಿರಮಿಡ್ ಮಾಸ್ಟರ್‌ಗಳು ಬಳಿ ಕೇಳುತ್ತಿದ್ದೆ. ವಿಶಾಲಾಕ್ಷಿ ಮೇಡಂ ಕೊಟ್ಟ ‘ಯೋಗ ವಾಸಿಷ್ಠ’ ಪುಸ್ತಕದ ಮೂಲಕ ನನ್ನ ಎಷ್ಟೋ ಪ್ರಶ್ನೆಗಳಿಗೆ ಸಮಾಧಾನ ದೊರಕಿತು. ನಂತರ ಕೆಲಕಾಲ ಮೌನದಲ್ಲಿ ಇರಬೇಕೆಂದು ಅನಿಸಿತು. ಮೌನದಲ್ಲಿ ಇರಲು ಆರಂಭಿಸಿದೆ. ಧ್ಯಾನದಲ್ಲಿ, ಯಾರೋ ಒಬ್ಬ ಹಿರಿಯ ವಯಸ್ಸಿನ (ವಯಸ್ಸಾದ ಮುದುಕಿ) ಕಾಣಿಸಿದರು. ನೀವು ಯಾರು ಎಂದು ಕೇಳಿದಾಗ ಅಕೆ ನಗುತ್ತಾ ನಾನು ಬಾಬಾಜಿ ತಾಯಿ ಎಂದು ಹೇಳಿ ಇಷ್ಟು ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದರೂ ಈಗಲಾದರೂ ಬಂದಿದಕ್ಕೆ ಬಹಳ ಸಂತೋಷವಾಗಿದೆ ಎಂದು ಹೇಳಿದರು. ಹಲವಾರು ಬಾರಿ ಕಾಣಿಸಿಕೊಂಡು ಅನೇಕ ವಿಶ್ವರಹಸ್ಯಗಳನ್ನು ಹೇಳುತ್ತಿದ್ದರು. ನಂತರ ಧ್ಯಾನದಲ್ಲಿ ಶೂನ್ಯ ಸ್ಥಿತಿಯಲ್ಲಿರುವುದು ಒಂದು ಆನಂದ ಸ್ಥಿತಿ ಅದರಿಂದ ಪ್ರಶಾಂತವಾಗಿದ್ದೇನೆ. ಒಟ್ಟಾರೆಯಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವ ಹಾಗೆ ಮಾಡಿದ್ದು ‘ಆನಾಪಾನಸತಿ ಧ್ಯಾನ’. 

 

ಈಗಿರುವ ಮೌನ ಪ್ರಾರಂಭಿಸಿ 9 ತಿಂಗಳು ಕಳೆದಿವೆ, ಜೂನ್ ತಿಂಗಳಿಗೆ ಒಂದು ವರ್ಷ ಮುಗಿಯಲಿದೆ. ಪಿರಮಿಡ್ ವ್ಯಾಲಿಯಲ್ಲಿ ಮೌನವಾಗಿರುವುದು ಬಹಳ ಸುಲಭ ಎಂದು ನನಗೆ ಅನ್ನಿಸುತ್ತದೆ. ಇಲ್ಲಿರುವ ವಾತಾವರಣ, ವ್ಯವಸ್ಥೆಗೆ ಸುಲಭವಾಗಿ ಹೊಂದಿಕೊಳ್ಳಬಹುದು ಮತ್ತು ಧ್ಯಾನ ಸಾಧನೆ ಮುಂದುವರೆಸುತ್ತಾ ನಿತ್ಯತೋಟದ ನನ್ನ ಕಾರ್ಯದಲ್ಲಿ ಸಂತೋಷದಿಂದ ನಾನು ತೊಡಗಿಸಿಕೊಂಡಿದ್ದೇನೆ.

 

P.ಕೃಷ್ಣ
ಪಿರಮಿಡ್ ವ್ಯಾಲಿ, ಬೆಂಗಳೂರು

Go to top