" ಪತ್ರೀಜಿ ನಮ್ಮೆಲ್ಲರಿಗೂ ಫ್ರೆಂಡ್ "

 

ನನ್ನ ಹೆಸರು ಕೃಷ್ಣಪ್ರಿಯ. ನಮ್ಮ ಊರು ಆದೋನಿ. ನಾನು ರಾಯಚೂರ್‌ನಲ್ಲಿರುವ " ನವೋದಯ ವೈದ್ಯ ಕಾಲೇಜ್ " దల్లి M.B.B.S ಮೂರನೆಯ ವರ್ಷದಲ್ಲಿ ಓದುತ್ತಿದ್ದೇನೆ.

 

ನನ್ನ ಜೀವನದಲ್ಲಿ ನಡೆದ ಒಂದು ಅದ್ಭುತವೆಂದರೆ... 2007ನೆಯ ಸೆಪ್ಟೆಂಬರ್‌ನಲ್ಲಿ ಪತ್ರೀಜಿ ಅವರನ್ನು ಭೇಟಿ ಆದದ್ದು. ಆ ದಿನ ಅವರು ನನ್ನನ್ನು " ಕ್ಯಾ ಬಾತ್ ಹೈ" ಎಂದು ಕೇಳಿದರು. ಆಗ ನಾನು ಮಾಂಸಾಹಾರಿ. ಯಾರು ಹೇಳಿದರೂ ಸಹ ಮಾಂಸಾಹಾರ ಸೇವಿಸುವುದನ್ನು ಬಿಡದ ನಾನು.. ಪತ್ರೀಜಿ ಅವರನ್ನು ಭೇಟಿ ಆದಾಗ ಅವರು ನನ್ನ ಕಡೆ ನೋಡಿದ ಒಂದೇ ಒಂದು ನೋಟದಿಂದ... ಕೇಳಿರುವ ಒಂದೇ ಒಂದು ಪ್ರಶ್ನೆಯಿಂದ ಮಾಂಸಾಹಾರ ಪೂರ್ತಿಯಾಗಿ ಬಿಟ್ಟು ಶುದ್ಧ ಸಸ್ಯಾಹಾರಿಯಾಗಿಬಿಟ್ಟೆ.

 

ಹೀಗೆ ಅನೇಕರನ್ನು ಒಂದೇ ಒಂದು ನೋಟದಿಂದಲೇ ಬದಲಾಯಿಸಿ, ಅವರ ಆತ್ಮೋನ್ನತಿಗೆ ಸಹಾಯಮಾಡುವ ಗುರುವು ಒಬ್ಬ ಪತ್ರೀಜಿ ಮಾತ್ರವೇ.

 

ಯಾವ ಆಧ್ಯಾತ್ಮಿಕ ಪುಸ್ತಕದಲ್ಲಾದರೂ... " ಒಬ್ಬ ಪರಮಾತ್ಮ ಎಂದರೆ ಹೇಗೆ ಇರುತ್ತಾರೆ? " .. " ಆ ಪರಮಾತ್ಮದಲ್ಲಿರುವ ಗುಣಗಳು ಹೇಗೆ ಇರುತ್ತವೆ? ".. ಎನ್ನುವುದೆಲ್ಲವನ್ನೂ ನಾವು ಪತ್ರೀಜಿಯವರಿಗೆ ಹೋಲಿಸಿಕೊಳ್ಳಬಹುದು. ದಟೀಸ್ ಪತ್ರೀಜಿ.

 

ಅವರು ಸದಾ ನಮಗೆ ಬೋಧಿಸುವುದು ಒಂದೇ 'ನಿನ್ನನ್ನು ನೀನು ಉದ್ಧರಿಸಿಕೋ' ಎಂದು. ಒಬ್ಬ ಶಿಷ್ಯ ತನ್ನಷ್ಟಕ್ಕೆ ತಾನೇ ಸ್ವತಂತ್ರವಾಗಿ ಬೆಳೆಯಬೇಕೆಂಬುವುದೇ ಅವರ ಆಸೆ. ಅವರ ಸಾಂಗತ್ಯದಲ್ಲಿ ತುಂಬಾ ಕಲಿಯಬಹುದು. ಒಬ್ಬ ಪರ್ಫೆಕ್ಟ್ ಪಿರಮಿಡ್ ಮಾಸ್ಟರ್‌ಗೆ ಅವರು ಒಳ್ಳೆಯ ಉದಾಹರಣೆ. ನಿಜಕ್ಕೂ ಅವರು ಒಂದು ಅದ್ಭುತವಾದ ಕನ್ನಡಿ ಇದ್ದ ಹಾಗೆ. ಯಾರು ಹೇಗೆ ಯೋಚಿಸುತ್ತಾರೊ ಅದನ್ನೇ ಅವರು ರಿಫ್ಲೆಕ್ಟ್ ಮಾಡುತ್ತಾರೆ.

 

ಅನೇಕ ಬಾರಿ ಪತ್ರೀಜಿ ಅವರ ಜೊತೆ ಸೇರಿ ತರಬೇತಿಗಳಿಗೆ, ಪಿರಮಿಡ್ ಪ್ರಾರಂಭೋತ್ಸವಗಳಿಗೆ ಹೋಗುವುದು, ಮತ್ತು ಪತ್ರೀಜಿ ಮತ್ತು ಅವರ ಪತ್ನಿ ಸ್ವರ್ಣಮಾಲ ಮೇಡಮ್‌ರವರ ಜೊತೆ ಸೇರಿ ಅವರ ಮನೆಯಲ್ಲಿ ಇದ್ದಾಗ ನಾನು ಗಮನಿಸಿದ್ದೇನೆಂದರೆ.. ಸಾರ್ ಒಂದು ಬಾರಿ ಕೂಡಾ.. ಒಂದು ಕ್ಷಣ ಕೂಡಾ ವ್ಯರ್ಥ ಮಾಡಿದ್ದಾಗಲಿ.. ನಾನು ನೋಡಲಿಲ್ಲ. ಇಂತಹ ಶಿಕ್ಷಣ ನಿಜಕ್ಕೂ ನಮ್ಮಂತಹ ಯುವಕರಿಗೆ ತುಂಬಾ ತುಂಬಾ ಆವಶ್ಯಕ... ದಟೀಸ್ ಪತ್ರೀಜಿ.

 

ಎಲ್ಲಾ ತಿಳಿದರೂ ಕೂಡಾ... ನಮ್ಮ ‘ ಪೈಮಾ ’ ಅವರ ಜೊತೆ ಸೇರಿ ಒಬ್ಬ ಸ್ನೇಹಿತನ ಹಾಗೆ ತುಂಬಾ ಜಾಲೀಯಾಗಿ ಎಂಜಾಯ್ ಮಾಡುತ್ತಾ.. ತನಗೇನು ಗೊತ್ತಿಲ್ಲದ ಹಾಗೇ ನಟಿಸುತ್ತಾ.. ಪುನಃ ಅಷ್ಟರಲ್ಲೇ ಯಾವ ವ್ಯಕ್ತಿತ್ವ ವಿಕಾಸ ನಿಪುಣರು ಕೂಡಾ ಕೊಡಲಾಗದೇ ಇರುವಷ್ಟು ಅತ್ಯುನ್ನತವಾದ ಆತ್ಮಜ್ಞಾನ ಶಿಕ್ಷಣವನ್ನು ನಮಗೆ ನೀಡುತ್ತಿರುವ ಅದ್ಭುತವಾದ ಕಲಾಕಾರರು ಪತ್ರೀಜಿ.

 

ಹೀಗೆ ಆಧ್ಯಾತ್ಮಿಕತೆಯನ್ನು, ಆತ್ಮಜ್ಞಾನವನ್ನೂ ಸುಲಭವಾಗಿ.. ಜೀವನದಲ್ಲಿ ಅದೊಂದು ಭಾಗವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಮಾಡಿದ್ದು ಒಬ್ಬ ಪತ್ರೀಜಿ ಮಾತ್ರವೇ. ದಟೀಸ್ ಪತ್ರೀಜಿ.

 

" ನನ್ನನ್ನು ಮೀರಿಸುವುದೇ ನನಗೆ ನೀವು ಕೊಡುವ ನಿಜವಾದ ಗುರುದಕ್ಷಿಣೆ " ಎಂದು ಯಾವ ಗುರುಗಳು ಹೇಳುತ್ತಾರೆ ಹೇಳಿ? ಅಂತಹ ಗುರುವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಪಡೆದಿರುವ ನಾವು ತುಂಬಾ ಅದೃಷ್ಟವಂತರು.

 

ಎಲ್ಲರನ್ನು ತಮ್ಮ ವಾಕ್ಕುನಿಂದ ಅಪರಿಮಿತವಾಗಿ ಪ್ರೋತ್ಸಾಹಿಸುತ್ತಾ ಅನೇಕ ಲಕ್ಷಾಂತರ ಪಿರಮಿಡ್ ಮಾಸ್ಟರ್‌ಗಳನ್ನು ಪತ್ರೀಜಿ ತಯಾರು ಮಾಡಿದರು. ಇಂತಹ " ‘ ವಂಡರ್‌ಫುಲ್ ಗುರುಗಳಿಗೆ ’ ನಾವು ನೀಡುವ ಏಕೈಕ ಗುರುದಕ್ಷಿಣೆ.. ಅವರು ಸ್ಥಾಪಿಸಿರುವ ಈ ‘ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ’ ಅನ್ನು ವಿಸ್ತಾರವಾಗಿ ವ್ಯಾಪಿಸುವ ಹಾಗೆ ಮಾಡುವುದೇ.

 

ಆದಷ್ಟು ಬೇಗ ನಾವು " ಧ್ಯಾನ ಜಗತ್ " ಮತ್ತು " ಪಿರಮಿಡ್ ಜಗತ್ತ "ಅನ್ನು ಸಾಧಿಸೋಣ...

 

A. ಕೃಷ್ಣಪ್ರಿಯ
ಆದೋನಿ

Go to top