" ಏಕಾಗ್ರತೆ ಮತ್ತು ಆತ್ಮಸ್ಥೈರ್ಯ ಹೆಚ್ಚಾಗಿದೆ.. "

 

 

ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಮೊದಲು ಧ್ಯಾನ ಅಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ನನ್ನ ಅಮ್ಮ ಧ್ಯಾನ ಮಾಡಲು ಒತ್ತಾಯ ಮಾಡಿ ಕರೆದುಕೊಂಡು ಹೋದರು. ಒಂದು ದಿನ ಕುಳಿತುಕೊಂಡೆ, ಆಮೇಲೆ, ಮೂರನೇ ದಿನದಿಂದ ತಪ್ಪದೇ ಧ್ಯಾನಕ್ಕೆ ಹೋಗುತ್ತಿದ್ದೇನೆ. ಧ್ಯಾನವನ್ನು ಕಲಿಸಿಕೊಟ್ಟ ಪ್ರಕಾಶ್‌ರವರಿಗೆ ನಮನಗಳು. ನನಗೆ ಮೊದಲು ಸ್ವಲ್ಪ ಬರೆದರೂ ಕೈ ನೋವು ಬರುತ್ತಿತ್ತು. ಓದಲು ಕುಳಿತರೆ ನಿದ್ದೆ ಬರುತ್ತಿತ್ತು. ಈಗ 11ಗಂಟೆ ವರೆಗೂ ಓದುತ್ತೇನೆ ನಿದ್ದೆ ಬರುವುದಿಲ್ಲ. ಎಷ್ಟೇ ಹೋಮ್‌ವರ್ಕ್ ಇದ್ದರೂ ಲವಲವಿಕೆಯಿಂದ ಬರೆದು ಮುಗಿಸುತ್ತೇನೆ. ರಾತ್ರಿ ಕತ್ತಲಲ್ಲಿ ಹೋಗಲು ತುಂಬಾ ಭಯ ಪಡುತ್ತಿದ್ದೆ. ಈಗ ಹೆದರಿಕೆ ಇರುವುದಿಲ್ಲ. ನಮ್ಮ ಶಾಲೆಯಲ್ಲಿ ಕಿರುಪರೀಕ್ಷೆ ನಡೆಸಿದ್ದರು. ಅಂದು ನಾನು ಓದದೇ ಹೋಗಿದ್ದೆ. ನನಗೆ ಅಂದು ಪರೀಕ್ಷೆ ಅಂತ ತಿಳಿದಿರಲಿಲ್ಲ. ನಾನು ಟೀಚರ್ ಬರುವ ಮುಂಚೆ, 5 ನಿಮಿಷ ಕಣ್ಮುಚ್ಚಿ ಧ್ಯಾನಕ್ಕೆ ಕುಳಿತುಕೊಂಡೆ. ನಂತರ, ಪರೀಕ್ಷೆಗೆ ಬಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದೆ. ನನಗೆ ಪರೀಕ್ಷೆಯಲ್ಲಿ 20ಕ್ಕೆ 19 ಅಂಕಗಳು ಬಂದಿವೆ. ಇನ್ನೂ ಹೆಚ್ಚು ಧ್ಯಾನ ಮಾಡಿ ಹೆಚ್ಚು ಏಕಾಗ್ರತೆಯನ್ನು ಪಡೆದು ವೈದ್ಯಳಾಗಬೇಕೆಂದಿದ್ದೇನೆ. ಆದ್ದರಿಂದ, ಎಲ್ಲರೂ ಧ್ಯಾನ ಮಾಡಿ ಚೆನ್ನಾಗಿ ಓದಲೆಂದು ಆಶಿಸುತ್ತೇನೆ.

 

L. ದಿವ್ಯ
ಆನೆಕೊಂಡ

Go to top