" ಚಿಕ್ಕ ಕುಟುಂಬದಿಂದ.. ಮಹಾವಿಶ್ವಾಲಯದ ಕಡೆ "

 

 

ನನ್ನ ಹೆಸರು ಲಕ್ಷ್ಮೀ ಸುಚಿತ್ರ. ನಮ್ಮ ಯಜಮಾನರ ಹೆಸರು P.S.R.K ಪ್ರಸಾದ್. ಮಕ್ಕಳು 'ಪ್ರಸನ್ನ', 'ಪ್ರಸೂನ'. ಸದ್ಯಕ್ಕೆ ಈಗ ನಾವು ಬೆಂಗಳೂರು ಪಿರಮಿಡ್ ವ್ಯಾಲಿಯಲ್ಲಿ ಇದ್ದೇವೆ.

 

ಮೊದಲನೆಯ ಬಾರಿ 2003 ಫೆಬ್ರವರಿಯಲ್ಲಿ ನಮ್ಮ ಯಜಮಾನರು ನನ್ನನ್ನು ಭೀಮವರಂನಲ್ಲಿ ನಡೆಯುವ ಕ್ಲಾಸ್‌ಗೆ ಕರೆದುಕೊಂಡು ಹೋಗುವುದರ ಮೂಲಕ ನನಗೆ ಧ್ಯಾನ ಪರಿಚಯವಾಯಿತು. ಆಗ ನಮ್ಮ ಯಜಮಾನರು ಆಕಿವೀಡುನಲ್ಲಿ ರೋಡ್ಸ್ ಅಂಡ್ ಬಿಲ್ಡಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಪತ್ರಿಸರ್‌ಗೆ ಆಕಿವೀಡು ಸೀನಿಯರ್ ಪಿರಮಿಡ್ ಮಾಸ್ಟರ್ ಸಾಂಬಶಿವರಾವುರವರು ನಮ್ಮನ್ನು ಪರಿಚಯ ಮಾಡಿಸಿದರು. ಜೊತೆಗೆ ನಮ್ಮ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಿದ್ದೆವು. ಮಗು ಗಲಾಟೆ ಮಾಡುತ್ತಿದೆಯೆಂದು ನಾನು ಸಮಾಧಾನ ಮಾಡಲು ಹೋದರೆ ಪತ್ರೀಜಿ ನನಗೇ ಬುದ್ಧಿವಾದ ಹೇಳಿದರು "ಆ ಮಗು ಸರಿಯಾಗಿಯೇ ಇದೆ, ನಿನ್ನ ಬಗ್ಗೆ ನೋಡಿಕೋ" ಎಂದರು. ಸಾರ್ ಮೇಲೆ ತುಂಬಾ ಕೋಪ ಬಂತು. "ಮೊದಲನೆಯ ಬಾರಿಯೇ ಹೀಗೇಕೆ ಬೈದರು" ಎಂದುಕೊಂಡು, ಅವರ ಮೇಲಿನ ಸಿಟ್ಟಿನಿಂದ, ಧ್ಯಾನ ಮಾಡುವುದನ್ನು ಬಿಟ್ಟೆ. ಆದರೂ, ಆಕಿವೀಡು, ಭೀಮವರಂ, ಸುತ್ತಾಮುತ್ತಾ ಇರುವ ಊರುಗಳಲ್ಲಿ ನಡೆಯುವ ಕ್ಲಾಸುಗಳಿಗೆ ನಮ್ಮ ಮಗುವನ್ನು ಕರೆದುಕೊಂಡು ಹೋಗಿ ಹಿಂದೆ ಕುಳಿತುಕೊಳ್ಳುತ್ತಿದ್ದೆ. ಆದರೆ, ಪತ್ರೀಜಿಯವರನ್ನು ಭೇಟಿ ಆಗುತ್ತಿರಲಿಲ್ಲ.

 

ಒಮ್ಮೆ ಆಕಿವೀಡುನಲ್ಲಿ "ಶ್ರೀ ಸತ್ಯಸಾಯಿ ಆಧ್ಯಾತ್ಮಿಕ ಸೇವಾ ಕೇಂದ್ರ"ದ ಮೇಲೆ ನಿರ್ಮಿಸಲಾದ ಪಿರಮಿಡ್ ಪ್ರಾರಂಭೋತ್ಸವಕ್ಕೆ ಬ್ರಹ್ಮರ್ಷಿ ಪತ್ರೀಜಿ ಆಗಮಿಸಿದರು. ಆ ಕೇಂದ್ರದಲ್ಲಿ ನಾನು ಆಗಾಗ ಭಜನೆಯಲ್ಲಿ ಭಾಗವಹಿಸಿ ಧ್ಯಾನದಲ್ಲಿ ಲೀನವಾಗುತ್ತಿದ್ದೆ. ಹಾಗೆ ಕಣ್ಣು ಮುಚ್ಚಿದಾಗ ಶ್ರೀ ಸತ್ಯಸಾಯಿಬಾಬಾ ನಡೆದುಬರುತ್ತಾ ಕಾಣಿಸಿಕೊಳ್ಳುತ್ತಿದ್ದರು. ನಿರ್ಮಿಸಲಾದ ಮಂದಿರದ ಪಕ್ಕಕ್ಕೆ ಸೇವಾ ಕಾರ್ಯಕ್ರಮಗಳಿಗಾಗಿ ನೂತನ ಭವನ ನಿರ್ಮಾಣಗೊಳ್ಳುವುದಕ್ಕೂ ಮುಂಚೆ, ಬಾಬಾ ಪಕ್ಕದ ವರಂಡಾದಲ್ಲಿ ನಡೆದಾಡುತ್ತಾ ಈ ಭವನವನ್ನು ಸೃಷ್ಟಿಸುವುದನ್ನು ನಾನು ಧ್ಯಾನದಲ್ಲಿ ನೋಡಿದೆ. ತರುವಾಯ ಅದೇ ಸ್ಥಳದಲ್ಲಿ ಸುವಿಶಾಲವಾದ ಎರಡು ಮಹಡಿಗಳಿರುವ ಭವನವನ್ನು ನಿರ್ಮಿಸಲಾಯಿತು.

 

2004 ಮಾರ್ಚ್ ತಿಂಗಳಲ್ಲಿ ಯುಗಾದಿ ಹಬ್ಬದ ದಿನ ಆಕಿವೀಡುನಲ್ಲಿ ನಾಲ್ಕು ಪಿರಮಿಡ್‌ಗಳ ಪ್ರಾರಂಭೋತ್ಸವಕ್ಕೆ ಮತ್ತು ಧ್ಯಾನಯಜ್ಞವನ್ನು ನಡೆಸಲು ಪತ್ರೀಜಿ ಅನುಮತಿ ನೀಡಿದರು. ಆ ಧ್ಯಾನಯಜ್ಞಕ್ಕೆ ನಾನು, ಆಕಿವೀಡು ಮಾಸ್ಟರ್ ರಾಮಲಕ್ಷ್ಮೀಯವರು, ಭೀಮವರಂ ಮಾಸ್ಟರ‍್ಸ್ ಪದ್ಮ, ವಿಜಯಲಕ್ಷ್ಮೀ, ತಿರುಪತಿ ಮಾಸ್ಟರ್ ಸುಮತಿ ಮೇಡಮ್ ಎಲ್ಲರೂ ಸಹ ಪ್ರತಿಯೊಬ್ಬರ ಮನೆಗೆ ಹೋಗಿ ಕುಂಕುಮ ಕೊಟ್ಟು ಧ್ಯಾನ ಯಜ್ಞಕ್ಕೆ ಬನ್ನಿ ಎಂದು ಕರೆದವು. 2000 ಮಂದಿ ಜನ ಬಂದರು. ಅದು ನನಗೆ ತುಂಬಾ ಆನಂದವನ್ನು ತಂದಿತು.

 

2004 ಜುಲೈನಲ್ಲಿ ಬೆಂಗಳೂರು "ಪಿರಮಿಡ್ ಟ್ರಸ್ಟ್‌" ಸದಸ್ಯರ ಜೊತೆ ವಿಜಯವಾಡದಲ್ಲಿ ಮೀಟಿಂಗ್ ಏರ್ಪಾಟು ಮಾಡಿದರು. ಅಲ್ಲಿಗೆ ನಮ್ಮ ಯಜಮಾನರು ಹೋದಾಗ ಬೆಂಗಳೂರು ಪಿರಮಿಡ್ ಸುತ್ತಾಮುತ್ತಾ ಸ್ಥಳಗಳು ಮಾರಾಟಕ್ಕಿವೆಯೆಂದು ತಿಳಿಯುತ್ತಿದ್ದಂತೆ, ಆ ವಿಷಯ ಮನೆಗೆ ಬಂದು ನನಗೆ ಹೇಳಿದರು. ನಾನು "ತಪ್ಪದೇ ತೆಗೆದುಕೊಳ್ಳಿ, ನಾಲ್ಕು ವರ್ಷಗಳ ನಂತರ ನಾವು ಅಲ್ಲಿಗೆ ಹೋಗಿರೋಣ" ಎಂದೆ. ಏಕೆ ಹಾಗೆ ಮಾತನಾಡಿದೆನೂ ತಿಳಿಯದು. ಅಷ್ಟೇ ತಕ್ಷಣ ಅವರಿಗೆ "ನಾಲ್ಕು ವರ್ಷಗಳ ತರುವಾಯ ಹೋಗಿ ಏನು ಮಾಡುವುದು? ನಾನು ಒಬ್ಬ ಇಂಜಿನಿಯರ್ ಆಗಿ ಈಗಲೇ ಹೋಗಿ ಸರ್ವೀಸ್ ಮಾಡಿದರೆ ಚೆನ್ನಾಗಿರುತ್ತದೆ" ಎಂದು ಆಲೋಚನೆ ಬಂದ ಹತ್ತು ದಿನಗಳ ಒಳಗೆ ಬೆಂಗಳೂರು ಪಿರಮಿಡ್ ವ್ಯಾಲಿಗೆ ಹೋಗಿ ಎಲ್ಲಾ ನೋಡಿಕೊಂಡು ಬಂದರು.

 

ಆಗ ಯಾರ ಪರಿಚಯವಿರಲಿಲ್ಲ. ಆಗಿನ ಮ್ಯಾನೇಜಿಂಗ್ ಟ್ರಸ್ಟಿ, ಸೀನಿಯರ್ ಪಿರಮಿಡ್ ಮಾಸ್ಟರ್ ಶ್ರೀ ಪಾಲ್‌ವಿಜಯ್ ಕುಮಾರ್‌ರವರನ್ನು ಭೇಟಿಯಾಗಿ "ಸಾರ್" ನಾನು ಸಿವಿಲ್ ಇಂಜಿನಿಯರ್, ನಾನು ಇಲ್ಲಿ ಸರ್ವೀಸು ಮಾಡುತ್ತೇನೆ" ಎಂದರಂತೆ. ಅವರು "ಪತ್ರೀಜಿ ಅನುಮತಿ ತೆಗೆದುಕೊಂಡು ಖಂಡಿತಾ ಬನ್ನಿ" ಎಂದು ಹೇಳಿದರು. ತಕ್ಷಣ ಮನೆಗೆ ಬಂದು "ನಾನು ವ್ಯಾಲಿಗೆ ಸರ್ವೀಸು ಮಾಡಲು 6 ತಿಂಗಳು ರಜೆ ತೆಗೆದುಕೊಂಡು ಹೋಗುತ್ತಿದ್ದೇನೆ"ಎಂದರು.

 

ನನಗೆ ದೊಡ್ಡ ಷಾಕ್, ತಕ್ಷಣ "ನಾನೂ ಬರುತ್ತೇನೆ, ಆಕಿವೀಡುನಲ್ಲಿ ನನಗೇನು ಕೆಲಸ"ಎಂದೆ. "ಸರಿ, ನಿನ್ನಿಷ್ಟ "ಎಂದರು. ಆದರೆ, ಮನಸ್ಸಿನಲ್ಲಿ ಬಾಧೆ . ಅನಾವಶ್ಯಕವಾಗಿ ನಾನೇ ಈ ಪರಿಸ್ಥಿತಿಯನ್ನು ತಂದುಕೊಂಡೆ. ಒಳ್ಳೆಯ ಉದ್ಯೋಗವನ್ನು ಬಿಟ್ಟು ಹೋಗುತ್ತಿದ್ದಾರೆ. ಇಲ್ಲಿ ಕೂಡಾ ಪಿರಮಿಡ್‌ಗಳನ್ನು ಕಟ್ಟಿಸಿ ಸರ್ವೀಸು ಮಾಡುತ್ತಿದ್ದಾರಲ್ಲವೇ, ಅಷ್ಟು ದೂರ ಹೋಗುವ ಅವಶ್ಯಕವಿದೆಯಾ. ಎಂದು ಸ್ವಲ್ಪ ನೋವು ಆಯಿತು. ತರುವಾಯ ಇವರು ಸೆಪ್ಟೆಂಬರ್‌ನಲ್ಲಿ ಪತ್ರೀಜಿಯವರನ್ನು ಭೇಟಿಯಾಗಿ "ನಾನು ಬೆಂಗಳೂರು ಪಿರಮಿಡ್ ವ್ಯಾಲಿಗೆ ಹೋಗಿ ಬಂದೆ. ವ್ಯಾಲಿಗೆ ಇಂಜಿನಿಯರ್ ಸೇವೆ ಅವಶ್ಯಕತೆ ಇದೆಯಲ್ಲವೇ. ನಾನು ಹೋಗಿ ಅಲ್ಲಿ ಸರ್ವೀಸು ಮಾಡುತ್ತೇನೆ, ನನ್ನ ಹೆಂಡತಿ ಸಹ ಬರುತ್ತೇನೆಂದು ಹೇಳುತ್ತಿದ್ದಾಳೆ. ಆದರೆ, ನೊಂದುಕೊಳ್ಳುತ್ತಿದ್ದಾಳೆ" ಎಂದು ಹೇಳಿದರಂತೆ. ಸಾರ್ ತಕ್ಷಣ "ಆಕೆಯ ವಿಷಯ ನಾನು ನೋಡಿಕೊಳ್ಳುತ್ತೇನೆ; ನೀನು ಕರೆದುಕೊಂಡುಹೋಗು" ಎಂದರು. ತಕ್ಷಣ ಆಫೀಸಿಗೆ 6 ತಿಂಗಳು ರಜೆ ಹಾಕಿ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಕುಟುಂಬವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು. ಬೆಂಗಳೂರಿನಲ್ಲಿ ಅಲ್ಪ ಸ್ವಲ್ಪ ಧ್ಯಾನ ಮಾಡುತ್ತಿದ್ದೆ. ಆದರೆ, ಅನೇಕ ಬಾರಿ "ಅನಾವಶ್ಯಕವಾಗಿ ಬಂದಿದ್ದೇವೆ" ಎಂದು ನೊಂದುಕೊಳ್ಳುತ್ತಿದ್ದೆ.

 

2005 ಜನವರಿನಲ್ಲಿ ಪತ್ರೀಜಿ ಪಿರಮಿಡ್ ವ್ಯಾಲಿಗೆ ಟ್ರೆಕ್ಕಿಂಗ್ ನಿಗದಿಪಡಿಸಿದರು. ಸುಮಾರು 300 ಜನ ಬಂದಿದ್ದರು. ನಾನು ದೂರದಲ್ಲಿ ನಿಂತಿದ್ದೆ. ಸಾರ್ ಮೊದಲು ನನ್ನ ಹತ್ತಿರ ಬಂದು "ಈಗ ಈಕೆ ತುಂಬಾ ತುಂಬಾ ಸಂತೋಷವಾಗಿದ್ದಾಳೆ" ಎಂದು ಎಲ್ಲರಿಂದ ಚಪ್ಪಾಳೆ ಹೊಡೆಸಿದರು. ಪತ್ರೀಜಿ ನನ್ನ ಕಡೆ ಹಾಗೇ ನೋಡುತ್ತಲೇ ಇದ್ದರು. ಅಷ್ಟೇ ಆ ಕ್ಷಣದಿಂದ ನನ್ನಲ್ಲಿರುವ ದುಃಖ, ಅಹಂಕಾರ, ಗರ್ವ ಎಲ್ಲಾ ಮಂಗಮಾಯವಾಯಿತು. ಈ ಘಟನೆಯಿಂದ ಪತ್ರೀಜಿ ಎಂದರೆ ಏನು ಎಂಬುದು ತಿಳಿದು ಬಂತು. "ನಾನು ನೋಡಿಕೊಳ್ಳುತ್ತೇನೆ, ನೀನು ಹೋಗು" ಎಂದು ನಮ್ಮವರಿಗೆ ಹೇಳಿದ ಮಾತಿಗೆ ಅರ್ಥ ಆಗ ತಿಳಿಯಿತು.

 

ಆಗಿನಿಂದ ನನ್ನ ಜೀವನ ತುಂಬಾ ಆನಂದವಾಗಿ ಕಳೆಯುತ್ತಿದೆ. 2005 ಜೂನ್‌ನಲ್ಲಿ ನಮ್ಮ ಯಜಮಾನರು ಹಾಕಿದ್ದ 6 ತಿಂಗಳ ರಜೆ ಮುಗಿಯುತು. ಪುನಃ ರಜೆಯನ್ನು ಮುಂದುವರಿಸಲು ಊರಿಗೆ ಹೋದರು. ಅದು ಸಾಧ್ಯವಾಗದೇ ಕೆಲಸಕ್ಕೆ ಮರಳಿ ಹಾಜರಾದರು. ಆಫೀಸಿನವರು ಇವರಿಗೆ ಕಾಕಿನಾಡದಲ್ಲಿ ಪೋಸ್ಟಿಂಗ್ ಕೊಟ್ಟರು. ಫೆಬ್ರವರಿ ತಿಂಗಳಲ್ಲೇ ನನಗೆ ತುಂಬಾ ಧೈರ್ಯ ಬಂತು. ಜೀವನದ ಕುರಿತು ಹೆದರಿಕೆ ಹೋಯಿತು. ಆಗ ನಾನು "ಉದ್ಯೋಗವನ್ನು ಬಿಟ್ಟುಬಿಡಿ, ನಮಗೆ ಬೇಕಾಗಿಲ್ಲ, ನನಗೆ ತುಂಬಾ ಧೈರ್ಯ ಬಂದಿದೆ" ಎಂದು ಹೇಳಿದೆನು. ನನ್ನ ಮಾತು ಹೇಗೆ ನಂಬುತ್ತಾರೆ? ಹಿಂದೆ ಒಂದು ಬಾರಿ ಉದ್ಯೋಗಕ್ಕೆ ರಜಾ ಹಾಕಿದಾಗ ತುಂಬಾ ಗಲಾಟೆ ಮಾಡಿದ್ದೆನಲ್ಲವೇ. 2005 ಆಗಸ್ಟ್‌ನಲ್ಲಿ ನಮ್ಮ ಯಜಮಾನರು ಜಾಬ್‌ನಲ್ಲಿದ್ದಾಗ ಧ್ಯಾನದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಾಣಿಸಿಕೊಂಡು ನನ್ನ ಜೀವನ ಹೇಗೆ ಇರುತ್ತದೆಯೋ ನನಗೆ ತೋರಿಸಿದರು. ಆಗ ನನಗೆ ತುಂಬಾ ನಂಬಿಕೆ ಬಂದು ನಮ್ಮ ಯಜಮಾನರಿಗೆ ಫೋನ್ ಮಾಡಿ "ನಮಗೇನು ಪರವಾಗಿಲ್ಲ ,ಉದ್ಯೋಗ ಬಿಟ್ಟುಬಿಡಿ, ನನ್ನ ಕಡೆಯಿಂದ ನಿಮಗೇನು ಮಾತು ಬರುವುದಿಲ್ಲ, ನನಗೆ ಸಂದೇಶ ಬಂದಿದೆ" ಎಂದು ಹೇಳಿದೆನು.

 

ಅಕ್ಟೋಬರ್‌ನಲ್ಲಿ ಅವರು ರಾಜೀನಾಮೆ ಕೊಟ್ಟು ಬಂದರು. ಅಕ್ಟೋಬರ್‌ನಲ್ಲಿ ಪತ್ರೀಜಿ ಅವರನ್ನು ಬೆಂಗಳೂರು ಜೆ.ಪಿ.ನಗರದಲ್ಲಿರುವ ಶ್ರೀದೇವಿ ಮೇಡಮ್ ಮನೆಯಲ್ಲಿ ಭೇಟಿಯಾಗಿ ತಕ್ಷಣ ಸಾರ್‌ಗೆ ಈ ವಿಷಯ ಹೇಳಿದೆ. "ಮಾಡಬೇಕಾದ್ದು ಅದೇ. ಬರಲು ಹೇಳು. ಪಿರಮಿಡ್‌ನಲ್ಲಿ ಸರ್ವೀಸು ಮಾಡಲು ಹೇಳು" ಎಂದು ಹೇಳಿದರು. ಇನ್ನು ನನ್ನ ಆನಂದಕ್ಕೆ ಪಾರವೇ ಇಲ್ಲ , ನಮ್ಮ ಯಜಮಾನರಿಗೆ ಫೋನ್ ಮಾಡಿ ಹೇಳಿದೆ. 2005 ಡಿಸೆಂಬರ್ 31ನೇ ದಿನಾಂಕ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು. ನನಗೆ ಆಗಿನಿಂದ ಈಗಿನವರೆಗೂ ಉದ್ಯೋಗ ತ್ಯಜಿಸಿದ್ದಾರೆಂಬ ನೋವು ಇಲ್ಲ. ನಿಜ ಹೇಳಬೇಕೆಂದರೆ, ಹಿಂದೆಗಿಂತ ಈಗಲೇ ಪ್ರಶಾಂತವಾಗಿ, ಆನಂದವಾಗಿದ್ದೇವೆ.ಪತ್ರೀಜಿಯವರ ಪ್ರೋತ್ಸಾಹ ಮತ್ತು ಧ್ಯಾನದಿಂದ ಮಾತ್ರವೇ ನಾನು ಈ ಸ್ಥಿತಿಯಲ್ಲಿ ಇರಲಾಗುತ್ತಿದೆ. ನನನ್ನು ಪತ್ರೀಜಿ ಹಾಗೆ ತಯಾರು ಮಾಡಿದರು.

 

2006 ಅಕ್ಟೋಬರ್‌ನಲ್ಲಿ ನನಗೆ ರಸ್ತೆಯಲ್ಲಿ ಆಟೋ ಅಪಘಾತವಾಗಿ 6 ತಿಂಗಳು ಕಾಲು ನೋವಿನಿಂದ ತುಂಬಾ ಕಷ್ಟವನ್ನು ಅನುಭವಿಸಿದೆ. ಕೊನೆಗೆ ವೈದ್ಯರು "ಏಟಿನಿಂದ ಗಾಯವಾಗಿರುವ ಕಡೆ ಕಾನ್ಸರ್ ಆಗಿರಬಹುದು" ಎಂದು ಹೇಳಿದರು. ಆಗಿನಿಂದ ಡಾಕ್ಟರ್ ಹತ್ತಿರ ಹೋಗುವುದನ್ನು ನಿಲ್ಲಿಸಿದ್ದೇನೆ. ಕೆಲವು ದಿನಗಳಲ್ಲಿ Dr. ಹರಿಕುಮಾರ್ ಅವರ "ಪಾಸ್ಟ್ ಲೆಫ್ ರಿಗ್ರೆಷನ್‌" ನಲ್ಲಿ ಭಾಗವಹಿಸುವ ಭಾಗ್ಯ ನನಗೆ ಸಿಕ್ಕಿದೆ. ಹಿಂದೆ ಹಿಮಾಲಯಗಳಲ್ಲಿ ಒಬ್ಬ ಯೋಗಿಯಾಗಿ (ಪುರುಷನಾಗಿ) ನನ್ನ ಜನ್ಮವನ್ನು ನೋಡಿಕೊಂಡೆ. ಅಲ್ಲಿ ನನ್ನ ಸುತ್ತಾಮುತ್ತಾ ಅನೇಕ ಜನ ಮಾಸ್ಟರ‍್ಸ್ ಇದ್ದರು. ಪತ್ರೀಜಿ ಮಾತ್ರ ಕಾಣಿಸುತ್ತಿದ್ದರು. ಉಳಿದ ಮಾಸ್ಟರ‍್ಸ್ ಸ್ಪಷ್ಟವಾಗಿ ಕಾಣಿಸಲಿಲ್ಲ. ಇದು ನನ್ನ ಅನುಭವ . ಆ ಕ್ಲಾಸು ಮಾಡುತ್ತಿರುವಾಗ ಗಾಯವಾದ ಕಾಲಿನ ನೋವು ಇನ್ನೂ ಹೆಚ್ಚಾಯಿತು. ಕರ್ಮ ತೀರುತ್ತದೆ ಎಂದು ತಿಳಿದು ಆ ನೋವನ್ನು ಅನುಭವಿಸಿದೆ. ಆ ವಿಷಯದಲ್ಲಿ Dr. ಹರಿಕುಮಾರ್ ಅವರ ಕ್ಲಾಸ್ ನನಗೆ ಚೆನ್ನಾಗಿ ಉಪಯೋಗವಾಯಿತು. ಇನ್ನು ಈ ದಿನದವರೆಗೂ ನನಗೆ ಕಾಲುನೋವಿಲ್ಲ.

 

ಒಂದು ಬಾರಿ ಬೆಂಗಳೂರಿಗೆ 50 Km ದೂರದಲ್ಲಿ ಒಂದು ಬೆಟ್ಟದ ಮೇಲೆ "ಚಂದ್ರ ಚೂಡೇಶ್ವರ" ದೇವಸ್ಥಾನಕ್ಕೆ ನಮ್ಮ ನೆಂಟರ ಜೊತೆ ಹೋದೆವು. ಅವರೆಲ್ಲರೂ ಲೈನ್‌ನಲ್ಲಿ ದರ್ಶನಕ್ಕೆ ನಿಂತುಕೊಂಡರು. ನಾವು ಮಾತ್ರ "ನೀವು ದರ್ಶನಕ್ಕೆ ಹೋಗಿ ಬನ್ನಿ ; ನಾವು ಧ್ಯಾನ ಮಾಡುತ್ತೇವೆ" ಎಂದು ಹೇಳಿ ಧ್ಯಾನದಲ್ಲಿ ಕುಳಿತುಕೊಂಡೆವು. ಆ ಗುಡಿಯ ಅಮ್ಮ ಪ್ರತ್ಯಕ್ಷವಾಗಿ ನನ್ನೆದುರಿಗೆ ಕುಳಿತುಕೊಂಡು "ಆ ಗಂಟೆಗಳ ಶಬ್ದ ಕೇಳಲಾಗುತ್ತಿಲ್ಲ; ನೀನು ಧ್ಯಾನ ಮಾಡುತ್ತಿದ್ದೀಯಾ; ನನಗೆ ನೀನು ಮಾಡುವ ಧ್ಯಾನ ಇಷ್ಟವಾಗಿ ನಿನ್ನ ಹತ್ತಿರ ಬಂದಿದ್ದೇನೆ; ಇಲ್ಲಿ ಪ್ರಶಾಂತವಾಗಿದೆ; ನೀನು ಹೋಗಬೇಕೆಂದುಕೊಂಡ ಕಡೆಗೆ ಹೋಗು, ಇಂತಹ ಕಡೆ ನಿನಗೆ ಪ್ರಶಾಂತತೆ ಸಿಗುವುದಿಲ್ಲ" ಎಂದು ಹೇಳಿದಳು. ನನ್ನ ಜೀವನದಲ್ಲಿ ಅಷ್ಟು ಹತ್ತಿರದಿಂದ ಪ್ರತ್ಯಕ್ಷವಾಗಿ ದೇವತೆಯನ್ನು ನೋಡಿರುವುದು ಅದೇ ಪ್ರಥಮ ಬಾರಿ.

 

ನಾವು ಬೆಂಗಳೂರು ಬಂದನಂತರ ಎರಡು ವರ್ಷಗಳವರೆಗೂ ನಮ್ಮ ಯಜಮಾನರು ಉಳಿತಾಯದ ಹಣವನ್ನೆಲ್ಲಾ ಕುಟುಂಬ ಪೋಷಣೆಗಾಗಿ ಖರ್ಚು ಮಾಡುತ್ತಿದ್ದರು. "ರಾಜೀನಾಮೆ ನೀಡಿದ ನಂತರ ಬಂದ ಹಣವಾದರೂ ಕನಿಷ್ಠಪಕ್ಷ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಹಾಕುತ್ತೀರಾ?" ಎಂದು ಕೇಳುತ್ತಲೇ ಇದ್ದೆ. ಅದಕ್ಕೆ ಅವರು ಒಪ್ಪಿಗೆ ಸಹ ಕೊಟ್ಟರು.

 

2008 ಡಿಸೆಂಬರ್‌ನಲ್ಲಿ... ಸರ್ಕಾರ ನೀಡಬೇಕಾದ ಪ್ರಾವಿಡೆಂಟ್ ಫಂಡ್ ಹಣ ಬಂದಿತ್ತು. ಆದರೆ, G.C.S.Sಗಾಗಿ ಮಾಡಿರುವ ಕೆಲಸಗಳಿಗೆ ಪೆಂಡಿಂಗ್ ಬಿಲ್ಸ್ ಇವೆ. "ಮತ್ತೇ ಈ ಹಣವನ್ನು ಬಚ್ಚಿಟ್ಟುಕೊಳ್ಳುತ್ತೀಯೋ? ಇಲ್ಲಾ... ಟ್ರಸ್ಟ್‌ಗೆ ಕೊಡುತ್ತೀಯೋ?"ಎಂದು ನಮ್ಮ ಯಜಮಾನರು ಕೇಳಿದರು. ನಾವು ಮತ್ತು ನಮ್ಮ ಮಕ್ಕಳು "ಸರಿ" ಎಂದೆವು. ಭವಿಷ್ಯತ್ತಿಗಾಗಿ ಹಣ ಆದಾಯ ಮಾಡಿಟ್ಟುಕೊಳ್ಳದೇ, ವರ್ತಮಾನದಲ್ಲಿ ಆನಂದವಾಗಿ ಜೀವಿಸಲಾಗುವ ಧೈರ್ಯವನ್ನು ಈ ಧ್ಯಾನದಿಂದ ಕಲಿತುಕೊಂಡಿದ್ದೇನೆ.

 

2009 ಮೇ ನಲ್ಲಿ ನಾವು ಪಿರಮಿಡ್ ವ್ಯಾಲಿಗೆ ಶಿಫ್ಟ್ ಆದೆವು. ನಮ್ಮಿಬ್ಬರ ಮಕ್ಕಳನ್ನು ಹಾಸ್ಟಲ್‌ನಲ್ಲಿ ಬಿಟ್ಟಿದ್ದಕ್ಕೆ ನೊಂದುಕೊಳ್ಳುತ್ತಿದ್ದೆ. ಆಗ ಪತ್ರೀಜಿ "ಒಂದು ಬೇಕಾದರೆ ಇನ್ನೊಂದು ಬಿಡಲೇಬೇಕಾಗುತ್ತೆ ಮೇಡಮ್ " ಎಂದು ಹೇಳಿದರು. ನನಗೆ ಒಳ್ಳೆಯ ಸಂದೇಶವನ್ನು ನೀಡಿದರೆಂದು ಆನಂದವನ್ನು ಹೊಂದಿದ್ದೆ.

 

ಒಂದು ದಿನ ಪಿರಮಿಡ್‌ನಲ್ಲಿ ಧ್ಯಾನ ಮಾಡುತ್ತಿರುವಾಗ ನನ್ನ ಸೂಕ್ಷ್ಮಶರೀರ ಬಿಡುಗಡೆಯಾಗಿ, ಶ್ರೀ ಸದಾನಂದ ಯೋಗಿ ಕಾಣಿಸಿಕೊಂಡು..."ನಿನಗೆ ವ್ಯಾಲಿನಲ್ಲಿ ಕಾಣಿಸುವುದು 'ಹಾವುಗಳು’ ಎಂದು ಹೆದರುತ್ತಿದ್ದೆಯಲ್ಲವೇ... ಅವು ಮಾಸ್ಟರ‍್ಸ್ ! ಹಿಮಾಲಯದ ಯೋಗಿಗಳು ಅಲ್ಲಿ ಇರಲಾರದೆ ಇಲ್ಲಿಗೆ ಬಂದಿದ್ದಾರೆ" ಎಂದು ಹೇಳಿದರು. ಕೆಲವು ದಿನಗಳ ನಂತರ ನಮ್ಮ ಮನೆಯೊಳಗೆ ಒಂದು ಹಾವು ಬಂದು ಮಂಚದ ಮೇಲೆ ಮಲಗಿಕೊಂಡಿದೆ. ಅದಕ್ಕೆ ಏನೂ ಮಾಡದೆ ನಮ್ಮ ಯಜಮಾನರು ಅದನ್ನು ಹೊರಗೆ ಕಳುಹಿಸಿದರು. ನನಗೆ ಸಮಾಧಾನವಾಯಿತೆಂದು ಅವರಿಗೂ ತುಂಬಾ ಆನಂದವಾಯಿತು. ಆಗಿನಿಂದ ಪಿರಮಿಡ್ ವ್ಯಾಲಿಯಲ್ಲಿ ಕೆಲಸ ಮಾಡುವವರಿಗೆಲ್ಲರಿಗೂ ಹಾವುಗಳು ಕಾಣಿಸಿಕೊಂಡರೆ "ಹೆದರಬೇಡಿ, ಸಾಯಿಸಬೇಡಿ" ಎಂದು ಹೇಳುತ್ತೇನೆ. ಆ ತರುವಾಯ, ಬುದ್ಧ ಪೂರ್ಣಿಮೆಯಲ್ಲಿ ಪತ್ರೀಜಿಯವರು "ಶಂಬಲಾ ಹಿಮಾಲಯದಿಂದ ಪಿರಮಿಡ್ ವ್ಯಾಲಿಗೆ ಶಿಫ್ಟ್ ಆಗಿದೆ" ಎಂದು ಹೇಳಿದರು".

 

2010 ಜನವರಿನಲ್ಲಿ ನಮ್ಮ ಯಜಮಾನರಿಗೆ ತುಂಬಾ ಜ್ವರ ಬಂದಿತ್ತು. ಕಡಿಮೆ ಆಗುತ್ತಿದ್ದ ಹಾಗೆಯೆ ಪುನಃ ಬರುತ್ತಿತ್ತು. ಒಂದು ದಿನ ರಾತ್ರಿ ಜ್ವರದ ತಾಪ ತೀವ್ರಗೊಂಡು...ಏನು ಮಾಡಬೇಕೊ ಅರ್ಥವಾಗಲಿಲ್ಲ. ಒದ್ದೆ ಬಟ್ಟೆ ತಲೆಯಮೇಲೆ ಹಾಕಿ ಜ್ವರದತಾಪವನ್ನು ತೆಗೆಯುತ್ತಿದ್ದೆ . ನಮ್ಮವರು ಸಾರ್ ಸಿ.ಡಿ ಹಾಕು ಎಂದರು. ಅದನ್ನು ಕೇಳುತ್ತಾ ಧ್ಯಾನ ಮಾಡುತ್ತಿದ್ದಾಗ, ಸ್ವಲ್ಪ ಹೊತ್ತಿನಲ್ಲಿಯೆ ಶ್ರೀ ಸದಾನಂದ ಯೋಗಿ ಅವರು ಕಾಣಿಸಿಕೊಂಡು "ಕರ್ಮತೀರಬೇಕು, ಕರ್ಮ ಅನುಭವಿಸಬೇಕು" ಎಂದು ಹೇಳುತ್ತಿದ್ದಾರೆ. ಅಷ್ಟರಲ್ಲೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಂದು "ನನ್ನ ಭಕ್ತಳು ಬಾಧೆಪಡುತ್ತಿದ್ದಾಳೆ" ಎಂದು ಹೇಳುತ್ತಿದ್ದರು. ಸದಾನಂದ ಸ್ವಾಮೀಜಿ "ನನಗಿಲ್ಲವೇ" ಎನ್ನುತ್ತಿದ್ದಾರೆ. ಇವರಿಬ್ಬರ ಸಂಭಾಷಣೆ ನನಗೆ ಸ್ಪಷ್ಟವಾಗಿ ಕೇಳಿಸಿ ತುಂಬಾ ಆನಂದವಾಯಿತು.

 

2009 G.C.S.S ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರ್ತಿಯಾದ ನಂತರ ಮಕ್ಕಳನ್ನು ಕರೆದುಕೊಂಡು ನಾವು ಊಟಿಗೆ ಹೋದೆವು. ಹಿಂದಿರುಗಿ ಬರುವಾಗ ಏರಿಳಿತಗಳ ರಸ್ತೆಯನ್ನು ಪೂರ್ತಿಯಾಗಿ ಇಳಿದು ಬಂದ ನಂತರ...ರಸ್ತೆಯ ಪಕ್ಕದಲ್ಲಿ ಆನೆಗಳನ್ನು ನೋಡಿ ಕಾರು ನಿಲ್ಲಿಸಿದೆವು. ಡ್ರೈವರ್ ಕಾರು ಇಳಿದು ಬ್ರೇಕ್ ಆಯಿಲ್‌ಎಲ್ಲಾ ಸುರಿದು ಹೋಗುವುದನ್ನು ಗಮನಿಸಿದನು. ಕಾರು ರಿಪೇರಿ ಮಾಡಿಸಿಕೊಂಡು ಹಿಂದಕ್ಕೆ ಬರುತ್ತಾ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮದ ಹತ್ತಿರ ನಿಲ್ಲಿಸಿದೆವು. ಆಶ್ರಮದಲ್ಲಿ ನಿರ್ಮಿಸಲಾದ ಪಿರಮಿಡ್ ನೋಡಿ ನಮ್ಮಲ್ಲಿ ನಾವೇ ಮಾತನಾಡಿಕೊಳ್ಳುತ್ತಿರುವಾಗ ಒಬ್ಬ ಸ್ವಾಮೀಜಿ ಬಂದು "ಬಾಗಿಲು ತೆಗೆಯಲೇ?" ಎಂದು ಕೇಳಿದರು. ನಾವು 'ಸರಿ' ಎಂದೆವು. ಒಳಗೆ ಒಂದು ಯೋಗ ಹಾಲ್, ಪಿರಮಿಡ್ ಆಕಾರದಲ್ಲಿ ಧ್ಯಾನ ಮಂದಿರ ಇದೆ. ಧ್ಯಾನ ಮಂದಿರದ ಹೊರಗೆ "ವಿದೇಶಿಯರಿಗೆ ಮಾತ್ರವೇ" ಎಂದು ಬೋರ್ಡು ಇದೆ...ಆದರೆ ಸ್ವಾಮೀಜಿ ಪಿರಮಿಡ್ ಬಾಗಿಲು ತೆಗೆದು ನಮ್ಮನ್ನು ಒಳಗೆ ಕಳುಹಿಸಿದರು. ನಾವು ಧ್ಯಾನಕ್ಕೆ ಕುಳಿತೆವು. ತಕ್ಷಣ ನನಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಅವರು ಕಾಣಿಸಿಕೊಂಡು ನಿಮಗೆ ದೊಡ್ಡ ಪ್ರಮಾದ ನಡೆಯುವುದಿತ್ತು. ನಿಮ್ಮಿಂದ, ನಿಮ್ಮ ಚಿಕ್ಕ ಮಕ್ಕಳಿಂದ ನನಗೆ ಕೆಲಸವಿದೆ. ಅದಕ್ಕೆ ನಾನು ಆ ಪ್ರಮಾದವನ್ನು ತಪ್ಪಿಸಿದ್ದೇನೆ ಎಂದು ಹೇಳಿದರು.

 

ಹಣ, ಖ್ಯಾತಿ, ಅಲ್ಲದೆ, ಆಳುಕಾಳುಗಳು ಜೊತೆಗೆ ಇದ್ದಾಗಲೂ ಕೂಡಾ ದೊರೆಯದ ಆನಂದವು ಧ್ಯಾನದಿಂದ ದೊರೆಯುತ್ತದೆ. ಅವು ಯಾವುವೂ ಇಲ್ಲದೇ ಹೋದರೂ ಕೂಡ ನನಗೆ ಅನುಕ್ಷಣ ಎಲ್ಲವೂ ಸಹ ಇರುವ ಹಾಗೆ ಮಾಡಿತು, ಈ ನನ್ನ ಧ್ಯಾನ ಜೀವನ , ಧ್ಯಾನಕ್ಕಿಂತಾ ಮುಂಚೆ 11 ವರ್ಷಗಳವರೆಗೂ ನಾನು ತುಂಬಾ ನೋವು ಅನುಭಿಸಿದೆ. ನನಗೆ 'ಯೂರಿನರಿ ಟ್ರಾಕ್ಟ್ ಇನ್‌ಫೆಕ್ಷನ್’ ಇತ್ತು. ಧ್ಯಾನ ಪ್ರಾರಂಭಿಸಿದ ನಂತರ ಅದು ಅಡ್ರಸ್ ಇಲ್ಲದಂತೆ ಹೊರಟು ಹೋಯಿತು. ಪಿರಮಿಡ್ ವ್ಯಾಲಿಯಲ್ಲಿ ಇರುವುದೆಂದರೆ ನಮ್ಮ ಪೂರ್ವಜನ್ಮದ ಪುಣ್ಯ . ಇಂತಹ ಶಕ್ತಿಯುತವಾದ ಮೈತ್ರೇಯ ಬುದ್ಧ ವಿಶ್ವಾಲಯದ, ಶಕ್ತಿಯನ್ನು ನಿರಂತರ ಪಡೆಯಲು, ಪಿರಮಿಡ್ ವ್ಯಾಲಿಯಲ್ಲಿ ಪ್ರತಿನಿತ್ಯ ಇರಲು ಅವಕಾಶವನ್ನು ನೀಡಿರುವ ಬ್ರಹ್ಮರ್ಷಿ ಪತ್ರೀಜಿಯವರಿಗೆ ನನ್ನ ಆತ್ಮ ಪ್ರಣಾಮಗಳು.

 

 

ಲಕ್ಷ್ಮೀ ಸುಚಿತ್ರ
ಪಿರಮಿಡ್ ವ್ಯಾಲಿ
ಬೆಂಗಳೂರು

Go to top