" ಅದ್ಭುತ ಪ್ರದೇಶ - ಪಿರಮಿಡ್ ವ್ಯಾಲಿ "

 

ನನ್ನ ಹೆಸರು ಲಲಿತ ಬಸವರಾಜ್, ದಾವಣಗೆರೆಯಲ್ಲಿ ನೆಲೆಸಿದ್ದೇನೆ. ಸುಮಾರು 2 ವರ್ಷಗಳಿಂದ ಧ್ಯಾನಾಭ್ಯಾಸದಲ್ಲಿ ತೊಡಗಿರುತ್ತೇನೆ. ಬೆಂಗಳೂರು ಪಿರಮಿಡ್ ವ್ಯಾಲಿಯಲ್ಲಿ ಪಾಲ್ಗೊಂಡಿದ್ದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ.

 

ಇನ್ನು ಪಿರಮಿಡ್‌ನಲ್ಲಿ ಧ್ಯಾನ ಮಾಡಲು ಹೊರಟಾಗ, ಅದರ ವಾತಾವರಣಕ್ಕೆ ಹೋಗುತ್ತಲೇ ಅಲ್ಲಿ ನಿಶಬ್ದ, ಆಲೋಚನಾರಹಿತ ಸ್ಥಿತಿ ಧ್ಯಾನದ ಸ್ಥಿತಿಯನ್ನು ಧ್ಯಾನಕ್ಕೆ ಮುಂಚಿತವಾಗಿಯೇ ಅನುಭವಿಸಿದೆ. ಪಿರಮಿಡ್‌ನಲ್ಲಿ ಧ್ಯಾನ ಮಾಡುವಾಗ ನನ್ನ ದೇಹದಲ್ಲಿಯ ಸಕ್ಕರೆಯ ಖಾಯಿಲೆ, ಕಾಲುನೋವು ಹೋದವು. ಕಾರ್ಯ ಪರಿಪೂರ್ಣವಾಯಿತೆಂದು ತಿಳಿದುಕೊಂಡೆ. ಧ್ಯಾನದ ನಂತರದ, ನನ್ನ ಆನಂದದ ಅನುಭವ ಹೇಳಲು ಪದಗಳೇ ಸಾಲದು. ಪಕ್ಷಿಗೆ ಆಕಾಶದಲ್ಲಿ ಹಾರಲು ರೆಕ್ಕೆಗಳ ಸಹಾಯಬೇಕು ರೆಕ್ಕೆಗಳ ಸಹಾಯವಿಲ್ಲದ ನಾನು ಆನಂದವಾಗಿ ಹಾರುತ್ತಿದ್ದೆ. ಬ್ರಹ್ಮರ್ಷಿ ಪತ್ರೀಜಿಯವರಿಗೆ ಕೋಟಿ ಕೋಟಿ ಜನ್ಮ ಜನ್ಮದ ವಂದನೆಗಳು. ದಾವಣಗೆರೆಯಲ್ಲಿಯ ಪ್ರತಿಯೊಬ್ಬರೂ ಪಿರಮಿಡ್ ವ್ಯಾಲಿಗೆ ಹೋಗಬೇಕೆಂದು ಸ್ವಾನುಭವದಿಂದ ಹೇಳುತ್ತಿದ್ದೇನೆ. ನನಗೆ ಬೆಂಗಳೂರು ಪಿರಮಿಡ್ ವ್ಯಾಲಿಗೆ ಹೋಗಲು ಸಹಕರಿಸಿದ ನನ್ನ ಪತಿ ಬಸವರಾಜ್ ರವರಿಗೆ ನನ್ನ ಕೃತಜ್ಞತೆಗಳು.

 

 

ಲಲಿತ ಬಸವರಾಜ್
ದಾವಣಗೆರೆ

Go to top