" ಎಲ್ಲವೂ ಧ್ಯಾನದಿಂದಲೇ ಸಾಧ್ಯ "

 

ಮೇ 23ರಂದು ತಿರುಪತಿಯಲ್ಲಿ ಪತ್ರೀಜಿಯವರ ಕ್ಲಾಸಿಗೆ ನಾನು ಹೋಗಿದ್ದೆ. ಪತ್ರೀಜಿ ಕ್ಲಾಸ್ ಮುಗಿದ ನಂತರ ನಾನು ವೇಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋದೆ, ಅಲ್ಲಿಗೆ ಹೋಗುವ ಮೊದಲು ಪ್ರಶ್ನೆಯನ್ನು ಹಾಕಿಕೊಂಡೆ "ನಾನು ನಿನ್ನ ವಿಗ್ರಹವನ್ನು ನೋಡಲಿಕ್ಕೆ ಬಂದಿಲ್ಲಾ, ನಿನ್ನ ನಿಜರೂಪವನ್ನು ನೋಡುವುದಕ್ಕೆ ಬಂದಿದ್ದೇನೆ" ಎಂದು. ಒಳಗಡೆ ಹೋದೆ. ಅಲ್ಲಿ ಆ ವಿಗ್ರಹದ ದರ್ಶನವನ್ನು ಮಾಡಿಕೊಂಡು ಹೊರಗಡೆ ಬಂದು ಧ್ಯಾನಕ್ಕೆ ಕುಳಿತುಕೊಂಡೆ. 5 ನಿಮಿಷ ಧ್ಯಾನ ಮಾಡಿ ಬಸ್ಸಿನಲ್ಲಿ ಮನೆಗೆ ಬಂದು ನಮ್ಮ ಮನೆಯಲ್ಲಿ 3 ಗಂಟೆಗೆ ಮತ್ತೆ ಧ್ಯಾನಕ್ಕೆ ಕುಳಿತುಕೊಂಡೆ. ಆ ಧ್ಯಾನದಲ್ಲಿ ನನಗೆ ಆದಂತಹ ಅನುಭವ ಏನೆಂದರೆ ಕಲ್ಯಾಣಿ ತರಹ ಚೌಕಾಕಾರದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರೆ ಇಳಿಯುತ್ತಲೇ ಇದ್ದೀನಿ, ಆ ಮೆಟ್ಟಿಲು ಇರುವ ಕಲ್ಯಾಣಿ ಚಿಕ್ಕದಾಗುತ್ತಾ ಚಿಕ್ಕದಾಗುತ್ತಾ ಒಂದು ಕಿಂಡಿಯಷ್ಟು ಚಿಕ್ಕದಾಯಿತು, ಆ ಕಿಂಡಿಯಲ್ಲಿ ನಾನು ಎರಡು ಕಣ್ಣುಗಳಿಂದ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಎಲ್ಲಾ ಸುತ್ತಲೂ ನೋಡಿದೆ, ಸುತ್ತಲೂ ನೋಡುವಾಗ ಇದೇ ವೇಂಕಟೇಶ್ವರ ಸ್ವಾಮಿ ಎಂದು ನನಗೆ ಉತ್ತರ ಸಿಕ್ಕಿತು.  ಆಗ ನಾನು ಈ ಬೆಳಕು ವೆಂಕಟೇಶ್ವರ ಸ್ವಾಮಿಯೆ ಇರಬಹುದು. ಆದರೆ, ನಾನು ಸ್ವಾಮಿಯ ರೂಪವನ್ನು ನೋಡಬೇಕು ಎಂದು ಮತ್ತೆ ಪ್ರಶ್ನೆ ಹಾಕಿಕೊಂಡೆ. ಆಗ ಭಯಪಡಬಾರದು ಎಂದು ನನಗೆ ಉತ್ತರ ಸಿಕ್ಕಿತು. ನಾನು ಭಯಪಡುವುದಿಲ್ಲಾ ಎಂದು ಹೇಳಿದೆ ಆಗ ಆ ಕಿಂಡಿಯ ಒಳಗೆ ಹೋದೆ ಅಲ್ಲಿ ನಿಂತು ನೋಡುವುದಕ್ಕೆ ಅವಕಾಶ ಸಿಗಲಿಲ್ಲ. ಏಕೆಂದರೆ, ಆ ಕಿಂಡಿಯೊಳಗೆ ಹೋದ ತಕ್ಷಣವೇ ಬಾವಿ ತರಹ ಜಾರುಬಂಡೆ ತರಹ ಆ ಬೆಳಕು ಇದೆ. ಆ ಬೆಳಕು ನನಗೆ ನೀರಿನ ಸುಳಿಯಲ್ಲೂ ಬಿದ್ದಿತು. ಆ ಬೆಳಕು ಮಾಯವಾಯಿತು ನೀರಿನ ಸುಳಿ ಬಂತು. ನಂತರ ಆ ಸುಳಿ ಕೂಡ ಮಾಯವಾಯಿತು. ಅಲ್ಲಿ ಕಾಮಧೇನು ಬಂದಿತು, ಕಾಮಧೇನುವಿನ ಜೊತೆ ಹೋದೆ. ಕಾಮಧೇನು ಕೂಡ ಮಾಯವಾಯಿತು. ಅಲ್ಲಿ ವಜ್ರಗಳು, ಬಣ್ಣಬಣ್ಣದ ವಜ್ರಗಳು, ಅಲ್ಲಿ ಸರ್ಪಗಳು ಕೂಡ ಕಂಡವು. ನನ್ನ ಕಣ್ಣುಗಳು ಆ ವಜ್ರದ ಕೋರೈಸುವ ಕಾಂತಿಗೆ ನನ್ನ ಕಣ್ಣುಗಳು ಪೂರ್ತಿಯಾಗಿ ಅಲ್ಲಿಯ ದೃಶ್ಯವನ್ನು ನೋಡಲಿಕ್ಕೆ ಆಗಲಿಲ್ಲ. ಪೂರ್ಣವಾಗಿ ಕಣ್ಣುಬಿಟ್ಟು ನೋಡಿದಾಗ ಆ ವಜ್ರಗಳು, ಸರ್ಪಗಳು ಕೂಡ ಮಾಯವಾಗಿತ್ತು. ಅಲ್ಲಿ ಒಂದು ಗುಹೆಯಿತ್ತು, ಆ ಗುಹೆಯ ಒಳಗಡೆ ಜುಳು ಜುಳು ಎಂಬ ನೀರಿನ ಶಬ್ದ ಕೇಳಿಸಿತು ಹಾಗೆ ಮುಂದೆ ಹೋದೆ ಅಲ್ಲಿ ಎಲ್ಲಾ ಆಸ್ಟ್ರಲ್ ಮಾಸ್ಟರ‍್ಸ್ ಮತ್ತು ಪತ್ರೀಜಿಯವರು ಕೂಡ ಆ ಗುಹೆಯಲ್ಲಿ ಇದ್ದರು. ಅಲ್ಲಿ ಕೈ, ಬಾಯಿ, ಕಣ್ಣು ಯಾವುದು ಇಲ್ಲಾ. ಸುಮ್ಮನೆ ಮಾಸ್ಟರ‍್ಸ್ ಬಂದು ಹೋಗುತ್ತಿದ್ದಾರೆ. ನಾನು ಕೂಡ ಗುಹೆಯಲ್ಲಿ ಬೆಟ್ಟಗುಡ್ಡಗಳು, ಮರಗಳನ್ನು ನೋಡುತ್ತಾ ಮುಂದೆ ಹೋದೆ. ಅಲ್ಲಿ 35 ರಿಂದ 40 ವರ್ಷದವರ ಹಾಗೆ ಕಾಣುತ್ತಿದ್ದ ಒಬ್ಬರು ಧ್ಯಾನಕ್ಕೆ ಕುಳಿತುಕೊಂಡಿದ್ದರು. ಅವರು ಕೂಡಾ ಸುಖಾಸನದಲ್ಲಿ ಕುಳಿತುಕೊಂಡು ಆನಪಾನಸತಿ ಧ್ಯಾನವನ್ನೇ ಮಾಡುತ್ತಿದ್ದರು. ಆಗ ನನಗೆ ಮತ್ತೆ ಉತ್ತರ ಸಿಕ್ಕಿತು. ಇವರೇ ವೆಂಕಟೇಶ್ವರ ಸ್ವಾಮಿ ಎಂದು. ಅವರ ತಲೆಯಿಂದ ಪಾದದವರೆಗೆ ಕಾಂತಿಯು ತುಂಬಿತ್ತು, ಪೂರ್ಣಚಂದ್ರನ ಹಾಗೆ. ಮತ್ತೆ ಹಾಗೆಯೇ ಮುಂದೆ ಹೋದೆ. ಅಲ್ಲಿ ದೊಡ್ಡ ಸಮುದ್ರ. ನಾನು ಮತ್ತೆ ಪ್ರಶ್ನೆ ಹಾಕಿದೆ. ಈ ಸಮುದ್ರದ ಒಳಗೆ ಹೋಗಿ ನೋಡಬೇಕು ಅಂತ. ಆಗ ನನಗೆ ಉತ್ತರ ಸಿಕ್ಕಿದ್ದು, ಈ ಸಮಯ ಈ ಸಂದರ್ಭಕ್ಕೆ ಇಷ್ಟು ನೀರು ಸಾಕು ಅಂತ ನನಗೆ ಉತ್ತರ ಬಂತು. ಆಗ ನಾನು ತಿರುಗಿ ಗುಹೆಯಿಂದ ಹೊರಗೆ ಬಂದೆ ಅಲ್ಲಿ ವಜ್ರ ಮತ್ತು ಸರ್ಪ, ಇದರ ಆಚೆ ಕಾಮಧೇನು, ಇದರ ಆಚೆ ಸುಳಿ, ಮತ್ತೆ ಜಾರುಬಂಡೆ ಮತ್ತು ಕಿಂಡಿ ಮತ್ತು ಮೆಟ್ಟಿಲು ಮೇಲೆ ಬಂದು ಬಿಟ್ಟೆ. ಹೋಗುವಾಗ ಸುಮಾರು ಎರಡು ಗಂಟೆಗಳ ಕಾಲ ನೋಡುತ್ತಾ ಹೋದೆ ಮರಳಿ ಬರುವಾಗ ಒಂದು ಕ್ಷಣ ಮಾತ್ರದಲ್ಲಿ ತಿರುಗಿ ಬಂದುಬಿಟ್ಟೆ. ನಂತರ, ಈ ಸ್ಥಳ ಎಲ್ಲಿದೆ? ಮತ್ತು ವೆಂಕಟೇಶ್ವರಸ್ವಾಮಿ ಎಷ್ಟು ವರ್ಷದಿಂದ ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ? ಎಂದು ಮತ್ತೆ ಪ್ರಶ್ನೆ ಹಾಕಿದೆ. ಆಗ ತಕ್ಷಣವೇ ಉತ್ತರ ಬಂತು. ಈ ರಹಸ್ಯ ವೆಂಕಟೇಶ್ವರ ಸ್ವಾಮಿ ವಿಗ್ರಹದ ಕೆಳಗೆ ಇವರು ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ. ಶತಮಾನಗಳ ಹಿಂದೆಯೇ ಇವರು ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ ಎಂದು ಉತ್ತರ ಬಂದಿತು. ಇದೇ ನನ್ನ ಧ್ಯಾನದ ಅನುಭವ ಮತ್ತು ವೆಂಕಟೇಶ್ವರ ಸ್ವಾಮಿಯಿದ್ದ ಜಾಗಕ್ಕೆ ಕರೆದುಕೊಂಡು ಹೋಗಿದ್ದು ಪತ್ರೀಜಿಯವರೇ. ಹೊರಗೆ ಧ್ಯಾನದಲ್ಲಿ ಹೊಸ ಅನುಭವಗಳನ್ನು ಪಡೆಯುತ್ತಾ ನನ್ನ ಜೀವನದಲ್ಲಿ ಬಹಳ ಬದಲಾವಣೆ ಆಗುತ್ತಾ ಇದೆ. ಎಲ್ಲವೂ ಧ್ಯಾನದಿಂದಲೇ ಸಾಧ್ಯ.

 

P.ಲಲಿತ
ಫೋನ್ : +91 92412 96817

Go to top