" ನನ್ನ ಧ್ಯಾನಾನುಭವ ಮತ್ತು ಸೇವೆ "

 

ನನ್ನ ಹೆಸರು A.S. ಮಹಾಮನಿ. ಶ್ರೀ ಬ್ರಹ್ಮರ್ಷಿ ಪತ್ರೀಜಿ ಅವರಿಗೆ ನನ್ನ ಕೋಟಿ ವಂದನೆಗಳು. ನಾನು ಈ ಧ್ಯಾನವನ್ನು ಕಳೆದ 5 ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಈ ಆನಾಪಾನಸತಿ ಧ್ಯಾನವನ್ನು ಕಲಿತ ನಂತರ ಒಂದು ಅದ್ಭುತ ಶಕ್ತಿಯು ನನಗೆ ಪ್ರಾಪ್ತಿಯಾದಂತಾಗಿದೆ. ಹಾಗೂ ಇದನ್ನು ನನ್ನ ಮನೆಯವರೆಲ್ಲ ಸದಸ್ಯರು ಮಾಡುತ್ತಾ ಇದ್ದಾರೆ. ಇದರಿಂದ ನನಗೆ ಆದ ಅನುಭವಗಳು ಬಹಳ ಇವೆ. ನಾನು ಒಮ್ಮೆ ಪತ್ರೀಜಿಯವರನ್ನು ಭೇಟಿಯಾಗಬೇಕೆಂದು ಗೌರಿಬಿದನೂರಿಗೆ ಹೋಗಿದ್ದೆ. ಅಲ್ಲಿ ನನಗೆ ಯಾರದೂ ಅಷ್ಟೊಂದು ಪರಿಚಯವು ಇರಲಿಲ್ಲಾ. ಅಂದು ಪತ್ರೀಜಿಯವರು ನೂರಾರು ಜನರ ಮಧ್ಯೆ ಇದ್ದರು. ಅವರನ್ನು ನೊಡಬೇಕು, ಮಾತಾಡಬೇಕು, ಪೋಟೋ ತೆಗೆಸಿಕೋಳ್ಳಬೇಕೆಂದು ಮನಸ್ಸಿನಲ್ಲೇ ಕಾತುರದಿಂದ ಕಲ್ಪಿಸಿಕೊಳ್ಳುತ್ತಾ ಇದ್ದೆ. ಆಗ ಅಲ್ಲಿದ್ದ ಕೆಲ ಮಾಸ್ಟರುಗಳಿಗೆ ಕೇಳದೆ, ನಾನು ಅವರ ಜೋತೆ ಸ್ಟೇಜ್ ಮೇಲೆ ಕುಳಿತು ಧ್ಯಾನದ ಅನುಭವ ಪಡೆಯಬೇಕೆಂದು ಕೇಳಿಕೊಂಡೆ. ಆದರೆ, ಕೆಲವು ಕಾರಣಗಳಿಂದ ದೂರ ಸರಿದು ನಿಂತೆ, ಆದರೆ ಅದೇನೋ ಮನದಲ್ಲಿ ಅವರದೇ ಚಿತ್ರ ಮೂಡಲು ಆರಂಭಿಸಿತು. ಅವರ ಜೊತೆಯೇ ಮಾತಾಡಿದಂತಾಯಿತು. ತಕ್ಷಣವೇ ಪತ್ರೀಜಿಯವರು ಬೇರೆ ಊರಿನಿಂದ ಬಂದವರು ಸ್ಟೇಜ್ ಮೇಲೆ ಬನ್ನಿ ಅಂದರು. ಆದರೆ, ನಾನು ಕೆಳಗೇ ನಿಂತೆ. ಆ ಮೇಲೆ ಅದೇನೋ ಗೊತ್ತಿಲ್ಲ, ಒಂದು ಅದ್ಭುತ ಶಕ್ತಿ ನನ್ನನ್ನು ಎಳೆಯಲು ಪ್ರಾರಂಭವಾಯಿತು. ಆಗ ಮತ್ತೆ ಪತ್ರೀಜಿಯವರು ಹುಬ್ಬಳ್ಳಿಯಿಂದ ಯಾರೇ ಬಂದಿರಲಿ, ಇಲ್ಲಿ ಬನ್ನಿ ಅಂದರು. ನಾನು ಅಲ್ಲಿ ಇಲ್ಲಿ ನೋಡಿದೆ, ಯಾರು ಹೋಗಲಿಲ್ಲಾ. ಅಲ್ಲಿಗೆ ಹೋಗಿದ್ದ ವ್ಯಕ್ತಿ ನಾನೊಬ್ಬನೇ ಆಗ ಕೈಯತ್ತಿದೆ. ಆಗ ಅವರು ಮೇಲಕ್ಕೆ ಕರೆದರು. ನಾನು ಖುಷಿಯಿಂದ ಸ್ಟೇಜ್ ಮೇಲೆ ಹತ್ತಿ ಆನಾಪಾನಸತಿ ಧ್ಯಾನದ ಅನುಭವ ಪಡೆದೆ. ಅಂದಿನಿಂದ ಇಂದಿನವರೆಗೆ ನಾನು ಧ್ಯಾನವನ್ನು ಮಾಡುತ್ತಾ ಇದ್ದೇನೆ. ಹಾಗೇನೆ ನಮ್ಮ ಮನೆಯಲ್ಲಿ 5 X 5 ಪಿರಾಮಿಡನ್ನು ತಯಾರಿಸಿ, ಅಲ್ಲಿಯೇ ಧ್ಯಾನವನ್ನು ಮಾಡುತ್ತಿದ್ದೇನೆ ಹಾಗೂ ಜನರಿಗೂ ಮಾಡಿಸುತ್ತಾ ಇದ್ದೇನೆ.

 

ಇದರಲ್ಲಿ ನನ್ನ ಮೊಮ್ಮಕ್ಕಳನ್ನು ದಿನಾಲು ಅರ್ಧಗಂಟೆ ಮಲಗಿಸುತ್ತಿದ್ದೇನೆ. ಅವರು ಇದರಿಂದ ಚೆನ್ನಾಗಿ ಬೆಳೆಯುತ್ತಿದ್ದಾರೆ. ನಾನು ಈಗ ಹುಬ್ಬಳ್ಳಿಯಲ್ಲಿ "ಹುಬ್ಬಳ್ಳಿ ಪಿರಾಮಿಡ ಧ್ಯಾನ ಕೇಂದ್ರ "ವನ್ನು ತೆರೆದಿದ್ದೇನೆ. ಇಲ್ಲಿಯು ಸಾಕಷ್ಟು ಜನರು ಬಂದು ಧ್ಯಾನದ ಅನುಭವ ಪಡೆಯುತ್ತಿದ್ದಾರೆ. ಈಗಾಗಲೇ ನಾನು ಕೆಲವೊಂದು ಕಡೆ ಧ್ಯಾನದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಮುಂದೆಯೂ ಸಹ ಮತ್ತು ಗಿರೀಶ ಇಂಗ್ಲೀಷ ಮಿಡಿಯಮ್ ಸ್ಕೂಲ್‌ನಲ್ಲು 14 X 14 ಪಿರಾಮಿಡನ್ನು ಕಟ್ಟಿಸಿದ್ದೇವೆ.

 

ಹಾಗೇನೆ ಒಂದು ಗುಲಾಬಿ ಗಿಡವು ನಾನು ಹೇಳಿದಂತೆ ಬೆಳೆದು ನಿಂತಿದೆ. ಹೇಗೆಂದರೆ ಮುಳ್ಳಿಲ್ಲದ ಗುಲಾಬಿ ಗಿಡವನ್ನು ಬೆಳೆಸಿದ್ದೇನೆ. ಇದನ್ನು ಮೊದಲು ಕಂಡವರು ಸಾಹಿತಿ Dr.ರಾಜಶೇಖರ ಭೂಸನೂರಮಠ ಅವರು ಇದನ್ನು ಕಂಡು ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾವಾಣಿ ಪೇಪರನಲ್ಲಿ ಹಾಕಿಸಿದರು. ಇವರು ತಿಳಿ ಹೇಳಿದಂತೆ ಸಸ್ಯಗಳಿಗೂ ಜೀವವಿದೆ, ನರಮಂಡಲವಿದೆ, ಸೂಕ್ಷ್ಮ ಸಂವೇದಿ ಶಕ್ತಿ ಇದೆ. 110 ವರ್ಷಗಳ ಹಿಂದೆಯೇ Dr.ಜಗದೀಶ ಚಂದ್ರ ಬೋಸ ಅವರು ಇದನ್ನು ತಿಳಿಸಿದರು. ಈಗ ನೀವು ಇದನ್ನು ಸಾಧಿಸಿರುವಿರಿ ಎಂದರು. ನಾನು ಕಾರ್ಯಕರ್ತ ಆದರೆ, ಅದು ನನ್ನಿಂದ ಅನ್ನುವ ಬದಲು ಪಿರಾಮಿಡ್‌ನಿಂದ ಅಂತಾ ಹೇಳಲು ಖುಷಿಪಡುತ್ತೇನೆ. ಅದೊಂದು ದಿನ ನನ್ನ ಮಗ ಎರಡು ಗುಲಾಬಿ ಗಿಡವನ್ನು ತಂದು ಕಂಪೌಂಡ್‌ನಲ್ಲಿ ಹಚ್ಚಿದ. ಒಂದು ಚೆನ್ನಾಗಿ ಬೆಳೆಯಿತು. ಆದರೆ, ಇನೊಂದು ಒಣಗಿ ಹೋಗುತ್ತಾ ಎರಡು ಇಂಚಿನಷ್ಟು ಉಳಿದಿತ್ತು. ಅದನ್ನು ಕಂಡು ನಾನು ತಾಮ್ರದ ಪಿರಾಮಿಡ್‌ನ ನೀರನ್ನು ಹಾಕುತ್ತಾ, ಅದರ ಮೇಲೆ ಒಂದು ಪುಟ್ಟ ಪಿರಾಮಿಡನ್ನು ಇರಿಸಿ, ದಿನಾಲು ಬೆಳ್ಳಿಗ್ಗೆ ಹಾಗೂ ರಾತ್ರಿ ಕೈಯಲ್ಲಿ ಹಿಡಿದು 21 ಸಾರಿ, ಆಜ್ಞೆಯ ರೂಪದಲ್ಲಿ, ಅದಕ್ಕೆ ಜೀವ ಬರುವುದಾಗಿ ಹೇಳಿದ್ದೆ. ಅದು ಕೆಲವೇ ದಿನಗಳಲ್ಲಿ ಚಿಗುರಲು ಆರಂಭವಾಯಿತು. ಹಾಗೆಯೇ ಮುಳ್ಳಿಲ್ಲದ ಹಾಗೇ ಬೆಳೆಯುವಂತೆ ಆಜ್ಞೆ ಮಾಡಿದೆ. ಅದು ಹಾಗೆಯೇ ಬೆಳೆದು ನಿಂತಿದೆ. ಆಶ್ಚರ್ಯವೆಂದರೆ, ವಿಜಯದಶಮಿಯಂದು ಹೂ ಬಿಡಬೇಕೆಂದು ಆಜ್ಞೆ ಮಾಡಿದಕ್ಕೆ ಅದು ಅದೇ ದಿನದಂದು ಹೂ ಬಿಟ್ಟದೆ. ಇದನ್ನು ನೋಡಲು ಬಯಸುವವರು ಈಗಲೂ ಬರಬಹುದಾಗಿದೆ.

 

 

A.S. ಮಹಾಮುನಿ
ಹುಬ್ಬಳಿ

Go to top