" ಪಿರಮಿಡ್ ವ್ಯಾಲಿಯ ಪ್ರಕೃತಿ ಸೌಂದರ್ಯ ವರ್ಣನಾತೀತ "

 

 

ನನ್ನ ಹೆಸರು ಮಂಜುನಾಥ V. ನನಗೆ ಚಿಕ್ಕ ವಯಸ್ಸಿನಲ್ಲೆ ಆಧ್ಯಾತ್ಮಿಕ ಒಲವು ಇತ್ತು. ನನ್ನ ಪ್ರಯಾಣದಲ್ಲಿ, 2001ರಲ್ಲಿ, ಅನ್ವೇಷಣೆಯ ಮುಖಾಂತರ ಪಿರಮಿಡ್ ಧ್ಯಾನಕ್ಕೆ ಆಗಮನವಾಗಿ ಇಂದಿಗೆ 13 ವರ್ಷಗಳಾಯಿತು. ಈ ಆಧ್ಯಾತ್ಮಿಕ ಪ್ರಯಾಣದಲ್ಲಿ 2003 ಏಪ್ರಿಲ್ 1 ರಂದು ಈ ನಮ್ಮ ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್ ಶಂಕುಸ್ಥಾಪನೆಯಿಂದ ಹಿಡಿದು ಹಲವಾರು ಅಭಿವೃದ್ಧಿ ಕೆಲಸ ಮತ್ತು ಪ್ರಗತಿಯ ಪಥದಲ್ಲಿ ನಡೆಯುತ್ತಿರುವುದು ಇಂದಿಗೂ ಕಣ್ಣಾರೆ ನೋಡುತ್ತಿದ್ದೇನೆ.

 

ಈ ಭುವಿಯಲ್ಲಿ ಎಷ್ಟೋ ಆಶ್ರಮಗಳಿವೆ. ಆದರೆ, ಪಿರಮಿಡ್ ವ್ಯಾಲಿಯ ಪ್ರಕೃತಿ ಮತ್ತು ಸುತ್ತಮುತ್ತ ಗುಡ್ಡ, ಬೆಟ್ಟಗಳ ಸೌಂದರ್ಯ ಹಾಗೂ ಇಲ್ಲಿನ ಮುಂಜಾನೆಯ ಸೂರ್ಯೋದಯ, ಹಕ್ಕಿಗಳ ಚಿಲಿಪಿಲಿ ಶಬ್ದ ಹಾಗೂ ಸೂರ್ಯಾಸ್ತ ಮತ್ತು ಪ್ರಶಾಂತವಾದ ಆಧ್ಯಾತ್ಮಿಕ ವಾತಾವರಣ ಇವೆಲ್ಲವೂ ಮನುಷ್ಯನು ತನ್ನ ಹೊರಗಿನ ಪ್ರಪಂಚ ಮರೆತು ತನ್ನ ಆಂತರಿಕ ಪ್ರಪಂಚದ ಕಡೆ ತಿರುಗುವಂತೆ ಅಥವಾ ತನ್ನಲ್ಲಿ ತಾನು ಲೀನವಾಗಿಲು ಸಹಾಯ ಮಾಡುತ್ತದೆ.

 

ನಾನು ಇಲ್ಲಿ ಅನೇಕ ಬಾರಿ, ನಲವತ್ತು ದಿನಗಳ ಮಂಡಲ ಧ್ಯಾನ ಸಾಧನೆ ಮಾಡಿದ್ದೇನೆ ಹಾಗೂ ಅನೇಕ ಬಾರಿ ಮೌನ ಸಾಧನೆಯನ್ನು ಮಾಡಿದ್ದೇನೆ. ಆದ್ದರಿಂದ, ನನ್ನಲ್ಲಿ ಅನೇಕ, ಅಂದರೆ, ಶಾರೀರಿಕವಾಗಿ ಮತ್ತು ಮಾನಸಿಕ ವರ್ತನೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ.

 

ನನ್ನ ಪರಮಗುರು, ಸದ್ಗುರುಗಳಾದಂತಹ ಬ್ರಹ್ಮರ್ಷಿ ಪತ್ರೀಜಿಯವರು ನನ್ನನ್ನು ಹತ್ತಿರಕ್ಕೆ ಕರೆದುಕೊಂಡು, ಅವರ ಆಧ್ಯಾತ್ಮಿಕ ಜ್ಞಾನವನ್ನು ಧಾರೆಯರೆದ್ದು ಇದೇ ವ್ಯಾಲಿಯಲ್ಲಿ. ಆ ಘಟನೆಯಿಂದ ನನ್ನ ಜೀವನದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಅನೇಕ ಬದಲಾವಣೆಗಳಾಗಿವೆ.

 

ಹಾಗೂ ಇತ್ತೀಚೆಗೆ ವ್ಯಾಲಿಯಲ್ಲಿ ಕ್ರೀಡೆಗಳು ಶುರುವಾಯಿತು. ದಿನ ನಿತ್ಯ ಧ್ಯಾನ ಸಾಧನೆ ಮಾಡುತ್ತಾ, ನಾನು ಕ್ರೀಡೆಯಲ್ಲಿ ಭಾಗವಹಿಸುತ್ತಾ, ಪ್ರತಿಯೊಂದು ಆಟವನ್ನು ಆಡುತ್ತಾ ಪ್ರತಿಯೊಂದು ಕ್ಷಣವನ್ನೂ ಆನಂದಿಸುತ್ತಿದ್ದೇನೆ. ಪ್ರತಿಯೊಬ್ಬರ ಜೊತೆ ಆಟ ಆಡುತ್ತಿದ್ದಾಗ, ಅವರೊಂದಿಗೆ ಬೆರೆತಾಗ, ಆ ಆನಂದ ವರ್ಣನೀಯ.

 

ಆದುದರಿಂದ, ಜಗತ್ತಿನ ಎಲ್ಲ ಸ್ನೇಹಿತರಿಗೆ ನನ್ನ ವಿನಂತಿ ಏನೆಂದರೆ, ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಪಿರಮಿಡ್ ವ್ಯಾಲಿಗೆ ಭೇಟಿನೀಡಿ, ನೀವು ನಿಮ್ಮ ಜೀವನವನ್ನು ಮರಳಿ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶ.  ಕನಿಷ್ಠ ಪಕ್ಷ ೭ ದಿನಗಳಾದರೂ ನೀವು ಇಲ್ಲಿ ಉಳಿಯಬೇಕು.

 

ನನ್ನ ಎಲ್ಲಾ ಸ್ನೇಹಿತರಿಗೆ ಹೇಳುವುದೇನೆಂದರೆ ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ, ಕಲಿತುಕೊಳ್ಳಬೇಕಾದರೆ, ಗುರಿ ಮತ್ತು ಎಲ್ಲಾ ಕಷ್ಟಗಳನ್ನು ಮೀರಬೇಕಾದರೆ, ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿಗೆ ಬನ್ನಿ "ಬ್ರಹ್ಮರ್ಷಿ ಪತ್ರೀಜಿ"ಯವರು ಬೆಳಕಿಗೆ ತಂದ "ಆನಾಪಾನಸತಿ ಧ್ಯಾನ"ವನ್ನು ಕಲಿಯಿರಿ, ಜೀವನದ ಎಲ್ಲಾ ಕಲೆಗಳನ್ನು ಮತ್ತು ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ಪ್ರತಿ ಕ್ಷಣ ಆನಂದವಾಗಿ ಜೀವಿಸಲು ಈ ಸಂಸ್ಥೆಯಲ್ಲಿ ಮಾತ್ರ ಸಾಧ್ಯ.

 

 

ಮಂಜುನಾಥ.V
ಫೋನ್  : +91 9844744000

Go to top