" ಧ್ಯಾನದಿಂದ ಜೀವನದಲ್ಲಿ ಹೊಸ ತಿರುವು "

 

ನನ್ನ ಹೆಸರು ಮೋಹನ್. 2008ರ ಆಗಸ್ಟ್‌ನಲ್ಲಿ, ನನ್ನ ಜೀವನ ಹೊಸ ತಿರುವು ಪಡೆದುಕೊಂಡಿತು. ಕೇವಲ ಒಂದು ಧ್ಯಾನದ ಕರ ಪತ್ರವು ನನ್ನನ್ನು ಈ ಪಿರಮಿಡ್ ಧ್ಯಾನದ ಸಂಸ್ಥೆಗೆ ಆಕರ್ಷಿಸಿತು. ಈ ಮೊದಲು ಮಾಡಿದ ಪೂಜೆ ಪುನಸ್ಕಾರಗಳು, ಮಂತ್ರ ಪಠನೆಗಳಿಂದ ಸಿಗದ ತೃಪ್ತಿ ಈ ಧ್ಯಾನದಿಂದ ದೊರಕಿತು. ನಾನು ಪ್ರಪಂಚವನ್ನು ನೋಡುವ ದೃಷ್ಟಿಯೇ ಬದಲಾಯಿತು. ಏಕೆಂದರೆ, ಪ್ರತಿಯೊಬ್ಬರೂ ಆತ್ಮಸ್ವರೂಪರು ಎನ್ನುವ ಅರಿವು ನನಗಾಗಿದೆ. ಅಂದಿನಿಂದ ಧ್ಯಾನ ನನ್ನ ಜೀವನದ ದಾರಿ ದೀಪವಾಗಿದೆ.

 

ಧ್ಯಾನದಿಂದ ನನ್ನ ದೇಹದಲ್ಲಿ ಹೊಸ ಚೈತನ್ಯ ಮೂಡಿದೆ. ದಿನವಿಡೀ ಲವಲವಿಕೆಯಿಂದ ಮತ್ತು ಹೆಚ್ಚಿನ ಅರಿವಿನಿಂದ ಕೆಲಸಮಾಡಲು ಸಾಧ್ಯವಾಗುತ್ತದೆ. ಆಹಾರವಾಗಿ ಏನನ್ನೂ ಸಹ ತೆಗೆದುಕೊಳ್ಳದಿದ್ದರೂ ದೇಹದ ಶಕ್ತಿ ಕುಂದುವುದಿಲ್ಲ. ನನ್ನನ್ನು ಬಾಧಿಸುತ್ತಿದ ಮಂಡಿ ನೋವು ಮಾಯವಾಗಿದೆ.

 

ನನಗೆ ಧ್ಯಾನದಲ್ಲಿ ’ಜೀಸಸ್’ನ ದರ್ಶನವಾಗಿದೆ. ಅನೇಕ ಸಾರಿ ನಮ್ಮ ಗುರುಗಳಾದ ಬ್ರಹ್ಮರ್ಷಿ ಪತ್ರೀಜಿಯವರ ದರ್ಶನವಾಗಿದೆ ಮತ್ತು ಇನ್ನೂ ಹಲವಾರು ಆಧ್ಯಾತ್ಮಿಕ ಗುರುಗಳ ದರ್ಶನವಾಗಿದೆ.

 

ನನಗೆ ಧ್ಯಾನದಲ್ಲಿ ಹಲವಾರು ಸಂದೇಶಗಳು ಬಂದಿವೆ. ಅವುಗಳಲ್ಲಿ ಒಂದನ್ನು, ಎಲ್ಲರಿಗೂ ತಿಳಿಸಲು ಇಷ್ಟ ಪಡುತ್ತೇನೆ.

 

"ನಮ್ಮ ಜೀವನ ನಮ್ಮ ಉಸಿರಾಟದಷ್ಟೇ ಸರಳ ಮತ್ತು ಸುಲಭ". ಇದನ್ನು ಆಳವಾಗಿ ಯೋಚಿಸಿದರೆ ಇದು ಖಂಡಿತವಾಗಿಯೂ ನಿಜವೆನ್ನಿಸುತ್ತದೆ.ಹೇಗೆಂದರೆ, ನಾವು ಎಷ್ಟು ಸರಳವಾದ ಜೀವನ ನಡೆಸುತ್ತೇವೊ ನಮ್ಮ ಜೀವನ ಅಷ್ಟೇ ಸುಲಭವಾಗಿರುತ್ತದೆ ಮತ್ತು ಸುಖವಾಗಿರುತ್ತದೆ ಎಂದು ನನ್ನ ಅನಿಸಿಕೆ.

 

 

ಮೋಹನ್
ಬೆಂಗಳೂರು

ಫೋನ್  : +91 9901598073

Go to top