" ನನ್ನ ಆಧ್ಯಾತ್ಮಿಕ ಪರಮಗುರುಗಳು ಲಭಿಸಿದರು "

 

 

ನನ್ನ ಹೆಸರು ನಾಗ ರಮಾದೇವಿ. ಹುಟ್ಟಿದ್ದು, ಬೆಳೆದಿದ್ದು ಮಚಲೀಪಟ್ಟಣ. ಅತ್ತೆಮನೆ, ಧ್ಯಾನಾಭ್ಯಾಸ ಆರಂಭಿಸಿದ್ದು ಏಲೂರಿನಲ್ಲಿ 2004 ನವೆಂಬರ್ 14.

 

ಬಾಲ್ಯದಿಂದಲೂ ಪ್ರತಿಯೊಂದು ವಿಷಯವನ್ನು ವಿವರವಾಗಿ ತಿಳಿದುಕೊಳ್ಳಬೇಕೆಂಬ ಕುತೂಹಲ ನನಗೆ ತುಂಬಾ ಇತ್ತು. 15 ವರ್ಷಗಳ ವಯಸ್ಸಿನಲ್ಲಿ ಅಮ್ಮನಿಂದ ಭಗವದ್ಗೀತೆ ಕಂಠಸ್ಥ ಬಂದಿತ್ತು. ಆದರೆ, ಆಗ ನನಗೆ ಒಂದು ಶ್ಲೋಕಕ್ಕೂ ಸಹ ಅರ್ಥ ತಿಳಿಯದು. ಓದಿದ್ದು "ಭಾಷಾ ಪ್ರವೀಣ" M.A.ತೆಲುಗು. ಆದ್ದರಿಂದ, ಸ್ವಲ್ಪ ಮಟ್ಟಿಗೆ ರಾಮಾಯಣ ಮುಂತಾದ್ದು ಓದಬಲ್ಲವಳಾದೆ. ಜೀವನದಲ್ಲಿ ಅನುಭವಿಸಿದ ಕಷ್ಟಗಳಿಂದ "ಆಧ್ಯಾತ್ಮಿಕವಾಗಿ ಬೆಳೆಯಬೇಕು" ಎಂಬುವ ತಪನೆ ಹೆಚ್ಚಾಗಿ, ಅನ್ವೇಷಣೆ ಪ್ರಾರಂಭವಾಯಿತು. ಪೂಜೆ, ಸ್ತೋತ್ರಗಳು, ಜಪಗಳ ಸ್ಥಿತಿ ದಾಟಿದೆ. ಷಟ್ಚಕ್ರಗಳಲ್ಲಿ ದೃಷ್ಟಿ ನಿಲ್ಲಿಸಿದ ದಿನಗಳು ಕೆಲವು. ಅನಂತರವೇ ಧ್ಯಾನ ಪ್ರವೇಶ. ತುಂಬಾ ತಪನೆಯಿಂದ, ಆಧ್ಯಾತ್ಮಿಕ ದಾಹದಿಂದ ಇದ್ದ ನನಗೆ ಪತ್ರೀಜಿಯವರನ್ನು ಮೊದಲನೆಯ ಬಾರಿ ಭೇಟಿಯಾದಾಗಲೇ... "ನಾನು ಹುಡುಕುತ್ತಿರುವ ನನ್ನ ಆಧ್ಯಾತ್ಮಿಕ ಪರಮಗುರುವು ಲಭಿಸಿದ್ದಾರೆ" ಎಂಬುವ ಉದ್ವೇಗ, ಆನಂದ-ಸಾಧನಾ ತೀವ್ರತೆಗೆ ದಾರಿಯಾಯಿತು.

 

ತೆಲುಗು ಟೀಚರಾಗಿ ಕೆಲಸ ಮಾಡುತ್ತಿದ್ದೆ. ಧ್ಯಾನದಲ್ಲಿ ಪ್ರವೇಶಿಸಿದ ಮರುದಿನದಿಂದಲೇ ಧ್ಯಾನ ಪ್ರಚಾರ ಪ್ರಾರಂಭಿಸಿದ್ದೇನೆ. ಕಾಸ್ಮಿಕ್ ಎನರ್ಜಿ ಎಂದು ಗೊತ್ತಿಲ್ಲದೇನೆ 2004 ನವೆಂಬರ್ 26ರ ‘ಕಾರ್ತೀಕ ಪೌರ್ಣಮಿ’ ದಿನ ಸಹಸ್ರಾರ ತೆರೆದುಕೊಂಡು ವಿಶ್ವಮಯ ಪ್ರಾಣಶಕ್ತಿ ಅಪಾರವಾಗಿ ಒಳಗೆ ಪ್ರವೇಶಿಸಿದೆ".

 

ಸೂಕ್ಷ ಶರೀರಯಾನದ ಅವಗಾಹನೆ ಇಲ್ಲದೇನೆ 2005 ಜನವರಿ 16ರಂದು ಸೂಕ್ಷ ಶರೀರ ಬಿಡುಗಡೆಯಾಗಿ ನರಸಿಂಹ ಸ್ವಾಮಿಯವರ ದರ್ಶನವಾಯಿತು. ಧ್ಯಾನದಲ್ಲಿ ಪ್ರವೇಶಿಸಿದಾಗಲಿಂದ ಪತ್ರೀಜಿಯವರನ್ನು ಅನುಸರಿಸುತ್ತಲೇ ಇದ್ದರೂ ಅವರ ಜೊತೆ ಮಾತನಾಡಿರಲಿಲ್ಲ. "ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಮಾತನಾಡಬೇಕು" ಎಂಬುವ ತಪನೆ, ಮಾರ್ಚಿ ತಿಂಗಳಲ್ಲಿ ನನ್ನ ಆಸೆ ನೆರವೇರಿತು.

 

ಪತ್ರೀಸಾರ್‌ರವರನ್ನು ಭೇಟಿಯಾಗಲು ನಾನು ಎಷ್ಟು ತಪನೆಯಿಂದ, ಉದ್ವೇಗದಿಂದ ಭೀಮವರಂ ತಲುಪಿದ್ದೇನೊ... ನನ್ನ ಜೊತೆ ಮಾತನಾಡಲು ಸಾರ್ ಕೂಡ ಅದೇ ಭಾವನೆಗಳಿಂದ ಇರುವುದು... ನನಗೆ ತುಂಬಾ ಆಶ್ಚರ್ಯ, ಆನಂದವನ್ನು ಉಂಟು ಮಾಡಿತು. ಒಬ್ಬ ಮಿಲಾರೆಪಾರನ್ನು ಭೇಟಿಯಾಗಲು ಮಾರ್ಪಾರವರು ಯಾವ ರೀತಿಯಲ್ಲಿ ಎದುರು ನೋಡಿದರೋ... ನನ್ನನ್ನು ಭೇಟಿಯಾಗಲು ನನ್ನ ಪರಮಗುರುಗಳು ಕೂಡ ಅದೇ ವಿಧವಾಗಿ ಎದುರು ನೋಡಿದರು. ಆಗಲೇ ಪತ್ರೀಸಾರ್‌ಗೆ ಅನೇಕ ಮಂದಿ ಶಿಷ್ಯರು (ಮಿತ್ರರು) ಇದ್ದಾರೆ. ಆದರೂ, ಪುನಃ ಮತ್ತೊಬ್ಬರಿಗಾಗಿ ಎದುರು ನೋಡುವುದರಲ್ಲಿ ಅವರಿಗೆ ಅವರೇ ಸಾಟಿ. ದಟೀಜ್ ಪತ್ರೀಜಿ.

 

ಅನೇಕ ಜನ 1990 ರಿಂದಲೇ ಧ್ಯಾನ ಮಾಡುತ್ತಿದ್ದಾರೆ; ಪತ್ರೀಜಿ ಸಾಂಗತ್ಯ, ಸನ್ನಿಧಿ ಅವರಿಗೆ ಹೆಚ್ಚು ಸಿಗುತ್ತಿತ್ತು ಎಂದು ಕೇಳಿರುವ ನಾನು ಪತ್ರೀಜಿಯರವರನ್ನು ಒಂದು ಬಾರಿ ನಾನು ಕೇಳಿದೆ; "ಸಾರ್ ನಾನು ನನ್ನ ಆಧ್ಯಾತ್ಮಿಕ ಗುರುಗಳಿಗಾಗಿ ತುಂಬಾ ಹುಡುಕಿದ್ದೇನೆ. ಮತ್ತೆ ನೀವು ನನಗೆ ಏಕೆ ಕಾಣಿಸಲಿಲ್ಲ? ನನ್ನ ಜೀವನವನ್ನು ನಾನು ಯಾಕೆ ವ್ಯರ್ಥಮಾಡಿಕೊಂಡೆ?" ಎಂದು ಪತ್ರೀಜಿ ನೀಡಿರುವ ಉತ್ತರ ಅದ್ಭುತ: "ಶಿಷ್ಯನು ಪರಿಪೂರ್ಣನಾಗುವವರೆಗು ಗುರುವು ಸುತ್ತ ಮುತ್ತಲೇ ಇದ್ದರೂ ಕಾಣಿಸುವುದಿಲ್ಲ. ಯಾವಾಗ ಪರಿಪೂರ್ಣನಾಗುತ್ತಾನೊ ಆಗ ದರ್ಶನ ಸಿಗುತ್ತದೆ" ಎಂದು ಹೇಳಿದರು. ದಟೀಜ್ ಪತ್ರೀಜಿ

 

"ಪತ್ರೀಸಾರ್ ಅವರನ್ನು ಭೇಟಿಯಾದ ಮೊದಲನೆಯ ದಿನವೆ ಅನೇಕ ಹುಚ್ಚು ಪ್ರಶ್ನೆಗಳನ್ನು ಹಾಕಿದೆ. ಆದರೆ, ಪ್ರತಿ ಒಂದು ಪ್ರಶ್ನೆಗೂ ಸಾರ್ ತುಂಬಾ ತಾಳ್ಮೆಯಿಂದ, ತುಂಬಾ ಚೆನ್ನಾಗಿ ಅರ್ಥವಾಗುವ ಹಾಗೆ ಬಿಡಿಸಿ ಹೇಳಿ ಉತ್ತರ ನೀಡಿದರು. ಒಂದು ಬಾರಿ ಸಾರ್‌ನ "ನಾನು ನಿಮ್ಮನ್ನ ’ಗುರುದೇವಾ’ ಎಂದು ಜೋರಾಗಿ ಕರೆಯಬೇಕೆಂದು ಇದೆ " ಎಂದು ಹೇಳಿದೆ. ಸಾರ್ ತಕ್ಷಣ "ಹೊಡೆಯುತ್ತೇನೆ" ಎಂದರು. ಪುನಃ ತಕ್ಷಣ "ನಿನ್ನ ಶ್ವಾಸವೇ ನಿನ್ನ ಗುರುವು. ಯಾರೂ ಶಿಷ್ಯರಾಗಿ ಇರಬಾರದು. ಎಲ್ಲರೂ ಗುರುಗಳಾಗಿ ಬೆಳೆಯಬೇಕು" ಎಂದು ನಿಧಾನಕ್ಕೆ ವಿವರಿಸಿ ಹೇಳಿದರು. ಅವರನ್ನು ಭೇಟಿಯಾದ ಪ್ರತಿಯೊಂದು ಬಾರಿಯೂ ಸಹ ಅವರು ತುಂಬಾ ಪ್ರತ್ಯೇಕ ವ್ಯಕ್ತಿ (ಅಸಾಧಾರಣ ವ್ಯಕ್ತಿ) ಅನಿಸುತ್ತದೆ. ಪತ್ರೀಸಾರ್‌ನ ನೋಡುವುದು, ಅವರ ಜೊತೆ ಮಾತನಾಡುವುದು ಅನೇಕ ಜನ್ಮಗಳ ಮಹಾಭಾಗ್ಯವೇನೊ ಅನಿಸುತ್ತದೆ. ದಟೀಜ್ ಪತ್ರೀಜಿ."

 

ನಾನು ಭಾಗವತ ಓದುತ್ತಿರುವ ಸಂದರ್ಭದಲ್ಲಿ... ಸತ್ಯಭಾಮೆಗೆ ಇದ್ದ ಅಹಂಕಾರವನ್ನು... "ಇದು ತಪ್ಪು" ಎಂದು ಸತ್ಯಭಾಮೆಗೆ ಹೇಳದೆಯೇ... ಆಕೆಯ ಕಣ್ಣು ತೆರೆಯುವ ಹಾಗೆ ಮಾಡುತ್ತಾನೆ ಶ್ರೀ ಕೃಷ್ಣನು... ಆಗ ನಾನು ಎಂದುಕೊಳ್ಳುತ್ತಿದ್ದೆ... "ನನ್ನಲ್ಲಿ ಅಹಂಕಾರವು ಅಂಕುರವಾದರೆ... ಯಾರು ತೆಗೆಯುತ್ತಾರೆ". ಎಂದು... ಒಂದು ಬಾರಿ ಪತ್ರೀಜಿಯವರನ್ನು ಕೇಳಿದೆ, ಸಾರ್ ನನ್ನಲ್ಲಿ ಗರ್ವ, ಅಹಂಕಾರವಿದೆಯಾ?" ಎಂದು... "ನಿಮ್ಮಲ್ಲಿ ಇದ್ದರೆ ನನ್ನಲ್ಲಿ ಇದ್ದಹಾಗೆ" ಎಂದು ಹೇಳಿದರು ಪತ್ರೀಸಾರ್. ಆ ಮಾತಿನಿಂದ... ಅಂತರಾಂತರಗಳಲ್ಲಿ ಎಲ್ಲಾದರೂ ಸಂದೇಹವೇನಾದರೂ ಅಡಗಿದ್ದರೆ, ಅದು ಚೆಲ್ಲಾಪಿಲ್ಲ್ಲಿಯಾಗಿ ಚೆದುರಿ ಹೋಯಿತು. ದಟೀಜ್ ಪತ್ರೀಜಿ.

 

2006 ಗ್ರಾಮ ಪಂಚಾಯತಿ ಚುನಾವಣೆ... ದ್ವಾರಕಾ ತಿರುಮಲ ಮಂಡಲ, ಕೋಡಿಗೂಡೆಂ ಎಂಬುವ ಗ್ರಾಮದಲ್ಲಿ "ಪೋಲಿಂಗ್ ಡ್ಯೂಟಿ, ನಾಳಿದ್ದು ಪೋಲಿಂಗ್‌" ಎನ್ನುತ್ತಾ ಆರ್ಡರ್ಸ್ ನನ್ನ ಕೈಯಲ್ಲಿಟ್ಟರು. ಐದು ಜನ ತಮ್ಮ ಡ್ಯೂಟಿಯನ್ನು ತಪ್ಪಿಸಿಕೊಂಡು, ನನ್ನ ಕೈನಲ್ಲಿ ಆರ್ಡರ್‌ಗಳನ್ನು ಇಟ್ಟರು. ಅದು ತುಂಬಾ ವಿವಾದಾಸ್ಪದವಾದ ಸೂಕ್ಷ ಸ್ಥಳ. ರಕ್ತಪಾತವಾಗದೆ ಪೋಲಿಂಗ್ ಪೂರ್ಣಗೊಳ್ಳುವುದಿಲ್ಲ. ಅದಕ್ಕೆ ಅಧಿಕಾರಿಗಳ ಪ್ರತ್ಯೇಕ ಭದ್ರತೆ ಇರುತ್ತದೆಯಂತೆ. ನನಗೆ ಆ ವಿಷಯಗಳೇನೂ ಗೊತ್ತಿಲ್ಲ. ಎಲ್ಲಾ ಸಾಮಾನು ತೆಗೆದುಕೊಂಡು ಬಸ್ಸಿನಲ್ಲಿ ಹತ್ತಿದೆವು. ಎಲ್ಲರ ಮನಸ್ಸಿನಲ್ಲೂ ಭಯ ಭಯ. ಬಸ್ಸುಗಳು ಹೊರಡಲು ಇನ್ನೂ ಸ್ವಲ್ಪ ಸಮಯವಿತ್ತು. ನಾನು ಸ್ಟೀರಿಂಗ್ ಹತ್ತಿರಕ್ಕೆ ಬಂದು ನಿಂತು ಅವರ ಅನುಮತಿ ಪಡೆದು ಧ್ಯಾನವನ್ನು ಕುರಿತು ವಿವರಿಸಿದೆ. ನಿಗದಿತ ಸ್ಥಳಕ್ಕೆ ಹೋಗಿ ತಲುಪಿದೆವು. ಊರಿನ ಜನರೆಲ್ಲಾ ಹೆಂಡ ಕುಡಿದಿದ್ದರು. ರಾತ್ರಿ ನಮಗೆ ರಕ್ಷಣೆ ಇಲ್ಲದ ಪರಿಸ್ಥಿತಿ. ಅಷ್ಟರಲ್ಲಿ ಒಬ್ಬಾತ ಬಂದು "ನಿಮಗೆ ಪ್ರಾಣಗಳ ಮೇಲೆ ಆಸೆ ಇದ್ದೇ ಇಲ್ಲಿಗೆ ಬಂದಿದ್ದೀರಾ?" ಎಂದು ಪ್ರಶ್ನಿಸಿದನು, "ನಾನು ಹಾಯಾಗಿ, ಪ್ರಶಾಂತವಾಗಿ ನಾವೆಲ್ಲರೂ ಮನೆಗೆ ಹೋಗುತ್ತೇವೆ. ಪೋಲಿಂಗ್ ಸಹ ಪ್ರಶಾಂತವಾಗಿ ನಡೆಯುತ್ತದೆ" ಎಂದು ಹೇಳಿದೆ. "ಹೇಗೆ ಹೇಳಬಲ್ಲಿರಿ?" ಎಂದು ಹೂಂಕರಿಸಿದನು. "ನಾನು ಆನಾಪಾನಸತಿ ಧ್ಯಾನಿ. ನನ್ನ ಪರಮಗುರುಗಳು ಬ್ರಹ್ಮರ್ಷಿ ಪತ್ರೀಜಿ" ಎಂದು ಹೇಳಿದೆ. ಎಲ್ಲರೂ ನಿದ್ರೆಗೆ ಉಪಕ್ರಮಿಸಿ ಎಂದು ಹೇಳಿ ನಾನು ಧ್ಯಾನದಲ್ಲಿ ಕುಳಿತುಕೊಂಡೆ.

 

ಬೆಳಿಗ್ಗೆ ಏಜೆಂಟ್‌ಗಳು ಬಂದರು. 7.00ಗಂಟೆಗೆ ಪ್ರಾರಂಭವಾಗಬೇಕಾದ ಪೋಲಿಂಗ್ 7.30ಗಂಟೆಗೆ ಪ್ರಾರಂಭವಾಯಿತು. ಕಳ್ಳ ಓಟುಗಳನ್ನು ಹಾಕಲು ಬಂದವರನ್ನು ಧೈರ್ಯದಿಂದ ಹಿಡಿದುಕೊಂಡೆ. 80% ಓಟುಗಳು ಪೋಲಾಗಿವೆ. "ಉಳಿದಿದ್ದು ನಾವು ಸಮಾನವಾಗಿ ಹಾಕಿಕೊಳ್ಳುತ್ತೇವೆ" ಎಂದು ಹೇಳಿದ ಏಜೆಂಟ್‌ಗಳ ಮಾತುಗಳಿಗೆ ನಾನು ಅಂಗೀಕಾರ ನೀಡಲಿಲ್ಲ.

 

ಏಜೆಂಟ್ ಹೊರಟು ಹೋಗುತ್ತಾ, "ಆಶ್ಚರ್ಯವಾಗಿದೆ. ಇದುವರೆಗೂ ರಕ್ತಪಾತವಾಗದೆ ಇಲ್ಲಿ ಯಾವತ್ತಿಗೂ ಪೋಲಿಂಗ್ ಮುಗಿಯಲಿಲ್ಲ. ಈ ಒಂದು ಸಲ ಪ್ರಶಾಂತವಾಗಿ ಹೇಗೆ ನಡೆಯಿತು? ಎಂದು ಆಶ್ಚರ್ಯಚಕಿತನಾದನು. ಚುನಾವಣಾ ಮುಖ್ಯ ಅಧಿಕಾರಿಯು ತಾನೇ ಸ್ವಯಂ ಆಗಿ ನನ್ನನ್ನು ಹತ್ತಿರಕ್ಕೆ ಕರೆದು, "ಇದು ಹೇಗೆ ಸಂಭವವಾಯಿತು?" ಎಂದು ಪ್ರಶ್ನಿಸಿದರು. "ನಾನು ಧ್ಯಾನಿ, ನನ್ನ ಗುರುಗಳು ಪತ್ರೀಜಿ" ಎಂದು ಹೇಳಿದೆ. ಅವರು "ಎಲ್ಲರೂ ಧ್ಯಾನಿಗಳಾಗಿ ಬದಲಾದರೆ ತುಂಬಾ ಚೆನ್ನಾಗಿರುತ್ತದೆ ಮೇಡಮ್" ಎನ್ನುತ್ತಾ ಅಭಿನಂದಿಸಿದರು. ದಟೀಜ್ ಪತ್ರೀಜಿ.

 

ಈಗ ಧ್ಯಾನಿಗಳೇ ಚುನಾವಣೆಯಲ್ಲಿ ನಿಲ್ಲಬೇಕೆಂದು... "ಪಿರಮಿಡ್ ಪಾರ್ಟಿಯಿಂದ ಧ್ಯಾನಿಗಳೇ ಜನಪ್ರತಿನಿಧಿಗಳಾಗಬೇಕು" ಎನ್ನುವ ಪತ್ರೀಜಿ ಸಂಕಲ್ಪ...ಸಂತಸ ನೀಡುವಂತಹದ್ದು.

 

ಸಾಧನೆಯಲ್ಲಿ ಬೆಳೆಯುತ್ತಾ... ನನ್ನ ಗತಜನ್ಮಗಳಲ್ಲಿ... ಒಂದು ಜನ್ಮದಲ್ಲಿ ಪತ್ರೀಸಾರ್ ಕೃಷ್ಣನ ಹಾಗೆ, ನಾನು ಗೋಪಿಕೆಯ ಹಾಗೆ... ಇನ್ನೊಂದು ಜನ್ಮದಲ್ಲಿ ಮುನಿಯ ಹಾಗೆ... ನೋಡಿಕೊಂಡಾಗ ಆನಂದ ತುಳುಕಿತು. ಅನೇಕ ಜನರಲ್ಲಿರುವ ಅಜ್ಞಾನದ ಕತ್ತಲೆಯನ್ನು ತೊಲಗಿಸಿ, ಜ್ಞಾನಜ್ಯೋತಿಯನ್ನು ಬೆಳಗಿಸುತ್ತಿರುವ ಪತ್ರೀಜಿಗೆ ಸರಿಸಮ ಯಾರೂ ಇಲ್ಲ.

 

ಅನಂತರದ ದಿನಗಳಲ್ಲಿ ಹುಚ್ಚು ಪ್ರಶ್ನೆಗಳಿಲ್ಲ. ಮನಸ್ಸಿನಲ್ಲಿ ಯಾವುದಾದರೂ ಪ್ರಶ್ನೆ ಉದಯಿಸಿದರೆ, ಸಾರ್ ಬಾಯಿಂದ ಅರ್ಥಗರ್ಭಿತವಾಗಿ ದೊಡ್ಡ ದೊಡ್ಡ ಸಭೆಗಳಲ್ಲಿ ಸಹ ನನಗೆ ಉತ್ತರ ಸಿಗುತ್ತಿತ್ತು.

 

ಆಲೋಚನಾ ರಹಿತ ಸ್ಥಿತಿ... ಆನಂದ ಸ್ಥಿತಿಯಲ್ಲಿ ಇರುವ ಹಾಗೆ ಬದಲಾವಣೆಯಾಗಿದೆ. ಪತ್ರೀಸಾರ್ ಹೊರಟು ಹೋಗುತ್ತಿದ್ದರೆ... ಸಾರ್ ದೂರವಾಗುತ್ತಿದ್ದಾರೆಂಬುವ ಭಾವನೆಯಿಂದ ಆರಂಭಿಸಿ, ಪ್ರತಿ ನಿಮಿಷ ಸಾರ್ ನನ್ನ ಜೊತೆ, ನನ್ನಲ್ಲೇ ಇದ್ದಾರೆಂಬುವ ಭಾವನೆಯವರೆಗೂ ಬೆಳೆದಿದ್ದೇನೆ.

 

ಇನ್ನೂ ಅನೇಕಾನೇಕ ಮಧುರಾನುಭೂತಿಗಳು ಆಗಿವೆ. ಜೀವನವೇ ಬದಲಾಗಿ ಹೋಗಿದೆ. ನನ್ನದೇ ಆದ ರೀತಿಯಲ್ಲಿ ಧ್ಯಾನ ಪ್ರಚಾರವನ್ನು ಮಾಡಿಕೊಳ್ಳುತ್ತಾ ಹೋಗುತ್ತಿದ್ದೇನೆ. ಪತ್ರೀಜಿಯವರ ಸಾಂಗತ್ಯ, ಸನ್ನಿಧಿ ಲಭಿಸುವುದು ಅನೇಕಾನೇಕ ಜನ್ಮಗಳ ಮಹಾಭಾಗ್ಯವೇ ಸರಿ.

 

ಪತ್ರೀಜಿಗೆ... ಶತಸಹಸ್ರಕೋಟಿ ವಂದನೆಗಳು...

 

ನಾಗ ರಮಾದೇವಿ
ಮಚಲೀಪಟ್ಟಣ

Go to top