" ಧ್ಯಾನಮಾಡಿ ಇಡೀ ಪ್ರಪಂಚವನ್ನು ಗೆಲ್ಲಬಹುದು "

 

ನನ್ನ ಹೆಸರು ನಾಗಣ್ಣ. ಮೊದಲು ಬ್ರಹ್ಮರ್ಷಿ ಪತ್ರೀಜಿ ಅವರಿಗೆ ಸಾಷ್ಠಾಂಗ ನಮಸ್ಕಾರಗಳು. ನಾನು ಈ ಪಿರಮಿಡ್‌ನಲ್ಲಿ ಸುಮಾರು ಎರಡು ವರ್ಷದಿಂದ ಧ್ಯಾನ ಮಾಡುತ್ತಿದ್ದೇನೆ. ನನ್ನ ಅನುಭವಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

 

ಧ್ಯಾನ ಮಾಡಲು ಪ್ರಾರಂಭಿಸಿದರಿಂದ ನನಗೆ ಶಾಂತಿ, ನೆಮ್ಮದಿ ಸಿಕ್ಕಿದೆ. ನನ್ನಲ್ಲಿರುವ ಕೋಪ, ತಾಪ ಎಲ್ಲಾ ಕಡಿಮೆ ಆಗಿದೆ. ಕಳೆದು ಹೋದ ಸಂಬಂಧ ತಾನೇ ತಾನಾಗಿ ಬರುತ್ತಿದೆ. ಮೊದಲಿಗಿಂತ ಚೆನ್ನಾಗಿ ಇದ್ದೇನೆ. ಈ ದೇಶದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಹೋಗಿದ್ದರೂ ಕೂಡ ನನಗೆ ಏನೂ ಅನುಭವ ಆಗಲಿಲ್ಲ. ಆದರೆ, ಪಿರಮಿಡ್‌ನಲ್ಲಿ ಧ್ಯಾನ ಮಾಡಿದ ಮೇಲೆ ನನಗೆ ಎಲ್ಲಾ ಅನುಕೂಲಗಳು ಸಿಕ್ಕಿವೆ.

 

ಪ್ರತಿದಿನವೂ ಬೆಳ್ಳಿಗ್ಗೆ, ಸಾಯಂಕಾಲ ಗುಳಿಗೆ, ಇಂಜಕ್ಷನ್ ತೆಗೆದುಕೊಂಡು ಕೆಲಸ ಮಾಡಿದರೂ ಏನೂ ಆಗಿಲ್ಲ. ಆದರೆ, ಪಿರಮಿಡ್‌ನಲ್ಲಿ ಧ್ಯಾನಮಾಡಿ ಈ ಕಾಸ್ಮಿಕ್ ಎನರ್ಜಿಯಿಂದ ಈಗ ನಾನು ಯಾವುದೂ ತೆಗೆದುಕೊಳ್ಳುತ್ತಾ ಇಲ್ಲ. ಈ ಕಾಸ್‌ಮಿಕ್ ಎನರ್ಜಿಯೇ ಟ್ರೀಟ್‌ಮೆಂಟ್. ಇದರಿಂದ ಈಗ, ನಾನು ಜನಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಿ, ಪಿರಮಿಡ್ ವ್ಯಾಲಿಯಲ್ಲಿ ಇರುವ ಕ್ಯಾನ್‌ಟಿನ್‌ನಲ್ಲಿ ಸೇವೆ ಮಾಡುತ್ತಿದ್ದೇನೆ.

 

ಆಸ್ತಿ, ಅಂತಸ್ತು ನಮ್ಮ ಹಿಂದೆ ಬರುವುದಿಲ್ಲ. ನಾನು ಮಾಡಿದ ಧ್ಯಾನ ನನ್ನ ಹಿಂದೆ ಬರುವುದು. ಮುತ್ತು ರತ್ನ ನನ್ನ ಹಿಂದೆ ಬರುವುದಿಲ್ಲ. ನಮ್ಮ ಆತ್ಮವೇ ದೈವವು. ನನ್ನ ಉಸಿರು ನನ್ನ ದೇವರು. ಆತ್ಮಕ್ಕೆ ಶಾಂತಿ ದೊರಕುತ್ತದೆ. ನನ್ನ ಧ್ಯಾನದಲ್ಲಿ ಮೂರನೇ ಕಣ್ಣಿನಿಂದ ದೇವತೆಗಳನ್ನು ನೋಡಿದ್ದೇನೆ. ಧ್ಯಾನ ಮಾಡುವುದರಿಂದ ಒಳ್ಳೆಯ ಯೋಚನೆಗಳು ಬರುತ್ತಿದ್ದವು.

 

ಈ ಪ್ರಪಂಚದಲ್ಲಿ ಎಷ್ಟು ದಿವಸಗಳು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಕಿತ್ತಾಡಿಕೊಂಡು ಎಷ್ಟು ದಿವಸ ಇರಬೇಕು. ಆದ್ದರಿಂದ, ಸಮಾಧಾನ ಶಾಂತಿಯಾಗಿ ಬಾಳಲು ಧ್ಯಾನಮಾಡಿ ಇಡೀ ಪ್ರಪಂಚವನ್ನು ಗೆಲ್ಲಬಹುದು. ಆದ್ದರಿಂದ, ನಾನು ಕೇಳಿಕೊಳ್ಳುವುದು ಏನೆಂದರೆ, ಹಳೆಯ ಯೋಚನೆ ಬಿಟ್ಟು, ಧ್ಯಾನಮಾಡಿ ಹೊಸ ಯೋಚನೆ ಮಾಡಲು ಸಾಧ್ಯ, ನನಗೆ ಒಳ್ಳೆಯದು ಆಗಿರುವುದರಿಂದ ನೀವೂ ಕೂಡ ಧ್ಯಾನಮಾಡಿ ಒಳ್ಳೆಯದು ಪಡೆಯಿರಿ. ಧ್ಯಾನಮಾಡಲು ಪಿರಮಿಡ್‌ಗೆ ಬನ್ನಿ ಕೈ ಜೋಡಿಸೋಣ. ಧನ್ಯವಾದಗಳು.

 

ನಾಗಣ್ಣ
ಪಿರಮಿಡ್ ವ್ಯಾಲಿ

ಬೆಂಗಳೂರು

Go to top