" ಕನಸು ನನಸು "

 

ನನ್ನ ಹೆಸರು ನಾಗರಾಜು. ಪಿರಮಿಡ್ ವ್ಯಾಲಿಯ ಕೆಬ್ಬೆದೊಡ್ಡಿ ಗ್ರಾಮದ ವಾಸಿ. ನಾನು ಪಿರಮಿಡ್ ವ್ಯಾಲಿಯಲ್ಲಿ ಮೊದಲನೇ ದಿನದಿಂದಲೂ ಸೈಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಮೊದಲಿನಿಂದ ಧ್ಯಾನ ಮಾಡುತ್ತಿದ್ದರೂ ಅದು ನಿಯಮಿತವಾಗಿ, ನಿರಂತರವಾಗಿರಲಿಲ್ಲ. 2 ವರ್ಷಗಳಿಂದೀಚೆಗೆ ನಾನು ತಪ್ಪದೇ, ನಿರಂತರವಾಗಿ ಧ್ಯಾನ ಮಾಡುತ್ತಿದ್ದೇನೆ.

 

ಕಾಲೇಜಿನ ದಿನಗಳಲ್ಲಿ ಕಷ್ಟಪಟ್ಟು ಓದುತ್ತಿದ್ದರೂ ನನಗೆ ಸರ್ಕಾರಿ ಕೆಲಸದ ಬಗ್ಗೆಯೇ ಚಿಂತೆಯಾಗಿತ್ತು. ರಾತ್ರಿ ಮಲಗಿದರೆ ನನಗೆ ಕೆಲವು ಸಂದೇಶಗಳು ನನ್ನ ಮನಸ್ಸಿಗೆ ಬಂದಂತೆ ಭಾಸವಾಗುತ್ತಿತ್ತು. ಅವೇನೆಂದರೆ, ಇಡೀ ಪ್ರಪಂಚದ ಜನರು ತಂಡೋಪತಂಡವಾಗಿ, ಸಾಗರೋಪಾದಿಯಲ್ಲಿ ಕೆಬ್ಬೆದೊಡ್ಡಿಯ ವಿಳಾಸವನ್ನು ಕೇಳಿಕೊಂಡು, ಕೆಬ್ಬೆದೊಡ್ಡಿಯ ಕಡೆಗೆ ಬರುತ್ತಿದ್ದರು. ಕಣ್ತೆರೆದು ನೋಡಿದರೆ ಕನಸ್ಸು. ಕೆಬ್ಬೆದೊಡ್ಡಿಯ ಹತ್ತಿರ ಪ್ರಪಂಚ ಗುರುತಿಸುವ ಒಂದು ಒಳ್ಳೆಯ ಕೆಲಸ ನಡೆಯುತ್ತದೆಂದು ನನ್ನ ಮನಸ್ಸು ಹೇಳುತ್ತಿತ್ತು. ಅದೇ ಈ ರೀತಿಯಾಗಿ ನಂತರದ ವರ್ಷಗಳಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ ರೂಪದಲ್ಲಿ ಕೆಬ್ಬೆದೊಡ್ಡಿಯಲ್ಲಿ " ಏಷಿಯಾ ಖಂಡದಲ್ಲೇ ಅತ್ಯಂತ ದೊಡ್ಡದಾದ ಪಿರಮಿಡ್ "ನಿರ್ಮಾಣಗೊಂಡು ಜನರು ತಂಡೋಪತಂಡವಾಗಿ ಬರಲು ಪ್ರಾರಂಭಿಸಿದ್ದಾರೆ. ನನ್ನ ಕನಸನ್ನು ನನಸಾಗಿಸಿದ ಪತ್ರೀಜಿಯವರಿಗೆ, ಟ್ರಸ್ಟಿಗಳಿಗೆ ಎಲ್ಲರಿಗೂ ನನ್ನ ಅನಂತಾನಂತವಾದ ಧನ್ಯವಾದಗಳು.

 

ನಾಗರಾಜು
ಕೆಬ್ಬೆದೊಡ್ಡಿ ಗ್ರಾಮ
ಬೆಂಗಳೂರು

Go to top