" ಧ್ಯಾನದಿಂದ ನನ್ನ ಜೀವನದ ಉದ್ದೇಶ ತಿಳಿಯಿತು "

 

 

ನನ್ನ ಹೆಸರು ನಾಗತಾರ ಜನಾರ್ಧನ್. ಊರು ಕೊಳ್ಳೇಗಾಲ. ನಾನು ಧ್ಯಾನವನ್ನು ಮತ್ತು ಅದರ ಉಪಯೋಗಗಳನ್ನು ನನ್ನ ಸಹೋದರಿ ಸ್ವಾತಿಯಿಂದ ಒಂದೂವರೆ ವರ್ಷದ ಹಿಂದೆಯೇ ತಿಳಿದುಕೊಂಡರೂ ಅದನ್ನು ನಂಬದೇ ಧ್ಯಾನವನ್ನು ಮಾಡುತ್ತಿರಲಿಲ್ಲ. ಆದರೆ, 9 ತಿಂಗಳಿನಿಂದ ನಾನು ಧ್ಯಾನವನ್ನು ಮಾಡುತ್ತಿದ್ದೇನೆ. ನನಗೆ ತುಂಬಾ ಕೋಪ ಜಾಸ್ತಿ, ಎಲ್ಲರೂ ನನ್ನ ಮಾತೇ ಕೇಳಬೇಕೆಂಬ ಹಂಬಲ ನನ್ನದು. ಇದರಿಂದ ತುಂಬಾ ಜನರನ್ನು ನನ್ನಿಂದ ದೂರ ಮಾಡಿಕೊಂಡಿದ್ದೆನು. ನಾನು ಯಾವ ದೇವರನ್ನೇ ಆಗಲಿ, ಸ್ವಾಮೀಜಿಗಳನ್ನಾಗಲಿ ನಂಬುತ್ತಿರಲಿಲ್ಲ. ಯಾವುದರಲ್ಲೂ ಪೂರ್ಣ ನಂಬಿಕೆ ಆಗಲಿ ಇರಲಿಲ್ಲ. ಧ್ಯಾನವನ್ನು ದಿನದ ಕೆಲಸದಂತೆ ರೂಢಿ ಮಾಡಿಕೊಂಡ ನಂತರ ನನಗೆ ನನ್ನ ಜೀವನ ತುಂಬಾ ಆನಂದವಾಗಿದೆ. ಎಲ್ಲರನ್ನೂ ಅರ್ಥಮಾಡಿಕೊಳ್ಳುತ್ತಿದ್ದೇನೆ. ಸಂತೋಷದಿಂದ ಮಾತನಾಡುತ್ತಿದ್ದೇನೆ. ಇಷ್ಟು ದಿನ ಎಲ್ಲರೂ ನನ್ನ ಮೇಲೆ ಇಟ್ಟಿದ್ದ ಪ್ರೀತಿಯನ್ನು ಈಗ ನಾನು ಮತ್ತೇ ಸ್ವೀಕರಿಸುತ್ತಿದ್ದೇನೆ.

 

ಎಷ್ಟೇ ಆಗಲಿ, ಏನೇ ಆಗಲಿ ಸುಭಾಷ್ ಪತ್ರೀಜಿಯವರ ದರ್ಶನ ಆಗದೇ ನನ್ನ ಮನಸ್ಸು ತುಂಬಾ ನಿರಾಶೆಯಿಂದ ಇತ್ತು. ನಾನು ಅಕ್ಟೋಬರ್ ತಿಂಗಳಿನಲ್ಲಿ ಪಿರಮಿಡ್ ವ್ಯಾಲಿಯಲ್ಲಿ ಪತ್ರೀಜಿಯರನ್ನು ನೋಡಿದ ಆ ಕ್ಷಣ ನನಗೆ ಆದ ಆನಂದ ಹೇಳಲು ಆಗುವುದಿಲ್ಲ. ನಂತರ ನಾನು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಪೂರ್ಣನಂಬಿಕೆ ನನ್ನಲ್ಲಿ ಮತ್ತೆ ಮೊಳಕೆಯೊಡೆದಿದೆ. ನನಗೆ ಅಡುಗೆ ಚೆನ್ನಾಗಿ ಮಾಡಲು ಬರುತ್ತಿರಲಿಲ್ಲ. ಆದುದರಿಂದ, ನಾನು ಅಡುಗೆಯ ತಂಟೆಗೇ ಹೋಗುತ್ತಿರಲಿಲ್ಲ. ಆದರೆ, ಈಗ ನಾನು ಮಾಡುವ ಅಡುಗೆ ಎಲ್ಲರೂ ತಿನ್ನುವ ಹಾಗೆ ರುಚಿಯಾಗಿ ಇರುತ್ತಿದೆ. ಸೇತ್ ಕಾರ್ಯಾಗಾರಕ್ಕೆ ಹೋಗಿ ಬಂದ ನಂತರ ನಾನು ತಿಳಿದುಕೊಂಡ ವಿಷಯಗಳು ಅನಂತ. ಆದರೆ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ದಿನೇ ದಿನೇ ತುಂಬಾ ಪ್ರಯತ್ನಪಡುತ್ತಿದ್ದೇನೆ.

 

ಧ್ಯಾನದಲ್ಲಿ ನಾನು ಪಿರಮಿಡ್ಡನ್ನು ಹಾಗೂ ಪತ್ರೀಜಿಯವರನ್ನು ನೋಡಿದಾಗಲೆಲ್ಲಾ ತುಂಬಾ ಖುಷಿಯಾಗುತ್ತಿದೆ. ನಾನು ಈಗ ಎಲ್ಲರಿಗೂ ಧ್ಯಾನದ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ನನ್ನ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಇದರಲ್ಲಿ ಇರುವ ಉಪಯೋಗಗಳನ್ನು ನಾವು ಎಷ್ಟೇ ದುಡ್ಡು ಖರ್ಚುಮಾಡಿದರೂ ದೊರಕದು ಎಂದು ಹೇಳುತ್ತಿದ್ದೇನೆ. ನನಗೆ ಮುಟ್ಚಿನ ದಿನಗಳಲ್ಲಿ ತುಂಬಾ ಸೊಂಟ ನೋವು ಬರುತ್ತಿತ್ತು. ಆದರೆ, ಈಗ ಸಂಪೂರ್ಣವಾಗಿ ಕಡಿಮೆ ಆಗಿದೆ. ನನ್ನ ತಂಗಿ ಗರ್ಭಿಣಿಯಾಗಿದ್ದಳು. ಅವಳ ಮಗುವನ್ನು ನಾನು ಧ್ಯಾನದಲ್ಲಿ ಕಂಡೆನು. ಅದರ ಮರುಂದಿನವೇ ಅವಳಿಗೆ ಹೆರಿಗೆಯಾಯಿತು. ಆ ಮಗುವನ್ನು ನೋಡಿದ ಆಕ್ಷಣ ನನಗೆ ಆಶ್ಚರ್ಯವಾಯಿತು. ಏಕೆಂದರೆ, ನಾನು ಧ್ಯಾನದಲ್ಲಿ ನೋಡಿದ ಮಗುವು ಆದಾಗಿತ್ತು. ನನಗೆ 5 1\2 ವರ್ಷದ ಒಬ್ಬ ಮಗನಿದ್ದಾನೆ. ಅವನು ಮತ್ತು ನಾನು ಇಬ್ಬರೂ 9 ತಿಂಗಳಿನಿಂದ ಔಷಧಿ ತೆಗೆದುಕೊಳ್ಳುವುದನ್ನು ಸಂಪೂರ್ಣ ನಿಲ್ಲಿಸಿದ್ದೇವೆ.

 

ಮರೆತು ಹೋಗಿದ್ದ ಆನಾಪಾನಸತಿ ಧ್ಯಾನವನ್ನು ನಮಗೆಲ್ಲಾ ಮತ್ತೆ ಹೇಳಿಕೊಟ್ಟಿದ್ದಾರೆ ಬ್ರಹ್ಮರ್ಷಿ ಪತ್ರೀಜಿಯವರು. ಅಲ್ಲದೆ, ಆನಾಪಾನಸತಿ ಧ್ಯಾನದ ಉಪಯೋಗಗಳನ್ನು ತಿಳಿಸಿಕೊಟ್ಟು, ಹಾಗೂ ಅದನ್ನು ಪ್ರತಿಯೊಂದು ಊರಿಗೂ, ಪಟ್ಟಣಗಳಿಗೂ, ಪ್ರತಿಯೊಬ್ಬ ಮನುಷ್ಯನಿಗೂ ತಿಳಿಸುತ್ತಿರುವ ಧ್ಯಾನದ ಗುರುಗಳಾದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ಮತ್ತು ಇವರ ಜೊತೆ ಸಹಕರಿಸುತ್ತಿರುವ ನನ್ನ ಎಲ್ಲಾ ಸ್ನೇಹಿತರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಜೀವನದ ಉದ್ದೇಶವೇನೆಂದು ನನಗೆ ತಿಳಿಸಿದ ಗುರುಗಳಿಗೆ ನಾನು ಚಿರಋಣಿ. ನನ್ನ ಜೊತೆ ಸಹಕರಿಸಿದ ನನ್ನ ಕುಟುಂಬದವರಿಗೆ ನಾನು ಚಿರಋಣಿ.

 

 

ಶ್ರೀಮತಿ ನಾಗತಾರ ಜನಾರ್ಥನ್
ಕೊಳ್ಳೇಗಾಲ

Go to top