" ಧ್ಯಾನದಿಂದ ನನ್ನ ತಲೆನೋವು ವಾಸಿಯಾಯಿತು "

 

ನನ್ನ ಹೆಸರು T.N.ನರೇಂದ್ರ. ಶಿಡ್ಲಘಟ್ಟದಲ್ಲಿ ವಾಸ. ವೃತ್ತಿಯಿಂದ ವ್ಯಾಪಾರಸ್ಥ. ಶ್ರೀಮತಿ ರಜಿತ ಅಜಯ್‌ರವರಿಂದ ನನಗೆ ಧ್ಯಾನದ ಪರಿಚಯವಾಯಿತು. ಈ ಮೊದಲೇ ನನಗೆ ಶ್ರೀ ನರಸಿಂಹಯ್ಯನವರು ಧ್ಯಾನದ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದರು. ಆದರೆ, ನನಗೆ ಆಸಕ್ತಿಯಿಲ್ಲದ ಕಾರಣ ಧ್ಯಾನ ಮಾಡುವ ಬಗ್ಗೆ ಗಮನಹರಿಸಲಿಲ್ಲ. ಒಂದೂವರೆ ವರ್ಷದ ನಂತರ ನನ್ನ ಶ್ರೀಮತಿ ನಾಗಲಕ್ಷ್ಮಿ ಧ್ಯಾನ ಮಾಡಲು ಪ್ರಾರಂಭಿಸಿದಳು. ಅವಳಿಗೆ ತುಂಬಾ ವರ್ಷಗಳಿಂದ ಆಗಾಗ ವಿಪರೀತವಾಗಿ ತಲೆನೋವು ಬರುತ್ತಿತ್ತು. ನಾನು ತಲೆನೋವಿಗೆ ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ತೋರಿಸಿದ್ದೆ. ಆದರೆ, ತಲೆನೋವು ವಾಸಿಯಾಗಲಿಲ್ಲ. ಧ್ಯಾನ ಮಾಡಲು ಪ್ರಾರಂಭಿಸಿದಾಗಿನಿಂದ ಅವಳಿಗೆ ಸಂಪೂರ್ಣವಾಗಿ ತಲೆನೋವು ವಾಸಿಯಾಗಿದೆ. ನಂತರ, ನಾನು ನನ್ನ ಶ್ರೀಮತಿಯ ಒತ್ತಾಯದಿಂದ ಧ್ಯಾನ ಆರಂಭಿಸಿದೆ. ಕಳೆದ ಒಂದು ವರ್ಷದಿಂದ ಧ್ಯಾನ ಮಾಡುತ್ತಿದ್ದೇನೆ. ಧ್ಯಾನ ಪ್ರಾರಂಭಿಸಿದ ನಂತರ ನನಗೆ ತುಂಬಾ ನೆಮ್ಮದಿ ದೊರೆತಿದೆ. ನನಗೂ ತಲೆನೋವು ಆಗಾಗ ಬರುತ್ತಿತ್ತು. ಧ್ಯಾನ ಮಾಡಲು ಪ್ರಾರಂಭಿಸಿದ ನಂತರ ತಲೆನೋವು ಸಂಪೂರ್ಣ ವಾಸಿಯಾಗಿದೆ. ನನಗೆ ಈ ಮುಂಚೆ ಜ್ಞಾಪಕಶಕ್ತಿ, ಧೈರ್ಯ ತುಂಬಾ ಕಡಿಮೆಯಿತ್ತು. ಚಿಕ್ಕ ವಿಷಯಗಳಿಗೆಲ್ಲಾ ಭಯಪಡುವುದು, ಅನಾವಶ್ಯಕವಾಗಿ ಒತ್ತಡ ಮಾಡಿಕೊಳ್ಳುವುದು, ಎಲ್ಲರ ಮೇಲೆ ತುಂಬಾ ಅನುಮಾನ ಪಡುವುದು ಮಾಡುತ್ತಿದ್ದೆ. ಧ್ಯಾನ ಮಾಡಲು ಪ್ರಾರಂಭಿಸಿದ ಮೇಲೆ ನನಗೆ ಗೊತ್ತಿಲ್ಲದೆ ಎಲ್ಲಾ ಸಮಸ್ಯೆಗಳು ಸಾಕಷ್ಟು ಸುಧಾರಿಸಿವೆ.

ನಾನು ಧ್ಯಾನಕ್ಕೆ ಬರಲು ಮುಖ್ಯ ಕಾರಣ ಏನೆಂದರೆ ಬಹಳಷ್ಟು ಸ್ವಾಮಿಗಳು, ಪೂಜಾರಿಗಳು ದೇವರ ಅನುಗ್ರಹದ ಬಗ್ಗೆ ಪಾಪ, ಪುಣ್ಯ ಮತ್ತು ಕರ್ಮಗಳ ಬಗ್ಗೆ ಸ್ವಲ್ಪ ಹೊತ್ತು ಮಾತನಾಡಿ ಆನಂತರ ಪೂಜೆ, ಹೋಮ ಎಂದು ಹಣ ಕೇಳುತ್ತಾರೆ. ಆದರೆ, ಬ್ರಹ್ಮರ್ಷಿ ಪತ್ರೀಜಿಯವರು ಆಧ್ಯಾತ್ಮಿಕತೆಯಲ್ಲಿ ಯಾರನ್ನು ಸಹ ಹಣ ಕೇಳಬಾರದು ಮತ್ತು ಯಾವುದೇ ರೀತಿಯ ಹಣದ ವ್ಯಾಪಾರವನ್ನು ತಿರಸ್ಕರಿಸಬೇಕೆಂದು ಹೇಳುತ್ತಾರೆ. ಇದು ನನಗೆ ತುಂಬಾ ಇಷ್ಟವಾಯಿತು. ಆಧ್ಯಾತ್ಮಿಕತೆ ಎಂದರೆ ಹಣ ಸಂಪಾದನೆ ಮಾಡುವ ವ್ಯಾಪಾರವಲ್ಲ, ಅದು ನಾವು ಇನ್ನೊಬ್ಬರಿಗೆ ತೋರಿಸುವ ಪ್ರತಿಫಲದ ಅಪೇಕ್ಷೆಯಿಲ್ಲದ ನಿಷ್ಕಲ್ಮಶವಾದ ಪ್ರೀತಿ ಮಾತ್ರ. ಧ್ಯಾನ ಮಾಡಲು ಪ್ರಾರಂಭಿಸಿದ ಮೇಲೆ ನಾವು ಮೊದಲಿಗಿಂತ ತುಂಬಾ ಆನಂದವಾಗಿದ್ದೇವೆ. ಧ್ಯಾನ ತಿಳಿಯುವುದಕ್ಕೆ ಮೊದಲು ನಮ್ಮ ಮನೆಯಲ್ಲಿ ಟಿ.ವಿ. ತುಂಬಾ ನೋಡುತ್ತಿದ್ದೆವು ಮತ್ತು ಬೇರೆಯವರ ಬಗ್ಗೆ, ಅವರ ನಡವಳಿಕೆಗಳ ಬಗ್ಗೆ ಮಾತನಾಡುತ್ತಿದ್ದೆವು. ಆದರೆ, ಧ್ಯಾನದ ನಂತರ ಟಿ.ವಿ. ನೋಡುವುದು ತುಂಬಾ ಕಡಿಮೆಯಾಗಿದೆ ಮತ್ತು ಬೇರೆಯವರ ಬಗ್ಗೆ ಮಾತನಾಡುವುದು ಕಡಿಮೆಯಾಗಿದೆ. ಆ ಸಮಯದಲ್ಲಿ ಧ್ಯಾನ ಮಾಡುತ್ತೇವೆ ಅಥವಾ ಪುಸ್ತಕಗಳನ್ನು ಓದುತ್ತೇವೆ. ಮತ್ತು ನಮ್ಮ ಕೈಲಾದಷ್ಟು ಧ್ಯಾನ ಪ್ರಚಾರ ಮಾಡುತ್ತೇವೆ. ನಾನು ಮಾಂಸಾಹಾರ ಸೇವಿಸುತ್ತಿದ್ದೆ. ಧ್ಯಾನದ ಪರಿಚಯದ ನಂತರ ನಾನು ಮತ್ತು ನನ್ನ ಪತ್ನಿ ಒಂದು ವರ್ಷದಿಂದ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಇಂತಹ ಅದ್ಭುತವಾದ ಆನಾಪಾನಸತಿ ಪಿರಮಿಡ್ ಧ್ಯಾನವನ್ನು ಕಲಿಸಿದ ಶ್ರೀಮತಿ ರಜಿತ ಅಜಯ್ಕೀರ್ತಿನ್‌ರವರಿಗೆ ಚಿರಋಣಿಗಳಾಗಿದ್ದೇವೆ. ಮತ್ತು ಪ್ರತಿಯೊಬ್ಬರು ಧ್ಯಾನ ಮಾಡುತ್ತ ಆನಂದವಾಗಿ ನೆಮ್ಮದಿಯಾಗಿ ಜೀವನವನ್ನು ಕಳೆಯಬೇಕೆಂದು, ಹಗಲಿರುಳು ತಮ್ಮ ಜೀವನವನ್ನೆ ಧ್ಯಾನ ಪ್ರಚಾರಕ್ಕಾಗಿ ಮುಡುಪಾಗಿಟ್ಟು ಶ್ರಮಿಸುತ್ತಿರುವ ಬ್ರಹ್ಮರ್ಷಿ ಪತ್ರೀಜಿಯವರಿಗೆ ಕೋಟಿ ಕೋಟಿ ಧನ್ಯವಾದಗಳು. ಬ್ರಹ್ಮರ್ಷಿ ಪತ್ರೀಜಿಯವರು ಶಿಡ್ಲಘಟ್ಟಕ್ಕೆ ಬಂದಾಗ ಪಿರಮಿಡ್ ಧ್ಯಾನಕೇಂದ್ರ ಪ್ರಾರಂಭಿಸಲು ಆದೇಶಿಸಿದರು. ಅವರ ಆದೇಶದಂತೆ ನಮ್ಮ ತಾಯಿಯವರಾದ B.ಪ್ರಮೀಳಾರವರು ನಮ್ಮದೇ ಕಟ್ಟಡವನ್ನು ಉಚಿತವಾಗಿ ಪಿರಮಿಡ್ ಧ್ಯಾನ ಕೇಂದ್ರ ಪ್ರಾರಂಭಿಸಲು ಮನಃಪೂರ್ವಕವಾಗಿ ಒಪ್ಪಿಕೊಟ್ಟಿದ್ದಾರೆ. ಈ ಧ್ಯಾನ ಕೇಂದ್ರಕ್ಕೆ "ಸತ್ಯಂ ಧರ್ಮಂ ಪಿರಮಿಡ್ ಧ್ಯಾನ ಕೇಂದ್ರ" ಎಂದು ನಾಮಕರಣ ಮಾಡಿರುತ್ತಾರೆ. ಪತ್ರೀಜಿಯವರ ಸಂಕಲ್ಪದಂತೆ ನಾವೆಲ್ಲರು ಧ್ಯಾನ ಮಾಡಿ, ಧ್ಯಾನ ಪ್ರಚಾರ ಮಾಡುತ್ತಾ ಧ್ಯಾನ ಜಗತ್ ನಿರ್ಮಿಸೋಣ.


T.N. ನರೇಂದ್ರ
ಶಿಡ್ಲಘಟ್ಟ
ಫೋನ್ : +91 9008788966

Go to top