" ನನ್ನ ಜೀವನ ಸಾರ್ಥಕವಾಯಿತು "

 

 

ನನ್ನ ಹೆಸರು ನಿರ್ಮಲ ಗುಪ್ತ. ನಾನು ಜುಲೈ 2006 ರಿಂದ ಧ್ಯಾನವನ್ನು ಮಾಡುತ್ತಿದ್ದೇನೆ. ಸಂಸಾರದ ಒತ್ತಡದಿಂದ ಬಿ.ಪಿ, ಗ್ಯಾಸ್‌ಟ್ರಿಕ್ ತೊಂದರೆಯೂ ಪ್ರಾರಂಭವಾಯಿತು. ಅಂತಹ ಪರಿಸ್ಥಿತಿಯಲ್ಲಿ ನನ್ನ ತಮ್ಮನಾದ ಪ್ರಸಾದ್ ಮುಖಾಂತರ ನಾನು ಧ್ಯಾನವನ್ನು ಕಲಿತೆನು. ಧ್ಯಾನವನ್ನು ಪ್ರಾರಂಭಮಾಡಿದ ಒಂದು ತಿಂಗಳೊಳಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಪೂರ್ತಿಯಾಗಿ ನಿಲ್ಲಿಸಿದೆ. ನಂತರ, ಮೂರು ತಿಂಗಳೊಳಗೆ ನನಗಿರುವ ಸಮಸ್ಯೆಗಳು, ಎಲ್ಲವೂ ಸಹ ದೂರವಾದವು. ಕೆಲಸದ ಒತ್ತಡ ಎಷ್ಟೇ ಇದ್ದರು ಕ್ರಮವಾಗಿ ಧ್ಯಾನವನ್ನು ತಪ್ಪದೆ, ದಿನನಿತ್ಯವೂ ಮಾಡುತ್ತಿದ್ದೇನೆ. ಒಳ್ಳೆಯ ಅನುಭವಗಳು ಆದವು. ನಾವು ಪಡೆದ ಅನುಭವಗಳನ್ನು ಇತರ ಮಾನವಕೋಟಿಗೆ ತಿಳಿಸಬೇಕೆಂಬ ಹಂಬಲದಿಂದ 18.1.2007ರಲ್ಲಿ "ನಿರ್ಮಲ ಪಿರಮಿಡ್ ಧ್ಯಾನ ಕೇಂದ್ರ" ವನ್ನು ನಮ್ಮ ಸ್ವಗೃಹದಲ್ಲಿ ಪ್ರಾರಂಭಮಾಡಿದೆವು. 2007ರಲ್ಲಿ ಶ್ರೀ ಕಂಚಿ ರಘುರಾಮ್, ಶ್ರೀ ಸುಭಾಷ್ ಪತ್ರೀಜಿಯವರ ಸಾಂಗತ್ಯದಲ್ಲಿ, ನಾನು ಮತ್ತು ನನ್ನ ಪತಿಯವರೊಡಗೂಡಿ ಮಾನಸ ಸರೋವರಕ್ಕೆ ಹೋದೆವು. ಅದರಿಂದ, ಬಹಳ ನೆಮ್ಮದಿ ಉಂಟಾಗಿ ಮತ್ತಷ್ಟು ಧ್ಯಾನ ಮಾಡಬೇಕೆಂಬ ಹಂಬಲ ಮನಸ್ಸಿನಲ್ಲಿ ಹೆಚ್ಚಾಗಿದೆ.

 

ಎಲ್ಲಿ ಧ್ಯಾನ ಮಹಾಯಜ್ಞ ನಡೆದರೂ ಸಹ ನಮ್ಮವರು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಪುಟ್ಟಪರ್ತಿ, ತಿರುವಣ್ಣಾಮಲೈ, ತಿರುಪತಿ, ಬೆಂಗಳೂರು, ಶ್ರೀಶೈಲಂ, ದಾವಣಗೆರೆ, ಕಂಚಿ ಎಲ್ಲಾ ಕಡೆ ಭಾಗವಹಿಸಿದ್ದೇನೆ. ಕಂಚಿಯಲ್ಲಿ ನಡೆದ ಧ್ಯಾನ ಮಹಾಯಜ್ಞದಲ್ಲಿ ನನಗೆ ಒಳಗಿಂದ ಶಬ್ಧಗಳು ಕೇಳಿ ಬರುತ್ತಿತ್ತು. ಅದೇನೆಂದರೆ "ಸುಭಾಷ್ ಪತ್ರೀಜಿಯವರು ಸಾಮಾನ್ಯರಲ್ಲ, ಕಾರಣ ಪುರುಷರು. ಇಂತಹ ಮಹತ್ ಕಾರ್ಯಸಾಧನೆಗಳು ಈತನಿಗೆ ಮಾತ್ರ ಸಾಧ್ಯ" ಎನ್ನುವ ಮಾತುಗಳು ಕೇಳಿಬರುತ್ತಿತ್ತು.

 

ನಮ್ಮದು ಧ್ಯಾನ ಕುಟುಂಬ. ನಮ್ಮ ಕೇಂದ್ರದಲ್ಲಿ 40 ದಿವಸಗಳ ಕಾಲ ಪ್ರತಿನಿತ್ಯವೂ 90 ನಿಮಿಷಗಳ ಮಂಡಲ ಧ್ಯಾನವನ್ನು ಯಶಸ್ವಿಯಾಗಿ ನಡೆಸಿದೆವು. ಆಗ ನಮ್ಮ ಯಜಮಾನರು 12 ಗಂಟೆಗಳ ಅಖಂಡ ಧ್ಯಾನವನ್ನು ಮಾಡಬೇಕೆಂಬ ಸಂಕಲ್ಪವನ್ನು ಮಾಡಿಕೊಂಡರು.

 

8.8.2010, ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ 40 ಧ್ಯಾನಿಗಳ ಜೊತೆ ಯಶಸ್ವಿಯಾಗಿ ನಡೆಯಿತು. ಸುಭಾಷ್ ಪತ್ರೀಜಿಯವರೇ ಸ್ವತಃ ಬಂದು ಚಪ್ಪಾಳೆಯನ್ನು ಹೊಡೆಸಿದ ಅನುಭವವಾಯಿತು.

 

ಇದೆಲ್ಲವನ್ನೂ ಅನುಭವಿಸಿದ ಧ್ಯಾನಿಗಳು ತಮಗೆ ಮತ್ತೆ ಯಾವಾಗ ಇಂತಹ ಸುವರ್ಣ ಅವಕಾಶವನ್ನು ಕೊಡುತ್ತೀರೆಂದು ಕಳಕಳಿಯಿಂದ ಕೇಳುತ್ತಿದ್ದಾರೆ. ಇದೆಲ್ಲವೂ ಕಂಚಿ ರಘುರಾಮ್ ಮತ್ತು ಸುಭಾಷ್ ಪತ್ರೀಜಿಯವರ ಆಶೀರ್ವಾದ. ಶೌರ್ಯ, ಬಲ, ಪ್ರೋತ್ಸಾಹವನ್ನು ಕೊಟ್ಟು ನಡೆಸುತ್ತಿರುವ ಆ ಮಹಾನುಭಾವರಿಗೆ ನನ್ನ ಹೃತ್ಪೂರ್ವಕವಾದ ವಂದನೆಗಳನ್ನು ಅರ್ಪಿಸುತ್ತಿದ್ದೇನೆ. ನನ್ನ ಜೀವನವು ಸಾರ್ಥಕವಾಯಿತು.

 

 

N. ನಿರ್ಮಲ ಗುಪ್ತ
ನಿರ್ಮಲ ಪಿರಮಿಡ್ ಧ್ಯಾನ ಕೇಂದ್ರ, ಬೆಂಗಳೂರು
ಫೋನ್ : +91 9844039853

Go to top