" ಸೂಕ್ಷ ಶರೀರಯಾನದಂದ ನಾನು ಈಜಿಪ್ಟ್ ನಲ್ಲಿರುವ ಗೀಜಾ ಪಿರಮಿಡ್‌ನ್ನು ನೋಡಿದ್ದೇನೆ "

 

 

ನನ್ನ ಹೆಸರು ನಿರ್ಮಲ ಪಾಟಿಲ್. ನಮ್ಮ ಊರು ರಾಯಚೂರು. ಕಳೆದ ಮೂರು ವರ್ಷಗಳಿಂದ ಧ್ಯಾನ ಮಾಡುತ್ತಾ ಇದ್ದೇನೆ. ನನ್ನ ಧ್ಯಾನದ ಅನುಭವಗಳು 2008 ಬುದ್ಧ ಪೂರ್ಣಿಮ ದಿನ ನಾನು ನಮ್ಮ ಮನೆಯಲ್ಲಿ ಧ್ಯಾನ ಮಾಡುವಾಗ, ಬ್ರಹ್ಮರ್ಷಿ ಪತ್ರೀಜಿಯವರು ನನಗೆ ಧ್ಯಾನದಲ್ಲಿ ಕಂಡು, ನನ್ನ ಹೆಸರು ಕೇಳಿದರು ಮತ್ತೆ ನಿನ್ನ ಅನುಭವ ಹೇಳು ಅಂದಾಗ, ನಾನು ಧ್ಯಾನ ಮಾಡುತ್ತಾ ಇರುವುದರಿಂದ, ಆನಂದವಾಗಿ ಇದ್ದೀನಿ ಅಂತ ಹೇಳಿದೆ. 2009 ಗುರು ಪೂರ್ಣಿಮ ದಿನ ರಾಯಚೂರಿನಲ್ಲಿರುವ ಸಾಯಿ ಮಂದಿರದಲ್ಲಿ ಸಾಮೂಹಿಕ ಧ್ಯಾನ ಮಾಡುವಾಗ ನಾನು ಪ್ರಕೃತಿಯನ್ನು ತುಂಬಾ ಚೆನ್ನಾಗಿ ನೋಡಿದ್ದೆ. ಮತ್ತೆ ಸೆಪ್ಟಂಬರ್ 6ರಂದು ರಾಯಚೂರಿನಲ್ಲಿರುವ ಏಗನೂರು ದೇವಸ್ಥಾನದಲ್ಲಿ ಇರುವ ಪಿರಮಿಡ್‌ನಲ್ಲಿ ಸಾಮೂಹಿಕ ಧ್ಯಾನ ಮಾಡಿದಾಗ ಸೂಕ್ಷ ಶರೀರಯಾನದಂದ ನಾನು ಈಜಿಪ್ಟ್ ನಲ್ಲಿರುವ ಗೀಜಾ ಪಿರಮಿಡ್‌ನ್ನು ನೋಡಿದ್ದೇನೆ.

ನಿರ್ಮಲ ಪಾಟಿಲ್
ರಾಯಚೂರು

Go to top