" ಧ್ಯಾನದಿಂದ ಎಲ್ಲಾ ಸಿಗುತ್ತವೆ "

 

 

ನಾನು ಈಗ 52 ದಿನದಿಂದ ಧ್ಯಾನ ಮಾಡುತ್ತಿದ್ದೇನೆ. ನನಗೆ ಧ್ಯಾನಮಾಡಿದ 8 ದಿನಗಳ ನಂತರ ಧ್ಯಾನದ ಅನುಭವವಾಯಿತು. ಮೈಯೆಲ್ಲಾ ಬಿಸಿಯಾಗಿ ಬೆವರಿತು. ನಂತರ ನೆತ್ತಿಯಿಂದ ಹಿಡಿದು ಪಾದದವರೆಗೆ ರೋಮಾಂಚನವಾಯಿತು. ನನಗೆ ಮೈಕೈ ನೋವು ಬಹಳ ಇತ್ತು. ಬೆಳಗಾದರೆ ಏಳಲಿಕ್ಕೆ ಆಗದಷ್ಟು ಕಾಲುನೋವು ಇತ್ತು. ಈಗ ಬಹಳ ಕಡಿಮೆಯಾಗಿದೆ. ತೂಕ ಜಾಸ್ತಿ ಇತ್ತು. ಈಗ ತೂಕ ಸಹ ಕಡಿಮೆಯಾಗಿದೆ. ನನಗೆ ಸ್ವಲ್ಪ ತಲೆಸುತ್ತು ಬರುತ್ತಾ ಇತ್ತು. ಈಗ ಅದೂ ಸಹ ಕಡಿಮೆಯಾಗಿದೆ. ನನಗೆ ಮಾನಸಿಕ ಚಿಂತೆ ಬಹಳ ಇದ್ದವು. ನನ್ನ ಯಜಮಾನರು ತೀರಿ ಹೋಗಿದ್ದಾರೆ ಮತ್ತು 6 ತಿಂಗಳ ಕೆಳಗೆ ನನ್ನ ತಮ್ಮನೂ ಸಹ ತೀರಿ ಹೋಗಿದ್ದಾನೆ. ಇವೆಲ್ಲದರ ದುಃಖಗಳಿಂದ ಉಂಟಾಗಿದ್ದ ಮಾನಸಿಕ ಚಿಂತೆಯು ಈಗ ಧ್ಯಾನದಿಂದ ಕಡಿಮೆಯಾಗಿದೆ. ಮಾನಸ್ಸಿಗೆ ನೆಮ್ಮದಿ ಸಿಕ್ಕಿದೆ. ನನಗೆ ಸಿಟ್ಟು ಸಹ ಬಹಳ ಬೇಗ ಬರುತ್ತಿತ್ತು.

\

ಧ್ಯಾನ ಮಾಡುವುದರಿಂದ ನನ್ನ ಮಗನಿಗೆ ಓದಲು ಬಹಳ ಉತ್ಸಾಹ ಬಂದಿದೆ. ಎಲ್ಲಾ ವಿಷಯಗಳಲ್ಲೂ ಸಹ ಅಂಕಗಳು ತುಂಬಾ ಚೆನ್ನಾಗಿ ಬಂದಿವೆ. ಆದ್ದರಿಂದ, ಧ್ಯಾನದಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತವೆ. ಜಗತ್ತಿನಲ್ಲಿ ಎಲ್ಲರೂ ಸಹ ಧ್ಯಾನ ಮಾಡಿ ಅದರ ಫಲ ಅನುಭವಿಸ ಬೇಕೆಂಬುದೇ ನನ್ನ ಆಸೆ.

 

ನಿರ್ಮಲ Vಪಾಟೀಲ್
ಅವರಗೆರೆ, ದಾವಣಗೆರೆ
ಫೋನ್  : +91 9481161174

Go to top