" ಇಂತಹ ಅಪರೂಪವಾದ ಗೌರವ ಸ್ತ್ರೀಯರಿಗೆ ಕೊಡುವುದು ಸಾರ್‌ಗೆ ಮಾತ್ರ ಸಾಧ್ಯ "

 

 

"ಕನಸು ಕಾಣುವ ಕಣ್ಣಿನಲ್ಲಿ ಕಣ್ಣೀರು ಬಂದಾಗ’ ಎಂದು ಹೇಳಿದವರು ಯಾರು? ನನ್ನ ಕಣ್ಣೀರು ಅಷ್ಟು ಬೆಲೆ ಇಲ್ಲದ್ದಾ?"

 

"ನನ್ನ ಜೀವನಕ್ಕೆ ಅರ್ಥವೇನು? ಯಾರಿಗೂ ಯಾಕೆ ಅರ್ಥವಾಗುತ್ತಿಲ್ಲ? ನನ್ನ ವೇದನೆ ಅರಣ್ಯ ರೋದನವೇ?"

 

"ಎಷ್ಟು ಬಾರಿ.. ಎಷ್ಟು ಬಾರಿ.. ಈ ಎದೆಕುಯಿತ ನನಗೆ?"


"ಯಾವಾಗ ಇದಕ್ಕೆ ಪರಿಹಾರ?"


"ಅರ್ಥ, ಪರಮಾರ್ಥವಿಲ್ಲದ ಜೀವನ ನನಗೇಕೆ?

 

ನಿರಾಸೆ, ಬೇಸರಗಳಿಂದ ಬೇಸತ್ತ ನನಗೆ ಜೀವನದಿಂದಲೇ ನಿರ್ಗಮಿಸಲಿರುವ ಕ್ಷಣದಲ್ಲಿ ನನ್ನ ಜೀವನ ಇದಕ್ಕೆ ಪೂರ್ತಿಯಾಗಿ ಭಿನ್ನವಾದ ಪ್ರಪಂಚದ ಕಡೆ ತಿರುಗಿತು. 1997 ಮಾರ್ಚಿ 31ರ ಸಾಯಂಕಾಲ ನನ್ನ ತಂದೆ "ಬ್ರಹ್ಮರ್ಷಿ ಪತ್ರೀಜಿ" ಮಡಿಲಿನಲ್ಲಿ ಕಣ್ಣುಗಳನ್ನು ತೆರೆದಾಗಲಿಂದಲೂ ನನ್ನ ಜೀವನ ಪೂರ್ತಿಯಾಗಿ ಆತ್ಮ ಸಂತೃಪ್ತಿಯಿಂದ ಆನಂದದಿಂದ ತೋರಲು ಪ್ರಾರಂಭವಾಯಿತು.

 

"ಬ್ರಹ್ಮರ್ಷಿ ಪತ್ರೀಜಿ" ಗೆ ತುಂಬಾ ಕೃತಜ್ಞಳು ನಾನು. ಸ್ನೇಹಿತರೇ.. ಪ್ರತಿ ಪಿರಮಿಡ್ ಮಾಸ್ಟರ್‌ಗೂ ಪತ್ರೀಸಾರ್ ಜೊತೆ ಕಳೆದ ಅಪರೂಪವಾದ ಸಂದರ್ಭಗಳಿರುತ್ತವೆ. ಇದು ಸರ್ವೇಸಾಮಾನ್ಯ.

 

ಆದರೆ, ನನಗೆ ಮಾತ್ರ 12 ವರ್ಷಗಳಿಂದ ಪ್ರತಿಕ್ಷಣವೂ ಅದ್ಭುತವಾದದ್ದೇ. 1997 ನಲ್ಲಿ ಪರಿಚಯವಾದ ಕ್ಷಣದಿಂದ ಈ ಕ್ಷಣದವರೆಗೂ ಸಾರ್ ನನ್ನನ್ನು ಚುರುಕುಗೊಳಿಸಿದ ರೀತಿ, ನನ್ನ ಜೀವನವನ್ನು ಒಂದು ಹಂತಕ್ಕೆ ತಂದ ವಿಧಾನ ಅವರಿಗೆ ಮಾತ್ರವೇ ಸಾಧ್ಯ. 

 

ಪ್ರತ್ಯಕ್ಷವಾಗಿ ಆಗಲಿ, ಪರೋಕ್ಷವಾಗಿ ಆಗಲಿ, ನಾನು ಕೋಟ್ಯಾಂತರ ಬಾರಿ ಪತ್ರೀಸಾರ್‌ನಿಂದ ಸಂದೇಶಗಳನ್ನು ತೆಗೆದುಕೊಂಡಿದ್ದೇನೆ. ಎಣಿಸಲಾಗದಷ್ಟು ಮಂದಿ ಆಸ್ಟ್ರಲ್ ಮಾಸ್ಟರ‍್ಸ್‌ನಿಂದ, ನನ್ನ ಮೂರನೇ ಕಣ್ಣಿನ ತೆರವಿನಿಂದ, ಆಟೋರೈಟಿಂಗ್‌ನಿಂದ, ಊಜಾಯಿಂದ ಸಂದೇಶಗಳನ್ನು ಪಡೆದುಕೊಂಡೆ. ಅನೇಕ ಬಾರಿ ಆಸ್ಟ್ರಲ್ ವರ್ಲ್ಡ್ಸ್ ಸುತ್ತಿ ಬಂದಿದ್ದೇನೆ. ನಾನು ನೋಡದ ಲೋಕವಾಗಲೀ ಭೇಟಿಯಾಗದ ಮಾಸ್ಟರ‍್ಸ್ ಆಗಲಿ ಇಲ್ಲವೆಂದರೇ ಅತಿಶಯೋಕ್ತಿ ಆಡಿಲಾರದು.

 

ಆದರೆ, ಇವೆಲ್ಲಕ್ಕಿಂತಾ ಕೂಡಾ ಈ ಅನುಭವಗಳನ್ನು ನಾನು ಹೇಳುತ್ತಿರುವಾಗ ಪತ್ರಿಸಾರ್ ತೋರಿಸುವ ಶ್ರದ್ಧೆ, ಆ ಕಣ್ಣುಗಳಲ್ಲಿ ಮಿಂಚು, ನೀಡಿದ ಆನಂದ, ಸಂತೃಪ್ತಿ ಈ ಪ್ರಪಂಚದಲ್ಲಿ ನನಗೆ ಬೇರೆ ಯಾವುದೂ ನೀಡಲಾರದು, ಇದು ಅನಿರ್ವಚನೀಯ..

 

ಒಂದು ಬಾರಿ ನಾನು ಮತ್ತು ವರಲಕ್ಷ್ಮಿ ಮೇಡಮ್ ಇಬ್ಬರೂ ಪತ್ರೀಸರ್‌ನ ಭೇಟಿಯಾದಾಗ ಅವರು ಒಂದು ಸ್ಟೇಟ್‌ಮೆಂಟ್ ಕೊಟ್ಟರು. "ಮೇಡಮ್ ನಾನು ಖಡ್ಗಕ್ಕೆ ಸವರಿದ ಜೇನಿನ ಹಾಗೆ" ಎಂದು. ಅದು ಕೇಳಿ ನಾವು ಸ್ವಲ್ಪ ಹೊತ್ತು ದಂಗಾದೆವು. ಸ್ವಲ್ಪ ಹೊತ್ತು ನಮಗೆ ಎಲ್ಲಾ ನಿಂತು ಹೋದಂಗಾಯಿತು. ಸಾರ್ ಹತ್ತಿರ ಹೋಗುವವರಿಗೆ ಮುಂಚಿತವಾಗಿ ಆ ಜ್ಞಾನ ಖಡ್ಗದ ಚೂಪು ಮಾತ್ರವೇ ತಾಕುತ್ತದೆ. ಅಜ್ಞಾನ, ಅಹಂಕಾರ ಹೋದ ನಂತರ ಮಾತ್ರವೇ ಆ ಜೇನನ್ನು ನಾವು ಸವಿಯಬಲ್ಲೆವು. ಮೇಲೆ ಖಡ್ಗದ ಹಾಗೆ, ಒಳಗೆ ಜೇನಿನ ಹಾಗೆ ಇರುವುದೇ ಇತರರಿಂದ ಸಾರ್‌ರವರ ಪ್ರತ್ಯೇಕತೆ.

 

ಸತ್ಯವನ್ನು ನಂಬಿದವರಿಗೆ ಪ್ರತೀ ಸಾರ್ ಎಷ್ಟು ಬೆಲೆಯನ್ನು ಕೊಡುತ್ತಾರೋ, ಪತ್ರೀ ಸಾರ್‌ನ ನಂಬಿದವರಿಗೆ ಮಾತ್ರವೇ ಅತ್ಯಂತ ಉನ್ನತ ಲೋಕಗಳು ಬೆಲೆ ಕೊಡುತ್ತವೆ ಎಂಬುವುದು ಒಬ್ಬ ಥರ್ಡ್ ಐ ಮಾಸ್ಟರಾಗಿ ನನಗಿರುವ ಅನುಭವ.

 

"ಸ್ತ್ರೀ ಸ್ವಾತಂತ್ರ"ದ ಬಗ್ಗೆ ಪತ್ರೀಸಾರ್ ತೋರಿಸುವ ಶ್ರದ್ಧೆ ನನಗೆ ಅನೇಕ ಬಾರಿ ಕಣ್ಣೀರನ್ನು ತರಿಸಿದೆ. ಅವರು ಸ್ತ್ರೀಯರಿಗೆ ಕೊಡುವ ಗೌರವವನ್ನು ನೋಡಿದಾಗ ನನಗೆ ತುಂಬಾ ವಿಸ್ಮಯವಾಗುತ್ತಿತ್ತು. ಇದನ್ನು ಕುರಿತು ಸಾರ್ ನನಗೆ ಒಂದು ಬಾರಿ ಹೀಗೆ ಹೇಳಿದರು: "ಸ್ತ್ರೀಯರಿಗೆ ಹೇಳುವ ಪ್ರತಿಯೋಂದು ಹನಿ ಕೂಡಾ ವ್ಯರ್ಥವಾಗುವುದಿಲ್ಲ ಮೇಡಂ" ಎಂದು. ಇದು ಕೇಳಿದ ನನಗೆ ಮೈಯೆಲ್ಲಾ ರೋಮಾಂಚನಗೊಂಡಿತ್ತು. ಇಂತಹ ಅಪರೂಪವಾದ ಗೌರವ ಸ್ತ್ರೀಯರಿಗೆ ಕೊಡುವುದು ಸಾರ್‌ಗೆ ಮಾತ್ರ ಸಾಧ್ಯ.

 

"ಈ ಶರೀರದಲ್ಲಿರುವ ಉಸಿರಿನಲ್ಲೇ ಗಣಿ ಇದೆ" ಎಂದು ಅನ್ನಮಯ್ಯ ಹಾಡಿದರೂ, "ಶಾಂತಿಯು ಇಲ್ಲದೇ ಸೌಖ್ಯವಿಲ್ಲ"ವೆಂದು ತ್ಯಾಗರಾಜರು ಹೇಳಿದರೂ, "ಕಾಮಿ ಆಗದವನು ಮೋಕ್ಷಗಾಮಿ ಆಗಲಾರ" ಎಂದು ಯೋಗಿ ವೇಮನ ಘರ್ಜಿಸಿದರೂ, "ಯಾವಾಗ ಅರ್ಧರಾತ್ರಿಯಲ್ಲಿ ಕೂಡಾ ಸ್ತ್ರೀಯು ಸ್ವತಂತ್ರವಾಗಿ ಸಂಚರಿಸುತ್ತಾಳೋ ಆ ದಿನವೇ ಭಾರತದೇಶಕ್ಕೆ ನಿಜವಾದ ಸ್ವಾತಂತ್ರ ಲಭಿಸಿದ ಹಾಗೆ" ಎಂದು ಮಹಾತ್ಮ ಗಾಂಧೀಜೀ ತಮ್ಮ ಸ್ವಾತಂತ್ರ ಸಂದೇಶವನ್ನು ನೀಡಿದರೊ, ಅದರ ಹಿಂದೆ ಇರುವ ಮೂಲ ಕಾರಣ ಒಂದೇ: ಸ್ತ್ರೀ ಸರ್ವಸ್ವತಂತ್ರಳು. ಆದರ ಹೊರತಾಗಿ, ಈ ಭೂಮಿ ಕಾಂತಿಮಯ ಲೋಕವಾಗುವುದು ಅಸಾಧ್ಯ. ಈ ನಗ್ನ ಸತ್ಯವನ್ನು ತಿಳಿದಿರುವ ಅನಂತ ಲೋಕಗಳಲ್ಲಿರುವ ಅನೇಕ ಮಹಾನುಭಾವರು ಸಂಭ್ರಮಾಶ್ಚರ್ಯಗಳಿಂದ ನೋಡಿದರು, ಪತ್ರೀಜಿ 1947 ನವಂಬರ್ 11ರಂದು ಈ ಭೂಮಿಯ ಮೇಲೆ ಜನ್ಮಿಸಿದ ಅತ್ಯಂತ ಅಪರೂಪವಾದ ಘಟನೆಯನ್ನು..

 

ಆ ಕ್ಷಣದಿಂದ ಅನೇಕ ಮಹಾನುಭಾವರನ್ನು ಸಂಧಿಸಿ, ಸಂಘಟಿಸುತ್ತಾ, ಅವರಿಂದ ಅನೇಕಾನೇಕ ಪ್ರಯೋಗಗಳನ್ನು ಮಾಡಿಸುತ್ತಾ, ಎಲ್ಲರಿಗೂ ಒಂದೇ ಗಮ್ಯದ ಕಡೆ ನಡೆಸುತ್ತಿರುವ ಪತ್ರೀಸಾರ್‌ನ ನೋಡಿದಾಗಲೇ ನಾನು ಅಂದುಕೊಂಡೆ "ದಟೀಜ್ ಪತ್ರೀಜಿ" ಎಂದು..

 

"ಈ ಭೂಮಿಯು 2012ಕ್ಕೆಲ್ಲಾ ಕಾಂತಿಮಯ ಲೋಕವಾಗಬೇಕು; ’ಅಂದುಕೊಂಡ ಸಮಯಕ್ಕೆ ಅದು ನೆರವೇರುತ್ತದೆ’ ಎಂದು ನಾನು ನಂಬುತ್ತಿದ್ದೇನೆ. ನೀವೇನು ಹೇಳುತ್ತೀರ ಮೇಡಮ್? ನನ್ನ ನಂಬಿಕೆ ನಿಜ ಹೌದಾ, ಅಲ್ಲವಾ?" ಎಂದು ಪತ್ರಿಸಾರ್ ವರಲಕ್ಷ್ಮಿ ಮೇಡಮ್ ಅವರನ್ನು ಮತ್ತು ನನ್ನನ್ನು, ಕೇಳಿದರು. ನಾವು "ಯಾಕೆ ಆಗುವುದಿಲ್ಲ ಸಾರ್? ಮಾರ್ಗ, ಗಮ್ಯ ಎರಡು ನೀವೇ ತೋರಿಸುತ್ತಿರುವಾಗ ಅದು ಅಸಾಧ್ಯ ಹೇಗೆ ಆಗುತ್ತದೆ. ಖಂಡಿತವಾಗಿಯೂ ನೀವು ಅಂದುಕೊಂಡಿದ್ದು, ಅಂದುಕೊಂಡ ಸಮಯಕ್ಕೆ ನೆರವೇರುತ್ತದೆ "ಎಂದು ಖಚಿತವಾಗಿ ಹೇಳಿದೆವು.

 

ಈ ನವೆಂಬರ್ ತಿಂಗಳ 11ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನನ್ನ ತಂದೆ "ಬ್ರಹ್ಮರ್ಷಿ ಪತ್ರೀಜಿ" ಅವರಿಗೆ ಶತಕೋಟಿ ಶುಭಾಶಯಗಳು...

 

ಧ್ಯಾನ ರತ್ನ ಎ. ಪದ್ಮ
ವಿಜಯವಾಡ
 

Go to top