" ಧ್ಯಾನ ಮಹಾಚಕ್ರದಲ್ಲಿ ಪ್ರತಿಕ್ಷಣವೂ ಆನಂದವನ್ನು ಅನುಭವಿಸಿದ್ದೇನೆ "

 

ನಾನು 10 ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ವಿಶಾಖಪಟ್ಟಣ ಧ್ಯಾನ ಮಹಾಚಕ್ರದಲ್ಲಿ ಪ್ರತಿಕ್ಷಣವೂ ಆನಂದವನ್ನು ಅನುಭವಿಸಿದ್ದೇನೆ. 10 ವರ್ಷಗಳಿಂದ ಧ್ಯಾನವನ್ನು ಕ್ರಮಬದ್ಧವಾಗಿ ಮಾಡುತ್ತಿದ್ದರೂ, ಒಂದು ಗಂಟೆ ಮಾತ್ರವೆ ಕುಳಿತುಕೊಳ್ಳುತ್ತಿದ್ದೆ. ಆದರೆ, ಈ ಮಹಾಚಕ್ರದಲ್ಲಿ ಬೆಳಿಗ್ಗೆ 2.30 ಗಂಟೆ ಮತ್ತು ಆಸ್ಟ್ರಲ್ ಸರ್ಜರಿ ವರ್ಕ್‌ಶಾಪ್‌ನಲ್ಲಿ 4 ಗಂಟೆಗಳ ಕಾಲ ಒಂದೇ ಸಮನೆ ಕೂರುತ್ತಿದ್ದೆ. ಪತ್ರಿಸಾರ್ ಹೇಳಿದ ನವವಿಧ ಧರ್ಮಗಳು ನನಗೆ ತುಂಬಾ ಇಷ್ಟವಾಯಿತು. ಮನೆಗೆ ಬಂದ ನಂತರ ಅದನ್ನು ಎಷ್ಟೋ ಸಂದರ್ಭಗಳಲ್ಲಿ ಉಪಯೋಗಿಸಿಕೊಂಡಿದ್ದೇನೆ. ಬೆಳ್ಳುಳ್ಳಿ ಉಪಯೋಗಿಸಬಾರದೆಂದು ಬಹಳಷ್ಟು ಮಾಸ್ಟರ್‌ಗಳು ಹೇಳಿದರೂ ನಾನು ಉಪಯೋಗಿಸುತ್ತಿದ್ದೆ, ಪತ್ರಿಸಾರ್‌ರಿಂದ ಕೇಳಿದ ತಕ್ಷಣವೆ ಇನ್ನು ಉಪಯೋಗಿಸುವುದಿಲ್ಲವೆಂದು ಅಲ್ಲೇ ನಿರ್ಣಯಿಸಿಕೊಂಡೆ.

 

ಪದ್ಮಲತ
ಚಿಂತಾಮಣಿ

Go to top