" ಧ್ಯಾನೋದಯ "

 

ನನ್ನ ಹೆಸರು ಪಾರ್ವತಮ್ಮ. ಧ್ಯಾನ ಅನ್ನುವುದು ನನಗೆ ತಿಳಿದಿರಲಿಲ್ಲ. ನನ್ನ ಮಗಳು ತರಳಬಾಳು ಧ್ಯಾನ ಮಂದಿರಕ್ಕೆ ಹೋಗುತ್ತಿದ್ದಳು. ಅವಳ ಅನುಭವವನ್ನು ನನ್ನ ಹತ್ತಿರ ಹಂಚಿಕೊಂಡಾಗ, ನಾನು ಧ್ಯಾನ ಮಾಡಿದರೆ ನನಗೆ ನನ್ನ ದೇಹದಲ್ಲಿರುವ ರೋಗ ರುಜಿನಗಳು ವಾಸಿಯಾಗಬಹುದೆಂದು ತಿಳಿದು ದಾವಣಗೆರೆಯಲ್ಲಿ ಧ್ಯಾನ ಮಂದಿರಕ್ಕೆ ಹೋಗುತ್ತಿದ್ದೆ. 10-12 ದಿವಸಕ್ಕೆ ನನ್ನ ಭುಜದ ನೋವು ಕಡಿಮೆಯಾಗಿದೆ. ಧ್ಯಾನವನ್ನು ಮುಂದುವರಿಸುತ್ತಾ ಹೋದಂತೆ ನನಗೆ ಮೊಣಕಾಲುಗಳು ಕೈ ಭಾರವಾದ ಕೆಲಸಮಾಡಿದರೂ ಮತ್ತು ನಡೆದರೂ ಉತ್ಸಾಹಿಯಾಗಿ ಇರುತ್ತಿದ್ದೆ. ಮನಸ್ಸು ಚಂಚಲ ಇರುತ್ತಿರಲಿಲ್ಲ. ಬಿ.ಪಿ., ತಲೆಸುತ್ತು ಎರಡು ತಿಂಗಳಿಂದ ದೇಹದಿಂದ ದೂರವಾಗಿದೆ. ಆರೋಗ್ಯ ತುಂಬ ಚೆನ್ನಾಗಿದೆ. ಧ್ಯಾನ ಮಾಡುವಾಗ ದೇಹವು ತೇಲಾಡಿದಂತಾಗುತ್ತಿದೆ. ಧ್ಯಾನ ಮಾಡುತ್ತಾ ಮಾಡುತ್ತಾ ನಿದ್ರೆಯ ಅರಿವೇ ಇರುವುದಿಲ್ಲ.         

 

ನಾನು 6-7 ವರ್ಷದಿಂದ ಬಲಗೈ ಕೆಲಸವನ್ನು ಮಾಡುವುದಕ್ಕೆ ಬರುತ್ತಿರಲಿಲ್ಲ. ಎಕ್ಸರೇ, ಸ್ಕಾನಿಂಗ್, ಬ್ಲೆಡ್ ಟೆಸ್ಟ್ ಮಾಡಿಸಿದ್ದೆವು. ಆದರೂ ಸರಿಹೋಗಲಿಲ್ಲ. ಧ್ಯಾನದಿಂದ ಇವೆಲ್ಲಾ ಸರಿಯಾಗಿವೆ. ಮನಸ್ಸಿಗೆ ನೆಮ್ಮದಿ ತಂದಿದೆ. ಬಸಾಪುರದ ಧ್ಯಾನ ಕೇಂದ್ರದಲ್ಲಿ ಧ್ಯಾನವನ್ನು ಮುಂದುವರಿಸಿದ್ದೇನೆ. ಬೆಂಗಳೂರಿನ ಪಿರಮಿಡ್‌ಗೂ ಹೋಗಿ ಬಂದಿದ್ದೇನೆ. ಅಲ್ಲಿನ ಅನುಭವ ಚೆನ್ನಾಗಿ ತಿಳಿದುಕೊಂಡಿದ್ದೇವೆ. 1 ರಿಂದ 1.30 ತಾಸು ಧ್ಯಾನ ಮಾಡಿದರು ನಮಗೆ ಉಸಿರಿನ ಕಡೆಗಮನ ಇರುವುದರಿಂದ ಮನಸ್ಸು ಹಗುರವಾಗುತ್ತದೆ. ದಿನಕ್ಕೆ 3 ಬಾರಿ ಧ್ಯಾನವನ್ನು ಮಾಡುತ್ತೇವೆ. ನಮ್ಮ ಮನೆಯಲ್ಲಿ ನಮ್ಮ ಸೊಸೆಯಂದಿರು, ತಂಗಿಯರು, ಮಕ್ಕಳು, ಗೆಳತಿಯರು ಧ್ಯಾನ ಮಾಡುತ್ತಾರೆ. ಬೇರೆಯವರಿಗೂ ಧ್ಯಾನವನ್ನು ಮಾಡಲು ಪ್ರೇರೆಪಿಸಬೇಕು ಅನಿಸುತ್ತದೆ. ಧ್ಯಾನದಿಂದ ಒಬ್ಬ ಸಾಮಾನ್ಯ ಮನುಷ್ಯ ಅಸಾಮಾನ್ಯನಾಗುತ್ತಾನೆ, ಧೈರ್ಯವಂತನಾಗುತ್ತಾನೆ. ಆಧ್ಯಾತ್ಮಿಕ ಜೀವನದ ಜೊತೆಗೆ ಲೌಕಿಕ ಜೀವನದಲ್ಲೂ ಸಹ ಯಶಸ್ಸು ಶತಸಿದ್ಧ. 

 

ಪಾರ್ವತಮ್ಮ S.ಸಿದ್ದಪ್ಪ
ಊರಬಾಗಿಲು, ಬಸಾಪುರ
ದಾವಣಗೆರೆ

Go to top