ನಾನು ಸುವರ್ಣಲೋಕವನ್ನು ಹಲವು ಬಾರಿ ಧ್ಯಾನದಲ್ಲಿ ನೋಡಿದ್ದೇನೆ "

 

 

 

ನಾನು ಪವಿತ್ರ.B. ಧ್ಯಾನ ಕಸ್ತೂರಿ ಪತ್ರಕೆ ಬಹಳ ಸೊಗಸಾಗಿ ಮೂಡಿ ಬರುತ್ತಿದ್ದೆ. ನೀವು ಕೊಡುವ ಮಾತುಗಳು ನಮ್ಮ ಮನಸ್ಸಿಗೆ ಮೆಚ್ಚುವಂತಿರುತ್ತದೆ.     

     

ಆನಾಪಾನಸತಿ ಧ್ಯಾನವನ್ನು 4 ವರ್ಷಗಳಿಂದ ಮಾಡುತ್ತಿದ್ದೇನೆ. 8 ವರ್ಷಗಳಿಂದಿದ್ದ ಮೈಗ್ರೇನ್‌ನಿಂದ ಬಳಲುತ್ತಿದ್ದೆ. ಕಳೆದ 3 ವರ್ಷಗಳಿಂದ ಅದು ಸಂಪೂರ್ಣವಾಗಿ ಹೋಗಿದೆ. ಇದು ಧ್ಯಾನದಿಂದ ಮಾತ್ರ ಸಾಧ್ಯವಾಯಿತು. ಈ ಧ್ಯಾನದಲ್ಲಿ ನನಗೆ ಅತ್ಯಾನಂದವಾಗುವಂತಹ ಅನುಭವಗಳಾಗಿವೆ, ಹಾಗು ಲಾಭವೂ ಸಹ ಆಗಿದೆ. ಕಳೆದ 2 ವರ್ಷಗಳಿಂದ ಕಥೆ, ಕವನ ಹಾಗು ಹಾಡುಗಳನ್ನು ಬರೆಯುತ್ತಿರುತ್ತೇನೆ. ಮಹಾವತಾರ ಬಾಬಾ, ಶಿರಡಿ ಬಾಬಾ, ಬುದ್ಧ, ಬಸವಣ್ಣ, ಶಿವನು ಇವರೆಲ್ಲಾ ಧ್ಯಾನದಲ್ಲಿ ಕಾಣಿಸಿ ನನ್ನೊಂದಿಗೆ ಮಾತನಾಡುತ್ತಾರೆ. 

 

ನಾನು ಸುವರ್ಣ ಲೋಕವನ್ನು ಹಲವು ಬಾರಿ ಧ್ಯಾನದಲ್ಲಿ ನೋಡಿದ್ದೇನೆ. ಅಲ್ಲಿ ಕಾಣುವುದೆಲ್ಲಾ ಫಳಫಳನೆ ಹೊಳೆಯುವ ವಜ್ರಗಳು, ಮುತ್ತುಗಳು, ರತ್ನಗಳು ಹಾಗು ಚಿನ್ನ, ಅಲ್ಲಿನ ಪ್ರಾಣಿ, ಪಕ್ಷಿಗಳು ಭೂಲೋಕಕ್ಕಿಂತ ಸ್ವಲ್ಪ ವಿಭಿನ್ನವಾಗಿದ್ದು. ಅವು ಸಹ ಚಿನ್ನದಲ್ಲಿರುತ್ತದೆ? ಆ ದೃಶ್ಯವನ್ನು ಕಂಡು ಬೆರಗಾದೆ. ಅಹಾ ಏನು ಅದ್ಭುತ ಲೋಕವದು. ಅಲ್ಲಿ ಬೃಹದಾಕಾರದ ಕೆಲವು ಚಿನ್ನದ ಪಿರಮಿಡ್‌ಗಳು, ಅದರ ಮಧ್ಯೆ ಮಹಾವತಾರ ಬಾಬಾ ಮತ್ತು ಇನ್ನು ಮುಖವು ಕಾಣಿಸದ ಕೆಲವು ಮಾಸ್ಟರ್‌ಗಳು ಸಹಾ ಧ್ಯಾನದಲ್ಲಿರುತ್ತಾರೆ. ಹೀಗೆ ಧ್ಯಾನದಲ್ಲಿ ಕಾಣುತ್ತಿರುವೆನು. ಆಗ ನನ್ನ ಮೈ ಹಗುರವಾಗಿ ಏನಿಂಥಹ ವಿಸ್ಮಯವೆನಿಸುತ್ತದೆ. 

                     

ನನಗೆ ಧ್ಯಾನ ಮಹಾಯಜ್ಞದಲ್ಲಿ ಸಾವಿರಾರು ಜನರು ಸೇರಿ ಮಾಡಿದ ಧ್ಯಾನದಿಂದ ಆದ ಮಹತ್ತರವಾದ ಶಕ್ತಿಯ ಹರಿಯುವಿಕೆಯಿಂದ ಭೂಮಿಗೆ ಏನಾಗಿರಬಹುದೆಂದು ನೆದು ಇದನ್ನು ತಿಳಿಯಲೇಬೇಕೆಂದು ಧ್ಯಾನದಲ್ಲಿ ಕುಳಿತೆ ಆಗ :

 

 ದೃಶ್ಯ 1 : ಜನರೆಲ್ಲಾ ಒಟ್ಟಿಗೆ ಕೂತು ಧ್ಯಾನದಲ್ಲಿದ್ದಾಗ ಎಲ್ಲರ ತಲೆಯ ಮೇಲೆ silver rays equal ಆಗಿ ಹರಡಿತು. ಅದು ನೋಡುತ್ತಾಲೇ ಬಹಳ ದೊಡ್ಡದಾಗಿ ನದಿಯಂತೆ ಹರಡಿತು.

 

ದೃಶ್ಯ 2 : ಆಕಾಶದಲ್ಲಿ ಸಪ್ತ  ಋಷಿಗಳಲ್ಲಿ ನಾಲ್ವರು ಧ್ಯಾನದಲ್ಲಿದ್ದು ಅವರ ಬಳಿ ಓಂಕಾರದರ ಮಂತ್ರವು ಕೇಳುತ್ತಿತ್ತು. ಅವರ ಹಿಂದೆಯು golden circle balls ಬರಲು ಆರಂಭಿಸಿತು. ಆ ಚಂಡುಗಳು ಭೂಮಿಯ ಅರ್ಥ ಮೇಲ್ಭಾಗದಲ್ಲಿ ಬಿದ್ದು ಹರಡಿತು, ಅರ್ಥ ಭೂಮಿಯೆಲ್ಲಾ ಬಂಗಾರದ ಬಣ್ಣದಿಂದ ತುಂಬಿತು.

 

ದೃಶ್ಯ 3 : ಈ ಬೆಳ್ಳಿ ಶಕ್ತಿಯ  (Silver rays) ನದಿಯು ಭೂಮಿಯ ಕೆಳಭಾಗದ ಅರ್ಥದಲ್ಲಿ ಹರಡಿತು. ಆ ಎರಡರ ಶಕ್ತಿಯನ್ನು ಭೂಮಿಯು ಹೇರಿಕೊಂಡಿತು.

 

ದೃಶ್ಯ 4 : ಈ ಎರಡರ ಮಧ್ಯೆ ಪತ್ರೀಜಿಯವರು ಸಹ ಸಮುದ್ರದ ಬಳಿ ನಿಂತು ಸುನಾಮಿಗೆ ನಿಲ್ಲು ಎಂಬಂತೆ ಕೈ ತೋರಿಸಿ ನೀಡಿದರು.

 

ದೃಶ್ಯ 5 : ಎಲ್ಲಾ ಶಕ್ತಿಯನ್ನು ತನ್ನೊಳಗೆ ಹೀರಿಕೊಂಡ ಭೂಮಿಯು ಅತ್ಯಾನಂದದಿಂದ ನಲಿಯಿತು. ಹೂವುಗಳೆಲ್ಲಾ ಒಂದಕ್ಕೊಂದು ಅಂಟಿ ನೃತ್ಯವಾಡಿತು. ಮರಗಿಡಗಳೆಲ್ಲಾ ನಲಿದಾಡಿ ಅತಿಯಾದ ಗಾಳಿ ಬೀಸಿತು. ಆಕಾಶದಿಂದ ಗುಡುಗು ಸಿಡಿಲು ಬಡಿದು ಮಳೆ ಸುರಿಯಿತು. ಲಾವಾ ರಸವು ಅತಿ ವೇಗವಾಗಿ ಉಕ್ಕಿ ಬರಲು ಪ್ರಾರಂಭಿಸುತ್ತಿರಲು ಈ ಶಕ್ತಿಯ ಮಹಿಮೆಯಿಂದ ಅದು ಭೂಮಿಯ ಕೆಳಗೆ ಹೋಯಿತು. ಸಮುದ್ರದ ಅಲೆಗಳು ಬಹಳ ರಭಸದಿಂದ ಉಕ್ಕಲು ಆರಂಭಿಸಿ ಮತ್ತೆ ಈ ಶಕ್ತಿಯಿಂದ ಶಾಂತವಾಯಿತು. ಇಡೀ ಪ್ರಕೃತಿಯೇ ನರ್ತಿಸುತ್ತಿತ್ತು. 

 

ದೃಶ್ಯ 6 : ಇದಾದ ತಕ್ಷಣವೇ ಸಾಯಿಬಾಬಾ(ಶಿರಡಿ) ರವರನ್ನ ಕಂಡೆ. ಅವರು ಬಿಳಿ ಬಟ್ಟೆಯನ್ನು ಧರಿಸಿದ್ದರು. ಅವರ ಸುತ್ತಲು ವಿಶ್ವಚೈತನ್ಯ ಶಕ್ತಿ ಕಂಡೆ. ಅವರನ್ನು ನಾನು ಪ್ರಶ್ನಿಸಿದೆ "ಬಾಬಾ ನೀವು ಮತ್ತೆ ಹುಟ್ಟಿದ್ದೀರಾ?" ಅವರ ತಲೆಯನ್ನು ಕೆಳಗೆ ಮಾಡಿ "yes" ಅಂದರು. ಹಾಗಾದರೆ ಎಲ್ಲಿ ಯಾವ ಸ್ಥಳದಲ್ಲಿ ಜನಿಸಿದ್ದೀರಿ? ಎಂದು ಪ್ರಶ್ನಿಸಿದೆ? 

 

ದೃಶ್ಯ 7 : 10 ತಿಂಗಳ ಗಂಡು ಮಗುವೊಂದು ತೊಟ್ಟಿಯಲ್ಲಿ ಆಡುತ್ತಿದ್ದನು. ಒಬ್ಬಳು(ತಾಯಿ) ಹಸಿರು ಬಣ್ಣದ ಸೀರೆಯುಟ್ಟು ಆ ಮಗುವನ್ನು ಆಡಿಸುತ್ತಿದ್ದಳು. ಆ ಮಗುವಿನ ಕತ್ತಿನ ಬಲಗಡೆ ಕತ್ತಿನ ಮಧ್ಯದಲ್ಲಿ ಒಂದು ಮಚ್ಚಿ ಕಂಡಿತು. ಆ ಮಗುವಿನ ಅಪ್ಪನೊಬ್ಬ ಕುಡುಕ. ಅವನಿಗೆ ಮಗನ ಮೇಲೆ ಪ್ರಿತಿನೇ ಇಲ್ಲ. ಆ ಮಗುವೇ "ಬಾಬಾ". "ಬಾಬಾ" ಆ ಊರಿನ ಹೆಸರೇನು? ಅಂದಾಗ, "ಮಂಜೂರು"(ಎಂಬ ಊರು) ಅದು ದಕ್ಷಿಣ ಭಾರತದಲ್ಲದೆ. ಆ ಊರಲ್ಲಿ ಒಂದು ನೀರಿನ ಜಾಗವಿತ್ತು. ಅವರು 10 ವರ್ಷದ ನಂತರ ಪವಾಡಗಳನ್ನು ಜನರಿಗೆ ತೋರಿಸುತ್ತಾರೆ. ನನಗೆ ಕಾಣಿಸಿದ್ದು ನಿಜವೋ ಅಲ್ಲವೋ ಎಂದು internet ನಲ್ಲಿ "ಮಂಜೂರು" ಹುಡುಕಿದೆ? ಅದು ನಿಜವಾಗಿತ್ತು. ಅದು ದಟ್ಟ ಕಾಡಿನ ಪ್ರದೇಶವಾಗಿದೆ. ಅಂದಿನಿಂದ ನನಗೆ ಧ್ಯಾನದಲ್ಲಿ ಅಪಾರ ನಂಬಿಕೆ ಶುರುವಾಯಿತು. ಇದೊಂದು ನನ್ನ ಜೀವನದಲ್ಲೇ ಮಹಾನ್ ಆಶ್ಚರ್ಯವಾಗಿದೆ.

 

 

ಪವಿತ್ರ.B
ಬೆಂಗಳೂರು

Go to top