" ಎಲ್ಲರ ಆಂತರ್ಯವನ್ನು ಗ್ರಹಿಸುವ ಆತ್ಮೀಯರು... ಪತ್ರೀಜಿ "

 

"ಪತ್ರೀಜಿ ಸಾಂಗತ್ಯ ಎಂದರೆ ಅದು ಕೋಟಿ ಜನ್ಮಗಳ ಯೋಗ ಫಲ" ಎಂದು ತಿಳಿದುಕೊಂಡ ಲಕ್ಷಾಂತರ ಜನ ಪಿರಮಿಡ್ ಮಾಸ್ಟರ್‌ಗಳಲ್ಲಿ ನಾನು ಕೂಡ ಒಬ್ಬನಾಗಿರುವುದು ನನ್ನ ಅದೃಷ್ಟ.

 

2010.. ಜೂನ್ 10 ರಂದು ಪ್ರಕಾಶಂ ಜಿಲ್ಲೆ ಕಂದುಕೂರಿನಲ್ಲಿ ನನ್ನ "ಸಂಗೀತ ಧ್ಯಾನ" ನಡೆದ ನಂತರ, ಪತ್ರೀಜಿರವರ ಕ್ಲಾಸ್ ಮರುದಿನ ಅದೇ ವೇದಿಕೆಯ ಮೇಲೆ ನಡೆಯಲಿದೆ. ಸಾರ್... ಚೀರಾಲ ವಾಡರೇವು ಅತಿಥಿ ಗೃಹದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿದು ಹಿಂದಿನ ದಿನ ಕಂದುಕೂರಿನಿಂದ ಕೆಲವರು ಪಿರಮಿಡ್ ಮಾಸ್ಟರ‍್ಸ್‌ಗಳು ಅಲ್ಲಿಗೆ ಹೋದೆವು. ನಮ್ಮನ್ನ ನೋಡಿ ಸಾರ್ ಪ್ರೀತಿಯಿಂದ ಒಬ್ಬೊಬ್ಬರನ್ನು ಹೆಸರಿಟ್ಟು ಕರೆದು "ಎಲ್ಲರೂ ಹೋಗಿ ತಿಂಡಿ ತಿನ್ನಿ" ಎಂದು ಹೇಳಿದರು.

 

ನಾವು ತಿಂಡಿ ತಿನ್ನುತ್ತಿದ್ದ ಕೊಠಡಿಗೆ ಸ್ವಲ್ಪ ದೂರದಲ್ಲಿ ಪತ್ರೀಜಿಯವರ ಕೊಠಡಿಯಿತ್ತು. ನಾವು ತಿಂಡಿ ತಿನ್ನುತ್ತಾ "ಸಾರ್‌ನ ನೋಡಿದ್ದಾಯಿತ್ತಲ್ಲವೆ ಇನ್ನು ನಾವೆಲ್ಲ ಕಂದುಕೂರಿಗೆ ಹೊರಡೋಣ... ಅಲ್ಲಿ ಕೆಲಸಗಳು ನೋಡಿಕೊಳ್ಳಬಹುದು" ಎಂದು ನಿರ್ಣಯಿಸಿಕೊಂಡು, "ಸಾರ್‌ಗೆ ಹೇಳಿ ಹೋಗೋಣ" ಎಂದು ಸಾರ್ ಕೊಠಡಿಗೆ ಬಂದೆವು. "ಎಲ್ಲಿಗೆ ಹೋಗೋಣ ಎಂದು ಮಾತನಾಡಿಕೊಳ್ಳುತ್ತಿದ್ದೀರ? ಏನು ಪ್ರಸಾದ್, ರಾಮು, ವೆಂಕಯ್ಯ ಸಮುದ್ರವನ್ನು ನೋಡುವುದಿಲ್ಲವೆ... ಎಂಜಾಯ್ ಮಾಡುವುದಿಲ್ಲವೆ" ಎನ್ನುತ್ತ ಅಲ್ಲಿರುವ ಸುಮಾರು 15 ಮಂದಿ ಧ್ಯಾನಿಗಳನ್ನು ಕರೆದುಕೊಂಡು ಸಮುದ್ರದ ಕಡೆ ಹೊರಟರು. ಎಲ್ಲರೂ ದಡದಲ್ಲಿ ನಿಂತೆವು. ಸಾರ್ ಮಾತ್ರ ಸಮುದ್ರದ ಅಲೆಗಳನ್ನು ಕೈಯಿಂದ ಸವರುತ್ತ "ಸಮುದ್ರಕ್ಕೆ ಕೃತಜ್ಞತೆಗಳು" ಎನ್ನುತ್ತ ಹಿಂದಕ್ಕೆ ಮರಳಿ ನೋಡಿ "ನೀವು ಯಾರೂ ಎಂಜಾಯ್ ಮಾಡುವುದಿಲ್ಲವೆ" ಎಂದು ಕೇಳಿದರು. ಅವೇ ಮಾತುಗಳನ್ನು ಆಜ್ಞೆಯಾಗಿ ಸ್ವೀಕರಿಸಿ ಎಲ್ಲರು ಆ ನೀರಿನಲ್ಲಿ ನಡೆದು ಪತ್ರೀಜಿಯವರನ್ನು ಸೇರಿಕೊಂಡೆವು. ಆ ಅಲೆಗಳ ನಡುವೆ ಕುಳ್ಳರಿಸಿ ನಮ್ಮ ಮಧ್ಯೆ ಸಾರ್ ಕುಳಿತುಕೊಂಡು... ಹಾಡುಗಳನ್ನು ಹಾಡುತ್ತಾ ಆತ್ಮಜ್ಞಾನ ಬೋಧಿಸುತ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಗಳವರೆಗೂ ಆ ನೀರಿನಲ್ಲೇ ಕಾಲ ಕಳೆದೆವು.

 

ಅಷ್ಟರಲ್ಲೇ ಪತ್ರೀಜಿ "ನಾವು ಅರ್ಧ ಮಾತ್ರ ನೆನೆಯುತ್ತಿದ್ದೇವೆ, ಈ ಸಮಯದಲ್ಲಿ ಮಳೆ ಕೂಡ ಬಂದರೆ ಇನ್ನು ಚೆನ್ನಾಗಿರುತ್ತದೆ ಎಂದೆನಿಸುತ್ತದೆ" ಎನ್ನುತ್ತ ಆಕಾಶದ ಕಡೆ ನೋಡುತ್ತ "ನನಗೆ ಮಳೆ ಬೇಕು, ನನಗೆ ಮಳೆ ಬೇಕು" ಎಂದು ಎರಡು ಬಾರಿ ಎಂದರು. ಅಷ್ಟೇ ತಕ್ಷಣ ಕುಂಭವರ್ಷ ಪ್ರಾರಂಭವಾಯಿತು. ಆಗಲೇ ಎಲ್ಲರಿಗು ಆಶ್ಚರ್ಯ, ಆನಂದದಿಂದ ಇದ್ದ ನಮಗೆ ಕಣ್ಣಿನಿಂದ ನೋಡುವುದೇ ವಿನಃ ಬಾಯಿಂದ ಮಾತೇ ಹೊರಡಲಿಲ್ಲ. ನನ್ನ ಜೊತೆ ಕಂದುಕೂರು ಮಾಸ್ಟರ‍್ಸ್, ಚಿರಾಲ ಮಾಸ್ಟರ‍್ಸ್ ಸಹ ಪುಲಕಿತಗೊಂಡರು. ಸಾರ್ ನನ್ನ ನೋಡಿ "ಏನು ಬಾಬು ಹೇಗಿದೆ?" ಎಂದು ಕೇಳಿದರು. "ಸಾರ್ ನಾವೆಲ್ಲ ಎಷ್ಟು ಅದೃಷ್ಟವಂತರು ನಮಗೆ ಮಳೆ ಬೇಕು ಅಂದ ತಕ್ಷಣ ವರುಣನು ಪ್ರತ್ಯಕ್ಷನಾದ. ಇದು ನಮ್ಮ ಪತ್ರೀಜಿಯವರಗೆ ಮಾತ್ರವೇ ಸಾಧ್ಯ ಎಂದೆ. ಆಗ ಸಾರ್ "ನನಗೆ ಮಳೆ ಬೇಕೆಂದಾಗ ಮಳೆ ಬರುವುದಿಲ್ಲ.. ಮಳೆ ಬರುವುದನ್ನು ನೋಡಿ ನನಗೆ ಮಳೆ ಬರಬೇಕೆಂದೆ" ಎಂದರು. ಚಮತ್ಕಾರವಾಗಿ ತಮಾಷೆ ಮಾಡಿದರು.

ಆದರೂ, ನಮಗೆಲ್ಲರಿಗೂ ಗೊತ್ತಿದೆ ಮಹಾಯೋಗೀಶ್ವರರಾದ ಪತ್ರೀಜಿ ಶಕ್ತಿ ದಟೀಜ್ ಪತ್ರೀಜಿ.

 

"ಇನ್ನು ಈ ದಿನಕ್ಕೆ ಸಾಕು" ಎಂದು ಪತ್ರೀಜಿ ಹೇಳುವುದರಿಂದ ಆ ನೀರಿನಿಂದ ಹೊರಗೆ ಬಂದು ನಮ್ಮನ್ನು ನಾವು ನೋಡಿಕೊಂಡು... ಒದ್ದೆ ಬಟ್ಟೆಗಳಿಂದ ಹೇಗೆ ಹೋಗುವುದು?" ಎಂದುಕೊಳ್ಳುತ್ತಿರುವಾಗಲೇ... ಪತ್ರೀಜಿ ತಮ್ಮ ಸೆಕ್ರೆಟರಿಯವರನ್ನು ಕರೆದು "ನನ್ನ ಬ್ಯಾಗ್‌ನಲ್ಲಿರುವ ಬಟ್ಟೆಗಳು ಒಂದೊಂದೇ ತೆಗೆದು ಎಲ್ಲರಿಗು ಕೊಡು" ಎಂದರು. ಆ ಬಟ್ಟೆಗಳನ್ನುಟ್ಟುಕೊಂಡು ಪುಲಕಿತರಾಗುತ್ತ ನಾವೆಲ್ಲರು ಸಾರ್ ಹತ್ತಿರ ಬಂದು ನಿಂತ ತಕ್ಷಣ... ಸಾರ್ ಎಲ್ಲರ ಜೊತೆ ಫೋಟೊಗಳನ್ನು ತೆಗೆಸಿಕೊಳ್ಳುವುದು ನಮ್ಮ ಆನಂದ ಇಮ್ಮಡಿಯಾಯಿತು. "ನನ್ನ ಮುಟ್ಟಬೇಡ ಮಡಿ ಮಡಿ" ಎನ್ನುತ್ತ ತಿರುಗುವ ಅನೇಕ ಮಂದಿ "ಗುರುಗಳೆಂದು"ಹೇಳಿಕೊಂಡು ತಿರುಗುತ್ತಿರುವ ಈ ದಿನಗಳಲ್ಲಿ... ಪ್ರಪಂಚವನ್ನು

ಶಾಂತಿಮಯವನ್ನಾಗಿಸಲು ಬಂದಿರುವ ಜಗದ್ಗುರುವೆ ನಮ್ಮ ಪತ್ರೀಜಿ. ದಟೀಜ್ ಪತ್ರೀಜಿ..

 

2004ನಲ್ಲಿ ವಿಶಾಖಪಟ್ಟಣ ಸ್ಟೀಲ್ ಪ್ಲಾಂಟ್‌ನಲ್ಲಿ ಪತ್ರೀಜಿಯವರ ಕ್ಲಾಸ್ ನಡೆಯಿತು. "ಸ್ಟೀಲ್ ಪ್ಲಾಂಟ್‌ಗೆ ಧ್ಯಾನವನ್ನು ಪರಿಚಯ ಮಾಡಿದ ಮೊದಲನೆಯ ವ್ಯಕ್ತಿ ನಾನೇ" ಎಂದು ಅಲ್ಲಿಯ ಪಿರಮಿಡ್ ಮಾಸ್ಟರ‍್ಸ್ ನನ್ನ ಸಂಗೀತ ಧ್ಯಾನವನ್ನು ಪತ್ರೀಜಿ ಕ್ಲಾಸ್‌ನಲ್ಲಿ ಏರ್ಪಾಟು ಮಾಡಿದರು. ಅದೇ ಪತ್ರೀಜಿಯವರ ಜೊತೆ ನನ್ನ ಮೊದಲನೆಯ ಪ್ರೋಗ್ರಾಮ್. ವೇದಿಕೆಯ ಮೇಲೆ ಎಲ್ಲ ವಾದ್ಯಗಳನ್ನು ಸರಿ ಮಾಡಿಕೊಂಡು "ಕಾರ್ಯಕ್ರಮವನ್ನು ಪ್ರಾರಂಭ ಮಾಡೋಣ" ಎಂದುಕೊಳ್ಳುವಷ್ಟರಲ್ಲಿ ಅದೇ ಸಮಯದಲ್ಲಿ ಸಾರ್ ವೇದಿಕೆ ಮೇಲೆ ಬಂದು... ಹುಲಿಯ ಹಾಗೆ ಮಧ್ಯ ಭಾಗದಲ್ಲಿ ಕುಳಿತುಕೊಂಡರುರು. ಅಷ್ಟೇ ನನ್ನ ಪ್ರಾಣ ಹೋದಂತಾಯಿತು. ಇನ್ನು ನಮ್ಮ ವೃಂದದವರು, ನಾನು ಏನು ಹಾಡಿದೆವೊ ಏನು ಮಾಡಿದೆವೊ ತಿಳಿಯದೆ ಒಂದುವರೆ ಗಂಟೆಕಾಲ ಕಳೆಯಿತು. ಸಾರ್ ವೇಣುನಾದದಿಂದ ಎಲ್ಲರಿಂದಲು ಧ್ಯಾನ ಮಾಡಿಸಿ... ಕಾರ್ಯಕ್ರಮ ಮುಗಿಸಿ... ಅಲ್ಲಿರುವವರೆಲ್ಲ ಚಪ್ಪಾಳೆ ತಟ್ಟುತ್ತಿರುವಾಗ ಅವರ ಮಧ್ಯದಿಂದಲೇ ಸಾರ್ ಹೊರಟುಹೋದರು.

 

ಆದರೆ, ನಮ್ಮ ವೃಂದದಲ್ಲಿರುವ ಕಲಾವಿದರಿಗೆ ನಮ್ಮ ಕಾರ್ಯಕ್ರಮ ತೃಪ್ತಿಯನ್ನು ನೀಡಲಿಲ್ಲ. "ಸರಿ ಊಟಮಾಡಿ ಹೊರಟು ಹೋಗೋಣವೆಂದು ಹೋದರೆ ಅಲ್ಲಿ ಸಾರ್ ನನ್ನ ನೋಡಿ "ಏನು ಪ್ರಸಾದ್, ಚೆನ್ನಾಗಿ ಹಾಡಿದ್ದಿಯಪ್ಪ ಅದ್ಭುತ ಎನ್ನುತ್ತ ಅಲ್ಲಿರುವರಿಂದ ಚಪ್ಪಾಳೆ ಹೊಡಿಸಿದರು. ಅಷ್ಟರಲ್ಲಿ ನಮ್ಮ ವೃಂದದಲ್ಲಿರುವ ಗಾಯಕಿ ದುರ್ಗಾ ಮೇಡಮ್ ಅವರಿಂದ "ಮೌನವಾಗಿ ಬೆಳೆಯಬೇಕು" ಎನ್ನುವ ತೆಲುಗು ಹಾಡು ಹಾಡಿಸಿದರು. ನಮ್ಮ ವೃಂದದಲ್ಲಿರುವ ಪ್ರತಿಯೋಬ್ಬ ಕಲಾವಿದರನ್ನು ತಮ್ಮ ಕೈಯಿಂದ ನೇವರಿಸುತ್ತಾ" ವೆರಿ ಗುಡ್..ವೆರಿ ಗುಡ್‌" ಎಂದರು. ಆ ದಿನ... ಸಾರ್ ನಮಗೆ ಕೊಟ್ಟಂತಹ ಬೆಟ್ಟದಷ್ಟು ಪ್ರೋತ್ಸಾಹವೇ... ಈ ದಿನ ತಿಂಗಳಿಗೆ 25 ದಿನಗಳ ಕಾಲ ಸಂಗೀತ ಧ್ಯಾನ ಕಾರ್ಯಕ್ರಮಗಳನ್ನು ನೀಡುತ್ತಾ, ಪಕ್ಕದ ರಾಜ್ಯಗಳಲ್ಲಿ ಕೂಡ ಧ್ಯಾನ ಪ್ರಚಾರ ಮಾಡುವ ಭಾಗ್ಯ ನನಗೂ ಮತ್ತು ನನ್ನ ವೃಂದದವರಿಗೆ ದಕ್ಕಿದೆ , ದಟೀಜ್ ಪತ್ರೀಜಿ..

 

ನನ್ನ ವೃಂದದಲ್ಲಿರುವ ಕಲಾವಿದರು ಒಬ್ಬೊಬ್ಬರು ಒಂದೊಂದು ಗ್ರಾಮದಿಂದ ಬರುತ್ತಾರೆ. ಶ್ರೀನಿವಾಸ್, ಗೋಪಾಲಕೃಷ್ಣ, ಮಾವುಳ್ಳು, ದುರ್ಗ ಮೇಡಮ್, ಇವರೆಲ್ಲ ನನ್ನ ವೃಂದದಲ್ಲಿರುವ ಕಲಾವಿದರು. ಇವರೆಲ್ಲರು ಶುದ್ಧ ಸಸ್ಯಾಹಾರಿಗಳಾಗಿ ಇದ್ದು, ಅವರವರ ಗ್ರಾಮಗಳಲ್ಲಿ ಅನೇಕ ಜನರನ್ನು ಧ್ಯಾನಿಗಳನ್ನಾಗಿ ತಯಾರು ಮಾಡುತ್ತ್ತಾ... ಧ್ಯಾನ ಪ್ರಚಾರದಲ್ಲಿ ನನಗೆ ಒಳ್ಳೆಯ ಸಹಕಾರವನ್ನು ನೀಡುತ್ತಿದ್ದಾರೆಂದು ಹೇಳಲು ನಾನು ತುಂಬ ಹೆಮ್ಮೆ ಪಡುತ್ತಿದ್ದೇನೆ.

 

ಒಂದು ಬಾರಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ಒಂದು ಪಿರಮಿಡ್ ಪ್ರಾರಂಭೋತ್ಸವಕ್ಕೆ ಸಾರ್ ಬರುವುದಿತ್ತು. ಆಗ, ಧ್ಯಾನಿಯೊಬ್ಬರ ಮನೆಯಲ್ಲೇ ಸಾರ್‌ಗೆ ಊಟದ ವ್ಯವಸ್ಥೆ ಮಾಡಲಾಯಿತು. ಆ ಮನೆಯ ಮಹಿಳೆಯರು ಅಡುಗೆ ಮಾಡಿ "ನಾವೇ ಸ್ವಯಂ ಆಗಿ ಸಾರ್‌ಗೆ ಬಡಿಸಿ ಜೀವನ ಧನ್ಯ ಮಾಡಿಕೊಳ್ಳಬೇಕೆಂದು" ಎದುರು ನೋಡುತ್ತಿರುವ ಸಮಯದಲ್ಲಿ... ರಭಸದಿಂದ ಇನ್ನೊಬ್ಬ ಮಹಿಳೆಯು ಬಂದು.. "ಸಾರ್‌ಗೆ ಹೇಗೆ ಬಡಿಸಬೇಕೊ ನಿಮಗೆ ತಿಳಿಯದು; ನನಗೆ ಚೆನ್ನಾಗಿ ಗೊತ್ತಿದೆ; ನಾನು ಬಡಿಸುತ್ತೇನೆ" ಎಂದು ಸ್ವಲ್ಪ ಅಧಿಕಾರದಿಂದ ಹೇಳಿದಳು. ಅದರಿಂದ ಆ ಮನೆಯ ಮಹಿಳೆಯರು ತುಂಬ ನಿರುತ್ಸಾಹಕ್ಕೆ ಗುರಿ ಆದರು. ಅಷ್ಟರಲ್ಲಿ ಸಾರ್ ಅಲ್ಲಿಗೆ ಬಂದು ಊಟ ಮಾಡುತ್ತ... ಆ ಮಹಿಳೆಗೆ "ತುಪ್ಪ ಬಡಿಸು" ಎಂದರು. ಆ ಮಹಿಳೆ ತುಪ್ಪ ಬಡಿಸುವಾಗ ಕೈಯಿಂದ ಜಾರಿ ಒಂದು ಹನಿ ನೆಲದ ಮೇಲೆ ಬಿತ್ತು. ಅಷ್ಟೇ... "ಬಡಿಸಲು ಬರದೆ ಇದ್ದ ಮೇಲೆ ಈ ಕೆಲಸಗಳು ನಿನಗೇಕೆ ಹೋಗು... ಹೋಗು" ಎನ್ನುತ್ತಾ... ಬಡಿಸಬೇಕೆಂದು ತುಂಬ ಆಸೆಯಿಂದಿದ್ದ ಆ ಮನೆಯ ಮಹಿಳೆಯರನ್ನು ನೋಡಿ "ಏಕೆ? ನೀವು ಬಡಿಸಬಹುದಲ್ಲ ನೋಡುತ್ತ ನಿಂತಿದ್ದಿರೇಕೆ" ಎಂದರು. "ಎಂತಹ ಭಾಗ್ಯ ನಮ್ಮದು..." ಎಂದು ಆ ಮಹಿಳೆಯರು ಸಾರ್‌ಗೆ ತೃಪ್ತಿಯಾಗಿ ಬಡಿಸಿ ಆನಂದಪಟ್ಟರು. ಹೀಗೆ ಆಂತರ್ಯವನ್ನು ಗ್ರಹಿಸುತ್ತ ಎಲ್ಲರನ್ನು ಆನಂದಪಡಿಸುವ ಜಗದ್ಗುರುವು ಪತ್ರೀಜಿ ದಟೀಜ್ ಪತ್ರೀಜಿ ...

 

ಹೇಳುತ್ತಾ ಹೋದರೆ ಸಾರ್ ಜೊತೆ ನನಗಿರುವ ಅನುಭವಗಳು ಅನೇಕಾನೇಕ. ನನ್ನ ಈ ಜನ್ಮ ಧ್ಯಾನಕ್ಕೆ ಮತ್ತು ಧ್ಯಾನ ಪ್ರಚಾರಕ್ಕೆ ಅಂಕಿತ.

 

 

ಪಿಪ್ಪಳ್ಳ ಪ್ರಸಾದ್ ರಾವ್
ಭೀಮವರಂ, 
ಪಶ್ಚಿಮ ಗೋದಾವರಿ ಜಿಲ್ಲೆ
ಫೋನ್ : +91 9440377555 

Go to top