" ನನ್ನ ಜೀವನದಲ್ಲಿ ಪತ್ರೀಜಿಯವರೊಂದು ಮಹಾನ್ ಮೈಲಿಗಲ್ಲು "

 


ನನ್ನ 16 ವರ್ಷ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಟಿ.ಎಂ (TM) ತರಬೇತಿ ಮೂಲಕ ಧ್ಯಾನದ ಪರಿಚಯವಾಗಿ, ಅನೇಕ ಸಂಸ್ಥೆಗಳಲ್ಲಿ ಆಧ್ಯಾತ್ಮಿಕತೆಯನ್ನು ತಿಳಿದುಕೊಂಡ ನನಗೆ 2005ರಲ್ಲಿ ಆದ ಬ್ರಹ್ಮರ್ಷಿ ಪತ್ರೀಜಿಯವರ ಪರಿಚಯವು ನನ್ನ ಜೀವನಕ್ಕೆ ಹೊಸ ತಿರುವು ನೀಡಿತು.

 

ಕಳೆದ 8 ವರ್ಷಗಳಿಂದ ನನ್ನ ಪತ್ನಿ ಭಾರತಿ ಜೊತೆಗೂಡಿ ಪಿರಮಿಡ್ ವ್ಯಾಲಿಯಲ್ಲಿ ಕಟ್ಟಡ ವಿನ್ಯಾಸಕಾರರಾಗಿ (Architects) ತೊಡಗಿಸಿಕೊಡಿದ್ದೇವೆ. ಇಲ್ಲಿನ ಕೆಲಸ ನಮಗೆ ಪೂರ್ಣ ತೃಪ್ತಿ ಮತ್ತು ಆನಂದ ನೀಡಿದೆ. ಪಿರಮಿಡ್ ವ್ಯಾಲಿಯಲ್ಲಿ ಪ್ರತಿವರ್ಷ ನಡೆಯುವ ಆಧ್ಯಾತ್ಮಿಕ ವಿಜ್ಞಾನಿಗಳ ಜಾಗತಿಕ ಸಮ್ಮೇಳನ (GCSS) ಕಾರ್ಯಕ್ರಮದಲ್ಲಿ ಉಪಾಧ್ಯಕ್ಷನಾಗಿ (Vice President) ಕಾರ್ಯ ನಿರ್ವಹಿಸುವಂತೆ ನನಗೆ ಹೇಳಿದರು. ಈ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವು ಅನೇಕ ಹೊಸ ಯೋಜನೆಗಳನ್ನು ರೂಪಿಸಿದ್ದೇವೆ.

 

ಪ್ರತಿ ತಿಂಗಳ ಹುಣ್ಣಿಮೆ ಧ್ಯಾನ ಕಾರ್ಯಕ್ರಮವನ್ನು ಆಯೋಜಿಸುವಂತೆ ಪತ್ರೀಜಿ ನನಗೆ ಹೇಳಿದರು. ಚಂದಿರ-ಧ್ಯಾನ-ಸಂಗೀತಗಳ ಈ ಕಾರ್ಯಕ್ರಮಕ್ಕೆ, ಕಳೆದ 15 ತಿಂಗಳಿಂದ ಹಲವಾರು ಉತ್ತಮ ಸಂಗೀತ ಕಲಾವಿದರನ್ನು ಕರೆತಂದು ಯಶಸ್ವೀ ಸಂಗೀತ-ಸಂಜೆಗಳನ್ನು ಹುಣ್ಣಿಮೆ ದಿನದಂದು ನಡೆಸಿದ್ದೇವೆ. ಅನೇಕ ತೃಪ್ತಿಕರ ಸತ್ಸಂಗ ಕಾರ್ಯಗಳು ನಡೆದಿವೆ. ಹುಣ್ಣಿಮೆ ಧ್ಯಾನ ದಿನೇ ದಿನೇ ಹೆಚ್ಚು ಜನಪ್ರಿಯವಾಗುತ್ತಾ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.

 

ನನ್ನನ್ನು ನಾನು ಹೆಚ್ಚಾಗಿ ಅರ್ಥಮಾಡಿಕೊಂಡು, ಸ್ವಪ್ರಜ್ಞೆ ಹೆಚ್ಚಿಸಿಕೊಳ್ಳಲು ಪತ್ರೀಜಿಯವರ ಸಹಾಯ ಮತ್ತು ಪ್ರೇರಣೆಯೇ ಕಾರಣ... ನನ್ನ ಜೀವನದಲ್ಲಿ ಅವರೊಂದು ಮಹಾನ್ ಮೈಲಿಗಲ್ಲು ಮತ್ತು ಕ್ರಾಂತಿ ಪುರುಷರು.

 

T.K.ಪ್ರೇಮ್‌ಕುಮಾರ್
ಬೆಂಗಳೂರು

Go to top