" ಪತ್ರೀಜಿಯವರು ಇಂದಿನ ಮೈತ್ರೇಯ ಬುದ್ಧ "

 

 

ನಾನು ನಾಲ್ಕು ದಿನ ವೈಜಾಗ್ ಧ್ಯಾನಮಹಾಚಕ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನು. ನನ್ನ ಜೀವನದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ನಾನು ನೋಡಿಯೇ ಇಲ್ಲ. ವೈಜಾಕ್‌ನ ಯಾವುದೋ ಮೂಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೂ ಸಹ 60000 ಜನ ಮಾಸ್ಟರ್‌ಗಳು ಸ್ವಯಂ ಪ್ರೇರಿತರಾಗಿ ಬೆಳಗಿಜಾವ 5 ಗಂಟೆಗೇ ಬಂದು 3 ಗಂಟೆಗಳ ಕಾಲ ಧ್ಯಾನ ಮಾಡುತ್ತಾರೆಂದರೆ ಅದು ಒಂದು ‘ ಪವಾಡ ’. ಈ ಪವಾಡದ ರುವಾರಿ ಬ್ರಹ್ಮರ್ಷಿ ಪತ್ರೀಜಿಯವರು. ನಾನು ಹಲವಾರು ನಾಯಕರನ್ನು ಬಹಳ ಹತ್ತಿರದಿಂದ ನೋಡಿರುವೆನು. collective leadership motivating leadership, but Brahmarshi Patriji has invented a new leadership style that is Magical Leadership. ಅವರು ಯಾವ ಲೋಕಕಲ್ಯಾಣದ ಸಂಕಲ್ಪಗಳನ್ನು ತೆಗೆದುಕೊಳ್ಳುತ್ತಾರೋ ಪ್ರತಿ ಕ್ಷಣವೂ ಆ ಸಂಕಲ್ಪಕ್ಕೆ ಶಕ್ತಿ ಕೊಡುತ್ತಾರೆ.

 

ಅವರ ಸಂದೇಶಗಳು ವಿಭಿನ್ನ, ವಿಶಿಷ್ಟ. ನನ್ನ 7 ವರ್ಷದ ಮಗ ಆದಿತ್ಯ ಈ ಕಾರ್ಯಕ್ರಮವನ್ನು www.pssmovement.org website ನಲ್ಲಿ ನೋಡಿದನು. ಪತ್ರೀಜಿ ಒಮ್ಮೆ ಹೀಗೆ ಸಂದೇಶ ಕೊಟ್ಟರು ಎಂದು ಹೇಳುತ್ತಾನೆ. ಏನು ಎಂದು ಕೇಳಿದರೆ " ಅಪ್ಪ, ನೀವು ಕೋಪ ಮಾಡಿಕೊಳ್ಳಬಾರದು. "Cool Baby" ಎಂದು ಪತ್ರೀಜಿಯವರು ಹೇಳಿದ್ದಾರೆ " ಎಂದು ಹೇಳುತ್ತಾನೆ. ನಾನು ಸ್ವಲ್ಪ ಬೇಜಾರು ಮಾಡಿಕೊಂಡರೂ "Cool Baby" ಎನ್ನುತ್ತಾನೆ. ಇದು ನಿಜವಾದ ಪವಾಡ. ಒಬ್ಬ ಚಿಕ್ಕ ಮಗುವಿನಿಂದ ಹಿಡಿದು ದೊಡ್ಡ, ದೊಡ್ಡ ಪ್ರಜ್ಞಾವಂತರ ಮನಸ್ಸಿಗೆ ಮುಟ್ಟುವಂತೆ ಸಂದೇಶಗಳನ್ನು ನೀಡುತ್ತಾರೆ. ನಾನು ಒಬ್ಬ ಧ್ಯಾನ ಪ್ರಚಾರಕ, ಸಂಘಟನಾಕಾರನಾಗಿ ನಾನು ಬಹಳ ಹೆಮ್ಮೆಯಿಂದ ಹೇಳುತ್ತೇನೆ. ನಮ್ಮ ಗುರುಗಳು cool, Magical and A Symbol of Maithreya Buddha. 

 

T.K. ಪ್ರೇಮ್ ಕುಮಾರ್
ಉಪಾಧ್ಯಕ್ಷರು, ಕೆ.ಪಿ.ಡಿ.ಪಿ ಟ್ರಸ್ಟ್
ಬೆಂಗಳೂರು
ಫೋನ್  : +91 9448140198

Go to top