ಪಿರಮಿಡ್ ವ್ಯಾಲಿಯು ಜ್ಞಾನದ ನಿಧಿಯಾಗಿದೆ "

 

 

2004ನಲ್ಲಿ ನಾನು ಮೊದಲ ಬಾರಿಗೆ ಪಿರಮಿಡ್ ನೋಡಲು ಹೋಗಿದ್ದೆ. ಆಗ ಅದು ಬುನಾದಿ ಹಂತದಲ್ಲಿತ್ತು. ನಂತರ, ಪತ್ರೀಜಿಯವರು ಬಂದಾಗಲೆಲ್ಲಾ ನಾನು ಸಹ ಪಿರಮಿಡ್ ವ್ಯಾಲಿಗೆ ಬಂದು ಪಿರಮಿಡ್ ನಿರ್ಮಾಣಗೊಳ್ಳುತ್ತಿರುವುದನ್ನು ನೋಡುತ್ತಾ ಅವರು ನೀಡುತ್ತಿದ್ದ ಜ್ಞಾನವನ್ನು ಸ್ವೀಕರಿಸಲು ಕಾತುರಿಸುತ್ತಿದ್ದೆ. 

 

ಪಿರಮಿಡ್ ವ್ಯಾಲಿಯು ಈಗ ಹಸಿರಾದ ಗಿಡಮರಗಳಿಂದ ಕೂಡಿದ್ದು ಕಣ್ಣುಗಳಿಗೆ ತಂಪನ್ನು ನೀಡುತ್ತಿದೆ. ಪಿರಮಿಡ್ ಮುಂದಿರುವ ಬುದ್ಧ ಭಗವಾನರ ವಿಗ್ರಹ ನೋಡುತ್ತಿದ್ದರೆ ಮನಸ್ಸಿಗೆ ಶಾಂತಿಯ ಅನುಭವವಾಗುತ್ತದೆ. ವ್ಯಾಲಿಯಲ್ಲಿನ ಸುಂದರ ಸರೋವರ ನೋಡುವುದು ಮನಸ್ಸಿಗೆ ಆಹ್ಲಾದಕರ. ಸುಮಧುರವಾದ ಹಕ್ಕಿಗಳ ಚಲಿಪಿಲಿ ನಾದ ಕೇಳುತ್ತಿದ್ದರೆ ಮನಸ್ಸಿಗೆ ಮುದವೆನಿಸುತ್ತದೆ.

 

ಇಲ್ಲಿನ ಗ್ರಂಥಾಲಯ ಮತ್ತು ಪುಸ್ತಕ ಮಳಿಗೆಯು ಸಿದ್ಧಪುರುಷರ ಜ್ಞಾನ ಭಂಡಾರವೇ ಆಗಿದೆ. ಅನೇಕಾನೇಕ ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಾಫ್ಟ್‌ವೇರ್ ಇಂಜನಿಯರ್‌ಗಳು ತಮ್ಮ ಒತ್ತಡಗಳಿಂದ ಮುಕ್ತಿ ಪಡೆಯಲು ಪಿರಮಿಡ್ ವ್ಯಾಲಿಗೆ ಬರುತ್ತಿರುವುದು ಸಂತೋಷದ ವಿಷಯ.

 

ಗುಡ್ಡದ ಮೇಲಿನ ಭಾಗದಲ್ಲಿರುವ ‘ತಪಸ್ಥಳ’ ಎನ್ನುವ ಪ್ರದೇಶದಲ್ಲಿ ಧ್ಯಾನ ಮುದ್ರೆಯಲ್ಲಿ ಇರುವ ಶಿವನ ದೊಡ್ಡ ವಿಗ್ರಹವನ್ನು ಇಡಲಾಗಿದೆ.  ಇಲ್ಲಿ ಸಹ ಧ್ಯಾನ ಮಾಡಿದರೆ ಬೇಗ ಆಲೋಚನಾರಹಿತ ಸ್ಥಿತಿಗೆ ತಲುಪಬಹುದಾಗಿದೆ. ಅಲ್ಲದೆ, ವಿಶ್ವಶಕ್ತಿಯ ಆವಾಹನೆ ಬಹಳಬೇಗ ಆಗುತ್ತದೆ. ಇಂಥ ಅನುಭವಗಳು ಅನೇಕರಿಗೆ ಆಗಿವೆ.

 

ಬೇಸರವಿಲ್ಲದೆ ಪ್ರತಿನಿತ್ಯ ಎರಡೂ ಹೊತ್ತು ರುಚಿಕರವಾದ ಆಹಾರವನ್ನು ಸಿದ್ಧಪಡಿಸಿ ನೀಡುತ್ತಿರುವ ಅಡುಗೆಯವರು ತಮ್ಮ ಪಾಲಿನ ಸೇವೆಯನ್ನು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪಿರಮಿಡ್ ವ್ಯಾಲಿಯು ಜ್ಞಾನದ ನಿಧಿಯಾಗಿದೆ. ಎಲ್ಲಾ ಉಚಿತವಾಗಿ ನೀಡುತ್ತಿರುವುದು ಮೆಚ್ಚತಕ್ಕದ್ದು.

 

 

ಪುಷ್ಪಾಮೋಹನ್
ಪಿರಮಿಡ್ ವ್ಯಾಲಿನಲ್ಲಿ ಸಭಾಧ್ಯಕ್ಷ ಮತ್ತು ಶಿಕ್ಷಕಿ
ಬೆಂಗಳೂರು

Go to top