" ಧ್ಯಾನಮಹಾಚಕ್ರಕ್ಕೆ ಶಕ್ತಿಯ ಕ್ಷೇತ್ರವೇ ಇಳಿದು ಬಂದಿತ್ತು "

 

ವಿಶಾಖಪಟ್ಟಣದಲ್ಲಿ ನಡೆದ ಧ್ಯಾನ ಮಹಾಚಕ್ರ ಸಂಭ್ರಮೋತ್ಸವಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವ ನಾನೇ ಭಾಗ್ಯವಂತಳು. ಸುಂದರವಾದ ಬೆಟ್ಟ, ಗುಟ್ಟಗಳ ನಡುವೆ, ಆಹ್ಲಾದಕರವಾದ ವಾತಾವರಣದಲ್ಲಿ ಮುಂಜಾನೆ 5 ರಿಂದ 7 ಗಂಟೆಗಳವರೆಗೂ ನಡೆದ ಧ್ಯಾನ ಕಾರ್ಯಕ್ರಮದಲ್ಲಿ ಮೃದು ಮಧುರವಾದ ಸಂಗೀತವನ್ನು ಕೇಳುತ್ತಾ, ಲಕ್ಷಾಂತರ ಜನಗಳ ನಡುವೆ ಕುಳಿತು ಧ್ಯಾನ ಮಾಡುವವರದೇ ಮಹಾ ಭಾಗ್ಯ. ಬಾಳೇಹಣ್ಣು ಸುಲಿದು ಬಾಯಲ್ಲಿಟ್ಟಿರುವಷ್ಟು ಸುಲಭವಾಗಿ ನಮ್ಮ ಅಚ್ಚುಮೆಚ್ಚಿನ ಗುರುಗಳಾದ ಪತ್ರೀಜಿ ಅವರು ದಿನಕ್ಕೊಂದು ಧರ್ಮವನ್ನು ಅತಿ ಸಾಮಾನ್ಯರಿಗೂ ಸಹ ಸುಲಭರೀತಿಯಲ್ಲಿ ಅರ್ಥವಾಗುವ ಹಾಗೆ ದಿನನಿತ್ಯದ ಜೀವನದಲ್ಲಿ ಉಪಯೋಗ ಆಗುವ ಹಾಗೆ ವಿವರಿಸಿದರು.

 

ನಾನು ಮೂರು ದಿನ ಆಸ್ಟ್ರಲ್ ಸರ್ಜರಿ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದೆ. ಪ್ರತಿದಿನ ನಾಲ್ಕು ಗಂಟೆಗಳ ಕಾಲ ಧ್ಯಾನ ಮಾಡಿದ್ದೇವೆ. ಮೊದಲನೆಯದಿನ ನನ್ನ ಶರೀರದಲ್ಲಿ ಶಕ್ತಿಯ ಸಂಚಾರ ವಿಪರೀತವಾಗಿ ಆಯಿತು. ನನ್ನ ತಲೆಯ ಮೇಲೆ ಯಾರೊ 4, 5 ಚಪ್ಪಡಿ ಕಲ್ಲುಗಳನ್ನು ಇಟ್ಟಿರುವ ಹಾಗೆ ವಿಪರೀತ ಭಾರ ಹೊತ್ತಂತೆ ಅನುಭವ ಆಯಿತು. ಮತ್ತು ಕತ್ತಿಗೆಯ ಮೇಲೆ, ಬೆನ್ನಿನ ಮೇಲೆ ಒಂದು ದೊಡ್ಡ ಅಕ್ಕಿ ಮೂಟೆ ಇಟ್ಟಂತೆ ಅನುಭವವಾಗಿ ಬೆನ್ನೆಲ್ಲಾ ಬಗ್ಗಿ ಹೋಯಿತು. ಮರುದಿನ ಸ್ವಲ್ಪ ಬಾರ ಕಡಿಮೆ ಆಗಿ ಆ ನಾಲಕ್ಕು ಗಂಟೆಗಳು ಕೂತಹಾಗೆ ಅನಿಸಲಿಲ್ಲ. ಕಾಲಾತೀತದ ಅನುಭವವಾಯಿತು. ಮತ್ತೆ ಮೂರನೆಯ ದಿನದಲ್ಲಿ ಹೂವಿನ ಹಾಗೆ ಹಾರುತ್ತಿರುವ ಹಾಗೆ ಶರೀರವೆಲ್ಲಾ ಹಗುರಾಗಿ ತುಂಬಾ ರಿಲಾಕ್ಸ್ ಸಿಕ್ಕಿದ ಹಾಗಾಯಿತು. ನನಗೆ ಆರೋಗ್ಯದಲ್ಲಿ ತುಂಬಾ ಸುಧಾರಣಿ ಕಾಣಿಸಿ ಕೊಂಡಿದೆ. ನನಗೆ ಈ ನಡುವೆ ಇದ್ದಕ್ಕಿದ್ದ ಹಾಗೆ ಊಟ ಮಾಡುತ್ತಿರುವಾಗ ನುಂಗಲು ಕಷ್ಟವಾಗುತ್ತಿತ್ತು. ಈಗ ನನಗೆ ಆ ಸಮಸ್ಯೆ ಪರಿಹಾರವಾಯಿತು. ಈ ಅವಕಾಶ ಕೊಟ್ಟಿರುವಂತಹ ಪತ್ರೀಸಾರ್‌ಗೆ ಅನೇಕ ಧನ್ಯವಾದಗಳು.

 

ಪುಷ್ಪಾಮೋಹನ್
ಬೆಂಗಳೂರು

Go to top