" ಧ್ಯಾನದಿಂದ ಎಲ್ಲಾ ವಿಜಯ ಲಭ್ಯ "

 

ನನ್ನ ಹೆಸರು ರಾಧಿಕ, ವಯಸ್ಸು 13, ಊರು ಗುಲಬರ್ಗ. ನನಗೆ ಧ್ಯಾನ ಅಂದರೆ ಏನು ಎಂಬ ಅರಿವು ಮೂಡಿಸಿದವರು ನನ್ನ ದೊಡ್ಡಮ್ಮ ಉಮಾ. ಅವರಿಗೆ ನನ್ನ ಧನ್ಯವಾದಗಳು.

 

ನಾನು ನನ್ನ ಧ್ಯಾನದ ಅನುಭವಗಳನ್ನು ಹಂಚಿಕೊಳ್ಳಲು ತುಂಬಾ ಖುಷಿ ಪಡುತ್ತೇನೆ. ನನಗೆ ಧ್ಯಾನ ಎಂಬುವುದು ತಿಳಿದು ಎರಡು ವರ್ಷವಾಯಿತು. ಮೊದಲು, ಒಂದೆರಡು ದಿನ ನಾನು ಧ್ಯಾನ ಮಾಡಿದೆ. ನಂತರ, ನಾನು ಇದೇನು ಎಂದು ಅದನ್ನು ಬಿಟ್ಟೆ. ಧ್ಯಾನವೇನು ಎಂದು ನನಗೆ ಅರಿವಾದ ನಂತರ ನಾನು ತಪ್ಪದೇ ಪ್ರತಿದಿನ 15 ನಿಮಿಷ ಧ್ಯಾನ ಮಾಡುತ್ತಾ ಬಂದೆ. ಹಾಗೆಯೇ, ಕ್ರಮೇಣ ಧ್ಯಾನದ ಅವಧಿಯನ್ನು ಹೆಚ್ಚು ಮಾಡಿದೆ.

 

ಇತ್ತೀಚೆಗೆ ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ಅಂಗವಾಗಿ ಕ್ರೀಡಾ ಸ್ಪರ್ಧೆಗಳನ್ನಿಟ್ಟಿದ್ದರು. ನಮ್ಮ ಶಾಲೆಯಲ್ಲಿ ಓಟದ ಆಟ, ಚದುರಂಗ, ಹಗ್ಗದ ಆಟ ಇನ್ನೂ ಬಹಳ ಆಟಗಳುನ್ನು ಆಡಿಸಿದರು. ಅದರಲ್ಲಿ ಭಾಗವಹಿಸಿ ಓಟದ ಆಟದಲ್ಲಿ, ಚದುರಂಗದಲ್ಲಿ ಮತ್ತು ಹಗ್ಗದ ಆಟದಲ್ಲಿ ನನಗೆ ಬಹುಮಾನ ಲಭಿಸಿವೆ. ಇದಕ್ಕೆಲ್ಲಾ ಕಾರಣ ನಮ್ಮ ಧ್ಯಾನ. ಧ್ಯಾನದಿಂದ ಸಿಗುವ ಲಾಭ, ಏಕಾಗ್ರತೆ ಮತ್ತು ವಿಜಯದಿಂದ ನನಗೆ ಈ ಬಹುಮಾನ ಸಿಕ್ಕಿವೆ. ನನಗೆ ಓದಿನಲ್ಲಿ ಕೂಡ ಜಯ. ಇದು ನನ್ನ ಚಿಕ್ಕ ಅನುಭವ. ಬ್ರಹ್ಮರ್ಷಿ ಪತ್ರೀಜಿ ಅವರು ಹೇಳಿಕೊಟ್ಟಂತಹ ಧ್ಯಾನದಿಂದ ನನಗೆ ಲಾಭವಾಯಿತು. ಪತ್ರೀಜಿ ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಧ್ಯಾನ ಮಾಡಿ, ಧ್ಯಾನ ಕಲಿಸಿ.

 

ರಾಧಿಕ
ಗುಲಬರ್ಗ

Go to top