" ಪಿರಮಿಡ್ ವ್ಯಾಲಿಯಲ್ಲಿ ಇದ್ದಾಗ ನನ್ನ ಸ್ವಂತ ಮನೆಯಲ್ಲಿರುವ ಭಾವನೆ ಬರುತ್ತದೆ "

 

ಸಾಮಾನ್ಯವಾಗಿ ನನ್ನ ಊರಿನಿಂದ ಬೇರೆ ಸ್ಥಳಗಳಿಗೆ ಹೋಗಲು ನಾನು ಇಷ್ಟಪಡುವುದಿಲ್ಲ. ಅಲ್ಲಿಗೆ ಹೋಗುವುದರಿಂದ ಏನು ಲಾಭ ಎಂದು ಯೋಚಿಸಿ, ಕೇವಲ ಸಮಯ, ಶ್ರಮ ವ್ಯರ್ಥ ಮತ್ತು ಏನೂ ಸಿಗುವುದಿಲ್ಲ ಎನ್ನುವ ಭಾವನೆ ಬರುತ್ತದೆ. ಆದರೆ, ಪಿರಮಿಡ್ ವ್ಯಾಲಿಗೆ ಬರುವ ಯೋಚನೆ ಬಂದಾಗ ನನ್ನಲ್ಲಿ ಸಕಾರಾತ್ಮಕ ಭಾವನೆ ಬಂದು ನನ್ನ ಸ್ವಂತ ಸ್ಥಳಕ್ಕೆ ಹೋಗುತ್ತಿರುವ ಭಾವನೆ ಬರುತ್ತದೆ. ಪಿರಮಿಡ್ ವ್ಯಾಲಿಯಲ್ಲಿ ಇದ್ದಾಗ ನನ್ನ ಸ್ವಂತ ಮನೆಯಲ್ಲಿರುವ ಭಾವನೆ ಬರುತ್ತದೆ.

 

ಶರೀರ ಹಗುರವಾಗಿರುತ್ತದೆ. ಮಾನಸಿಕ ಪ್ರಶಾಂತತೆ ಮೂಡಿದ್ದು, ನನ್ನ ಒಳಪ್ರಜ್ಞೆ ಹೊರಪ್ರಜ್ಞೆಗಿಂತ ಹೆಚ್ಚಾಗಿರುತ್ತದೆ. ಇಲ್ಲಿ ಸದಾಕಾಲ ಉತ್ಸಾಹದಿಂದ ಇದ್ದು ಮಾಡುವ ಕೆಲಸ ಸುಲಭ ಅನ್ನಿಸುತ್ತದೆ ಮತ್ತು ಪೂರ್ತಿಯಾಗಿ ತೊಡಗಿಸಿಕೊಂಡಿರುತ್ತೇನೆ. ಇಲ್ಲಿ ಯಾವ ಬಗ್ಗೆಯೂ ತೀರ್ಪುಗಳಿರುವುದಿಲ್ಲ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಕೇವಲ ಆತ್ಮಸ್ವರೂಪರಾಗಿ ನನಗೆ ಕಾಣುತ್ತಾರೆ.

 

ಇಲ್ಲಿನ ಪ್ರಕೃತಿಯ ಸೊಬಗು ಪ್ರಶಾಂತತೆ ನೀಡುತ್ತಿದ್ದು, ಇಲ್ಲಿ ವಿಹರಿಸುವಾಗ ಸಹ ನನ್ನಲ್ಲಿ ಉಲ್ಲಾಸ ತುಂಬಿರುತ್ತದೆ. ನನ್ನ ಮಕ್ಕಳು ಸಹ ಇಲ್ಲಿದ್ದಾಗ ಸಕಾರಾತ್ಮಕ ಭಾವನೆಗಳಿಂದ ಇದ್ದು ಉಲ್ಲಾಸಿತರಾಗಿರುತ್ತಾರೆ ಹಾಗೂ ಇಲ್ಲಿಂದ ಹಿಂದಿರುಗಿದ ನಂತರವೂ ಅನೇಕ ದಿನಗಳು ಅದೇರೀತಿ ಇರುತ್ತಾರೆ. ಆದ್ದರಿಂದ, ಪ್ರತಿ ತಿಂಗಳೂ ಮಕ್ಕಳೊಂದಿಗೆ ವ್ಯಾಲಿಗೆ ಬರುವ ಯೋಜನೆ ನನಗೆ ಇದೆ. ವ್ಯಾಲಿಗೆ ಬಂದಾಗ ಯಾವುದೇ ರೀತಿಯ ಅನಾರೋಗ್ಯ ತೊಂದರೆ ಇದ್ದರೂ ಮೊದಲನೆ ದಿನದಿಂದಲೇ ಗುಣಮುಖವಾಗತೊಡಗುತ್ತದೆ ಮತ್ತು ಎರಡನೆಯ ದಿನ ಸಂಪೂರ್ಣ ಆರೋಗ್ಯದಿಂದ ಇರುತ್ತೇನೆ.

 

ಇಲ್ಲಿನ ಊಟ ಸಂಪೂರ್ಣ ಆರೋಗ್ಯಕರವಾದ, ರುಚಿಕರವಾದ ಅಮೃತಮಯ ಆಹಾರವಾಗಿದೆ. ನಾನು ಇಲ್ಲಿರುವವರೆಗೂ ಸಂಪೂರ್ಣಮೌನ ಸ್ಥಿತಿಯಲ್ಲಿ ಇರಲು ಸಾಧ್ಯವಾಗುತ್ತದೆ. ಇಲ್ಲಿ ಯಾವುದೇ ಕೆಲಸದಲ್ಲಿ ನನ್ನನ್ನು ನಾನು   ತೊಡಗಿಸಿಕೊಂಡರೂ ಇದೇ ನನ್ನ ಕೆಲಸ ಎಂದು ಅನ್ನಿಸುತ್ತದೆ. ಪಿರಮಿಡ್ ವ್ಯಾಲಿಯಿಂದ ಹಿಂದಿರುಗಿ ಬಂದ ನಂತರವೂ ಒಂದು ವಾರದ ಕಾಲ ಅದೇ ಉತ್ಸಾಹ, ಉಲ್ಲಾಸ ನನ್ನಲ್ಲಿ ತುಂಬಿದ್ದು, ನನ್ನ ಊರಿನಲ್ಲಿ ಧ್ಯಾನಕೇಂದ್ರವನ್ನು ನಡೆಸಲು ಸಹಾಯವಾಗುತ್ತದೆ.

 

ರಜಿತ
ಶಿಡ್ಲಘಟ್ಟ, ಬೆಂಗಳೂರು

Go to top