" ನಾನೇ ನಿಮ್ಮ ಗುರಿ" ಎಂದರು .. ದಟೀಜ್ ಪತ್ರೀಜಿ .. " 

 

ಧ್ಯಾನಪ್ರಚಾರದ ಮೂಲಕ ವಿಶ್ವದ ಪ್ರಜೆಗಳ ಆತ್ಮವನ್ನು ಉದ್ದೀಪನಗೊಳಿಸುತ್ತಾ .. "ಧ್ಯಾನ ಜಗತ್", "ಸಸ್ಯಾಹಾರ ಜಗತ್" ನಿರ್ಮಾಣದ ಆಂದೋಲನವನ್ನು ಕೈಹಿಡಿದಿರುವಂತಹ ಪತ್ರೀಜಿ ನಮಗೆ ನೀಡಿರುವಂತಹ ಆಧ್ಯಾತ್ಮಿಕಮಾರ್ಗ.. ಅತ್ಯುನ್ನತವಾದ ಜೀವನ ವಿಧಾನ. ಈ ಮಹಾ ಚಳವಳಿಯಲ್ಲಿ ಭಾಗಿಗಳಾಗಿರುವಂತಹ ನಾವೆಲ್ಲರೂ ತುಂಬಾ ಭಾಗ್ಯವಂತರು.

 

2005 ರಲ್ಲಿ ನಾನು ಮತ್ತು ಕೆಲವರು ಪಿರಮಿಡ್ ಮಾಸ್ಟರ‍್ಸ್ ಟೀಮ್ ಜೊತೆ ಸೇರಿ ಪೂರ್ವಗೋದಾವರಿ ಜಿಲ್ಲೆ "ಮಾರೆಡುಮಿಲ್ಲಿ ಕಾಡುಗಳಲ್ಲಿ" ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ನಡೆಸಿದೆವು.

 

ಟ್ರೆಕ್ಕಿಂಗ್ ಪ್ರಾರಂಭದಲ್ಲಿ ಪತ್ರೀಜಿ ಸಂದೇಶವನ್ನು ನೀಡುತ್ತಾ .. ಒಬ್ಬ ಪಿರಮಿಡ್ ಮಾಸ್ಟರ್‌ಗೆ ಇರಬೇಕಾದ ಮೊದಲನೆಯ ಗುಣ ಎಂದರೆ ‘ನೋ ಕಂಪ್ಲೈಂಟ್’ ... ‘ನೋ ಜಡ್ಜ್‌ಮೆಂಟ್’..‘ಅದು ಚೆನ್ನಾಗಿಲ್ಲ’, ‘ಇದು ಚೆನ್ನಾಗಿಲ್ಲ’ ಎಂದಾಗಲಿ ... "ಅಕ್ಕ-ಪಕ್ಕದವರು ಏನು ಮಾಡುತ್ತಿದ್ದಾರೆ ಎಂದಾಗಲಿ ಯೋಚಿಸುತ್ತಾ ಅವರ ಮಾತುಗಳನ್ನು ಕೇಳಿಸಿಕೊಳ್ಳುವುದು ಅನವಶ್ಯಕ. ಅವರವರ ಕೆಲಸ ಅವರೇ ನೋಡಿಕೊಳ್ಳಬೇಕು. ‘ಅವರು ಹೀಗೆ’, ‘ಇವರು ಹಾಗೆ’ ಎನ್ನುತ್ತಾ ಅವರಿವರನ್ನು ಕುರಿತು ಜಡ್ಜ್ ಮಾಡಬಾರದು" ಎಂದು ಹೇಳಿದರು.

 

"ನೋ ಕಂಪ್ಲೈಂಟ್, ನೋ ಜಡ್ಜ್‌ಮೆಂಟ್" ಎನ್ನುವ ಸಂದೇಶವನ್ನು ನಿಜಜೀವನದಲ್ಲಿ ಆಚರಿಸಿದರೆ ಎಷ್ಟು ಅದ್ಭುತವಾಗಿರುತ್ತದೆಯೋ.ಕಂಪ್ಲೈಂಟ್ ಮತ್ತು ಜಡ್ಜ್‌ಮೆಂಟ್‌ಗಳಿಂದ ನಮಗೆ ನಾವು ಎಷ್ಟು ಹಾನಿಮಾಡಿಕೊಳ್ಳುತ್ತಿದ್ದೇವೆಂದರೆ .. ವಿಶ್ವವು ನೀಡುತ್ತಿರುವ ಶಕ್ತಿಯನ್ನು ನಮ್ಮ ಜೀವನಗಳಿಂದ ನಾವೇ ಹಿಂದಕ್ಕೆ ತಳ್ಳಿಹಾಕುತ್ತಾ ನಾವು ಶಕ್ತಿಹೀನರಾಗುತ್ತಿದ್ದೇವೆ.

 

ನಮ್ಮ ಜೀವನದ ಅನುಭವಗಳನ್ನು ನಾವೇ ಆಕರ್ಷಿಸಿಕೊಳ್ಳುತ್ತೇವೆ. ಆದ್ದರಿಂದ, ನಮ್ಮ ಆಲೋಚನೆಯ ಶಕ್ತಿಯಿಂದ ನಕಾರಾತ್ಮಕ ವಿಷಯಗಳಕಡೆ ದೃಷ್ಟಿಹಾಕಿ ನಾವು ನಮ್ಮ ಜೀವನದಲ್ಲಿ ಆಕರ್ಷಿಸುವ ಹಾಗೆ ಮಾಡುತ್ತೇವೆ. ಅದಕ್ಕೇ ಪತ್ರೀಜಿ ತುಂಬಾ ಸರಳವಾಗಿ ‘ನೋ ಕಂಪ್ಲೈಂಟ್’, ‘ನೋ ಜಡ್ಜ್‌ಮೆಂಟ್’ ಎಂದು ಹೇಳುತ್ತಾ ತಾವು ಸಹ ಹಾಗೆಯೇ ಜೀವಿಸುತ್ತಾರೆ.

 

ವರ್ತಮಾನದ ಕ್ಷಣದಲ್ಲಿ ಪೂರ್ಣ ಅರಿವಿನಿಂದ ಇರುವುದು ಪತ್ರೀಜಿ ಅವರ ದೊಡ್ಡಗುಣ. ಅವರು ಇತರರ ಆಲೋಚನೆಗಳನ್ನು ಖಂಡಿತವಾಗಿಯೂ ಓದಬಲ್ಲರು "2004 ಸಿಕಂದ್ರಾಬಾದ್ ಧ್ಯಾನಯಜ್ಞ"ದ ಸಂದರ್ಭದಲ್ಲಿ ನಡೆದ, ರಾಜಮಂಡ್ರಿಯ ಸೀನಿಯರ್ ಪಿರಮಿಡ್ ಮಾಸ್ಟರ್ ಪ್ರೊ|| ರಘುನಾಥ್‌ರಾವು ಅವರಿಗೆ ಸಂಬಂಧಿಸಿದ ಘಟನೆ ನನಗೆ ಚೆನ್ನಾಗಿ ನೆನಪಿದೆ, 2004 ನಲ್ಲಿ ಆ ಯಜ್ಞನಡೆಯುವುದಕ್ಕಿಂತಾ ಮುಂಚೆ, ರಾಜಮಂಡ್ರಿಯಲ್ಲಿ, ಕೆಲವು ವಿಚಾರಗಳ ಕುರಿತು ರಘುನಾಥ್‌ರಾವ್‌ರವರಿಗೆ ಪತ್ರೀಜಿಯವರು ಸ್ವಲ್ಪ ಜೋರಾಗಿ ಬೈದರು. ಅದರಿಂದ ಅವರು ತುಂಬಾ ನೊಂದುಕೊಂಡರು.

 

ಅನಂತರ ರಘುನಾಥ್‌ರಾವ್ ಅವರನ್ನು ನಾನು ಭೇಟಿ ಆದಾಗ "ಧ್ಯಾನಯಜ್ಞಕ್ಕೆ ನೀವು ಯಾವಾಗ ಬರುತ್ತಿದ್ದೀರಾ?" ಎಂದು ಕೇಳಿದರೆ ಅದಕ್ಕೆ ಅವರು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಇಂತಹ ಹಿರಿಯ ವ್ಯಕ್ತಿಯನ್ನು ಸಾರ್ ಎಲ್ಲರ ಎದುರು ಬೈದಿರುವುದರಿಂದ.. ಆತ ನಮ್ಮ ಮೂವ್‌ಮೆಂಟ್‌ನಿಂದ ದೂರ ಆಗಿಬಿಡುತ್ತಾರೇನೊ.. ಎಂದೆನಿಸಿತು.

 

ಆದರೆ, ಆ ಧ್ಯಾನಯಜ್ಞಕ್ಕೆ ರಘುನಾಥ್‌ರಾವ್ ಅವರು ಬಂದಿದ್ದರು. ಪ್ರತಿದಿನ ಮುಂಜಾನೆ ಧ್ಯಾನ ಮುಗಿದನಂತರ ಪ್ರತಿಯೊಂದು ಜಿಲ್ಲೆಯಿಂದ ಪ್ರಮುಖವಾದ ಒಬ್ಬ ಪಿರಮಿಡ್ ಮಾಸ್ಟರನ್ನು ವೇದಿಕೆಯ ಮೇಲೆ ಕರೆದು, ಪತ್ರೀಜಿ ಅವರನ್ನು ಸನ್ಮಾನಿಸುತ್ತಿದ್ದರು. ನಮ್ಮ ಜಿಲ್ಲೆಯ ಪರವಾಗಿ ರಘುನಾಥ್‌ರಾವ್ ಅವರನ್ನು ತಪ್ಪದೆ ಕರೆಯುತ್ತಾರೆಂದು ನಾನು ಭಾವಿಸಿದೆ.

 

ಎಲ್ಲಾ ಜಿಲ್ಲೆಗಳವರನ್ನು ಕರೆದಿದ್ದಾಗಿದೆ... ರಘುನಾಥ್‌ರಾವ್‌ರವರನ್ನು ಮಾತ್ರ ಕರೆಯಲಿಲ್ಲ. ಧ್ಯಾನಯಜ್ಞ ಇನ್ನೂ ಎರಡು ದಿನಗಳು ಮಾತ್ರ ಉಳಿದಿತ್ತು. 

 

ಆ ದಿನ ಮುಂಜಾನೆ ನಾವು ಧ್ಯಾನದಲ್ಲಿ ಕುಳಿತಿದ್ದಾಗ "ಈ ದಿನ ಪತ್ರೀಜಿ ರಘುನಾಥ್‌ರಾವ್ ಅವರನ್ನು ಕರೆಯಬೇಕು, ಹಾಗೆ ಕರೆದರೆ ಚೆನ್ನಾಗಿರುತ್ತದೆ" ಎಂದು ಮನಸ್ಸಿನಲ್ಲಿ ಬಲವಾಗಿ ನೆನೆಯುತ್ತಾ ಧ್ಯಾನಮಾಡಿದೆ. ಧ್ಯಾನ ಪೂರ್ಣಗೊಂಡ ನಂತರ ತಕ್ಷಣ ಪತ್ರೀಜಿ .. ಇದುವರೆಗೂ ನಿಮಗೆ ಅನೇಕ ಜನ ‘ಪಿರಮಿಡ್ ವಜ್ರಗಳನ್ನು’ ಪರಿಚಯ ಮಾಡಿಸಿದೆ. ಎಲ್ಲಾ ವಜ್ರಗಳಲ್ಲೂ ಪ್ರತ್ಯೇಕವಾದದ್ದು ‘ಕೋಹಿನೂರ್’ ವಜ್ರ, ಅಂತಹ ಕೋಹಿನೂರ್ ವಜ್ರವನ್ನು ಈ ದಿನ ನಿಮಗೆ ಪರಿಚಯ ಮಾಡಿಸುತ್ತೇನೆ. ಆ ವಜ್ರ ಪೂರ್ವ ಗೋದಾವರಿಯಲ್ಲಿದೆ; ‘ಅವರ ಹೆಸರು ರಘುನಾಥ್‌ರಾವ್’ ಎನ್ನುತ್ತಾ ತುಂಬಾ ಅದ್ಭುತವಾಗಿ ರಘುನಾಥ್‌ರಾವ್‌ರವರನ್ನು ಪರಿಚಯ ಮಾಡಿಸಿದರು... ದಟೀಜ್ ಪತ್ರೀಜಿ..

 

ಈ ನಡುವೆ ನನಗೆ ಒಂದು ಕಷ್ಟಕರವಾದ ಸಮಸ್ಯೆ ಎದುರಾಯಿತು. ಪತ್ರೀಜಿ ಅವರನ್ನು ಭೇಟಿ ಆಗಿ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ಅವರು ತಕ್ಷಣ ಒಂದು ಕಾಗದವನ್ನು ತೆಗೆದುಕೊಂಡು ಅದರಮೇಲೆ ‘REACTION’ ಎಂದು ಬರೆದು .. ಆ ಪದದಲ್ಲಿರುವ ‘R’ ಎನ್ನುವ ಅಕ್ಷರವನ್ನು ಪ್ರಾರಂಭದ ಅಕ್ಷರವನ್ನು ತೆಗೆದುಹಾಕಿ, ‘C’ ಅಕ್ಷರವನ್ನು ಸೇರಿಸಿ CREATION ಎಂಬ ಇನ್ನೊಂದು ಪದವನ್ನು ಬರೆದರು. 

 

"CREATION" .. ಮಾಡುವವನು ಪುರುಷೋತ್ತಮನು 
"REACTION" .. ಆಗುವವನು ಪುರುಷಾಧಮನು

 

"ನೋ ರಿಯಾಕ್ಷನ್" ‘ಕರುಣೆ’ ತೋರಿಸು. ನನ್ನ ವ್ಯಕ್ತಿತ್ವವನ್ನು ಉನ್ನತಮಟ್ಟಕ್ಕೆ ತರಲು ನಾನು ನನ್ನ ಜೀವನದಲ್ಲಿ ಈ ಸೂತ್ರವನ್ನೇ ಆಚರಿಸಿದ್ದೇನೆ. ನೀನು ಸಹ ಎಂದಿಗೂ ರಿಯಾಕ್ಟ್ ಆಗಬೇಡ, ಕರುಣೆಯನ್ನು ಮಾತ್ರ ಸೃಷ್ಟಿಸಿ ಆಚರಿಸು ಎನ್ನುತ್ತಾ ತುಂಬಾ ಅದ್ಭುತವಾಗಿ ನನಗೆ ಮಾರ್ಗದರ್ಶನ ನೀಡಿದರು .. ದಟೀಜ್ ಪತ್ರೀಜಿ.. 

 

ಇನ್ನೂಂದು ಸಂದರ್ಭದಲ್ಲಿ ಪತ್ರೀಜಿ ಅವರು ಮಾತನಾಡುತ್ತಾ .. "ಈ ಭೂಮಿಯ ಮೇಲೆ ನಾನು ಮೋಸ್ಟ್ ಸೀನಿಯರ್ ಮಾಸ್ಟರ್ ನನ್ನ ಕಿರುಬೆರಳನ್ನು ಮುಟ್ಟಬೇಕೆಂದರು ಕೂಡಾ ನೀವು ಕನಿಷ್ಠ ಪಕ್ಷ ಮೂರು ಜನ್ಮಗಳಿಂದ ಧ್ಯಾನ ಮಾಡಿರಬೇಕು. ನನ್ನನ್ನು ಯಾರೂ ಅರ್ಥಮಾಡಿಕೊಳ್ಳಲಾರರು. ನಿಜಕ್ಕು ಹಾಗೆ ನೀವು ನನ್ನನ್ನು ಅರ್ಥಮಾಡಿಕೊಳ್ಳಬೇಕೆಂದು ಕೂಡಾ ನಾನು ಬಯಸುವುದಿಲ್ಲ. ಆದರೆ, ನನ್ನಿಂದ ಯಾರು ದೂರ ಆಗಬಾರದು. ನನ್ನಿಂದ ದೂರವಾದರೆ ನೀವು ನಿಮ್ಮ ಗುರಿಗೆ ದೂರ ಆಗುವಿರಿ ಏಕೆಂದರೆ, ನಾನೇ ನಿಮ್ಮ ಗುರಿ" ಎಂದರು .. ದಟೀಜ್ ಪತ್ರೀಜಿ ..

 

ಪತ್ರೀಜಿ ಚೈತನ್ಯ .. ನೈತಿಕ (moral); ಅನೈತಿಕ (immoral) ಹಂತಗಳನ್ನು ದಾಟಿದ ನೈತಿಕಾನೈತಿಕ ಸ್ಥಿತಿ (amoral) ಮಟ್ಟದಲ್ಲಿರುತ್ತದೆ. ಅವರನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಸಹ ಅಂತಹ ದ್ವಂದ್ವಾತೀತ ಮಟ್ಟಕ್ಕೆ ತಲುಪಬೇಕಾದ್ದೆ .ಕೇವಲ ಒಂದು ಸಾಮಾಜಿಕ ದೃಷ್ಟಿಯಿಂದಲೋ ಅಥವಾ ಗತಕಾಲದ ನಂಬಿಕೆಗಳಿಂದಲೋ ಅವರನ್ನು ನೋಡಿದರೆ ಮಾತ್ರ .. ಅವರು ನಮಗೆ ಪೂರ್ತಿ ವ್ಯತಿರಿಕ್ತವಾಗಿಯೆ ಕಾಣುತ್ತಾರೆ. "ಸತ್ಯ" ಅವರ ಮತ "ಸ್ವಾತಂತ್ರ್ಯ" ಅವರ ಮಾರ್ಗ.. ದಟೀಜ್ ಪತ್ರೀಜಿ..

 

"ಎನ್‌ಲೈಟೆನ್‌ಮೆಂಟ್" ಕುರಿತು ಒಂದು ಸಂದರ್ಭದಲ್ಲಿ ಪತ್ರೀಜಿಯವರನ್ನು ಕೇಳಿದಾಗ .. ಅವರು ತಮ್ಮ ಹೃದಯದಮೇಲೆ ಹಸ್ತವನ್ನಿಟ್ಟುಕೊಂಡು .. "ನನಗೆ ಮೂರು ಜನ್ಮಗಳ ಹಿಂದೆಯೆ ಈ ಸತ್ಯ ತಿಳಿದುಬಂದಿದೆ". ಇಲ್ಲಿ ಹೇಗೆ ಅನಿಸಿದರೆ ಹಾಗೆ ಜೀವಿಸುವುದೆ ‘ಎನ್‌ಲೈಟೆನ್‌ಮೆಂಟ್’ ಎಂದರು .. ದಟೀಜ್ ಪತ್ರೀಜಿ..

 

ಒಮ್ಮೆ ಒಂದು ಮೀಟಿಂಗ್‌ನಲ್ಲಿ "ಈ ಭೂಮಿಯ ಮೇಲೆ ಯಾವ ಜೀವಿಯೂ ಕೂಡಾ ದುಃಖದಿಂದ ಇರಬಾರದು. ಹಾಗೆ ಯಾವ ಜೀವಿಯಾದರು ದುಃಖಸಿದರೆ ... ಇನ್ನು ನನ್ನ ಜನ್ಮ ಏತಕ್ಕಾಗಿದೆ?" ಎಂದರು ಪತ್ರೀಜಿ ತುಂಬಾ ವೇದನೆಯಿಂದ. ಎಂತಹ ಗುರುತರ ಬಾಧ್ಯತೆಯೋ.. ಅಂತಹ ಮಹಾ ಕರುಣಾಮೂರ್ತಿಯ ಜೊತೆ ಸೇರಿ ಸಸ್ಯಾಹಾರ ಜಗತ್ ಸಾಕಾರಗೊಳಿಸುವ ದೊಡ್ಡ ಹೊಣೆಗಾರಿಕೆಯಲ್ಲಿ ಭಾಗವನ್ನು ಹಂಚಿಕೊಳ್ಳುತ್ತಿರುವ ನಾವೆಲ್ಲರೂ ಸಹ ತುಂಬಾ ಭಾಗ್ಯಶಾಲಿಗಳೇ ಸರಿ..

 

ಇಂತಹ ದೊಡ್ಡ "ಆನಂದ ಜೀವನಶಾಸ್ತ್ರ ಗ್ರಂಥ ಸ್ವರೂಪರು" ಪತ್ರೀಜಿಯವರ ಜೊತೆ ಸೇರಿ ನಾವು ಜೀವಿಸುತ್ತಿದ್ದೇವೆಂದರೆ ಅದು ನಮ್ಮೆಲ್ಲರ ಅನೇಕಾನೇಕ ಜನ್ಮಗಳ ಸುಕೃತವೇ ವಿನಹ ಮತ್ತೇನೂ ಅಲ್ಲ..

 

 

ರಾಯಜಗಪತಿ ರಾಜು
ಹೈದರಾಬಾದ್
ಫೋನ್ : +91 9866184445

Go to top